ಅಶ್ವಿನಿ Vs ಗಿಲ್ಲಿ ನಟ.. ಬಿಗ್ ಬಾಸ್ ಮೋಸದಾಟ ಶುರು! – BBK ಮೊದಲ ಫೈನಲಿಸ್ಟ್ ಮಲ್ಲಮ್ಮ

ಮೊದಲ ಎರಡು ದಿನ ಸೈಲೆಂಟ್ ಆಗಿದ್ದ ಬಿಗ್ ಬಾಸ್ ಮನೆ ಈಗ ವೈಲೆಂಟ್ ಆಗ್ತಿದೆ. ಸ್ಪರ್ಧಿಗಳ ಮಧ್ಯೆ ಮನಸ್ತಾಪ ಶುರುವಾಗ್ತಿದೆ. ಟಾಸ್ಕ್, ಮನೆ ಕೆಲಸ ವಿಚಾರವಾಗಿ ವಾದ, ವಿವಾದ ಶುರುವಾಗ್ತಿದೆ. ಅಶ್ವಿನಿ ಸಿಕ್ಕಿದ್ದೇ ಚಾನ್ಸ್ ಅಂತಾ ಒಬ್ರಾದ ಮೇಲೆ ಒಬ್ರ ಜೊತೆ ಜಗಳಕ್ಕೆ ನಿಲ್ತಿದ್ದಾರೆ. ಎರಡನೇ ದಿನ ಅಶ್ವಿನಿ ಗಿಲ್ಲಿನಟ ಜೊತೆ ಕಿರಿಕ್ ಮಾಡಿಕೊಂಡಿದ್ರು. ಮೂರನೇ ದಿನ ನಟ ಧನುಷ್ ಜೊತೆ ವಾಗ್ವಾದ ಮಾಡಿದ್ರು.. ಇದೀಗ ಮತ್ತೆ ಅಶ್ವಿನಿ ಹಾಗೂ ಗಿಲ್ಲಿ ನಟನ ಜೊತೆ ಮತ್ತೆ ಜಗಳಕ್ಕೆ ಇಳಿದಿದ್ದಾರೆ. ಪಾತ್ರೆ ಜೊತೆಯುವ ವಿಚಾರಕ್ಕೆ ಇವರಿಬ್ಬರ ಮಧ್ಯೆ ಕಿತ್ತಾಟ ನಡೆದಿದೆ. ಇವೆಲ್ಲದ್ರ ಮಧ್ಯೆ ಮಲ್ಲಮ್ಮ ಮೊದಲ ಫೈನಲಿಸ್ಟ್ ಅಗಿದ್ದಾರೆ.
ಇದನ್ನೂ ಓದಿ: ಗಿಲ್ಲಿ, ಮಾಳುಗೆ ಮಲ್ಲಮ್ಮ ಕ್ಲಾಸ್.. ಮರ್ಯಾದೆಗಾಗಿ ಅಶ್ವಿನಿ ರಾಂಗ್ – BBKಗೆ ಮತ್ತೆ ಎಂಟ್ರಿ ಕೊಟ್ಟ ರಕ್ಷಿತಾ?
ಬಿಗ್ ಬಾಸ್ ಕನ್ನಡ ಸೀಸನ್ 12 ಸಾಕಷ್ಟು ಟ್ವಿಸ್ಟ್ ಆಂಡ್ ಟರ್ನ್ ನಿಂದ ಕೂಡಿದೆ. ಒಂದ್ಕಡೆ ಸ್ಪರ್ಧಿಗಳು ಮನೆಯಲ್ಲಿ ಅಸ್ಥಿತ್ವ ಉಳಿಸಿಕೊಳ್ಳಲು ಹೋರಾಡ್ತಿದ್ರೆ, ಮತ್ತೊಂದ್ಕಡೆ ಬಿಗ್ ಬಾಸ್ ತಮ್ಮದೇ ಆಟ ಶುರುಮಾಡ್ಕೊಂಡಿದ್ದಾರೆ. ಮೊದಲ ಟಾಸ್ಕ್ ನಲ್ಲಿ ಒಂಟಿಗಳು ವಿನ್ ಆಗಿದ್ರು. ಈ ಬೆನ್ನಲ್ಲೇ ಮಲ್ಲಮ್ಮ ಸೀಸನ್ 12ರ ಮೊದಲ ಫೈನಲಿಸ್ಟ್ ಆಗಿದ್ದಾರೆ. ಹಳ್ಳಿಗಾಡಿನಿಂದ ಬಂದ ಮಲ್ಲಮ್ಮ ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಮಲ್ಲಮ್ಮ ಅವರು ತುಂಬ ಮುಗ್ಧರು. ಬಿಗ್ ಬಾಸ್ ನಿಯಮಗಳನ್ನು ಅರ್ಥ ಮಾಡಿಕೊಳ್ಳಲು ಅವರು ಕಷ್ಟಪಡುತ್ತಾರೆ. ಇದೇ ಕಾರಣದಿಂದ ಮಲ್ಲಮ್ಮ ಈಗ ಸೀಸನ್ 12 ಮೊದಲ ಫೈನಲಿಸ್ಟ್ ಆಗಿದ್ದಾರೆ. ಮಲ್ಲಮ್ಮ ವ್ಯಕ್ತಿತ್ವ ಯಾವ ರೀತಿ ಇದೆ ಎಂಬುದು ಮೊದಲ ಎರಡು ದಿನದಲ್ಲೇ ಗೊತ್ತಾಗಿದೆ. ಅವರು ತುಂಬ ಮುಗ್ಧರು. ಇನ್ನುಳಿದವರ ತಂತ್ರಗಾರಿಕೆಯನ್ನು ಅರ್ಥ ಮಾಡಿಕೊಳ್ಳಲು ಅವರು ಸೋಲುತ್ತಾರೆ. ಎಲ್ಲರೂ ಸರಿಯಾಗಿ ಕಠಿಣ ಪೈಪೋಟಿ ನೀಡಿದರೆ ಅಂಥವರ ಜೊತೆ ಮಲ್ಲಮ್ಮ ಸ್ಪರ್ಧಿಸುವುದು ಕಷ್ಟ ಆಗುತ್ತೆ. ಹಾಗಾಗಿ ಎಲ್ಲರೂ ಒಟ್ಟಾಗಿ ಚರ್ಚಿಸಿ ಸಿಂಪಥಿ ಆಧಾರದ ಮೇಲೆ ಮಲ್ಲಮನ್ನ ಉಳಿದ ಸ್ಪರ್ಧಿಗಳು ಫಿನಾಲೆಗೆ ಆಯ್ಕೆ ಮಾಡಿದ್ದಾರೆ. ಎರಡನೇ ಟಾಸ್ಕ್‌ನಲ್ಲೂ ಒಂಟಿಗಳು ವಿನ್ ಆಗಿದ್ದು, ಧನುಷ್ ಮೊದಲ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಇನ್ನು ಬಿಗ್ ಬಾಸ್ ನಿನ್ನೆ ಮತ್ತೊಂದು ಟಾಸ್ಕ್ ನೀಡಿದ್ದು, ಇದ್ರಲ್ಲಿ ಜಂಟಿಗಳನ್ನ ಸೋಲಿಸ್ಬೇಕು ಅಂತ ಚಂದ್ರಪ್ರಭ ಹಾಗೂ ಸತೀಶ್ ಗೆ ಬಿಗ್ ಬಾಸ್ ಹೇಳಿದ್ರು. ಈ ಟಾಸ್ಕ್ ನಲ್ಲಿ ನಿಮ್ಮ ಟೀಮ್ ನ ಸೋಲಿಸಿದ್ರೆ, ನೀವು ಫೈನಲಿಸ್ಟ್ ಆಗ್ತೀರಾ ಅಂತಾ ಹೇಳಿದ್ದಾರೆ. ಇದೀಗ ಈ ಟಾಸ್ಕ್‌ನಲ್ಲಿ ಯಾವ ಟೀಮ್ ವಿನ್ ಆಗಲಿದೆ? ಜಂಟಿಗಳನ್ನ ಸೋಲಿಸೋದ್ರರಲ್ಲಿ ಚಂದ್ರಪ್ರಭ, ಸತೀಶ್ ಸಕ್ಸಸ್ ಆಗ್ತಾರಾ ಅಂತಾ ಕಾದು ನೋಡ್ಬೇಕು.. ಅದ್ರೆ ಬಿಗ್ ಬಾಸ್ ಇವರಿಬ್ಬರ ಮಧ್ಯೆ ಡೀಲ್ ಮಾಡಿಕೊಂಡಿದ್ದಕ್ಕೆ ವೀಕ್ಷಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಸ್ಪರ್ಧಿಗಳ ಜೊತೆ ಡೀಲ್ ಮಾಡ್ಕೊಂಡ್ರೆ ಟಾಸ್ಕ್ ಯಾಕೆ ಬೇಕು ಅಂತಾ ಕಮೆಂಟ್ ಮಾಡ್ತಿದ್ದಾರೆ. ಇವೆಲ್ಲದ್ರ ಮಧ್ಯೆ ದೊಡ್ಮನೆಯಲ್ಲಿ ಕಿತ್ತಾಟ ಶುರುವಾಗಿದೆ. ಗಿಲ್ಲಿ, ಅಶ್ವಿನಿ ನಡುವಿನ ಫೈಟ್ ಜೋರಾಗಿದೆ.
ಆರಂಭದಿಂದಲೂ ಅಶ್ವಿನಿ ಹಾಗೂ ಗಿಲ್ಲಿ ನಡುವೆ ಕಿತ್ತಾಟ ಶುರುವಾಗಿದೆ. ಏನಾದ್ರೂ ಒಂದು ಕಾರಣ ಇಟ್ಕೊಂಡು ಅಶ್ವಿನಿ ಗಿಲ್ಲಿ ಜೊತೆ ಜಗಳ ಮಾಡ್ತಿದ್ದಾರೆ. ಇದೀಗ ಅಶ್ವಿನಿ ಮನೆ ಕೆಲಸದ ವಿಚಾರಕ್ಕೆ ಗಿಲ್ಲಿ ಬಳಿ ಜಗಳ ಶುರುಮಾಡಿದ್ದಾರೆ. ಇದ್ರ ಪ್ರೋಮೋ ರಿಲೀಸ್ ಆಗಿದೆ. ಅಶ್ವಿನಿ ಸ್ಲ್ಯಾಬ್ ಎಲ್ಲ ಗಲೀಜು ಆಗಿದೆ. ಅದನ್ನ ಕ್ಲೀನ್ ಮಾಡಲು ಹೇಳಿದ್ದಾರೆ. ಇದನ್ನ ಗಿಲ್ಲಿ ನೆಗ್ಲೆಟ್ ಮಾಡಿದ್ದಾರೆ. ಆಗ ಅಶ್ವಿನಿ ದರ್ಪ ತೋರ್ಸಿ.. ನಾನು ಇಲ್ಲಿಂದ ನೋಡ್ತೀನಿ. ಮಜಾ ತಗೊತಿನಿ ಅಂದಿದ್ದಾರೆ.. ಆಗ ದ್ರುವಂತ್ ಸೇವಕರಿಗೆ ಸೇವಕರು ಬೇಕಾಗಿಲ್ಲ.. ಅಂದಿದ್ದಾರೆ. ಬಳಿಕ ಅಶ್ವಿನಿ ನಾವು, ನೀವು ಒಂದೇ ಅಲ್ಲ.. ನೀವು ಸೇವಕರು.. ನನ್ನ ಕಣ್ಣು ನೋಡಿ ಅಂತ ಕಾವ್ಯ ಗಿಲ್ಲಿಗೆ ಹೇಳಿದ್ದಾರೆ. ಆದ್ರೆ ಗಿಲ್ಲಿ ಕಾವ್ಯ ಸುಮ್ನೆ ಇದ್ರು. ಇದ್ರಿಂದಾಗಿ ಅಶ್ವಿನಿ ಸಿಟ್ಟು ಜಾಸ್ತಿಯಾಗಿದೆ. ನಮ್ಮ ಊಟ ನಿಮ್ಮಿಂದ ಹೋಗಿರೋದು.. ನಿಮ್ಗೆ ಪಶ್ಚಾತ್ತಾಪ ಇದ್ಯಾ ಅಂತಾ ಕೇಳಿದ್ದಕ್ಕೆ ಇಲ್ಲ ಅಂದಿದ್ದಾರೆ.. ಗಿಲ್ಲಿ ಮಾತಿಂದಾಗಿ ಒಂಟಿಗಳು ಮತ್ತಷ್ಟು ರೊಚ್ಚಿಗೆದ್ದಿದ್ದಾರೆ.
ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ಈಗ ಸ್ಪರ್ಧಿಗಳ ಮಧ್ಯೆ ಮನಸ್ತಾಪ ಶುರುವಾಗಿದೆ. ಗಿಲ್ಲಿ ದೊಡ್ಮನೆ ರೂಲ್ಸ್ ಬ್ರೇಕ್ ಮಾಡಿ, ಒಂಟಿಗಳ ಕೆಂಗಣ್ಣಿಗೆ ಗುರಿಯಾಗ್ತಿದ್ದಾರೆ. ಈ ಜಗಳ ಎಲ್ಲಿವರೆಗೆ ಹೋಗಿ ತಲುಪುತ್ತೆ ಅನ್ನೋದನ್ನ ಕಾದು ನೋಡ್ಬೇಕು.

ನೋಡಿರಿ

