ಬೀಗ ತೆಗೆಯೋಕೆ ಅಡ್ಡಿ ಆಗಿದ್ದೇನು? – ಬಿಗ್ ಬಾಸ್ ತಪ್ಪೇ ಮಾಡಿಲ್ವಾ?
ರಕ್ಷಿತಾ ತಾಕತ್ತು BIGBOSSಗೆ ಗೊತ್ತಾಯ್ತಾ?

ಬೀಗ ತೆಗೆಯೋಕೆ ಅಡ್ಡಿ ಆಗಿದ್ದೇನು? – ಬಿಗ್ ಬಾಸ್ ತಪ್ಪೇ ಮಾಡಿಲ್ವಾ?ರಕ್ಷಿತಾ ತಾಕತ್ತು BIGBOSSಗೆ ಗೊತ್ತಾಯ್ತಾ?

101 ದಿನ ನಡೆಯಬೇಕಿದ್ದ ಶೋ ಜಸ್ಟ್ 11 ದಿನಕ್ಕೆ ನಿಂತು ಹೋಗಿದೆ. ಮನೆಯಲ್ಲಿ ಸೇಡಿನ ಬೆಂಕಿ ಹಚ್ಚಿ  ಸೋಲು ಗೆಲುವಿನ ಆಟಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದ ಬಿಗ್ ಬಾಸ್ ಈ ಸಲ ಅವರಿಗೇ ಬಿಗ್ ಟಾಸ್ಕ್‌ನ ಸರ್ಕಾರ ಕೊಟ್ಟಿದೆ.  ಜಾಲಿವುಡು ಸ್ಟಡಿಯೋ ಮಾಡಿದ ಎಡವಟ್ಟು ಬಿಗ್ ಬಾಸ್ ಕನ್ನಡದ ಮೇಲೆ ಎಫೆಕ್ಟ್ ಬಿದ್ದಿದೆ. ಪರಿಸರಕ್ಕೆ ತೊಂದ್ರೆ ಆಗ್ತಿದೆ ಅಂತ ಬಿಗ್ ಬಾಸ್‌ ಹೌಸ್‌ನ ಫುಲ್ ಖಾಲಿ ಮಾಡಿಸಲಾಗಿತ್ತು.. ರಾತ್ರೋರಾತ್ರಿ  ಈಗಲ್‌ಟನ್ ರೆಸಾರ್ಟ್‌ ಗೆ ಶಿಫ್ಚ್ ಆದ ಸ್ವರ್ಧಿಗಳು ಅಯ್ಯೋ ದೇವ್ರೇ ಹಿಂಗಾಯ್ತು ಅಂತ ತಲೆ ಕೆಡಿಸಿಕೊಂಡು ಹೊಗೆ  ಕೂಡ ಬಿಟ್ರು..

ಇದನ್ನೂ ಓದಿ: ವಿಂಡೀಸ್ ವೈಟ್ ವಾಶ್ ಗೆ ಭಾರತ ರೆಡಿ – ಪ್ಲೇಯಿಂಗ್ 11 ಟ್ವಿಸ್ಟ್ ಕೊಡುತ್ತಾ BCCI?

ಜಾಲಿವುಡ್ ಸ್ಟುಡಿಯೋ  ಮತ್ತು ಬಿಗ್ ಬಾಸ್ ಆಯೋಜಕರು ಚಿಕ್ಕ ಮ್ಯಾಟ್ರನ್ನ ಇವರೇ ದೊಡ್ಡದು ಮಾಡಿಕೊಂಡ್ರು ಅನ್ಸುತ್ತೆ. ಕೈಯಲ್ಲಿ ಹೋಗುವುದ್ದಕ್ಕೆ ಕೊಡಲಿ ತಗೊಂಡ್ರು ಅನ್ಸುತ್ತೆ. ನೋಟಿಸ್ ಕೊಟ್ಟ ತಕ್ಷಣ ಅದ್ದನ್ನ ತಗೊಂಡು ಎಲ್ಲಿ ತಪ್ಪು ಆಗಿದೆ ಅಲ್ಲಿ ಸರಿ ಮಾಡ್ತಿವಿ ಅಂತ ಹೇಳಿ ಸಂಬಂಧಪಟ್ಟವರ ಹತ್ರ ಮಾತುಕತೆ ಮಾಡಬಹುದಿತ್ತು. ಆದ್ರೆ ಬಿಗ್ ಬಾಸ್ ಹೌಸ್‌ಗೆ ಬೀಗ ಬೀಳುವ ತನಕ ಕಾಯೋದು ಬೇಡವಿತ್ತು..ಬಟ್ ಇಷ್ಟೆಲ್ಲಾ ದೊಡ್ಡ ಡೆವಲಪ್ ಮೆಂಟ್ ಆದ ಮೇಲೆ ಈಗ ಮಾತುಕತೆ ನಡೆಸಿದ್ದಾರೆ. ಜಾಲಿವುಡ್ ಸ್ಪುಡಿಯೋ ಮತ್ತು ಬಿಗ್ ಬಾಸ್ ಆಯೋಜಕರು ರಾಮನಗರ ಜಿಲ್ಲಾಡಳಿತ ಜೊತೆ ಮಾತುಕತೆ ನೆಡಸಿದ್ದಾರೆ. ಅದ್ರಂತೆ ಕೋರ್ಟ್‌ಗೆ ಜಾಲಿವುಡ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನ ವಾಪಸ್ ಪಡೆಯಲಾಗಿದೆ. ಬಟ್ ಇದೇ ಗೊಂದಲಕ್ಕೆ ಕಾರಣವಾಗಿದೆ. ಯಾಕಂದ್ರೆ ಇಲ್ಲಿ ಡಿಸಿ ಅಧಿಕೃತ ಆದೇಶ ಹೊರಡಿಸಿಲ್ಲ.. ಡಿಸಿ ಆದೇಶ ಮಾಡಿದ್ದಾರೆಂದು ರಿಟ್ ಅರ್ಜಿ ವಾಪಸ್ ಪಡೆದಿದ್ದಾರೆ. ಹೀಗಾಗಿ ಇವತ್ತು ಬಹುತೇಕ ಬಿಗ್ ಬಾಸ್ ಮನೆ ಓಪನ್ ಆಗುತ್ತೆ ಅಂತ ಅಂದುಕೊಳ್ಳಲಾಗಿತ್ತು. ಬಟ್ ಅದು ಡೌಟ್ ಎನ್ನಲಾಗ್ತಿದೆ. ಒಂದ್ಕಡೆ ಈ ಬೆಳವಣಿಗೆ ಆದ್ರೆ ಇನ್ನುಂದ್ಕಡೆ ರಕ್ಷಿತಾ ಶೆಟ್ಟಿ ಹವಾ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಬಿಗ್‌ ಬಾಸ್ ಹಿಂಡ್ಕೊಂಡು ಸಖತ್ ಕಂಟೆಂಟ್ ಕೊಡ್ತಿದ್ದ ಟ್ರೋಸ್‌ ಈಗ ಬಿಗ್ ಬಾಸ್ ಸ್ವರ್ಧಿ ಆಗಿರೋ ರಕ್ಷಿತಾ ಶೆಟ್ಟಿಯನ್ನ ಸಖತ್ ಟ್ರೋಲ್ ಮಾಡ್ತಿದ್ದಾರೆ.   ತುಳು ಮಿಶ್ರಿತ ಕನ್ನಡ ಮಾತನಾಡಿ ಬಿಗ್‌ ಬಾಸ್‌ಗೆ ಎಂಟ್ರಿ ಈ ರಕ್ಷಿತಾ ಶೆಟ್ಟಿ.. ಬಂದ ಮೊದಲ ದಿನವೇ ಮನೆಯಿಂದ ಹೊರ ಹೋಗಿದ್ರು.. ಒಂದು ವಾರ್ ಈಕೆ ಎಲ್ಲಿದ್ರೂ ಅನ್ನೋ ಸುದ್ದಿನ ಇರಲಿಲ್ಲ. ಯಾಕಂದ್ರೆ ಇದು ಬಿಗ್ ಬಾಸ್ ಸಿಕ್ರೀಟ್ ಟಾಸ್ಕ್ ಆಗಿತ್ತು. ಒಂದು ವಾರ ಬಿಟ್ಟು ಬಿಗ್ ಬಾಸ್‌ನಲ್ಲಿ ಪ್ರತ್ಯೇಕ್ಷ ಆದ ಈ ರಕ್ಷಿತಾ ಶೆಟ್ಟಿಯನ್ನ ಸುದೀಪ್ ಅವರು ಮಾತನಾಡಿಸಿದ್ರು.. ನಿಮ್ಗೆ ವೋಟ್ ಮನೆಯಿಂದ ಹೊರಗೆ ಹಾಕಿದವರಲ್ಲಿ ಯಾರನ್ನ ನೀವು ಹೊರಗೆ ಹಾಕ್ತೀರಾ ಅಂತ ಕೇಳಿದ್ರೆ. ಅದ್ದಕ್ಕೆ ಈ ರಕ್ಷಿತಾ ಶೆಟ್ಟಿ ಎಲ್ಲರನ್ನೂ ಹೊರಗೆ ಹಾಕ್ತಿನಿ ಅಂತ ಹೇಳಿದ್ರು.. ಹೀಗ್ ಕೇಳ್ ನೆಟ್ಟಗೆ ಎರಡು ದಿನ ಕೂಡ ಆಗಿಲ್ಲ.. ರಕ್ಷಿತಾ ಹೇಳಿದಂತೆ ಎಲ್ಲರೂ ಕೂಡ ಮನೆಯಿಂದ ಹೊರ ಬಿದ್ದಿದ್ದಾರೆ. ಈಗ ಇವ್ರ ಮಾತನ್ನೇ ಇಟ್ಕೊಂಡು ಸಖತ್ ಟ್ರೋಲ್ ಮಾಡ್ತಿದ್ದಾರೆ.  ರಕ್ಷಿತಾ ತಾಕತ್ತು ಏನ್ ಅಂತ BIGBOSSಗೆ ಗೊತ್ತಾಯ್ತು.. ರಕ್ಷಿತಾ ಹೇಳಿದ್ದು ನಿಜ ಆಗುತ್ತೆ.. ರಕ್ಷಿತಾ ಹೇಳಿದ್ದಕ್ಕೆ ದೇವರು ತಥಾಸ್ತು ಅಂತ ವರ ಕೊಟ್ಟಿದ್ದಾನೆ ಅಂತ ಸಖತ್ ವೈರಲ್ ಆಗ್ತಿದೆ.

 

Kishor KV