ಗೆಳತಿ ಔಟ್.. ಮಂಜುಗೆ ಫುಲ್ ಎನರ್ಜಿ.. BBK ವಿನ್ನರ್ ಮಂಜು? – ಉಗ್ರಂ ಸೈಲೆಂಟ್ ಗೇಮ್

ಬಿಗ್‌ಬಾಸ್ ರಿಯಾಲಿಟಿ ಶೋ ಕ್ಲೈಮ್ಯಾಕ್ಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಇಲ್ಲಿ ಕೆಲವರು ಕಣ್ಣೀರು ಹಾಕ್ತಾ ವೋಟಿಗಾಗಿ ಎಮೋಷನ್ ಕಾರ್ಡ್ ಪ್ಲೇ ಮಾಡ್ತಿದ್ರೆ, ಅವ್ರಲ್ಲಿ ಒಬ್ರು ಸೈಲೆಂಟ್ ಆಗಿಯೇ ತನ್ನ ಕಲೆ ಜೊತೆಗೆ ವ್ಯಕ್ತಿತ್ವವನ್ನೇ ನಂಬಿಕೊಂಡು ಆಡ್ತಿದ್ದಾರೆ. ಉಗ್ರ ರೂಪ ತಾಳುವಾಗ ಅದೇ ಸಿಟ್ಟು, ಸ್ನೇಹ ಅಂತಾ ಬಂದಾಗ ಅದೇ ತಾಳ್ಮೆ, ಪ್ರೀತಿ ಅಂತಾ ಬಂದಾಗ ಅದೇ ಮಂದಹಾಸ. ಹೌದು.. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ವ್ಯಕ್ತಿ ಮತ್ತು ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದಾರೆ ಉಗ್ರಂ ಮಂಜು. ಹಾಗಾದ್ರೆ ಈ ಬಾರಿ ಕಪ್ ಗೆಲ್ಲೋಕೆ ಇಷ್ಟೇ ಸಾಕಾ, ಉಗ್ರಂ ಮಂಜು ಪ್ಲಸ್ ಮತ್ತು ಮೈನಸ್ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರಣಜಿಯಲ್ಲೂ ಸ್ಟಾರ್ ಬ್ಯಾಟರ್ಸ್ 1, 3, 4, 4, 11 ರನ್ – ಚಾಂಪಿಯನ್ಸ್ ಟ್ರೋಫಿ ಕಥೆನೂ ಅಷ್ಟೇನಾ?
ಹೆಸರಿನಲ್ಲಿ ಉಗ್ರಂ ಇಟ್ಟುಕೊಂಡಿದ್ರೂ ಕೂಡಾ ಮಂಜು ಭಾವನಾತ್ಮಕ ಜೀವಿ ಅನ್ನೋದು ಬಿಗ್ ಬಾಸ್ ಮನೆಯಲ್ಲಿ ನೀವೆಲ್ಲಾ ನೋಡಿದ್ದೀರಾ, ಬಿಗ್ ಬಾಸ್ ಇತರ ಸ್ಪರ್ಧಿಗಳ ಜೊತೆಗೂ ಒಳ್ಳೆಯ ಸ್ನೇಹ ಬೆಳೆಸಿಕೊಂಡಿದ್ದ ಮಂಜು, ಗೌತಮಿ ಮತ್ತು ಮೋಕ್ಷಿತಾಗೆ ತುಂಬಾ ಹತ್ತಿರವಾಗಿದ್ರು. ಹಾಗಂತಾ ಗೌತಮಿ ಜೊತೆ ಮಾತ್ರವೇ ಇರ್ತಿರಲಿಲ್ಲ. ಆದ್ರೆ, ಪಾಸಿಟಿವ್ ಗೌತಮಿಯ ಮಾತು ಮೀರುತ್ತಿರಲಿಲ್ಲ ಅನ್ನೋದೇ ಮಂಜು ವೀಕ್‌ನೆಸ್ ಆಗಿತ್ತು. ಮಂಜು ದೊಡ್ಮನೆಯಲ್ಲಿ ಎಲ್ಲರ ಜೊತೆಯೂ ಜಗಳವಾಡಿದ್ದಾರೆ. ಜೊತೆಗೆ ಎಲ್ಲರ ಜೊತೆಗೂ ಬೆರೆತು ಆಟವಾಡಿದ್ದಾರೆ. ಆದ್ರೆ, ಗೌತಮಿ ಹಾಕಿದ ಗೆರೆ ದಾಟಲ್ಲ ಎಂಬ ವಿವಾದವನ್ನೂ ಮೈಮೇಲೆ ಎಳ್ಕೊಂಡಿದ್ದಾರೆ. ಹೀಗಿರುವಾಗ್ಲೇ ಗೌತಮಿ ಮನೆಯಿಂದ ಹೊರ ನಡೆದಾಯ್ತು. ಈಗೇನಿದ್ರೂ ಮಂಜುದ್ದೇ ಹವಾ. ಜೊತೆಗೆ ಫಿನಾಲೆ ವಾರದಲ್ಲಿ ಮಂಜು ಎನರ್ಜಿಯಂತೂ ಎಕ್ಷ್ಟಾರ್ಡನರಿಯಾಗಿತ್ತು. ಗೆಳತಿಯಿಲ್ಲದೇ ಗೆಳೆಯನ ಆಟಕ್ಕೆ ವೀಕ್ಷಕರಿಂದಲೂ ಶಹಬ್ಬಾಸ್ ಗಿರಿ ಸಿಕ್ಕಿದೆ. ಇದೇ ಎನರ್ಜಿಯಲ್ಲಿ ಮಂಜು ಆಡ್ತಾ ಹೋದ್ರೆ ಕಪ್ ಗ್ಯಾರಂಟಿ ಅಂತಿದ್ದಾರೆ ಉಗ್ರಂ ಫ್ಯಾನ್ಸ್.
ಇನ್ನು ಫಿನಾಲೆ ವಾರದಲ್ಲಿ ಬಿಗ್ ಬಾಸ್ ನೀಡಿದ ಕೋರಿಕೆ ಅವಕಾಶದಲ್ಲಿಯೂ ಸಹ ಇತರ ಸ್ಪರ್ಧಿಗಳು ತಮಗೆ ಏನು ಬೇಕು ಎಂದು ಕೇಳಿಕೊಂಡರೆ ಮಂಜು ಮಾತ್ರ ಈ ಹಿಂದೆ ತಮ್ಮ ತಂದೆ-ತಾಯಿ ಬಂದಾಗ ತಂದ ಊಟವನ್ನು ಮನೆಯಲ್ಲಿ ಇರುವವರು ತುಂಬಾ ಇಷ್ಟಪಟ್ಟಿದ್ದಾರೆ. ಹೀಗಾಗಿ ಮತ್ತೊಮ್ಮೆ ಎಲ್ಲರಿಗೂ ಅದನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದೇ ಮಂಜು ಅವರ ವ್ಯಕ್ತಿತ್ವ. ಕೆಲ ಸ್ಪರ್ಧಿಗಳು ಸಿಕ್ಕಿದ್ದೇ ಚಾನ್ಸ್ ಅಂತಾ ಇನ್ನೊಬ್ಬರನ್ನ ಆಡಿಕೊಳ್ಳೋದು.. ಜನ ವೋಟ್ ಹಾಕ್ಲಿ ಅಂತಾ ಕಣ್ಣೀರು ಹಾಕಿ ಸಿಂಪತಿ ಗಿಟ್ಟಿಸಿಕೊಳ್ಳಲು ಟ್ರೈ ಮಾಡಿದ್ರೆ, ಮಂಜು ಮಾತ್ರ ತನ್ನ ಸಹ ಸ್ಪರ್ಧಿಗಳಿಗೆ ಊಟ ಕಳಿಸಿಕೊಡಿ ಎಂದು ಕೋರಿಕೆ ಮುಂದಿಡೋ ಮೂಲಕ ಗೆಲುವಿಗೆ ಹತ್ತಿರವಾಗ್ತಿದ್ದಾರೆ.
ಬಹುಶಃ ಉಗ್ರಂ ಮಂಜು ಶುರುವಿನಲ್ಲಿ ಆಡ್ತಿದ್ದ ಆಟ ಪ್ರತಿವಾರ ಮುಂದುವರೆಸಿಕೊಂಡು ಬಂದಿದ್ರೆ ಪ್ಲಸ್ ಆಗ್ತಿತ್ತೋ ಏನೋ.. ಆದ್ರೆ, ಗೆಳತಿ ಎಂಬ ಭಾವನಾತ್ಮಕತೆಗೆ ಆಟವನ್ನೇ ಮರೆತಿದ್ರು ಅನ್ನೋದು ಮಂಜು ಮೇಲಿನ ಅಪವಾದ. ಆದ್ರೆ, ಉತ್ತಮ ನಟನಾಗಿ, ರಂಗಭೂಮಿಯ ಕಲಾವಿದನಾಗಿ, ಕಲೆಗೆ ಬೆಲೆ ಕೊಡೋ ಉಗ್ರಂ ಮಂಜು.. ಬಿಗ್‌ಬಾಸ್ ವಿನ್ನರ್ ಆಗ್ತಾರಾ ಅನ್ನೋ ಈಗಿರುವ ಕುತೂಹಲ.