ಮತ್ತೊಂದು ರೀಲ್ಸ್‌ ಮೂಲಕ ವಿವಾದಕ್ಕೆ ಗುರಿಯಾದ ಬಿಗ್‌ಬಾಸ್‌ ರಜತ್!‌ – ವಿಲನ್‌ ಲುಕ್‌ಗೆ ಫ್ಯಾನ್ಸ್‌ ಆಕ್ರೋಶ!  

ಮತ್ತೊಂದು ರೀಲ್ಸ್‌ ಮೂಲಕ ವಿವಾದಕ್ಕೆ ಗುರಿಯಾದ ಬಿಗ್‌ಬಾಸ್‌ ರಜತ್!‌ – ವಿಲನ್‌ ಲುಕ್‌ಗೆ ಫ್ಯಾನ್ಸ್‌ ಆಕ್ರೋಶ!  

ನಟ ರಜತ್‌ ಕಿಶನ್‌ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ವಿವಾದ ಅವರನ್ನ ಹುಡುಕಿಕೊಂಡು ಬರುತ್ತೋ.. ಇಲ್ಲ, ಅವರೇ ವಿವಾದವನ್ನ ಹುಡುಕಿಕೊಂಡು ಹೋಗ್ತಾರೋ ಗೊತ್ತಿಲ್ಲ. ಇದೀಗ ಮತ್ತೊಂದು ರಜತ್‌ ಮತ್ತೊಂದು ರೀಲ್ಸ್‌ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಇದನ್ನೂ ಓದಿ:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌! – ಪಿಂಕ್ ಲೈನ್ ಮೆಟ್ರೋಗೆ ಬಂತು ಇನ್ನೊಂದು ರೈಲು 

ಕಳೆದ ಬಾರಿ ವಿನಯ್‌ ಹಾಗೂ ರಜತ್‌ ಮಚ್ಚು ಹಿಡಿದು ರೀಲ್ಸ್‌ ಮಾಡಿದ್ರು. ಇದು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ದರು. ಇಬ್ಬರನ್ನು ಪೊಲೀಸರು ಅರೆಸ್ಟ್‌ ಮಾಡಿದ್ರು. ಇದೀಗ ರಜತ್‌ ಮತ್ತೊಂದು ರೀಲ್ಸ್‌ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಮೈಸೂರಿನ ಪಾರಂಪರಿಕ ಕಟ್ಟಡವಾದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಸಿಗರೇಟ್ ಸೇದುತ್ತಾ ರೀಕ್ಸ್‌ ಮಾಡಿದ್ದಾರೆ. ವಿಲನ್‌ ಲುಕ್‌ನಲ್ಲಿ ಸಿಗರೇಟ್ ಸೇದುತ್ತಾ ಕಾರಿನಿಂದ ಇಳಿಯುವ ಫೋಟೋ ಶೂಟ್ ವಿಡಿಯೋವನ್ನು ಇನ್‌ಸ್ಟಾದಲ್ಲಿ ಅಪ್ಲೋಡ್‌ ಮಾಡಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ನಿಷೇಧವಾಗಿದ್ದರೂ ರೀಲ್ಸ್ ಮಾಡಿ ಫೋಟೋ ಶೂಟ್ ಮಾಡಿಸಿದ್ದಕ್ಕೆ ನೆಟ್ಟಿಗರು ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಮಚ್ಚು ಹಿಡಿದು ಫೋಟೊಶೂಟ್ ಮಾಡಿಸಿಕೊಂಡು ರಜತ್‌ ಜೈಲಿಗೆ ಹೋಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಸಿಗರೇಟು ವಿಚಾರ ಇನ್ನೆಲ್ಲಿಗೆ ತಲುಪುತ್ತೆ ಅಂತ ಕಾದುನೋಡ್ಬೇಕು.

Shwetha M