ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳ ಸಮಾಗಮ! – ದೊಡ್ಮನೆ ಹಬ್ಬದಲ್ಲಿ ಅಶ್ವಿನಿ ಮಸ್ತ್ ಡ್ಯಾನ್ಸ್, ಗಿಲ್ಲಿ ಭರ್ಜರಿ ಕಾಮಿಡಿ!

ಬಿಗ್‌ಬಾಸ್ ಕನ್ನಡ ಸೀಸನ್ 12 ಮುಗಿದು 1 ತಿಂಗಳೇ ಕಳೆದಿದೆ. ಆದ್ರೂ ಸ್ಪರ್ಧಿಗಳ ಹವಾ ಇನ್ನೂ ಕಡಿಮೆಯಾಗಿಲ್ಲ. ಒಂದಾದ ಮೇಲೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಬಿಗ್‌ಬಾಸ್ ಸ್ಪರ್ಧಿಗಳ ರಿಯೂನಿಯನ್ ನಡೆದಿದೆ. ಕಲರ್ಸ್ ಕನ್ನಡ ವಾಹಿನಿ ದೊಡ್ಮನೆ ಹಬ್ಬ ಅಂತ ಹೊಸ ಕಾರ್ಯಕ್ರಮದ ಮೂಲಕ ವೀಕ್ಷಕರ ಮುಂದೆ ಬಂದಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಬಸ್‌ಗಳ ಮೇಲಿನ ಜಾಹೀರಾತಿಗೆ ಬ್ರೇಕ್ – 15 ದಿನದೊಳಗೆ ಜಾಹೀರಾತು ತೆರವಿಗೆ ಸೂಚನೆ
ಬಿಗ್‌ಬಾಸ್ ಮನೆ ಸ್ಪರ್ಧಿಗಳೆಲ್ಲಾ ಮತ್ತೆ ಒಂದ್ಕಡೆ ಸೇರಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಇದರ ಪ್ರೋಮೋ ರಿಲೀಸ್ ಮಾಡಿದೆ. ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಗಿಲ್ಲಿ, ರಕ್ಷಿತಾ, ಕಾವ್ಯಾ, ಅಶ್ವಿನಿ ಗೌಡ ಹಾಗೂ ರಘು ಸೇರಿದಂತೆ ಎಲ್ಲ ಸ್ಪರ್ಧಿಗಳು ಮತ್ತೊಮ್ಮೆ ಒಂದೆಡೆ ಸೇರಿ ಸಂಭ್ರಮಿಸಿದ್ದಾರೆ. ಗಿಲ್ಲಿ ಕಾಮಿಡಿ ಪಂಚ್‌ಗಳ ಮೂಲಕ ಗಮನ ಸೆಳೆದಿದ್ದಾರೆ.
ಈ ಶೋ ಫೆಬ್ರವರಿ 14ರ ಸಂಜೆ 6ಕ್ಕೆ ಪ್ರಸಾರ ಕಾಣಲಿದೆ. ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ಅಶ್ವಿನಿ ಹಾಗೂ ಗಿಲ್ಲಿ ನಟ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಈ ಮೊದಲು ಗಿಲ್ಲಿ ನಟ ಕಪ್ ಎತ್ತಿದ ಬಳಿಕ ಅಶ್ವಿನಿ ಗೌಡ ಸಾಕಷ್ಟು ಮಾತನಾಡಿದ್ದರು.
ಸ್ಪರ್ಧಿಗಳೆಲ್ಲಾ ಒಂದ್ಕಡೆ ಸೇರಿ ಫನ್ ಗೇಮ್ಸ್ ಆಡಿದ್ದಾರೆ. ಬಿಗ್‌ಬಾಸ್ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ತಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎಂದು ಮೆಲುಕು ಹಾಕಿದ್ದಾರೆ. ಭಾಗ್ಯಲಕ್ಷ್ಮಿ ಧಾರಾವಾಹಿ ಖ್ಯಾತಿಯ ಸುಷ್ಮಾ ರಾವ್ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.
ರಘು, ಅಶ್ವಿನಿ ಗೌಡ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಸ್ಪರ್ಧಿಗಳ ಜೊತೆಗೆ ಅವರ ಫ್ಯಾಮಿಲಿ ಸದಸ್ಯರು ಕೂಡ ವೇದಿಕೆ ಏರಿದ್ದಾರೆ. ರಕ್ಷಿತಾ ಮಾತಿಗೆ “ಇದು ನಾಮಿನೇಷನ್ ಅಲ್ಲ” ಎಂದು ಗಿಲ್ಲಿ ಕಾಲೆಳೆದಿದ್ದಾರೆ.ಸೂರಜ್, ರಾಶಿಕಾ ಜೋಡಿಯಾಗಿ ಗೇಮ್ಸ್ ಆಡಿದ್ದಾರೆ. ಗಿಲ್ಲಿಯನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಅಭಿಮಾನಿಗಳು ಕಾಯುವಂತಾಗಿದೆ.
ಬಿಗ್‌ಬಾಸ್ ವಿನ್ನರ್ ಗಿಲ್ಲಿ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಟ್ರೋಫಿ ಗೆದ್ದು ಬಂದ ದಿನದಿಂದ ಗಿಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಸಭೆ ಸಮಾರಂಭಗಳಿಗೆ ಅತಿಥಿಗಳಾಗಿ ಹೋಗುತ್ತಿದ್ದಾರೆ. ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ.

ನೋಡಿರಿ

