ಬಿಗ್‌ ಬಾಸ್ ಸಿರಿ ಸಿಂಪಲ್ ಮದುವೆ – 40 ವರ್ಷದ ಮೇಲೆ ಸಿಕ್ಕ ಸಂಗಾತಿ
ಸೀರಿಯಲ್ ಸುಂದರಿಯ ವರ ಯಾರು?

ಬಿಗ್‌ ಬಾಸ್ ಸಿರಿ ಸಿಂಪಲ್ ಮದುವೆ – 40 ವರ್ಷದ ಮೇಲೆ ಸಿಕ್ಕ ಸಂಗಾತಿಸೀರಿಯಲ್ ಸುಂದರಿಯ ವರ ಯಾರು?

ಬಿಗ್‌ಬಾಸ್ ಸುಂದರಿ, ಸಿರಿ ಈಗ ಬದುಕಿನ ಮತ್ತೊಂದು ಇನ್ನಿಂಗ್ಸ್ ಶುರುಮಾಡಿದ್ದಾರೆ. ಈ ಬಾರಿ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟಾಗ ಸಿರಿ ಸ್ಟಿಲ್ ಅನ್‌ಮ್ಯಾರೀಡ್ ಎಂದು ಎಲ್ಲರಲ್ಲೂ ಬೆರಗು ಗೊಳಿಸಿದ್ರು. ಈ ಏಜ್‌ನಲ್ಲೂ ಮದ್ವೆಯಾಗದೇ ಎವರ್‌ಗ್ರೀನ್ ಹೀರೋಯಿನ್ ಥರಾ ಕಾಣ್ತೀರಾ ಅಂತಾ ಫ್ಯಾನ್ಸ್ ಮೆಚ್ಚುಗೆಯಿಂದ ಹೊಗಳಿದ್ರು. ಜೊತೆಗೆ ಸಿರಿಗೆ ಈ ಬಾರಿ ಮದ್ವೆ ಮಾಡಿಸಬೇಕು ಅಂತಾ ಕಾಲೆಳೆದಿದ್ರು. ಕೊನೆಗೂ ಸಿರಿ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಒಂದು ಕಾಲದ ಸೀರಿಯಲ್ ನಾಯಕಿ, ಬಿಗ್‌ಬಾಸ್ ಬೆಡಗಿ ಸಿರಿ ಮದ್ವೆಯಾಗಿದ್ದಾರೆ.

ಅನೇಕ ಸೂಪರ್ ಹಿಟ್ ಮೆಗಾ ಧಾರಾವಾಹಿಗಳಲ್ಲಿ ನಾಯಕಿಯಾಗಿ ಸೈ ಅನ್ನಿಸಿಕೊಂಡವರು ಸಿರಿ. ಜೊತೆಗೆ ಸಿನಿಮಾಗಳಲ್ಲೂ ನಟಿಸಿ ತಾನೊಬ್ಬ ಪ್ರತಿಭಾವಂತ ಕಲಾವಿದೆ ಅಂತಾನೂ ನಿರೂಪಿಸಿದ್ದರು. ಕೆಲವರ್ಷಗಳ ಬ್ರೇಕ್‌ ನಂತರ ಮತ್ತೆ ಕಿರುತೆರೆಗೆ ಸಿರಿ ಕಾಲಿಟ್ಟಿದ್ದು ‘ಬಿಗ್ ಬಾಸ್ ಕನ್ನಡ ಸೀಸನ್ 10ನಲ್ಲಿ. ಬಿಗ್‌ಬಾಸ್ ಶೋನಲ್ಲಿ ಭಾಗವಹಿಸಿ ಅಭಿಮಾನಿಗಳ ಮನ ಗೆದ್ದ ಸಿರಿ ಮದುವೆಯಾಗಿದ್ದಾರೆ. ಸಿರಿ ಅವರಿಗೆ ಮದುವೆ ಯಾವಾಗ? ಇನ್ನೂ ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳು ಪದೇ ಪದೇ  ಎದುರಾಗುತ್ತಲೇ ಇದ್ದವು. ಕೊನೆಗೂ ಸಿರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಖುಷಿಯ ಕ್ಷಣಗಳ ಫೋಟೋ ರಿವೀಲ್ ಆಗಿದೆ. ಎರಡು ದಿನಗಳ ಹಿಂದಷ್ಟೇ ಸಿರಿ ಅವರಿಗೆ ಮೈತುಂಬ ಅರಿಶಿಣ ಹಚ್ಚಿರುವ ವಿಡಿಯೋ ವೈರಲ್ ಆಗಿತ್ತು. ಇದು ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಕೊನೆಗೂ ಸಿರಿ ರಿಯಲ್ ಲೈಫ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ವಿಚಾರ ಬೆಳಕಿಗೆ ಬಂದಿದೆ.

ಹುಡುಗ ಮಂಡ್ಯ ಮೂಲದವನಾಗಿದ್ದು, ಬೆಂಗಳೂರಿನಲ್ಲಿದ್ದಾರೆ. ಪ್ರಭಾಕರ್ ಎಂದು ಹೆಸರು. ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮದುವೆ ನಡೆದಿದೆ. ದೇವಸ್ಥಾನದಲ್ಲಿ ತುಂಬಾ ಸರಳವಾಗಿ ಈ ಮದುವೆ ನಡೆದಿದೆ. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು . ಯಾಕೆ ಇನ್ನೂ ಮದುವೆ ಆಗಿಲ್ಲ ಎಂಬ ಪ್ರಶ್ನೆ ಬಂದಾಗಲೆಲ್ಲಾ ಇಷ್ಟುದಿನಗಳ ಕಾಲ ಯೋಗ್ಯ ಹುಡುಗ ಸಿಕ್ಕಿಲ್ಲ, ಮದುವೆ ಅವಶ್ಯಕತೆ ಇದೆಯಾ ಎಂದು ಸಿರಿ ಕೇಳುತ್ತಿದ್ದರು. ಮದುವೆ ಬಗ್ಗೆ ಮಾತಾಡುವಾಗ ಸಿರಿ ಇನ್ನೊಂದು ಮಾತು ಹೇಳುತ್ತಿದ್ದರು. ಸರಿಯಾದ ಜೀವನ ಸಂಗಾತಿ ಸಿಗಬೇಕು. ಕಾಂಪ್ರಮೈಸ್ ಆಗಲೇಬೇಕು. ನಾನು ಕಾಂಪ್ರಮೈಸ್ ಆಗಲು ರೆಡಿ. ನನಗೆ ತಂದೆಯಿಲ್ಲ. ತಾಯಿಗೆ ನಾವಿಬ್ಬರು ಹೆಣ್ಣು ಮಕ್ಕಳು. ನಮ್ಮ ಮನೆಗೆ ಈಗ ಅಳಿಯನೂ ಬೇಕು, ಮಗನೂ ಬೇಕು. ಅಕ್ಕನ ಗಂಡ ಕೂಡ ತೀರಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಹುಡುಗ ಸಿಕ್ಕರೆ ನೋಡೋಣ ಎಂದು ಹೇಳಿದ್ದರು. ಕೊನೆಗೂ ಸಿರಿಯ ಕನಸಿನ ಹುಡುಗ ಸಿಕ್ಕಾಗಿದೆ. ಡುಂ ಡುಂ ಅಂತಾ ವಾಲಗ ಊದಿಯಾಗಿದೆ. ಸಿರಿ ಮುಂದಿನ ಬದುಕಿನ ಕ್ಷಣಗಳು ಸಿಹಿಯಾಗಿರಲಿ ಅನ್ನೋದೇ ನಮ್ಮ ಆಶಯ.

Shwetha M