ಗಿಲ್ಲಿನಟ, ಕಾವ್ಯ ಜುಗಲ್‌ಬಂದಿ.. ಕಿಲಾಡಿ ಕಾಟ್ಲೆ ಪಾರ್ಟ್ನರ್‌ ಫುಲ್‌ ಸುಸ್ತು! – ಗಿಲ್ಲಿ ಆಟಕ್ಕೆ ಮನೆ ಮಂದಿ ರೋಸ್ಟ್!

ಗಿಲ್ಲಿನಟ, ಕಾವ್ಯ ಜುಗಲ್‌ಬಂದಿ.. ಕಿಲಾಡಿ ಕಾಟ್ಲೆ ಪಾರ್ಟ್ನರ್‌ ಫುಲ್‌ ಸುಸ್ತು! – ಗಿಲ್ಲಿ ಆಟಕ್ಕೆ ಮನೆ ಮಂದಿ ರೋಸ್ಟ್!

ಬಿಗ್‌ ಬಾಸ್‌ ಕನ್ನಡ ಶುರುವಾಗಿ ಒಂದು ವಾರ ಆಯ್ತು.. ದೊಡ್ಮನೆಯಲ್ಲಿ ಸ್ಪರ್ಧಿಗಳ ಆಟ ಜೋರಾಗಿದೆ. ಬಿಗ್‌ ಬಾಸ್‌ ಕೊಡೋ ಟಾಸ್ಕ್‌ಗಳನ್ನ ಕಂಪ್ಲೀಟ್‌ ಮಾಡಲು ಮನೆಮಂದಿ ಹರಸಾಹಸ ಪಡ್ತಿದ್ದಾರೆ. ಆದ್ರೆ ಬಿಗ್‌ ಬಾಸ್‌ ಮನೆಯಲ್ಲಿ ಕಾಮಿಡಿ ಸ್ಟಾರ್‌ ಗಿಲ್ಲಿ ನಟ ಮಾತ್ರ ಫುಲ್‌ ಜಾಲಿ ಮಾಡ್ತಿದ್ದಾರೆ. ಗಿಲ್ಲಿನಟ ಕೊಡ್ತಿರೋ ಕಾಟಕ್ಕೆ ಕಾವ್ಯ ಮಾತ್ರವಲ್ಲ, ಒಂಟಿಗಳು ಸುಸ್ತಾಗಿ ಹೋಗಿದ್ದಾರೆ.. ಗಿಲ್ಲಿ ಕಾಟ್ಲೆಯಿಂದ  ಒಂಟಿಗಳಿಗೇ ಪನಿಶ್ಮೆಂಟ್‌ ಕೂಡ ಸಿಕ್ಕಿದೆ.. ಇದ್ರಿಂದಾಗಿ ಇಡೀ ಮನೆಯವರು ಗಿಲ್ಲಿನಟನನ್ನ ಟಾರ್ಗೆಟ್‌ ಮಾಡುವಂತೆ ಆಗಿದೆ. ದೊಡ್ಮನೆಯಲ್ಲಿ ಹವಾ ಎಬ್ಬಿಸ್ತಿರೋ ಗಿಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಗಿಲ್ಲಿನಟನ ಆಟಕ್ಕೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಬಿಗ್‌ ಬಾಸ್‌ಗೆ ಕಾಲಿಟ್ಟ ರಕ್ಷಿತಾ ಶೆಟ್ಟಿ! – ಕಿಚ್ಚನ ಮುಂದೆಯೇ ಸಹಸ್ಪರ್ಧಿಗಳಿಗೆ ಕೌಂಟರ್‌ ಕೊಟ್ಟ ಕೃಷ್ಣ ಸುಂದರಿ!

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗಿಲ್ಲಿನಟ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಸ್ಪರ್ಧಿಸ್ತಿದ್ದಾರೆ. ದೊಡ್ಮನೆಗೆ ಕಾಲಿಡ್ತಿದ್ದಂತೆ ವೀಕ್ಷಕರು ಗಿಲ್ಲಿ ನಟನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಕೊಂಡಿದ್ದಾರೆ. ಗಿಲ್ಲಿ ಸದ್ಯ ಜಂಟಿ ಟೀಮ್‌ ನಲ್ಲಿದ್ದು, ಕಾವ್ಯ ಶೈವಗೆ ಜೋಡಿಯಾಗಿದ್ದಾರೆ. ದೊಡ್ಮನೆಗೆ ಬರ್ತಿದ್ದಂತೆ ಗಿಲ್ಲಿ ನಟ ಕೂಡ ತನ್ನ ಆಟ ಶುರು ಮಾಡ್ಕೊಂಡಿದ್ದಾರೆ. ಆಟ ಆಡ್ತಾ ಆಡ್ತಾ ಮನೆಮಂದಿಗೆ ಕಾಟ ಕೊಡ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಗಿಲ್ಲಿಯ ವರ್ತನೆ ನೋಡಿ ಮನೆಮಂದಿ ಸರಿಯಾಗೇ ಉರ್ಕೊಂಡಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಚೆನ್ನಾಗಿ ಆಟ ಆಡ್ತಿದ್ದಾರೆ. ಬಿಗ್‌ ಬಾಸ್‌ ಕೊಡೋ ಟಾಸ್ಕ್‌ ಗಳನ್ನ ಕಂಪ್ಲೀಟ್‌ ಮಾಡೊದ್ರ ಜೊತೆಗೆ ಸಖತ್‌ ಮನರಂಜನೆ ಕೊಡ್ತಾರೆ ಇದ್ದಾರೆ.. ಈ ಕಾಮಿಡಿ ಸ್ಟಾರ್‌ಗೆ ಕಾಲೇಳೆಯೋದು ಗೊತ್ತು.. ತನ್ನನ್ನ ಕೆಣಕಲು ಬಂದವ್ರಿಗೆ ಸರಿಯಾಗಿ ಉರಿಸೋದು ಗೊತ್ತು.. ಹೀಗಾಗೇ ಒಂಟಿ ಟೀಮ್‌ ನ ಸರಿಯಾಗೇ ಪಾಠ ಕಲಿಸ್ತಾ ಇದ್ದಾರೆ.. ಗಿಲ್ಲಿಗೆ ಕಾವ್ಯ ಕೂಡ ಸಾಥ್‌ ನೀಡ್ತಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಶುರುವಾಗುವಾಗ ಒಂಟಿ ಹಾಗೂ ಜಂಟಿಗಳು ಎಂದು ವಿಭಾಗ ಮಾಡಲಾಗಿದೆ.. ವೀಕ್ಷಕರ ಮತಗಳ ಮೇಲೆ ಈ ರೀತಿ ವಿಂಗಡಣೆ ಮಾಡಲಾಗಿದೆ. ಜಂಟಿಗಳು ಒಂಟಿಗಳು ಹೇಳಿದ ಹಾಗೆ ಕೇಳ್ಬೇಕು.. ಅವರು ಹೇಳಿದ ಕೆಲಸ ಮಾಡ್ಬೇಕು.. ಒಂಟಿಗಳು ಗಿಲ್ಲಿಯನ್ನ ಮೊದಲ ದಿನದಂದಲೇ ಟಾರ್ಗೆಟ್‌ ಮಾಡಿದ್ದಾರೆ. ಪದೇ ಪದೇ ಗಿಲ್ಲಿ ಬಳಿ ಕೆಲಸ ಹೇಳಿ ಮಜಾ ತೆಗೆದುಕೊಳ್ಳಲು ಟ್ರೈ ಮಾಡಿದ್ರು.. ಆದ್ರೆ ಗಿಲ್ಲಿ ಆಟ ಮಾತ್ರ ನೆಕ್ಟ್ಸ್‌ ಲೆವೆಲ್‌ ನಲ್ಲಿದೆ. ತನ್ನನ್ನ ಕೆಣಕಿದವ್ರಿಗೆ ಸರಿಯಾಗೆ ಉರಿಸ್ತಿದ್ದಾರೆ.. ಗಿಲ್ಲಿ ಜಬರ್‌ ದಸ್ತ್‌ ಆಟಕ್ಕೆ ಪಾರ್ಟ್ನರ್‌ ಕಾವ್ಯ ಕೂಡ ಕೈ ಜೋಡಿಸಿದ್ದಾರೆ.. ಗಿಲ್ಲಿ ಮಾಡ್ತಿರೋ ಕೆಲ ಕ್ವಾಟ್ಲೆಗಳು ಕಿರಿ ಕಿರಿ ಅನ್ನಿಸಿದ್ರು, ಕಾವ್ಯ ತನ್ನ ಪಾರ್ಟ್ನರ್‌ನ ಬಿಟ್ಟು ಕೊಡ್ತಿಲ್ಲ.. ಇದು ವೀಕ್ಷಕರಿಗೆ ಸಖತ್‌ ಮನರಂಜನೆ ನೀಡ್ತಿದೆ.

ಗಿಲ್ಲಿ ದೊಡ್ಮನೆಯಲ್ಲಿ ಮೊದಲ ದಿನವೇ ರೂಲ್ಸ್‌ ಅನ್ನ ಬ್ರೇಕ್‌ ಮಾಡಿದ್ರು. ಇದ್ರಿಂದಾಗಿ ಒಂಟಿ ಟೀಮ್ ಗಿಲ್ಲಿ ನಟನನ್ನೇ ಟಾರ್ಗೆಟ್‌ ಮಾಡ್ತಿದ್ದಾರೆ. ಪ್ರತಿ ಕೆಲಸ ಮಾಡಿಸಿಕೊಳ್ಳೋದು ಅಲ್ಲದೇ ಆಗಾಗ ಪನಿಶ್ಮೆಂಟ್‌ ಕೂಡ ಕೊಡ್ತಾ ಬಂದಿದ್ದಾರೆ.. ಆದ್ರೆ ಗಿಲ್ಲಿನಟ ಮಾತ್ರ ಕೊಟ್ಟ ಶಿಕ್ಷೆಗೆ ಸರಿಯಾಗೇ ರಿವೇಂಜ್‌ ತೀರಿಸಿಕೊಳ್ತಿದ್ದಾರೆ. ಪಂಚ್‌ ಡೈಲಾಗ್‌, ಸಾಂಗ್‌ ಹೇಳಿ ಒಂಟಿ ಟೀಮ್‌ ನ ಕೆರಳಿಸಿದ್ರೆ, ಮತ್ತೊಂದ್ಕಡೆ ಅರಸ ಅರಸಿಯರು ಒಂದು ಕೆಲ್ಸ ಹೇಳಿದ್ರೆ, ಇನ್ನೊಂದು ಮಾಡ್ತಿದ್ದಾರೆ.. ಮೊದಲ ದಿನ ಜಾಹ್ನವಿ ಆಮ್ಲೆಟ್‌ ಮಾಡಿಕೊಡಿ… extra ಖಾರ ಇರ್ಲಿ ಅಂತಾ ಹೇಳಿದ್ರು.. ಆದ್ರೆ ಗಿಲ್ಲಿ ಆಮ್ಲೆಟ್‌ ಫುಲ್‌ ಮೆಣಸಿನಕಾಯಿ ಹಾಕಿಕೊಟ್ಟಿದ್ರು.

ಇನ್ನು ಗಿಲ್ಲಿ ಅಶ್ವಿನಿಯನ್ನ ಕೆರಳಿಸೋದ್ರಲ್ಲಿ ಪಿಹೆಚ್‌ಡಿ ಮಾಡಿದಂತೆ ಕಾಣ್ತಿದೆ. ಅಶ್ವಿನಿ ಗೌಡ ಕೆಲಸ ಕೊಟ್ಟು ಬಿಲ್ಡಪ್‌ ತಗೊಳೋಕೆ ನೋಡಿದ್ರೆ, ಗಿಲ್ಲಿ ಅಶ್ವಿನಿ ಪ್ಲ್ಯಾನ್‌ ನ ಉಲ್ಟಾ ಮಾಡಿಸ್ತಾರೆ.. ಗಿಲ್ಲಿ ಕಾವ್ಯ ಎಲ್ಲಿ ಹೋದ್ರು ಅಶ್ವಿನಿ ಹಿಂದೆಯೇ ಬರ್ತಾರೆ.. ಏನಾದ್ರು ಕೆಲಸ ಹೇಳಿ ಕಾಟ ಕೊಡೋದಿಕ್ಕೆ ನೋಡ್ತಾರೆ.. ಆದ್ರೆ ಅಶ್ವಿನಿ ಹೇಳ್ತಿರೋ ಕೆಲ್ಸ ಮಾಡ್ತಾನೇ ಗಿಲ್ಲಿ ಪಂಚ್‌ ಡೈಲಾಗ್‌ ಹೊಡೆದು ಮಜಾ ತೆಗೆದುಕೊಳ್ತಿದ್ದಾರೆ. ಆರಂಭದಲ್ಲಿ ಅಶ್ವಿನಿ ಬೈತಾರೆ ಅಂತಾ ಹೆದರ್ಕೊಳ್ತಿದ್ದ ಕಾವ್ಯ ಕೂಡ ಈಗ ಗಿಲ್ಲಿ ಕ್ರೈಮ್‌ ಪಾರ್ಟ್ನರ್‌ ಆಗಿದ್ದಾರೆ.. ಕಾವ್ಯ ಕೂಡ ಅಶ್ವಿನಿಗೆ ಚಮಕ್‌ ಕೊಡ್ತಿದ್ದಾರೆ..  ಮತ್ತೊಂದ್ಕಡೆ ಗಿಲ್ಲಿ ಜೋಡಿ ಏನೇ ಹೇಳಿದ್ರೂ ಉಲ್ಟಾನೇ ಮಾಡ್ತಾರೆ ಅನ್ನೋದು ಎಲ್ಲಾ ಸ್ಪರ್ಧಿಗಳಿಗೆ ಗೊತ್ತಾಗಿದೆ.. ಧನುಷ್‌ ಗಿಲ್ಲಿ ಕಾವ್ಯಗೆ ಕೆಲ ಟಾಸ್ಕ್‌ ಕೊಡ್ತಾರೆ ಅಷ್ಟೇ.. ಅವರನ್ನ ಬಿಟ್ರೆ ಉಳಿದ ಸ್ಪರ್ಧಿಗಳು ಗಿಲ್ಲಿ ಕಾವ್ಯ ಸಹವಾಸಕ್ಕೆ ಬರ್ತಿಲ್ಲ.. ತಾವಾಯ್ತು.. ತಮ್ಮ ಆಟ ಆಯ್ತು ಅಂತಾ ತಮ್ಮ ಪಾಡಿಗೆ ತಾವು ಇದ್ದಾರೆ.

ಒಟ್ಟಾರೆ. ಗಿಲ್ಲಿ ಕಾವ್ಯ ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡ್ತಾ, ಒಂಟಿಗಳಿಗೆ ಸರಿಯಾಗೇ ಪಾಠ ಕಲಿಸ್ತಾರೆ ಇದ್ದಾರೆ. ಆದ್ರೆ ಒಂಟಿಗಳು ಮಾತ್ರ ಗಿಲ್ಲಿ ಆಟಕ್ಕೆ ಸುಸ್ತಾಗಿ ಹೋಗಿದ್ದಾರೆ.. ಇವರಿಬ್ರು ಹೀಗೆ ಆಟ ಆಡ್ತಾ, ಮನರಂಜನೆ ನೀಡಿದ್ರೆ ಪಕ್ಕಾ ಫಿನಾಲೆವರೆಗೂ ಬರೋದು ಗ್ಯಾರೆಂಟಿ..

Shwetha M