ಶನಿವಾರ ಬಿಗ್‌ಬಾಸ್ ಪ್ರೀ ಫಿನಾಲೆ ಮಾತ್ರ – ಭಾನುವಾರವೇ ನಡೆಯಲಿದೆ ಬಿಗ್‌ಬಾಸ್ ಫಿನಾಲೆ

ಬಿಗ್ ಬಾಸ್ ಕನ್ನಡ ಸೀಸನ್ 12ರ ಅಂತಿಮ ಕ್ಷಣಕ್ಕೆ ವೀಕ್ಷಕರು ಕಾಯುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಫಿನಾಲೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಬಂದಿರೋ ಮಾಹಿತಿ ಪ್ರಕಾರ ಕಿಚ್ಚ ಸುದೀಪ್ ಇಂದಿನ (ಶನಿವಾರದ) ಎಪಿಸೋಡ್ ಗೆ ಗೈರಾಗಲಿದ್ದಾರೆ. ಹೀಗಾಗಿ ಫಿನಾಲೆ ನಡೆಯಲ್ಲ. ಅದರ ಬದಲು ಪ್ರೀ ಫಿನಾಲೆ ನಡೆಯಲಿದೆ.
ಇದನ್ನೂ ಓದಿ: ಬಿಗ್‌ಬಾಸ್ ಗೆಲ್ಲೋದು ಗಿಲ್ಲಿ ಫಿಕ್ಸ್ – ಟೇಬಲ್ ತಟ್ಟಿ ಹೇಳಿದ ಶಿವಣ್ಣ
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಇಂದು (ಶನಿವಾರ) ನಡೆಯುತ್ತಿಲ್ಲ. ಕಿಚ್ಚ ಸುದೀಪ್ ಇಂದಿನ ಎಪಿಸೋಡ್ ಗೆ ಗೈರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಂದು ಫಿನಾಲ್ ಬದಲು ಪ್ರೀ ಫಿನಾಲೆ ನಡೆಯಲಿದೆ. ಈ ಕುರಿತಾದ ಪ್ರೊಮೋ ಕೂಡಾ ರಿಲೀಸ್ ಆಗಿದೆ. ಪ್ರತಿ ಬಾರಿ ಕೂಡಾ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಬಿಗ್ ಬಾಸ್ ಫಿನಾಲೆ ನಡೆಯುತಿತ್ತು. ಹಾಗೆಯೇ ಈ ಬಾರಿ ಕೂಡಾ ಜನವರಿ 17 ಮತ್ತು 18 ರಂದು ಎರಡು ದಿನಗಳ ಫಿನಾಲೆ ನಡೆಯಲಿದೆ ಎಂದು ಎಲ್ಲರು ಅಂದುಕೊಂಡಿದ್ದರು. ಪ್ರೀ ಫಿನಾಲೆ ಪ್ರೋಮೋದಲ್ಲಿ ತೋರಿಸುವ ಪ್ರಕಾರ ಇಂದು ಎಂದಿನಂತೆ ರಾತ್ರಿ 9 ಗಂಟೆಯಿಂದ ಎಪಿಸೋಡ್ ಶುರುವಾಗಲಿದೆ. ಆದ್ರೆ ಪ್ರೀ ಫಿನಾಲೆ ಯಾವ ರೀತಿ ಇರಲಿದೆ ಎಂಬುದು ಇನ್ನು ಎಪಿಸೋಡ್ ಶುರುವಾದ ಬಳಿಕವೇ ತಿಳಿಯಲಿದೆ.
ಸುದೀಪ್ ಬಿಗ್ ಬಾಸ್ ಫಿನಾಲೆಯ ಮೊದಲ ದಿನಕ್ಕೆ ಹಾಜರಾಗಲು ಸಾಧ್ಯವಾಗದ ಪ್ರಮುಖ ಕಾರಣ ಎಂದರೆ ಸಿಸಿಎಲ್. ನಟ ಸುದೀಪ್, ಕರ್ನಾಟಕ ಬುಲ್ಡೋಜರ್ಸ್ ತಂಡದ ಐಕಾನ್ ಆಗಿ ಜನವರಿ 16 ರಂದು ವಿಶಾಖಪಟ್ಟಣದಲ್ಲಿ ನಡೆದ ಪಂಜಾಬ್ ದೆ ಶೇರ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಬುಲ್ಡೋಜರ್ಸ್ ತಂಡ ಅದರಲ್ಲಿ ಗೆಲುವು ಸಾಧಿಸಿದೆ. ಪಂದ್ಯ ಮುಗಿದ ಬಳಿಕ ರಾತ್ರಿ ವೇಳೆಗೆ ನೇರವಾಗಿ ಬೆಂಗಳೂರಿಗೆ ಹಿಂದಿರುಗಿ, ಬೆಳಿಗ್ಗೆ ಬಿಗ್ ಬಾಸ್ ಫಿನಾಲೆ ನಿರ್ವಹಿಸುವುದು ಸಾಧ್ಯವಾಗದ ಪರಿಸ್ಥಿತಿ ಉಂಟಾಯಿತು. ಅದೇ ಕಾರಣಕ್ಕೆ ಒಂದು ದಿನದ ಬಿಡುವು ತೆಗೆದುಕೊಂಡು, ಜನವರಿ 19 ಭಾನುವಾರ ಮಾತ್ರ ಫಿನಾಲೆ ನಡೆಸಲು ನಿರ್ಧರಿಸಲಾಗಿದೆ.

ನೋಡಿರಿ

