ಗೆಲ್ಲಲಿಲ್ಲ ರಾಶಿಕಾ ಮೋಸದಾಟ – ವಂಶದ ಕುಡಿಯಿಂದಲೇ ಗಿಲ್ಲಿಗೆ ಸಮಸ್ಯೆ!

ಗೆಲ್ಲಲಿಲ್ಲ ರಾಶಿಕಾ ಮೋಸದಾಟ – ವಂಶದ ಕುಡಿಯಿಂದಲೇ ಗಿಲ್ಲಿಗೆ ಸಮಸ್ಯೆ!

ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಕಾಶಿಕಾ ಕ್ಯಾಪ್ಟನ್‌ ಆಗಿದ್ದಾರೆ. ಆದ್ರೆ ಮನೆ ಉಸ್ತುವಾರಿಯನ್ನ ನ್ಯಾಯಯುತವಾಗಿ ಮಾಡೋದು ಬಿಟ್ಟು ಆಕೆ ಫೇವರಿಸಂ ನಡೆಸುತ್ತಾ ಬಂದಿದ್ದಾರೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲೂ ರಾಶಿಕಾ ಸೂರಜ್‌ನ ಗೆಲ್ಲಿಸಲು ನಾನಾ ಪ್ರಯತ್ನ ಮಾಡಿದ್ರು. ಆದ್ರೆ ರಾಶಿಕಾ ಪ್ಲ್ಯಾನ್‌ ಉಲ್ಟಾ ಆಗಿದೆ.

ಇದನ್ನೂ ಓದಿ: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ – ಖಾಸಗಿ ಲ್ಯಾಬ್‌ನಲ್ಲಿ ಮೊಟ್ಟೆ ಟೆಸ್ಟ್‌ಗೆ ರಾಜ್ಯ ಸರ್ಕಾರ ಅದೇಶ

ಬಿಗ್‌ಬಾಸ್‌ ಮನೆಯಲ್ಲಿ ರಾಶಿಕಾ ತನಗೆ ಬೇಕಾದವರನ್ನ ಗೆಲ್ಲಿಸೋ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ರಾಶಿಕಾ ತೆಗೆದುಕೊಂಡ ನಿರ್ಧಾರಗಳು ಸ್ಪರ್ಧಿಗಳಿಗೆ ಮಾತ್ರವಲ್ಲ, ವೀಕ್ಷಕರಿಗೂ ಇಷ್ಟವಾಗಲ್ಲಿಲ್ಲ. ರಾಶಿಕಾಳನ್ನ ಮನೆ ಮಂದಿ ಕೂಡ  ಪ್ರಶ್ನೆ ಮಾಡಿದ್ರು.  ಕ್ಯಾಪ್ಟನ್ ರಾಶಿಕಾ ಅವರು ತಮಗಿರುವ ಅಧಿಕಾರ ಬಳಸಿ ಗಿಲ್ಲಿ ಮತ್ತು ರಘು ಅವರನ್ನು ನಾಮಿನೇಟ್‌ ಮಾಡಿದ್ದರು. ಅತ್ತ ಧನುಷ್‌ ಮತ್ತು ರಜತ್‌ ಅವರನ್ನು ನಾಮಿನೇಷನ್‌ನಿಂದ ಬಚಾವ್‌ ಮಾಡಿದ್ದರು. ಅದಾದ ಬಳಿಕ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲೂ ರಾಶಿಕಾ ಸರಿಯಾಗಿ ಉಸ್ತುವಾರಿ ಮಾಡಿಲ್ಲ. ಸೂರಜ್‌ ಹಾಗೂ ಕಾವ್ಯಳನ್ನ ಗೆಲ್ಲಿಸಬೇಕು ಎಂದು ಪಣತೊಟ್ಟಂತೆ ಕಾಣುತ್ತಿತ್ತು. ರಘು ಹಾಗೂ ಗಿಲ್ಲಿಗೆ ಪದೇ ಪದೇ ಪಾಸ್‌ ಹೇಳಿ ಸೋಲುವಂತೆ ಮಾಡಿದ್ರು. ಆದ್ರೂ ಕೂಡ ರಾಶಿಕಾ ಮೋಸದಾಟದಲ್ಲಿ ಸೋತಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್‌ಗೆ ಅಂತಿಮವಾಗಿ ಸೂರಜ್‌ ಹಾಗೂ ಕಾವ್ಯ ಆಯ್ಕೆ ಆಗಿದ್ದಾರೆ. ಇವರಿಬ್ಬರಿಗೆ ಬಿಗ್‌ಬಾಸ್‌ ಟಾಸ್ಕ್‌ ನೀಡಿದ್ದು, ಇದ್ರಲ್ಲಿ ಕಾವ್ಯ ಗೆದ್ದಿದ್ದಾರೆ. ಈ ಮೂಲಕ ಕಾವ್ಯ ಈ ವಾರದ ಕ್ಯಾಪ್ಟನ್‌ ಆಗಿದ್ದಾರೆ ಎಂದು ಹೇಳಲಾಗ್ತಿದೆ. ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ಮಾತಿನಂತೆ, ರಾಶಿಕಾ ಸೂರಜ್‌ನ ಗೆಲ್ಲಿಸಲು ಎಷ್ಟೇ ಪ್ಲ್ಯಾನ್‌ ಮಾಡಿದ್ರು ಅದು ಸಕ್ಸಸ್‌ ಆಗಿಲ್ಲ. ಈ ವಾರ ರಾಶಿಕಾ ಕ್ಯಾಪ್ಟನ್ಸಿಯನ್ನ ಸರಿಯಾಗಿ ನಿಭಾಯಿಸಿಲ್ಲ. ಆಕೆ ನ್ಯಾಯಯುತವಾಗಿ ಉಸ್ತುವಾರಿ ಮಾಡಲಿಲ್ಲ. ಈ ವಾರ ಸುದೀಪ್‌ ಈ ಬಗ್ಗೆ ಕ್ಲಾಸ್‌ ತೆಗೆದುಕೊಳ್ಳಬೇಕು ಎಂದು ವೀಕ್ಷಕರು ಹೇಳುತ್ತಿದ್ದಾರೆ.

ಇನ್ನು ಗಿಲ್ಲಿಗೆ ವಂಶದ ಕುಡಿಯಿಂದಲೇ ಸಮಸ್ಯೆ ಎದುರಾಗಿದೆ. ಗಿಲ್ಲಿ ರಕ್ಷಿತಾಳನ್ನ ಎಷ್ಟು ಹೊತ್ತಿಗೂ ವಂಶದ ಕುಡಿ ಎಂದು ಹೇಳಿಕೊಂಡು ತಮಾಷೆ ಮಾಡುತ್ತಿದ್ದರು. ಈಗ ವಂಶದ ಕುಡಿಯಿಂದಲೇ ಅವರಿಗೆ ಸಮಸ್ಯೆ ಬಂದಿದೆ. ಲಕ್ಷುರಿ ಟಾಸ್ಕ್‌ಗೋಸ್ಕರ ಗಿಲ್ಲಿ ನಟ ಈಗ ಕೆಲಸ ಮಾಡುತ್ತಾರೆ.

ಬಿಗ್‌ಬಾಸ್‌ ರಕ್ಷಿತಾ ಹಾಗೂ ಧ್ರುವಂತ್‌ಗೆ ಗಲೀಜು ಮಾಡಬೇಕು ಎಂದು ಹೇಳಿದ್ದರು. ಆಗ ರಕ್ಷಿತಾ ಮನೆಯನ್ನು ಕ್ಲೀನ್‌ ಮಾಡೋಕೆ ಆಗೋದಿಲ್ಲ, ಅಷ್ಟರಮಟ್ಟಿಗೆ ಗಲೀಜು ಮಾಡಬೇಕು, ಗಲೀಜು ಏನು ಎಂದು ನಾನು ತೋರಿಸುವೆ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಇಡೀ ಮನೆಯಲ್ಲಿ ಗಲೀಜು ಮಾಡಲಾಗಿದೆ. ಮನೆಯ ಯಾವ ಮೂಲೆಯನ್ನು ಬಿಟ್ಟಿಲ್ಲ, ಅಷ್ಟರಮಟ್ಟಿಗೆ ಗಲೀಜು ಮಾಡಿದ್ದಾರೆ ಎಂದು ಹೇಳಿದ್ದಾರೆ. ಮನೆ ಗಲೀಜು ಆಗಿದ್ದು ನೋಡಿ ಇಡೀ ಮನೆಯವರು ಕಂಗಾಲಾಗಿದ್ದಾರೆ. ಈಗ ಗಿಲ್ಲಿಯೇ ಸೋಮಾರಿತನ ಬಿಟ್ಟು ಮನೆ ಕ್ಲೀನ್ ಮಾಡಲು ಮುಂದಾಗಿದ್ದಾರೆ. ‌ಇದೀಗ ಮನೆ ಕ್ಲೀನ್‌ ಮಾಡಿ ಲಕ್ಷುರಿ ಟಾಸ್ಕ್‌ನ ಮನೆ ಮಂದಿ ಗೆಲ್ತಾರಾ ಅಂತ ಕಾದುನೋಡ್ಬೇಕು.

Shwetha M