ಮಾನಸ ಅತಿರೇಕದ ವರ್ತನೆ.. ಬಿಗ್‌ ಬಾಸ್‌ ನಿಂದ OUT? – ತುಕಾಲಿ ಪತ್ನಿ ದೃಷ್ಟಿ ಗೊಂಬೆ

ಮಾನಸ ಅತಿರೇಕದ ವರ್ತನೆ.. ಬಿಗ್‌ ಬಾಸ್‌ ನಿಂದ OUT? – ತುಕಾಲಿ ಪತ್ನಿ ದೃಷ್ಟಿ ಗೊಂಬೆ

ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಮನಸ್ತಾಪ ಹೆಚ್ಚಾಗಿದೆ.. ನಾಮಿನೇಷನ್‌ ನಿಂದ ಪಾರಾಗಲು ಸ್ಪರ್ಧಿಗಳು ಟಾಸ್ಕ್‌ ವೇಳೆ ಅತಿರೇಖದ ವರ್ತನೆ ತೋರುತ್ತಿದ್ದಾರೆ.. ಸಹ ಸ್ಪರ್ಧಿಗಳ ವಿರುದ್ಧ ಮನಸ್ಸಿಗೆ ಬಂದಂತೆ ನಿಂದಿಸುತ್ತಿದ್ದಾರೆ.. ಇದೀಗ ಮಾನಸ ವರ್ತನೆ ಅತಿರೇಖಕ್ಕೆ ಹೋಗಿದೆ ಅಂತಾ ವೀಕ್ಷಕರು ಹೇಳುತ್ತಿದ್ದಾರೆ.. ಆಕೆ ಆಟದ ವೈಖರಿಗೆ ವೀಕ್ಷಕರು ಸಿಟ್ಟಾಗಿದ್ದಾರೆ. ದೊಡ್ಮನೆಯಲ್ಲಿ ಮಾನಸಳನ್ನ ನೋಡಲು ಸಾಧ್ಯ ಆಗಲ್ಲ.. ದಯವಿಟ್ಟು ಆಕೆಯನ್ನ ಮನೆಯಿಂದ ಆಚೆ ಕಳ್ಸಿ ಅಂತಾ ವೀಕ್ಷಕರು ಹೇಳ್ತಿದ್ದಾರೆ.. ಹಾಗಾದ್ರೆ ಈ ವಾರ ಮಾನಸ ದೊಡ್ಮನೆಯಿಂದ ಆಚೆ ಬರ್ತಾರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 51 ನೇ CJI ನ್ಯಾ. ಸಂಜೀವ್ ಖನ್ನಾ – ಮಿನಲ್‌ಗಳಿಗೆ ಭಯ ಶುರುವಾಗಿದ್ದೇಕೆ?

ಬಿಗ್‌ ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ.. ದೊಡ್ಮನೆಯಲ್ಲಿ ಬರೀ ಜಗಳ, ಕಿತ್ತಾಟವೇ ಹೆಚ್ಚಾಗಿದೆ. ಸಣ್ಣ ವಿಷ್ಯ ಸಿಕ್ಕಿದ್ರು ಸಾಕು.. ಕಾಲ್ಕೆರ್ಕೊಂಡು ಜಗಳಕ್ಕೆ ಬರ್ತಾರೆ. ತುಕಾಲಿ ಹೆಂಡ್ತಿ ಮಾನಸ ಮಾತ್ರ ಯಾವೋಳೆ.. ಹೋಗೇಲೆ.. ಅಂತಾ ಜೋರಾದ ಧ್ವನಿಯಲ್ಲೇ ಮಾತಾಡ್ತಿದ್ದಾರೆ.. ಇದು ವೀಕ್ಷಕರಿಗೆ ತುಂಬಾ ಕಿರಿ ಕಿರಿ ಅನ್ನಿಸ್ತಿದೆ.. ಇದೀಗ ವೀಕ್ಷಕರು ಮಾನಸ ವಿರುದ್ಧ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ.. ಬಿಗ್‌ ಬಾಸ್‌ ಟೀಮ್‌.. ದಯವಿಟ್ಟು ನಿಮ್ಮ ಹೆಂಡ್ತಿನಾ ಆಚೆ ಕರ್ಕೊಂಡು ಬನ್ನಿ ಅಂತಾ ಹೇಳ್ತಿದ್ದಾರೆ.

ಹೌದು.. ಬಿಗ್‌ ಬಾಸ್‌ ಸೀಸನ್‌ 10 ಮುಗಿಯುವಷ್ಟರಲ್ಲಿ ತುಕಾಲಿ ಸಂತೋಷ್‌ ಪತ್ನಿ ಮಾನಸಳನ್ನ ಬಿಗ್‌ ಬಾಸ್‌ ಸೀಸನ್‌ 11 ಗೆ ಕರೆಸಿ ಅಂತಾ ವೀಕ್ಷಕರೇ ಮನವಿ ಮಾಡಿದ್ರು.. ತುಕಾಲಿ ಸಂತೋಷ್‌ ಹೆಂಡ್ತಿ ಸಖತ್‌ ಮನರಂಜನೆ ನೀಡ್ತಾರೆ.. ಕಾಮಿಡಿ ಮಾಡ್ತಾರೆ.. ಹೀಗಾಗಿ ಆಕೆಯನ್ನೇ ಕರೆಸಿ ಅಂತಾ ವೀಕ್ಷಕರ ಹೇಳ್ತಾ ಇದ್ರು.. ವೀಕ್ಷಕರ ಮನವಿಯಂತೆ ಮಾನಸಳನ್ನ ಬಿಗ್‌ ಬಾಸ್ ಮನೆಗೆ ಕರೆಸಲಾಗಿದೆ.. ಮಾನಸ ಭರಪೂರ ಮನರಂಜನೆ ನೀಡ್ತಾರೆ ಅಂತಾ ಎಲ್ಡ್ರೂ ಅಂದ್ಕೊಂಡ್ರೆ.. ಇಲ್ಲಿ ಫುಲ್‌ ಉಲ್ಟಾ ಆಗಿದೆ.. ಮಾನಸ ಹೈಪರ್‌ ಆಕ್ಟಿವ್‌ ಆಗಿದ್ದಾರೆ.. ತಾನು ಮನರಂಜನೆ ನೀಡಲು ಬಂದಿರೋದು ಅನ್ನೋದನ್ನ ಮರೆತು ರಂಪಾಟ ಮಾಡ್ತಿದ್ದಾರೆ.. ಸಹ ಸ್ಪರ್ಧಿಗಳ ಜೊತೆಗೆ ಕಿತ್ತಾಟ ಮಾಡ್ಕೊಂಡೇ ಕಾಲ ಕಳಿತಾ ಇದ್ದಾರೆ.

ಇನ್ನು ಈ ವಾರದ ಮೊದಲ ಟಾಸ್ಕ್‌ನ ತ್ರಿವಿಕ್ರಂ ಮತ್ತು ಐಶ್ವರ್ಯ ಗೆದ್ದು ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡಲು ಅವಕಾಶ ಪಡೆದುಕೊಂಡಿದ್ರು.. ಈ ವೇಳೆ  ‘ಮಾನಸರಲ್ಲಿ ಹೆಚ್ಚಾಗಿ ಮೆಚ್ಯೂರಿಟಿ ಇಲ್ಲ ಅನಿಸುತ್ತೆ ಅಂತ ಐಶ್ವರ್ಯ ಕಾರಣ ಕೊಟ್ರು..  ತಕ್ಷಣ ‘ಅದನ್ನು ಕೊಡಲು ನೀನು ಯಾವಳು ಎಂದು  ಐಶ್ವರ್ಯ ಮೇಲೆ ರೇಗಾಡಿದ್ದಾರೆ.

ಇನ್ನು ನಿನ್ನೆಯ ಎಪಿಸೋಡ್‌ ನಲ್ಲಿ ಜನಸಾಮಾನ್ಯರನ್ನ ಬಿಗ್‌ ಬಾಸ್‌ ಮನೆಯ ಒಳಗೆ ಬಿಡಲಾಗಿತ್ತು. ಈ ವೇಳೆ ಸ್ಪರ್ಧಿಗಳ ಬಳಿ ಜನರು ಮಾತನಾಡಿದ್ದಾರೆ.. ಆದರೆ, ತುಕಾಲಿ ಸಂತು ಪತ್ನಿ ಮಾನಸ ಬಗ್ಗೆ ಒಳಗೆ ಬಂದಿರೋ ಜನರು ‘ನಿಮ್ಮ ಕಿರುಚಾಟ ಕಂಡು ಇಡೀ ಕರ್ನಾಟಕವೇ ಭಯಬಿದ್ದು ಹೋಗಿದೆ’ ಎಂದು ಹೇಳೀದ್ದಾರೆ.  ಅದಕ್ಕೆ ಮಾನಸ, ನಿನ್ನ ಸಮಸ್ಯೆ ಏನು ಹೇಳಣ್ಣ ಎನ್ನುತ್ತಿದ್ದಂತೆ ಎಲ್ಲರೂ ‘ಧಿಕ್ಕಾರ ಧಿಕ್ಕಾರ’ ಅಂತ ಕೂಗಿದ್ದಾರೆ. ಅದನ್ನು ಕಂಡು ಮಾನಸ ಸಪ್ಪೆ ಮುಖ ಮಾಡಿಕೊಂಡಿದ್ದಾರೆ.

ಇದೀಗ ವೀಕ್ಷಕರು ಮಾನಸ ಮೇಲೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ.. ಮಾನಸ ಅವತಾರ ನೋಡೋದಿಕ್ಕೆ ಆಗಲ್ಲ.. ದಯವಿಟ್ಟು ಆಕೆಯನ್ನ ಆಚೆ ಕಳ್ಸಿ.. ಈ ವಾರ ಮಾನಸಳನ್ನೇ ಎಲಿಮಿನೇಷನ್‌ ಮಾಡಿ ಅಂತಾ ವೀಕ್ಷಕರು ಹೇಳುತ್ತಿದ್ದಾರೆ.. ಇನ್ನು ಮಾನಸ ಟ್ರೋಲ್‌ ಪೇಜ್‌ಗಳಿಗೂ ಆಹಾರ ಆಗಿದ್ದಾರೆ.. ಆಕೆಯ ವಿಚಿತ್ರ ಪೋಸ್‌ಗಳ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿ ಕೆಟ್ಟದಾಗಿ ಕಾಮೆಂಟ್‌ ಹಾಕ್ತಿದ್ದಾರೆ.

ಮಾನಸ ಡೌರ್‌ ರಾಣಿ, ಕ್ರಶ್‌ ಆಫ್‌ ಕರ್ನಾಟಕ ಅಲ್ಲ.. ಕರ್ನಾಟಕದ ಬ್ರಶ್‌.. ದೃಷ್ಟಿ ಗೊಂಬೆ.. ಕುತಂತ್ರಿ.. ಹೀಗೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡ್ತಿದ್ದಾರೆ.. ಅಷ್ಟೇ ಅಲ್ಲ ತೋಟಗಳಲ್ಲಿ ದೃಷ್ಟಿಗೊಂಬೆ ಬದಲು ಈಕೆಯ ಫೋಟೋಗಳನ್ನೇ ಹಾಕಿ ಅಂತಾ ಹೇಳ್ತಿದ್ದಾರೆ.. ಇನ್ನು ಮಾನಸ ಯಾವಾಗಲೂ ಬೆರಳು ಬಾಯಲ್ಲಿ ಇಡ್ಕೋತ ಇರ್ತಾರೆ.. ಇದು ಅಸಯ್ಯ ಅನಿಸುತ್ತೆ.. so cheap ಅಂತಾ ಕೆಲವರು ಕಾಮೆಂಟ್‌ ಮಾಡಿದ್ದಾರೆ.. ಇನ್ನು ಕೆಲವರು ಮಾನಸಗೆ ಕಾಮಿಡಿ ಮಾಡುವುದಕ್ಕೆ ಬರುತ್ತೆ ಅಂತ ಯಾರು ಹೇಳಿದ್ದು?  ದೇವರೇ ಗಂಡನ ಹೊಡೆದು loose ತರ ಆಡುವುದು ಒಂದು ಕಾಮಿಡಿನ? ಗಂಡನಿಗೆ ಮರ್ಯಾಡೆ ಕೊಡದವಳಿಗೆ ಯಾಕೆ ನಾವು ಮರ್ಯಾದೆ ಕೊಡ್ಬೇಕು.. ಅಂತಾ ಹೇಳಿದ್ದಾರೆ. ಒಟ್ಟಾರೆ.. ಮಾನಸ ಬಿಗ್‌ ಬಾಸ್‌ ಗೆ ಬಂದ್ಮೇಲೆ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ನೆಗೆಟಿವ್‌ ಶೇಡ್‌ ನಲ್ಲೇ ಕಾಣಿಸಿಕೊಳ್ತಿದ್ದಾರೆ.

Shwetha M