ಬಿಗ್‌ ಬಾಸ್‌ನಿಂದ ಮೂವರು ಹೊರಗೆ! – ರಾತ್ರೋ ರಾತ್ರಿ ಅಶ್ವಿನಿ, ರಘು, ಮಾಳು ದೊಡ್ಮನೆಯಿಂದ ಔಟ್?‌

ಬಿಗ್‌ ಬಾಸ್‌ನಿಂದ ಮೂವರು ಹೊರಗೆ! – ರಾತ್ರೋ ರಾತ್ರಿ ಅಶ್ವಿನಿ, ರಘು, ಮಾಳು ದೊಡ್ಮನೆಯಿಂದ ಔಟ್?‌

ಬಿಗ್‌ ಬಾಸ್‌ ಮನೆಯ ಆಟ ಕ್ಷಣ ಕ್ಷಣಕ್ಕೂ ರೋಚಕತೆ ಪಡೆದುಕೊಳ್ತಿದೆ. ಈ ಸೀಸನ್‌ Expect the Unexpected ಥೀಮ್‌ ಇದ್ದು, ದೊಡ್ಮನೆಯಲ್ಲಿ ಏನ್‌ ಬೇಕ್ರಾದ್ರೂ ನಡೆಯಬಹುದು. ಕಳೆದ ವೀಕ್‌ಎಂಡ್‌ನಲ್ಲಿ ಮಲ್ಲಮ್ಮ ಬಿಗ್‌ಬಾಸ್‌ ಮನೆಯಿಂದ ಆಚೆ ಬಂದಿದ್ರು. ಅಷ್ಟೇ ಅಲ್ಲ ಈ ವಾರ ಬಿಗ್‌ಬಾಸ್‌ ಯಾವುದೇ ಟಾಸ್ಕ್‌ ನೀಡಲ್ಲ. ಎಲ್ಲರೂ ನಾಮಿನೇಟ್‌ ಆಗಿದ್ದೀರಿ. ನಿಮ್ಮನ್ನ ನೀವೇ ಉಳಿಸಿಕೊಳ್ಳಬೇಕು ಎಂದು ಕಿಚ್ಚ ಸುದೀಪ್‌ ಹೇಳಿದ್ರು. ಸುದೀಪ್‌ ಮಾತಿನ ಪ್ರಕಾರವೇ ಬಿಗ್‌ಬಾಸ್‌ ಯಾವುದೇ ಟಾಸ್ಕ್‌ ನೀಡಿಲ್ಲ. ಆದ್ರೀಗ ಏಕಾಏಕಿ ದೊಡ್ಮನೆಯಿಂದ ಪ್ರಬಲ ಸ್ಪರ್ಧಿಗಳು ಔಟ್‌ ಆಗಿದ್ದಾರೆ.

ಇದನ್ನೂ ಓದಿ: ಘಾಟ್​ನಲ್ಲಿ ಕಮರಿಗೆ ಬಿದ್ದ ಬಸ್​! – ಮೂವರು ಸಾವು.. 38 ಪ್ರಯಾಣಿಕರಿಗೆ ಗಾಯ

ನಿನ್ನೆಯ ಎಪಿಸೋಡ್‌ನಲ್ಲಿ ಯಾರು ಈ ಮನೆಯಲ್ಲಿ ಇರೋಕೆ ಅರ್ಹರಲ್ಲವೋ ಅವರಿಗೆ ಕಪ್ಪು ಮಸಿ ಬಳಿಯಬೇಕು ಎಂದು ಬಿಗ್‌ ಬಾಸ್‌ ಹೇಳಿದ್ದರು. ಆಗ ಅನೇಕರು ಅಶ್ವಿನಿ ಗೌಡ ಹಾಗೂ ರಿಷಾಳನ್ನೇ ಎಲ್ಲರೂ ಟಾರ್ಗೆಟ್‌ ಮಾಡಿದ್ರು. ಎಲ್ಲರೂ ಅವರಿಬ್ಬರ ಬಗ್ಗೆ ಸಾಕಷ್ಟು ಕಂಪ್ಲೆಂಟ್‌ ಹೇಳಿದ್ರು. ಬಳಿಕ ಸಂಚಿಕೆಯ ಕೊನೆಯಲ್ಲಿ ಒಂದು ಪ್ರೋಮೋ ರಿಲೀಸ್‌ ಮಾಡಲಾಗಿದೆ. ಬಿಗ್‌ಬಾಸ್‌ ಎಲ್ಲರಿಗೂ ಸೂಟ್‌ಕೇಸ್‌ ಪ್ಯಾಕ್‌ ಮಾಡಿ ಗಾರ್ಡನ್‌ ಏರಿಯಾಗೆ ಬರಲು ಹೇಳಿದ್ದಾರೆ. ಎಲ್ಲರೂ ಸಾಲಾಗಿ ನಿಲ್ಲುತ್ತಿದ್ದಂತೆ ಮೈನ್‌ ಡೋರ್‌ ಕೂಡ ಓಪನ್‌ ಆಗಿದೆ. ಬಳಿಕ ಅಶ್ವಿನಿ ಗೌಡ ಮೈನ್‌ ಡೋರ್‌ ಮೂಲಕ ಹೊರಗೆ ಬನ್ನಿ ಎಂದು ಬಿಗ್‌ಬಾಸ್‌ ಹೇಳಿದ್ದಾರೆ. ಇದನ್ನ ನೋಡಿ ಸ್ಪರ್ಧಿಗಳು ಮಾತ್ರವಲ್ಲದೇ ವೀಕ್ಷಕರು ಕೂಡ ಶಾಕ್‌ ಆಗಿದ್ದಾರೆ.

ಇನ್ನು ಮತ್ತೊಂದ್ಕಡೆ ಅಶ್ವಿನಿ ಜೊತೆ ಮಾಳು, ರಘು ಕೂಡ ಮೈನ್‌ ಡೋರ್‌ ಕಡೆ ಹೋಗುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದ್ರೆ ನಿಜಕ್ಕೂ ಮೂವರು ಸ್ಪರ್ಧಿಗಳು ಬಿಗ್‌ಬಾಸ್‌ ನಿಂದ ಔಟ್‌ ಆಗಿದ್ದಾರಾ? ಅಥವಾ ಅವರನ್ನ ಸೀಕ್ರೆಟ್‌ ರೂಮ್‌ನಲ್ಲಿ ಇರಿಸಲಾಗುತ್ತಾ, ಅಥವಾ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಚಮಕ್‌ ಕೊಟ್ರಾ ಅಂತಾ ಗೊತ್ತಿಲ್ಲ. ಆದ್ರೆ ಅಶ್ವಿನಿ ಗೌಡ ಇನ್ನೂ ಬಿಗ್‌ಬಾಸ್‌ ಮನೆಯಲ್ಲಿ ಆಟ ಆಡ್ತಿದ್ದಾರೆ ಎನ್ನಲಾಗ್ತಿದೆ.  ಮುಂದಿನ ಎಪಿಸೋಡ್‌ನಲ್ಲಿ ಈ ಬಗ್ಗೆ ಅಪ್‌ಡೇಟ್‌ ಸಿಗಲಿದೆ.

Shwetha M