ಇವರಿಗೆಲ್ಲ ತಿನ್ನಿಸೋದಿಕ್ಕೆ ನಮಗೆ ತೆವಲಾ ಎಂದ ರಘು ಮೇಲೆ ಮುಗಿಬಿದ್ದ ಮನೆ ಮಂದಿ!

ಬಿಗ್ ಬಾಸ್ ಮನೆಯಲ್ಲಿ ಆಟಕ್ಕಿಂತ ಬರೀ ಕಿತ್ತಾಟವೇ ಹೈಲೈಟ್ ಆಗಿದೆ. ಇದೀಗ ಊಟದ ವಿಚಾರಕ್ಕೂ ಜಗಳ ಆಗಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಸದಸ್ಯರು ಲಕ್ಷುರಿ ಪಾಯಿಂಟ್ ಕಳೆದುಕೊಂಡಿದ್ದಾರೆ. ಹೀಗಾಗಿ ದಿನಸಿ ಇಲ್ಲವಾಗಿದೆ. ಇದೀಗ ರಘು ದೊಡ್ಮನೆಯಲ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ. ಇವರಿಗೆಲ್ಲ ತಿನ್ನಿಸೋದಿಕ್ಕೆ ನಮಗೆ ತೆವಲಾ ಎಂದು ಹೇಳಿದ್ದು, ಅವರ ವಿರುದ್ಧ ಮನೆ ಮಂದಿ ತಿರುಗಿಬಿದ್ದಾರೆ.
ಇದನ್ನೂ ಓದಿ: ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು – ಕುಟುಂಬ ಭೇಟಿ ಮಾಡಲು ಹೊರಟ ಲೋಕಾಯುಕ್ತ ಇನ್ಸ್‌ಪೆಕ್ಟರ್ ದುರಂತ ಅಂತ್ಯ!
ಬಿಗ್‌ಬಾಸ್ ಮನೆಯಲ್ಲಿ ಇರೋ ದಿನಸಿಯನ್ನೇ ಇಡೀ ವಾರ ಮ್ಯಾನೆಜ್ ಮಾಡಿಕೊಳ್ಳಬೇಕಾಗಿದೆ. ಈ ವಿಚಾರಕ್ಕೆ ಸ್ಪರ್ಧಿಗಳ ಮಧ್ಯೆ ವಾದ ವಿವಾದವಾಗಿದೆ. ಊಟದ ವಿಚಾರಕ್ಕೆ ರಜತ್, ಅಶ್ವಿನಿ ಹಾಗೂ ರಘು ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದ್ರ ಪ್ರೋಮೋ ರಿಲೀಸ್ ಆಗಿದೆ. ಕ್ಯಾಪ್ಟನ್ ಅಭಿಷೇಕ್ ಇದ್ದವರು ಯಾರೆದೆಲ್ಲ ಎಷ್ಟೆಷ್ಟು ಆಲೂಗಡ್ಡೆ ಅಂತ ಶೇರ್ ಮಾಡಿಕೊಳ್ಳಿ ಎಂದಿದ್ದಾರೆ. ಇದು ರಜತ್ ಕೋಪಕ್ಕೆ ಕಾರಣವಾಗಿದೆ. ಅದಕ್ಕೆ ರಜತ್ ಗರಂ ಆಗಿ, ʻಒಂದು ಕೆಲಸ ಮಾಡಿ, ಅಕ್ಕಿನೂ ಬಿಡಿಸಿಟ್ಟುಕೊಟ್ಟು ಬಿಡಿʼ ಎಂದಿದ್ದಾರೆ. ಅಷ್ಟೊತ್ತಿಗೆ ರಘು ಕೂಡ, ʻನಮಗೇನು ತೆವಲಾ? ನಿಮಗೆ ತಿನ್ನಸಬೇಕುʼ ಅಂತ ಮಾತನಾಡಿದ್ದಾರೆ. ರಘು ಮಾತಿಗೆ ಕೆಂಡವಾದ ಅಶ್ವಿನಿ, ʻನಿಮಗೆ ಆಗಲ್ಲ ಅಂದ್ರೆ ಬಿಡಿ ಸರ್ ಬೇರೆ ಅವರು ಮಾಡ್ತಾರೆʼ ಎಂದಿದ್ದಾರೆ. ʻನೀವು ಏಕೆ ಎಲ್ಲದಕ್ಕೂ ಮಾತನಾಡಲು ಬರ್ತೀರಾʼ ಅಂತ ರಘು ಕೇಳಿದ್ದಕ್ಕೆ ʻತೆವಲು ಅನ್ನೋದು ಏಕೆ ಅಂತʼ ಕೂಗಾಡಿದ್ದಾರೆ ಅಶ್ವಿನಿ.
ʻನನಗೆ ಬೇಕು ಅಂದರೆ ನಾನು ತಿಂತೀನಿ, ಅವರು ಬೇಕು ಅಂದ್ರೆ ಅವರು ತಿಂತಾರೆ. ನನ್ನ ಪಾಲನ್ನು ತಿಂತಾ ಇದ್ದಾರೆ ಅಂದರೆ , ನಮಗೇನು ತೆವುಲಾ ಇಲ್ಲಿನ ಅನ್ನಿಸಿಕೊಳ್ಳೋಕೆʼ ಅಂತ ಕೂಗಾಡಿದ್ದಾರೆ ರಜತ್. ಕಿಚ್ಚು ಹೆಚ್ಚಾಗಿರೊ ಮನೆಯಲ್ಲಿ ಹೋಗೋರು ಯಾರು ಉರ್ಕೊಳ್ಳೋರು ಯಾರು ಎಂಬುದೇ ವೀಕ್ಷರಲ್ಲಿ ಇರೋ ಕೂತೂಹಲ.
ಈ ವಾರ ಲಕ್ಷುರಿ ವೇಳೆಯೂ ಬಿಗ್ ಬಾಸ್ ಒಂದು ಟ್ವಿಸ್ಟ್ ಕೊಟ್ಟಿದ್ದರು. ಮನೆ ಹತ್ತು ಸಾವಿರ ಪಾಯಿಂಟ್ ಪಡೆದುಕೊಂಡಿತ್ತು. ಧನುಷ್, ರಕ್ಷಿತಾ, ಅಶ್ವಿನಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲ ಅನ್ನೋ ಕಾರಣಕ್ಕೆ ಹೊರಗಿಟ್ಟಿದ್ದರು. ಆ ಬಳಿಕ ಬಿಗ್ ಬಾಸ್‌ಗ ಈ ಮೂವರಿಗೆ ಚರ್ಚಿಸಿ, ಲಕ್ಷುರಿ ಬಿಟ್ಟುಕೊಟ್ಟರೆ ಮನೆಯ ಸದಸ್ಯದವರಾಗುತ್ತೆ, ಇಲ್ಲ ನಿಮ್ಮದಾಗುತ್ತೆ ಎನ್ನುವ ಆಯ್ಕೆ ಕೊಟ್ಟಿದ್ದರು. ಉಳಿದ ಸ್ಪರ್ಧಿಗಳಿಗೋಸ್ಕರ ಈ ಮೂವರು ಲಕ್ಷುರಿ ಬಿಟ್ಟುಕೊಟ್ಟಿದ್ದರು. ಆದರೆ ಕೊನೆಗೆ ಇಡೀ ಮನೆಗೆ ಸಿಗದಾಗಿದೆ.
ಈ ವಾರ ಒಟ್ಟು 9 ಜನರ ಹೆಸರನ್ನು ನಾಮಿನೇಟ್ ಮಾಡಲಾಗಿದೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ಹತ್ತಿರ ಆಗಲಿರುವುದರಿಂದ ಎಲ್ಲ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ.ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅವರು ನಾಮಿನೇಟ್ ಆಗಿದ್ದಾರೆ. ಅಶ್ವಿನಿ ಗೌಡ ಅವರು ಈಗ ಸೈಲೆಂಟ್ ಆಗಿದ್ದಾರೆ. ಆ ಕಾರಣದಿಂದಲೇ ನಾಮಿನೇಷನ್ನಿಂದ ಪಾರಾಗಿದ್ದಾರೆ. ರಘು ಕೂಡ ನಾಮಿನೇಶನ್‌ನಿಂದ ಪಾರಾಗಿದ್ದಾರೆ.

ನೋಡಿರಿ

