ಲವ್ ಸ್ಪಾಟ್ ಆಯ್ತು ಬಿಗ್ ಬಾಸ್ ರಿಯಾಲಿಟಿ ಶೋ – ಡೈಲಾಗ್ ಬಿಡ್ತಿದ್ದ ರಕ್ಷಕ್ ಬುಲೆಟ್ ಸೈಲೆಂಟ್ ಆಗಿದ್ದೇಕೆ?
ಕನ್ನಡ ಕಿರುತೆರೆಯಲ್ಲೀಗ ಬಿಗ್‌ಬಾಸ್ ರಿಯಾಲಿಟಿ ಶೋನದ್ದೇ ಹವಾ. ಶೋ ಆರಂಭವಾಗಿ ಒಂದೇ ವಾರಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಿದೆ. ಆರಂಭದಲ್ಲೇ ಸಮರ್ಥರು, ಅಸಮರ್ಥರು ಅನ್ನೋ ಕಾನ್ಸೆಪ್ಟ್ ಬೇರೆ ಇದ್ದಿದ್ರಿಂದ ಅವ್ರಲ್ಲೇ ಟೀಮ್ಗಳೂ ಸಹ ಆಗಿವೆ. ಬಿಗ್ ಬಾಸ್ ಅಂದ ಮೇಲೆ ಜೋಕ್ಸ್, ಜಗಳ, ಕಿತ್ತಾಟ, ಅಳು, ನಗು ಎಲ್ಲವೂ ಇರಲೇಬೇಕಲ್ವಾ. ಸೀಸನ್ ಗೊಂದು ಲವ್ ಸ್ಟೋರಿ ಇಲ್ಲ ಅಂದ್ರೆ ಅದು ಬಿಗ್ ಬಾಸೇ ಅಲ್ಲ ಬಿಡಿ. ಅದ್ರಲ್ಲೂ ಈ ಬಾರಿ ಬಿಗ್ ಬಾಸ್ ಆರಂಭದಲ್ಲೇ ಪ್ರೇಮ್ ಕಹಾನಿಗಳು ಶುರುವಾಗಿವೆ.
ಇದನ್ನೂ ಓದಿ : ಬಿಗ್‌ಬಾಸ್ ಮನೆಯಲ್ಲಿ ಲಾರ್ಡ್ ಪ್ರಥಮ್ ಅಬ್ಬರ – ಶಿಸ್ತಿನ ಪಾಠಕ್ಕೆ ಸ್ಪರ್ಧಿಗಳು ತತ್ತರ
ಬಿಗ್ ಬಾಸ್ ಅಂದ್ರೆ ಅದು ಕಿರುತೆರೆ ವೀಕ್ಷಕರಿಗೆ ತಿಂಗಳುಗಟ್ಟಲೆ ಮನರಂಜನೆ ನೀಡುವ ಬಹುದೊಡ್ಡ ಕಾರ್ಯಕ್ರಮ. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಹಾಗೂ ವಿವಾದಗಳನ್ನ ಸೃಷ್ಟಿಸಿಕೊಂಡವರೆಲ್ಲಾ ಒಂದೇ ಕಡೆ ಇರ್ತಾರೆ. ಹೊರಜಗತ್ತಿನ ಜೊತೆ ಸಂಪರ್ಕ ಇಲ್ಲದೆ ಮನೆಯಲ್ಲಿ ಇದ್ದವರಲ್ಲೇ ಕೆಲವರು ಒಳ್ಳೆಯ ಸ್ನೇಹಿತರಾಗ್ತಾರೆ. ಕೆಲವ್ರು ಜಗಳ ಮಾಡಿಕೊಳ್ತಾರೆ. ಇನ್ನೂ ಕೆಲವ್ರು ಪ್ರೀತಿಯಲ್ಲಿ ಬಿದ್ದು ಬಿಡ್ತಾರೆ. ಬಿಗ್ ಬಾಸ್ ಆರಂಭ ಆದಾಗಿನಿಂದ ಒಂದಲ್ಲ ಒಂದು ಲವ್ ಸ್ಟೋರಿ ಇದ್ದೇ ಇರುತ್ತೆ. ಈಗಾಗಲೇ ಹಿಂದಿನ ಶೋಗಳಲ್ಲಿ ಚಂದನ್-ನಿವೇದಿತಾ, ರೂಪೇಶ್ ಶೆಟ್ಟಿ- ಸಾನ್ಯಾ ಅಯ್ಯರ್, ದೀಪಿಕಾ- ಶೈನ್ ಶೆಟ್ಟಿ, ಅರವಿಂದ್-ದಿವ್ಯ ಉರುಡುಗ, ಮಂಜುಪಾವಗಡ-ದಿವ್ಯಾಸುರೇಶ್ ಸೇರಿದಂತೆ ಹಲವರ ನಡುವೆ ಗುಸುಗುಸು ಕೇಳಿ ಬಂದಿತ್ತು. ಆದ್ರೆ ಇಷ್ಟೂ ಜೋಡಿಗಳಲ್ಲಿ ನಿಜವಾಗ್ಲೂ ಲವ್ ಮಾಡಿ ಮದ್ವೆ ಆಗಿದ್ದು ಅಂದ್ರೆ ಅದು ನಿವೇದಿತಾ ಮತ್ತು ಚಂದನ್ ಜೋಡಿ ಮಾತ್ರ. ಇನ್ನು ದಿವ್ಯ ಉರುಡುಗ ಮತ್ತು ಅರವಿಂದ್ ನಡುವೆ ಪ್ರೀತಿ ಮುಂದುವರಿದಿದೆಯಾದ್ರೂ ಈವರೆಗೂ ಇಬ್ಬರು ಅಧಿಕೃತವಾಗಿ ಹೇಳಿಕೊಂಡಿಲ್ಲ. ಉಳಿದವ್ರೆಲ್ಲಾ ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ನೀನ್ಯಾರೋ ನಾನ್ಯಾರೋ ಅನ್ನುವಂತೆಯೇ ಇದ್ದಾರೆ. ಇನ್ನು ಈ ಬಾರಿಯ ಸೀಸನ್ನಲ್ಲಿ ಕಾರ್ಯಕ್ರಮ ಶುರುವಾದ ಒಂದೇ ವಾರಕ್ಕೆ ಪ್ರೀತಿ ಮಾತು ಶುರುವಾಗಿದೆ.
ಈಗಾಗಲೇ ಸಂಗೀತಾ ಶೃಂಗೇರಿ ಅವರು ಕಾರ್ತಿಕ್ ಮಹೇಶ್‌ಗೆ ನಾವು ಲವ್ ಮಾಡೋಕೆ ಇಲ್ಲಿಗೆ ಬಂದಿಲ್ಲ ಎಂದು ಹೇಳಿದ್ದರು.. ಈಗ ಇಶಾನಿ ಅವರು ಮೈಕಲ್ ನಡುವೆ ಪ್ರೀತಿ ಮೂಡಬಹುದಾ ಅನ್ನೋ ಮಾತು ಶುರುವಾಗಿದೆ. ನಮ್ರತಾ ಗೌಡ ಹಾಗೂ ಇಶಾನಿ ಅವರು ಮೇಕಪ್ ರೂಮ್‌ನಲ್ಲಿ ಮಾತನಾಡುತ್ತಿರುವಾಗ ಇಬ್ಬರ ಮಧ್ಯೆ ಲವ್ ವಿಚಾರ ಬಂತು. ಆಗ ನಮ್ರತಾ ಗೌಡ ನಿಮಗೆ ಕೆಟ್ಟ ಅನುಭವ ಹೇಳ್ತೀರಾ ಎಂದು ಇಶಾನಿ ಅವ್ರನ್ನ ಕೇಳಿದ್ರು. ಈ ವೇಳೆ ಇಶಾನಿ ನಾನು ಎರಡು ರಿಲೇಶನ್‌ಶಿಪ್‌ನಲ್ಲಿದ್ದೆ, ಒಂದು ದುಬೈನಲ್ಲಿ, ಇನ್ನೊಂದು ಅಮೆರಿಕದಲ್ಲಿ ಅಂದಿದ್ದಾರೆ. ಆಗ ನಮ್ರತಾ ಗೌಡ ಬೆಂಗಳೂರಿನಲ್ಲಿ ಯಾರೂ ಕನೆಕ್ಟ್ ಆಗಿಲ್ವಾ? ಎಂದು ಕೇಳಿದಾಗ ಇಶಾನಿ ಇಲ್ಲ ಎಂದಿದ್ದರು. ಬಳಿಕ ನಮ್ರತಾ ಗೌಡ ಬಿಗ್ ಬಾಸ್ ಮನೆಯಲ್ಲಿ ಮೈಕಲ್ ಜೊತೆ ಕನೆಕ್ಟ್ ಆದ್ರೆ ಎಂದು ಪ್ರಶ್ನಿಸಿದ್ರು. ಆಗ ಇಶಾನಿ ಗೊತ್ತಿಲ್ಲ ಎಂದಿದ್ದರು. ಮತ್ತೊಮ್ಮೆ ಇಶಾನಿ ಹಾಗೂ ಮೈಕಲ್ ಮಾತನಾಡುತ್ತಾ ಕುಳಿತಿದ್ದರು. ಈ ವೇಳೆ ಸ್ನೇಹಿತ್ ಹಾಗೂ ನಮ್ರತಾ ಗೌಡ ಪ್ರೇಮಿಗಳಿಗೆ ನುಡಿಸುವ ಹಾಗೇ ವಯಲಿನ್ ನುಡಿಸುವ ರೀತಿ ಆಕ್ಟ್ ಮಾಡಿದ್ದರು. ಮತ್ತೊಂದೆಡೆ ಸಂಗೀತಾ ಹಾಗೂ ಕಾರ್ತಿಕ್ ಮಹೇಶ್ ಅವರು ಲವ್ ವಿಚಾರವಾಗಿ ಮಾತನಾಡಿಕೊಂಡಿದ್ದರು. ನಾವು ಇಲ್ಲಿಗೆ ಲವ್ ಮಾಡಲು ಬಂದಿಲ್ಲ, ಇಬ್ಬರೂ ಫ್ರೆಂಡ್ಸ್ ಆಗಿರೋಣ ಅಂತ ಸಂಗೀತಾ ಹೇಳಿದ್ದಾರೆ. ಆದರೆ ಸಂಗೀತಾ ಮೇಲೆ ಕಾರ್ತಿಕ್ ಅವರಿಗೆ ಪೊಸೆಸಿವ್‌ನೆಸ್ ಇದೆ. ಪ್ರಥಮ್ ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಬಂದಿದ್ದಾಗ ಸಂಗೀತ್ ಅವ್ರ ಕೈಯಲ್ಲಿ ಊಟ ತಿನ್ನಿಸಿಕೊಳ್ಳುವ ಮೂಲಕ ಕಾರ್ತಿಕ್ಗೆ ಉರಿಸಿದ್ದರು. ಈ ಮೂಲಕ ಮೈಕೆಲ್ ಹಾಗೂ ಇಶಾನಿ, ಕಾರ್ತಿಕ್ ಮತ್ತು ಸಂಗೀತಾ ಜೋಡಿಯಾಗುವ ಟಾಕ್ ಶುರುವಾಗಿದೆ. ಇದು ಪ್ರೇಮಿಗಳ ಕಥೆಯಾದ್ರೆ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಸೈಲೆಂಟ್ ಆಗಿದ್ದಾರೆ. ಡೈಲಾಗ್ ಮೇಲೆ ಡೈಲಾಗ್ ಬಿಡ್ತಾ ಟ್ರೋಲ್ ಆಗ್ತಿದ್ದ ರಕ್ಷಕ್ ಅಷ್ಟೇನು ಮಾತನಾಡ್ತಿಲ್ಲ. ಹೀಗಾಗಿ ಪ್ರಥಮ್ ಕೂಡ ಬುಲೆಟ್ ಯಾವಾಗ್ಲೂ ಫೈರಿಂಗ್ ಮಾಡ್ತಿದ್ರೆ ಚೆಂದ ಅಂತಾ ಡೈರೆಕ್ಟ್ ಆಗೇ ಹೇಳಿ ಡೈಲಾಗ್ ಹೇಳಿಸಿದ್ರು. ಇನ್ನು ಸಿರಿ ಹಾಗೂ ಗೌರೀಶ್ ಅಕ್ಕಿ ಸೈಲೆಂಟ್ ಆಗೇ ಇದ್ದಾರೆ. ಸ್ನೇಹಿತ್ ಎಲ್ರ ಜೊತೆ ಮಿಂಗಲ್ ಆಗ್ತಿದ್ರೆ ಸಂತು ಮಾತ್ರ ಓವರ್ ಆಕ್ಟಿಂಗ್ ಮಾಡುತ್ತಿರೋದು ಎಲ್ರಿಗೂ ಗೊತ್ತಾಗ್ತಿದೆ. ಒಟ್ಟಾರೆ ಬಿಗ್ ಬಾಸ್ ಶುರುವಾದ ಮೊದಲನೇ ವಾರ ಸ್ಪರ್ಧಿಗಳೆಲ್ಲಾ ಅಡ್ಜಸ್ಟ್ ಆಗ್ತಿದ್ದಾರೆ. ಮುಂದಿನ ದಿನಗಳಲ್ಲಿ ಶೋನಲ್ಲಿ ಏನೆಲ್ಲಾ ಆಗುತ್ತೆ, ಯಾರ್ಯಾರು ಲವ್ ಬರ್ಡ್ಸ್ ಆಗ್ತಾರೆ ಅನ್ನೂ ಕುತೂಹಲವೂ ಇದೆ.