ಪಾರ್ಟ್ನರ್‌ ಗಿಲ್ಲಿ ಬೇಡ ಎಂದ ಕಾವ್ಯ – ಡೊಡ್ಮನೆಯ ಒಂಟಿ, ಜಂಟಿ ಆಟಕ್ಕೆ ಕಡೆಗೂ ಬ್ರೇಕ್!‌

ಪಾರ್ಟ್ನರ್‌ ಗಿಲ್ಲಿ ಬೇಡ ಎಂದ ಕಾವ್ಯ – ಡೊಡ್ಮನೆಯ ಒಂಟಿ, ಜಂಟಿ ಆಟಕ್ಕೆ ಕಡೆಗೂ ಬ್ರೇಕ್!‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಈಗ ರೋಚಕ ತಿರುವು ಪಡೆದುಕೊಂಡಿದೆ. ಈ ಸೀಸನ್‌ ಕಾನ್ಸೆಪ್ಟ್‌ ಒಂಟಿ – ಜಂಟಿಯಾಗಿತ್ತು. ಒಂದು ವಾರ ಚೆನ್ನಾಗಿ ಆಟ ಆಡಿದ್ದ ಸ್ಪರ್ಧಿಗಳು ಎರಡನೇ ವಾರಕ್ಕೆ ಜಂಟಿ ಕಾನ್ಸೆಪ್ಟ್‌ ಬೇಡ.. ತುಂಬಾ ತೊಂದರೆ ಆಗ್ತಿದೆ ಎಂದು ಕಿಚ್ಚ ಸುದೀಪ್‌ ಮುಂದೆ ಹೇಳಿದ್ರು. ಇದೀಗ ಕಡೆಗೂ ಒಂಟಿ – ಜಂಟಿ ಆಟಕ್ಕೆ ಬ್ರೇಕ್‌ ಹಾಕಲಾಗಿದೆ. ಇನ್ಮುಂದೆ ಸ್ಪರ್ಧಿಗಳು ಒಂಟಿಯಾಗೇ ಹೋರಾಡಲಿದ್ದಾರೆ.

ಇದನ್ನೂ ಓದಿ: KBC ಶೋನಲ್ಲಿ ಬಾಲಕನಿಂದ ಅಮಿತಾಭ್‌ಗೆ ಅವಮಾನ – ಮಕ್ಕಳನ್ನ ಬೆಳೆಸುವವರಿಗೆ ಇದು ಪಾಠ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ವೀಕ್ಷಕರ ವೋಟ್‌ ಆಧಾರದ ಮೇಲೆ ಒಂಟಿ – ಜಂಟಿಯಾಗಿ ಸ್ಪರ್ಧಿಗಳನ್ನ ಬಿಗ್‌ ಬಾಸ್‌ ಮನೆಗೆ ಕಳುಹಿಸಲಾಗಿತ್ತು. ಅಭಿಷೇಕ್ – ಅಶ್ವಿನಿ ಎಸ್.ಎನ್, ಕಾವ್ಯ ಶೈವ – ಗಿಲ್ಲಿ ನಟ, ಸ್ಪಂದನಾ – ಮಾಳು ನಿಪನಾಳ, ರಾಶಿಕಾ – ಮಂಜು ಭಾಷಿಣಿ, ಚಂದ್ರಪ್ರಭ – ಡಾಗ್ ಸತೀಶ್, ಕರಿಬಸಪ್ಪ – ಆರ್.ಜೆ. ಅಮಿತ್ ಜಂಟಿಯಾಗಿ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ರು. ಇವರ ಪೈಕಿ ಅಮಿತ್‌, ಕರಿಬಸಪ್ಪ ಮೊದಲ ವಾರದಲ್ಲಿಯೇ ಎಲಿನಿನೇಟ್ ಆಗಿದ್ದಾರೆ. ಮುಂದಿನ ವಾರ ಮೊದಲ ಫಿನಾಲೆ ನಡೆಯುತ್ತಿರೋದ್ರಿಂದ ಈ ವಾರ ಯಾವುದೇ ಎಲಿಮಿನೇಷನ್‌ ನಡೆದಿಲ್ಲ. ಆದ್ರೀಗ ಬಿಗ್‌ ಬಾಸ್‌ ಸ್ಫರ್ಧಿಗಳಿಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಜಂಟಿಗಳ ಕೈಗೆ ಹಾಕಿದ್ದ ಬೆಲ್ಟ್‌ನ ಕಟ್‌ ಮಾಡಿದ್ದಾರೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಕಲರ್ಸ್‌ ಕನ್ನಡ ರಿಲೀಸ್‌ ಮಾಡಿರೋ ಪ್ರೋಮೋದಲ್ಲಿ ಜಂಟಿಗಳ ಮಧ್ಯ ಇರುವ ಈ ಬಂಧವನ್ನು ಮುರಿದು ಜಂಟಿ-ಒಂಟಿ ಆಟಕ್ಕೆ ಪೂರ್ಣ ವಿರಾಮ ನೀಡುವ ಸಮಯವಾಗಿದೆ ಎಂದು ಬಿಗ್ ಬಾಸ್ ಘೋಷಣೆ ಮಾಡುತ್ತಾರೆ. ಇದಾದ ಬಳಿಕ ಜಂಟಿಗಳ ಕೈಗೆ ಕಟ್ಟಲಾಗಿದ್ದ ಹಗ್ಗವನ್ನು ಒಬ್ಬರು ಅನಾಮಿಕರು ಕತ್ತರಿಯಿಂದ ಹಗ್ಗ ಕತ್ತರಿಸಿ ಹಗ್ಗ ಕತ್ತರಿಸಿ ಸ್ವತಂತ್ರಗೊಳಿಸುತ್ತಾರೆ. ಇನ್ನು ಜಂಟಿಗಳು ತಾವು ಸ್ವತಂತ್ರ ಆಗುವುದಕ್ಕೂ ಮುನ್ನ ಸಹ ಸ್ಪರ್ಧಿಗಳ ನಡುವೆ ಬೆಂಕಿ ಹಚ್ಚಿದ್ದಾರೆ.

ಎಲ್ಲ ಜೋಡಿಗಳೂ ಕೂಡ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಇವರೊಂದಿಗೆ ಜಂಟಿಯಾಗಿ ಇರುವುದೇ ನಮ್ಮ ಅದೃಷ್ಟವೆಂದು ಹೇಳಿಕೊಂಡಿದ್ದರು. ಆದ್ರೆ ಇಂದು ಬಿಡುಗಡೆಯಾಗಿರೋ ಪ್ರೋಮೋದಲ್ಲಿ ಎಲ್ಲ ಸ್ಪರ್ಧಿಗಳು ಕೂಡ ತಮ್ಮೊಂದಿಗೆ ಇರುವ ಜಂಟಿಗಳ ವಿರುದ್ಧ ಒಂದೊಂದೇ ಆರೋಪವನ್ನು ಮಾಡಿ ಜಂಟಿಯಿಂದ ಮುಕ್ತಿ ಪಡೆದು ಒಂಟಿಯಾಗಿ ಆಟವನ್ನು ಆರಂಭಿಸಲು ಮುಂದಾಗಿದ್ದಾರೆ.

ಕಾವ್ಯ ಶೈವ ಅವರು ನಾನು ಗಿಲ್ಲಿ ನಟನ ಜೊತೆಗೆ ಇಲ್ಲವೆಂದರೆ ನನ್ನ ವೈಯಕ್ತಿಕ ಆಟವೂ ಕೂಡ ಕಾಣಿಸುತ್ತದೆ. ಹೀಗಾಗಿ, ನಾನು ಆಟವಾಡುವುದಕ್ಕೆ ಒಂಟಿಯಾಗಿ ಸ್ವತಂತ್ರವಾಗಿರಬೇಕು ಎಂದು ಹೇಳಿದ್ದಾರೆ. ಆದ್ರೆ ಡಾಗ್ ಸತೀಶ್ ಅವರು ಕಾರಣ ಕೊಡುತ್ತಾ, ನಾವು ಹಿಂದಿನ ರಾತ್ರಿ ಜಂಟಿಯಿಂದ ಮುಕ್ತಿ ಪಡೆಯುವುದಕ್ಕೆ ಏನಾದರೂ ನ್ಯೂಸೆನ್ಸ್ ಕ್ರಿಯೇಟ್ ಮಾಡೋಣ ಎಂದು ಮಾತನಾಡಿದ್ದೆವು. ಅದಕ್ಕೋಸ್ಕರ ಮನೆಯವರ ಮುಂದೆ ದೊಡ್ಡದಾಗಿ ಜಗಳ ಕೂಡ ಮಾಡಿದ್ದೆವು.  ನಾವು ಬೇರೆ ಬೇರೆಯಾಗಿ ಇರಬೇಕು ಎಂದೇ ಡ್ರಾಮಾ ಮಾಡಿದ್ದೆವು. ಇದಕ್ಕೆ ಚಂದ್ರಪ್ರಭ, ನಾವು ಪ್ಲ್ಯಾನ್ ಮಾಡಿದ್ದೀವಿ ಎಂದು ಹೇಳಬೇಡಿ. ನಾನು ನಿಮ್ಮ ಜೊತೆಗೆ ಇರುವಷ್ಟು ದಿನ ನೀವು ಕೊಟ್ಟಿರುವ ಕಾಟಕ್ಕೆ ನಾನು ಕಣ್ಣೀರು ಹಾಕಿದ್ದೇನೆ. ನಿಮ್ಮ ಜೊತೆಗೆ ಮಾತನಾಡಿದರೆ ಹುಚ್ಚು ಬರ್ತದೆ. ಇದಕ್ಕೆ ತಿರುಗೇಟು ಕೊಟ್ಟ ಸತೀಶ್ ನೀವು ಒಳ್ಳೆಯವರಾಗಲು ನನ್ನನ್ನು ಕೆಟ್ಟವರನ್ನಾಗಿ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಚಂದ್ರಪ್ರಭ ನೀವೇ ನನ್ನನ್ನು ಕೆಟ್ಟವರನ್ನಾಗಿ ಮಾಡುತ್ತಿದ್ದೀರಿ. ನಿಮ್ಮ ಜೊತೆಗೆ ಮಾತನಾಡಿದರೆ ಹುಚ್ಚು ಬರ್ತದೆ ಎಂದು ಕೈಗೆ ಕಟ್ಟಿದ್ದ ಹಗ್ಗವನ್ನು ಕತ್ತರಿಸುವ ಮುನ್ನವೇ ಹಗ್ಗ ಕಳಚಿಕೊಂಡು ಹೋಗಿದ್ದಾರೆ.

Shwetha M