ಮಹಡಿ  ಮೇಲಿಂದ ಬಿದ್ದ ಬಿಗ್​ಬಾಸ್​ ಸೀಸನ್‌ 6 ವಿನ್ನರ್​ ಶಶಿಕುಮಾರ್!

ಮಹಡಿ  ಮೇಲಿಂದ ಬಿದ್ದ ಬಿಗ್​ಬಾಸ್​ ಸೀಸನ್‌ 6 ವಿನ್ನರ್​ ಶಶಿಕುಮಾರ್!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 6ರ ವಿನ್ನರ್ ಶಶಿಕುಮಾರ್ ಕಾಲಿಗೆ ಪೆಟ್ಟಾಗಿದೆ.  ಮೆಹಬೂಬ ಸಿನಿಮಾದ ಚಿತ್ರೀಕರಣದ ಮಹಡಿ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ.

ಮೈಸೂರಿನಲ್ಲಿ ನಡೆಯುತ್ತಿದ್ದ ‘ಮೆಹಬೂಬಾ’ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ. ಫೈಟ್‌ ಸೀನ್‌ನಲ್ಲಿ ಮಹಡಿ ಹತ್ತುವಾಗ ಈ ಅವಘಡ ಸಂಭವಿಸಿದೆ. ಶಶಿ ಮಹಡಿ ಮೇಲೆ ಹತ್ತುವಾಗ ಸ್ಕಿಡ್‌ ಆಗಿ ಕೆಳಗೆ ಬಿದ್ದಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್‌ ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟ ಎಲಿಮಿನೇಟ್ ಆದ ಸ್ಪರ್ಧಿಗಳು! – ನಮ್ರತಾ, ಕಾರ್ತಿಕ್ ಆಪ್ತತೆ ನೋಡಿ ಉರ್ಕೊಂಡಿದ್ದಾರಾ ಸ್ನೇಹಿತ್?

ಮಾಡ್ರನ್ ರೈತ ಎಂದೇ ಫೇಮಸ್ ಆಗಿದ್ದ ‘ಬಿಗ್ ಬಾಸ್’ ಶಶಿ ಅವರು ತಮ್ಮ ಮುಂಬರುವ ಸಿನಿಮಾ ‘ಮೆಹಬೂಬಾ’ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ರಿಸ್ಕಿ ಸೀನ್ಸ್ ಶೂಟ್ ಮಾಡುವಾಗ ಬಿದ್ದು ಶಶಿ ಏಟು ಮಾಡಿಕೊಂಡಿದ್ದಾರೆ. ಸೂಕ್ತ ಚಿಕಿತ್ಸೆಯ ಬಳಿಕ ಶಶಿ ಇದೀಗ ಚೇತರಿಕೊಳ್ಳುತ್ತಿದ್ದಾರೆ.

ಕಳೆದ ಸೀಸನ್ 6 ಬಿಗ್ ಬಾಸ್ ಶೋನಲ್ಲಿ ವಿಜೇತರಾಗಿದ್ದ ಶಶಿ ಕೃಷಿ ಮತ್ತು ಸಿನಿಮಾರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಗೊಂಬೆಗಳ ಲವ್’ ಖ್ಯಾತಿಯ ಪಾವನಾ ಜೊತೆ ‘ಮೆಹಬೂಬಾ’ ಎಂಬ ಲವ್‌ಸ್ಟೋರಿ ಹೇಳಲು ಶಶಿ ರೆಡಿಯಾಗಿದ್ದಾರೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

Shwetha M