ಐಶ್ವರ್ಯ ಮುಖಕ್ಕೆ ಟೀ ಚೆಲ್ಲಿದ ಭವ್ಯ – ಗೌತಮಿ ಮಾತಿಗೆ ಮಂಜು ಶಾಕ್‌

ಐಶ್ವರ್ಯ ಮುಖಕ್ಕೆ ಟೀ ಚೆಲ್ಲಿದ ಭವ್ಯ – ಗೌತಮಿ ಮಾತಿಗೆ ಮಂಜು ಶಾಕ್‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಈಗ ಫಿನಾಲೆ ಹಂತಕ್ಕೆ ಕಾಲಿಟ್ಟಿದೆ. ಇದೀಗ ಸ್ಪರ್ಧಿಗಳಲ್ಲಿ ಪೈಪೋಟಿ ಹೆಚ್ಚಾಗಿ ನಡೆದಿದೆ. ಒಬ್ಬರ ಮೇಲೆ ಒಬ್ಬರು ಜಿದ್ದಿಗೆ ಬಿದ್ದಿದ್ದು, ತಮ್ಮನ್ನು ತಾವು ಎಚ್ಚರಿಸಿಕೊಳ್ಳಬೇಕಿದೆ. ಸೂಪರ್ ಸಂಡೇಯಲ್ಲಿ ಕಿಚ್ಚನಿಂದ ಭವ್ಯಗೌಡ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಐಶ್ವರ್ಯ ಮುಖಕ್ಕೆ ಭವ್ಯ ಟೀ ಚೆಲ್ಲಿದ್ದಾರೆ.

ಇದನ್ನೂ ಓದಿ: ಮಹಾಕುಂಭ ಮೇಳದ ವಿಶೇಷತೆಯೇನು? – 45 ದಿನ.. 3.2 ಲಕ್ಷ ಕೋಟಿ ರೂ. ಆದಾಯ!

ಬಿಗ್​ಬಾಸ್​ ಮನೆಯಲ್ಲಿ ಎಚ್ಚೆತ್ತಿಕೊಳ್ಳಿ ಎಂಬ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳ ಮುಖಕ್ಕೆ ಟೀ ಅನ್ನು ಹಾಕಲಾಗಿದೆ. ಇದರಲ್ಲಿ ಕೇವಲ ಐಶ್ವರ್ಯ ಮುಖಕ್ಕೆ ಭವ್ಯ ಮಾತ್ರ ಟೀ ಚೆಲ್ಲಿಲ್ಲ. ಇದೇ ರೀತಿ ಎಚ್ಚೆತ್ತುಕೊಳ್ಳಿ ಎಂದು ಹನುಮಂತು ಮುಖಕ್ಕೆ ಧನರಾಜ್, ಗೌತಮಿ ಮುಖಕ್ಕೆ ರಜತ್, ಚೈತ್ರಾ ಮುಖಕ್ಕೆ ಮಂಜು, ಮಂಜು ಮುಖಕ್ಕೆ ಗೌತಮಿ, ಮೋಕ್ಷಿತಾ ಮುಖಕ್ಕೂ ಚಹಾ ಚೆಲ್ಲಲಾಗಿದೆ. ಅಂದರೆ ಇವರೆಲ್ಲಾ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಲಾಗಿದೆ.

ಮನೆಯಲ್ಲಿ ಸದಸ್ಯರ ಪೈಕಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯ ಯಾರು ಎಂದು ಘೋಷಿಸಬೇಕಿದೆ. ಇದು ಬಿಗ್ ಬಾಸ್ ಆರ್ಡರ್ ಆಗಿದೆ. ಈ ಹಿನ್ನೆಲೆಯಲ್ಲಿ ಗೌತಮಿ, ಹನುಮಂತು, ಚೈತ್ರಾ, ಮೋಕ್ಷಿತಾ, ಮಂಜು ಇವರು ಇನ್ನಷ್ಟು ಎಚ್ಚೆತ್ತುಕೊಂಡು ಸ್ಪರ್ಧೆ ಮಾಡಬೇಕಿದೆ. ನೀವು ಟಾಸ್ಕ್​ನಲ್ಲಿ ಇನ್ನಷ್ಟು ಸುಧಾರಿಸಿಕೊಳ್ಳಬೇಕು ಎಂದು ಟೀ ಚೆಲ್ಲಲಾಗಿದೆ. ಗೌತಮಿಗೆ ಹೆದರಿಕೊಂಡು ಮಂಜು ಮಾತನಾಡಲ್ಲ ಎನ್ನಲಾಗಿದೆ.

ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಡುವೆ ಮಾತಿನ ಸಮರ ನಡೆದಿದೆ. ನಿಮ್ಮ ಆಟಗಳಿಗೆ ಈ ವಾರ ನಾನು ಬಲಿಪಶು ಆದೆ ಎಂದು ಚೈತ್ರಾಗೆ, ಐಶ್ವರ್ಯ ಕೋಪದಲ್ಲಿ ಚೀರಿಕೊಂಡು ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ವಾಕ್ಸಮರ ನಡೆದಿದ್ದು ಕಿಚ್ಚು ಬಿದ್ದಂತೆ ಆಗಿದೆ. ನೀನು ಯಾವಳೇ ಎ.. ಅನ್ನೋಕೆ ಎಂದು ಚೈತ್ರಾ ಏಕವಚನದಲ್ಲೇ ಮಾತನಾಡಿದ್ದಾರೆ. ಬಾಯಿ ಮುಚ್ಚೆ ಸಾಕು ಎಂದು ಐಶ್ವರ್ಯ ತಿರುಗೇಟು ಕೊಟ್ಟಿದ್ದಾರೆ.

Shwetha M

Leave a Reply

Your email address will not be published. Required fields are marked *