ದೊಡ್ಮನೆ ಮಂದಿಗೆ ಕಿಚ್ಚನ ಪತ್ರ! – ಇಲ್ಲಿ ತನಕ ಒಂದು ಲೆಕ್ಕ.. ಇನ್ಮೇಲಿಂದ ಒಂದು ಲೆಕ್ಕ ಎಂದು ಸುದೀಪ್ ಗಿಲ್ಲಿಗೆ ಹೇಳಿದ್ಯಾಕೆ?

ಬಿಗ್ಬಾಸ್ ಕನ್ನಡ ಸೀಸನ್ 12 ರ ಫಿನಾಲೆ ಹತ್ತಿರವಾಗಿದೆ. ಇದೀಗ ಯಾರು ಗೆಲ್ತಾರೆ ಅನ್ನೋ ಕುತೂಹಲ ಮನೆಮಾಡಿದೆ. ಟ್ರೋಫಿ ಗೆಲ್ಲೋ ಕನಸು ಕಾಣ್ತಿರುವ ಸ್ಪರ್ಧಿಗಳಿಗೆ ನಿನ್ನೆ ಕಿಚ್ಚ ಸುದೀಪ್ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಮನೆಯ ಸದಸ್ಯರಿಗೆ ಸುದೀಪ್ ಊಟ ಕಳುಹಿಸಿದ್ದಲ್ಲದೇ, ಪತ್ರ ಕೂಡ ಬರೆದಿದ್ದಾರೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ಆಯೋಜನೆಗೆ ಗ್ರೀನ್ ಸಿಗ್ನಲ್? – ಮಾರ್ಗಸೂಚಿಯಲ್ಲಿ ಏನೇನಿದೆ?
ಬಿಗ್ಬಾಸ್ ಮನೆಯಲ್ಲಿ ನಿನ್ನೆ ಮಿಡ್ವೀಕ್ ಎಲಿಮಿನೇಷನ್ ನಡೆದಿದೆ. ಧ್ರುವಂತ್ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಇದಕ್ಕೂ ಮುನ್ನ ಕಿಚ್ಚ ಸುದೀಪ್ ದೊಡ್ಮನೆ ಮಂದಿದೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಸುದೀಪ್ ಅವರು ಸ್ಪರ್ಧಿಗಳಿಗೆ ಸ್ಪೆಷಲ್ ಊಟವನ್ನ ಕಳುಹಿಸಿ ಕೊಟ್ಟಿದ್ದಾರೆ. ಜೊತೆಗೆ ಸ್ಪರ್ಧಿಗಳಿಗೆ ಪತ್ರ ಬರೆದು ವಿಶ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಪ್ರತಿ ಸೀಸನ್ನಲ್ಲೂ ಸ್ಪರ್ಧಿಗಳಿಗೆ ತಮ್ಮ ಇಷ್ಟದ ತಿನಿಸುಗಳನ್ನು ಮೊದಲೇ ತಿಳಿದುಕೊಂಡು ಅವರ ಇಷ್ಟಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಡುಗೆಗಳನ್ನು ಮಾಡಿ ಕಿಚ್ಚ ಕಳಿಸುತ್ತಾರೆ. ಸುದೀಪ್ ಅಡುಗೆ ಮಾಡುವ ವಿಡಿಯೋವನ್ನು ಸಹ ಬಿಗ್ಬಾಸ್ ಶೋನಲ್ಲಿ ತೋರಿಸಲಾಗುತ್ತದೆ. ಈ ಬಾರಿಯೂ ನನ್ನ ಕಡೆಯಿಂದ ನಿಮಗೆಲ್ಲ ಒಂದು ಒಳ್ಳೆಯ ಊಟ ಇದೆ ಎಂದಿದ್ದರು. ಅದರಂತೆ ಸ್ಪರ್ಧಿಗಳಿಗೆ ಸುದೀಪ್ ಊಟ ಕಳುಹಿಸಿ ಕೊಟ್ಟಿದ್ದಾರೆ. ಹಾಗೇ ತಾವೇ ಬರೆದ ಲೆಟರ್ ಕೂಡ ಕಳುಹಿಸಿ ಕೊಟ್ಟಿದ್ದಾರೆ.
ಇನ್ನು ಸುದೀಪ್ ಗಿಲ್ಲಿಗೆ ಬರೆದ ಪತ್ರದಲ್ಲಿ ನಮಸ್ಕಾರ ಗಿಲ್ಲಿ.. ಇಲ್ಲಿ ತನಕ ಒಂದು ಲೆಕ್ಕ. ಇನ್ಮೇಲಿಂದ ಒಂದು ಲೆಕ್ಕ. ನಮ್ಮ ಚಿಕ್ಕಪ್ಪ ತಮ್ಮನ್ನ ತುಂಬಾ ಕೇಳ್ದೆ ಅಂತ ಹೇಳಿದ್ರು. Love You. ಎಂದು ಬರೆದಿದ್ದರು.
ಇನ್ನು ಕಾವ್ಯಗೆ ಬರೆದ ಪತ್ರದಲ್ಲಿ Hey Kaavvvvv….. Oopss sorrry sorryy Hello Kavya.. ಕಲ್ಲು ತೂರಾಟದಿಂದ ಏಟಾಗಬಹುದು ಸಾಯುವುದಿಲ್ಲ.. ಸಾಧನೆಯೂ ನಿಲ್ಲುವುದಿಲ್ಲ. –ಕಿಚ್ಚ. ಎಂದು ಬರೆದಿದ್ದಾರೆ. ಇನ್ನು ರಕ್ಷಿತಾಗೆ ಹಾ.. ಹೂ.. ಅದು.. ಇದು ಅಂತ ಆಕೆಯದ್ದೇ ಡೈಲಾಗ್ ಬರೆದು ಪತ್ರ ಕಳುಹಿಸಿದ್ದಾರೆ. ಕಿಚ್ಚ ಬರೆದ ಪತ್ರಗಳನ್ನ ಓದಿ ಸ್ಪರ್ಧಿಗಳು ಭಾವುಕರಾಗಿದ್ದಾರೆ.

ನೋಡಿರಿ

