ಇಬ್ಬರು ಪತ್ನಿ ಜೊತೆಗೆ ಬಿಗ್ಬಾಸ್ ಗೆ ಎಂಟ್ರಿ – ದೊಡ್ಮನೆಯಲ್ಲಿ ಹೆಂಡ್ತಿಗಾಗಿ ಜಗಳ
ರೀಲ್ಸ್ ಹೀರೋ ಪ್ರೇಮ್ ಕಥಾ!

ಈತನಿಗೆ ಇಬ್ಬರು ಪತ್ನಿಯರು.. ಮುದ್ದಿನ ಹೆಂಡ್ತಿರ ಜೊತೆಗೆ ರೀಲ್ಸ್ ಮಾಡ್ತಾ ಮಾಡ್ತಾ ಫೇಮಸ್ ಆದ.. ಯೂಟ್ಯೂಬ್ ನಲ್ಲಿ ಲಕ್ಷಾಂತರ ರುಪಾಯಿ ಸಂಪಾದನೆ ಮಾಡ್ತಾ ಇದ್ದಾನೆ. ಇತ್ತೀಚೆಗೆ ಇಬ್ಬರು ಹೆಂಡ್ತಿರ ಜೊತೆ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ಗೆ ಎಂಟ್ರಿಕೊಟ್ಟಿದ್ದ.. ಆದ್ರೀಗ ಹೆಂಡ್ತಿ ವಿಚಾರಕ್ಕೆ ಸಹ ಸ್ಪರ್ಧಿ ಮೇಲೆ ರೌದ್ರಾವತಾರ ತಾಳಿದ್ದಾನೆ. ಸಣ್ಣ ವಿಚಾರಕ್ಕೆ ಸಹ ಸ್ಪರ್ಧಿ ಮೇಲೆ ಕೈ ಮಾಡಿದ್ದಾನೆ. ಅಷ್ಟಕ್ಕೂ ಸಹ ಸ್ಪರ್ಧಿ ಮೇಲೆ ಕೈ ಮಾಡಿದ್ದು ಯಾಕೆ? ಈತ ಯಾರು? ಇಬ್ಬರನ್ನ ಮದುವೆ ಆಗಿದ್ದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಜಯ್ ಶಾಗೆ ICC ಅಧ್ಯಕ್ಷಗಿರಿ ಫಿಕ್ಸ್? – BCCI ಕಾರ್ಯದರ್ಶಿ ಸ್ಥಾನಕ್ಕೆ ರಿಸೈನ್?
ಬಿಗ್ ಬಾಸ್ ರಿಯಾಲಿಟಿ ಶೋ.. ಯಾವುದೇ ಭಾಷೆಯಲ್ಲಾದರೂ ಸರಿ ಸಂಚಲನ ಸೃಷ್ಟಿಸುವುದು ಗ್ಯಾರಂಟಿ. ಬಿಗ್ ಬಾಸ್ ಆರಂಭಕ್ಕೂ ಮುನ್ನ, ಅಥವಾ ನಂತರದ ದಿನಗಳಲ್ಲಿ ವಿವಾದಗಳಿಗೆ ಸಿಕ್ಕಿಕೊಳ್ಳುತ್ತೆ. ಹೀಗಾಗಿಯೇ ಕಾಂಟ್ರವರ್ಸಿ ಶೋ ಅಂತಾನೆ ಕರೆಸಿಕೊಂಡಿದೆ. ದೊಡ್ಮನೆಯಲ್ಲಿ ಲವ್ವರ್ ಜೊತೆ ಇರೋದೇ ಕಷ್ಟ.. ಆದ್ರೆ ಇಲ್ಲೊಬ್ಬ ಒಬ್ಬಳಲ್ಲ.. ಇಬ್ಬರು ಹೆಂಡ್ತಿರ ಜೊತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ.. ಯೂಟ್ಯೂಬರ್ ಅರ್ಮಾನ್ ಮಲಿಕ್ ಅವರು ಪತ್ನಿ ಪಾಯಲ್ ಹಾಗೂ ಕೃತಿಕಾ ಜೊತೆ ದೊಡ್ಮನೆ ಪ್ರವೇಶ ಮಾಡಿದ್ದರು. ಪಾಯಲ್ ಎಲಿಮಿನೇಟ್ ಆಗಿ ಮೊದಲ ವಾರವೇ ದೊಡ್ಮನೆಯಿಂದ ಹೊರಗಡೆ ಬಂದರು. ಆದ್ರೆ ಕೃತಿಕಾ ಹಾಗೂ ಮಲಿಕ್ ಇನ್ನೂ ಈ ಶೋನಲ್ಲಿ ಭಾಗವಹಿಸ್ತಾ ಇದ್ದಾರೆ.. ಇದೀಗ ಸಹ ಸ್ಫರ್ಧಿ ವಿಶಾಲ್ ಪಾಂಡೆ ಅತ್ತಿಗೆ ಸುಂದರವಾಗಿದ್ದಾಳೆ.. ನೀನು ಲಕ್ಕಿ ಅಂತಾ ಹೇಳಿದ್ದಾರೆ.. ಇದಕ್ಕೆ ಕೋಪಗೊಂಡ ಮಲಿಕ್ ವಿಶಾಲ್ ಪಾಂಡೆ ಮೇಲೆ ಕೈ ಮಾಡಿದ್ದಾರೆ. ನಾನು ಬೇರೆ ಅರ್ಥದಲ್ಲಿ ಹೇಳಿಲ್ಲ. ಒಳ್ಳೆಯ ಅರ್ಥದಲ್ಲಿ ಅತ್ತಿಗೆ ನೋಡಲು ಸುಂದರವಾಗಿದ್ದಾರೆ ಎಂದಿದ್ದೇನೆ ಅಂತ ವಿಶಾಲ್ ಪಾಂಡೆ ಹೇಳಿಕೊಂಡ್ರು ಕೂಡ ಮಲಿಕ್ ಸಿಡಿಮಿಡಿಕೊಂಡಿದ್ದಾನೆ.
ಸದ್ಯ ಅರ್ಮಾನ್ ಮಲಿಕ್ ವಿಶಾಲ್ ಪಾಂಡೆ ಮೇಲೆ ಕೈ ಮಾಡಿದ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದೇ ವಿಡಿಯೋವನ್ನು ನೋಡಿದ ನೆಟ್ಟಿಗರು ಹಾಗೂ ಬಾಲಿವುಡ್ ಮಂದಿ ಅರ್ಮಾನ್ನನ್ನು ಈ ಕೂಡಲೇ ಬಿಗ್ಬಾಸ್ ಮನೆಯಿಂದ ಆಚೆ ಹಾಕಬೇಕು ಅಂತ ಒತ್ತಾಯ ಮಾಡುತ್ತಿದ್ದಾರೆ. ಅರ್ಮನ್ ನಡೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಇನ್ನು ಬಿಗ್ಬಾಸ್ ನಿಯಮದ ಪ್ರಕಾರ ಯಾವ ಸ್ಪರ್ಧಿಯು ಮತ್ತೊಬ್ಬ ಸ್ಪರ್ಧಿಯ ಮೇಲೆ ಕೈ ಮಾಡುವುದು ಅಥವಾ ದೈಹಿಕವಾಗಿ ಹಲ್ಲೆ ಮಾಡುವುದು ನಿಷೇಧಿಸಲಾಗಿದೆ. ಆಕಸ್ಮಿಕವಾಗಿ ಹಾಗೇನಾದರೂ ಹಲ್ಲೆ ಮಾಡಿದ್ದೇ ಆದಲ್ಲಿ ಅವರನ್ನು ದೊಡ್ಮನೆಯಿಂದ ಆಚೆ ಹಾಕುತ್ತಾರೆ. ಆದ್ರೆ ಅರ್ಮನ್ ಮಲಿಕ್ ವಿಚಾರದಲ್ಲಿ ಬಿಗ್ ಬಾಸ್ ಈ ರೀತಿಯ ಕ್ರಮ ಕೈಗೊಂಡಿಲ್ಲ.. ಬದಲಾಗಿ ಆತನನ್ನ ಇಡೀ ಸೀಸನ್ ನಲ್ಲಿ ನಾಮಿನೇಟ್ ಮಾಡಲಾಗಿದೆ.. ಇದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ..
ಅಂದಹಾಗೆ ಯೂಟ್ಯೂಬರ್ ಅರ್ಮಾನ್ ಮಲಿಕ್, ಅವರ ನಿಜವಾದ ಹೆಸರು ಸಂದೀಪ್ ಸಿಂಗ್, ಅವರ ಚಾನೆಲ್ ಮಲಿಕ್ ವ್ಲಾಗ್ಸ್. ಅರ್ಮಾನ್ ಮಲಿಕ್ ಯೂಟ್ಯೂಬರ್ ಆಗಿ ಒಳ್ಳೆ ಹೆಸರು ಮತ್ತು ಹಣ ಗಳಿಸುತ್ತಿದ್ದಾರೆ. ಅರ್ಮಾನ್ ಮಲಿಕ್ ಯೂಟ್ಯೂಬ್ನಲ್ಲಿ 7.67 ಮಿಲಿಯನ್ ಸಬ್ಸ್ಕ್ರೈಬರ್ ಅನ್ನ ಹೊಂದಿದ್ದಾರೆ. ಅವರು ಕೇವಲ ಎರಡೂವರೆ ವರ್ಷಗಳಲ್ಲಿ ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್ಗಳಲ್ಲಿ ಒಬ್ಬರಾಗಿದ್ದಾರೆ.
ಸಂದೀಪ್ ಆಗಿದ್ದ ಅರ್ಮನ್ ಈ ಮೊದಲು ಖಾಸಗಿ ಬ್ಯಾಂಕ್ವೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅದೇ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್ ಎಂಬವರನ್ನು ಪ್ರೀತಿಸುತ್ತಾರೆ. ಅರ್ಮಾನ್ ಮಲಿಕ್ 2011 ರಲ್ಲಿ ಪಾಯಲ್ ಮಲಿಕ್ ಅವರನ್ನು ವಿವಾಹವಾದರು. ಬಳಿಕ ಅರ್ಮಾನ್ ಮತ್ತು ಪಾಯಲ್ ದಂಪತಿಗೆ ಚಿರಾಯ್ ಎಂಬ ಮಗ ಹುಟ್ತಾನೆ.. ಸಂಸಾರ ಬಂಡಿ ಚೆನ್ನಾಗೇ ಸಾಗ್ತಾ ಇತ್ತು. ಅಷ್ಟೊತ್ತಿಗೆ ಅರ್ಮನ್ಗೆ ಪಾಯಲ್ ಗೆಳತಿ ಕೃತಿಕಾಳ ಪರಿಚಯವಾಗುತ್ತೆ. ಮನೆಗೆ ಗೆಸ್ಟ್ ಆಗಿ ಬರುತ್ತಾಳೆ. ಈ ವೇಳೆ ಕೃತಿಕಾ ಹಾಗೂ ಅರ್ಮನ್ ಮಧ್ಯೆ ಪ್ರೀತಿ ಚಿಗುರುತ್ತೆ. ಕೃತಿಕಾ ಮೇಲಿನ ಪ್ರೀತಿಯನ್ನು ಪತ್ನಿ ಪಾಯಲ್ ಬಳಿ ಅರ್ಮಾನ್ ಹೇಳಿಕೊಂಡಿದ್ದರು. ಗಂಡನ ಪ್ರೀತಿಗೆ ಒಪ್ಪಿಗೆ ನೀಡಿದ ಪಾಯಲ್, 2018 ರಲ್ಲಿ ಇಬ್ಬರ ಮದುವೆ ಮಾಡಿಸಿದ್ದರು. ಆದ್ರೆ ಈ ವಿಚಾರ ಗೊತ್ತಾದ ಪಾಯಲ್ ಪೋಷಕರು ಮಗಳನ್ನು ಕರೆದುಕೊಂಡು ಹೋಗಿದ್ದರು. ಪಾಯಲ್ ದೂರ ಆಗಿದ್ದರಿಂದ ಅರ್ಮಾನ್ ಖಿನ್ನತೆಗೆ ಜಾರಿದ್ದರು. ಅತ್ತ ಪಾಯಲ್ಗೆ ಆಕೆಯ ಪೋಷಕರು ಕಿರುಕುಳ ನೀಡುತ್ತಿರುವ ವಿಷಯ ತಿಳಿದ ಅರ್ಮಾನ್ ಪತ್ನಿಯನ್ನು ಕರೆದುಕೊಂಡು ಬಂದಿದ್ದರು. ಅಂದಿನಿಂದ ಅರ್ಮಾನ್ ಜೊತೆಯಲ್ಲಿ ಪಾಯಲ್ ಮತ್ತು ಕೃತಿಕಾ ಜೀವನ ನಡೆಸುತ್ತಿದ್ದಾರೆ.
ಅರ್ಮಾನ್ ಮಲಿಕ್ ಹೆಚ್ಚು ಸುದ್ದಿಯಾಗಿದ್ದು 2022 ರಲ್ಲಿ. ಹೌದು.. ಒಟ್ಟಿಗೆ ತನ್ನ ಇಬ್ಬರೂ ಹೆಂಡತಿಯರು ಗರ್ಭಿಣಿಯಾಗಿದ್ದಾರೆ ಎಂದು ಘೋಷಿಸಿದ ನಂತರ ಜನ ಇವರನ್ನು ಹುಡುಕಲು ಆರಂಭಿಸಿದ್ದರು. ಇವರ ಬಗ್ಗೆ ಹೆಚ್ಚು ಸುದ್ದಿ ಮಾಡಿದ್ದರು. ಈಗ ಅರ್ಮಾನ್ ಮಲಿಕ್ ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಚಿರಾಯು, ತುಬಾ, ಅಯಾನ್ ಮತ್ತು ಜೈದ್ ಎಂಬ ಮಕ್ಕಳಿದ್ದಾರೆ.
ಇಬ್ಬರು ಹೆಂಡತಿಯರು ಮೊದಲಿನಿಂದ ಆಪ್ತ ಸ್ನೇಹಿತೆಯರಾಗಿದ್ದು, ಈಗಲೂ ಕೂಡ ತಮ್ಮ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜನ ಹೆಚ್ಚು ಪಾಯಲ್ ಮಲಿಕ್ಗೆ ಸಪೋರ್ಟ್ ಮಾಡುತ್ತಾರೆ. ಆದರೆ, ಆಕೆ ಕೃತಿಕಾ ಅವರನ್ನು ಎಲ್ಲಿಯೂ ಬಿಟ್ಟುಕೊಡುವುದಿಲ್ಲ. ಒಂದೇ ರೀತಿಯ ಬಟ್ಟೆ, ಒಡವೆಗಳ ಜೊತೆಗೆ ಖುಷಿಯಾಗಿರುವಂತೆ ಪೋಸ್ಟ್ ಮಾಡುತ್ತಾರೆ. ಸದ್ಯ ಈ ಜೋಡಿ ಬಿಗ್ ಬಾಸ್ ನಲ್ಲಿ ಸಂಚಲ ಸೃಷ್ಟಿಸಿದೆ. ಗಂಡ ಹೆಂಡ್ತಿ ಏನೇ ಇದ್ರೂ ಬಿಗ್ ಬಾಸ್ ಶೋ ದಲ್ಲಿ ಸಹ ಸ್ಪರ್ಧಿ ಮೇಲೆ ಕೈ ಮಾಡಿರುವುದು ತಪ್ಪು.. ಇಷ್ಟಾದ್ರೂ ದೊಡ್ಮನೆಯಿಂದ ಮಲಿಕ್ ನನ್ನ ಹೊರ ಹಾಕದೇ ಇರೋದು ಬಿಗ್ ಬಾಸ್ ತಮಗೆ ಬೇಕಾದಂತೆ ನಿಯಮ ಬದಲಿಸ್ತಾರೆ ಅನ್ನೋ ಟೀಕೆಗೆ ಗುರಿಯಾಗಿದೆ..

ನೋಡಿರಿ

