ಅವರನ್ನೇ ಮದ್ವೆಯಾಗ್ತೇನೆ ಎಂದ ನಮೃತಾ ಗೌಡ – ಕಾರ್ತಿಕ್ ಮಹೇಶ್‌ ಜೊತೆ ಲವ್, ಮದುವೆ ಗಾಸಿಪ್ ನಿಜನಾ!?

ಅವರನ್ನೇ ಮದ್ವೆಯಾಗ್ತೇನೆ ಎಂದ ನಮೃತಾ ಗೌಡ – ಕಾರ್ತಿಕ್ ಮಹೇಶ್‌ ಜೊತೆ ಲವ್, ಮದುವೆ ಗಾಸಿಪ್ ನಿಜನಾ!?

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಸ್ಪರ್ಧಿಗಳಾದ ಕಾರ್ತಿಕ್‌ ಮಹೇಶ್‌ ಹಾಗೂ ನಮ್ರತಾ ಗೌಡ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹಲವು ಸಮಯದಿಂದ ಸದ್ದು ಮಾಡ್ತಿದೆ. ಇದೀಗ ಇಬ್ಬರು ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಕ್ಯಾಪ್ಟನ್‌ ಆಗ್ತಿದ್ದಂತೆ ಗಿಲ್ಲಿ ಫೇವರಿಸಂ ಆಟ! – ಕಾವ್ಯಳನ್ನ ಸೇವ್‌ ಮಾಡಲು ಹೋಗಿ ಗಿಲ್ಲಿ ತನ್ನ ಗುಂಡಿ ತಾನೇ ತೋಡಿಕೊಂಡ್ರಾ?

ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಮತ್ತು ಕಾರ್ತಿಕ್ ಮಹೇಶ್ ಮಧ್ಯೆ ಸಮ್​ಥಿಂಗ್​ ಇದೆ ಎಂಬ ಮಾತು ಕೇಳಿಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ, ನಮ್ರತಾ ಗೌಡ ಹಾಗೂ ಕಾರ್ತಿಕ್‌ ಮಹೇಶ್‌ ಒಟ್ಟಿಗೆ ವಿದೇಶಕ್ಕೆ ಹೋಗಿದ್ದರು. ಅಲ್ಲಿ ಅವರು ಭೇಟಿ ನೀಡಿರುವ ಸ್ಥಳಗಳಲ್ಲಿ ಫೋಟೋ, ವಿಡಿಯೋ ಮಾಡಿಕೊಂಡಿದ್ದರು. ಆ ವೇಳೆ ಅವರು ಒಬ್ಬರ ಕೈ ಹಿಡಿದುಕೊಂಡು ತಿರುಗಿದ್ದಾರೆ. ಆ ಕೈಗೆ ಹಾಕಿಕೊಂಡ ಬ್ಲ್ಯಾಕ್‌ ಬಾಂಡ್‌ ಹಾಗೂ ಕಾರ್ತಿಕ್‌ ಮಹೇಶ್‌ ಹಾಕಿಕೊಂಡ ಬ್ಯಾಂಡ್‌ ಎರಡೂ ಸೇಮ್‌ ಇದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಇವರಿಬ್ಬರು ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂದು ಹೇಳಲಾಗ್ತಿತ್ತು. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಉತ್ತರ ನೀಡಿದ ಕಾರ್ತಿಕ್‌ ಮಹೇಶ್‌ ಅವರು, ಇಲ್ಲ, ಏನಾದರೂ ಇದ್ದಾಗ ನಾವು ಹೇಳುತ್ತೀವಿ. ನಾನು ಕೈಗೆ ಬ್ಯಾಂಡ್‌ ಹಾಕಿಕೊಂಡಿಲ್ಲ. ಈ ರೀತಿ ಜೋಡಿ ಮಾಡಿದ್ದನ್ನು ನಾನು, ನಮ್ರತಾ ಚರ್ಚೆ ಮಾಡಿಕೊಂಡು ನಕ್ಕಿದ್ದೇವೆ. ಅಭಿಮಾನಿಗಳು ಪೋಸ್ಟ್‌ ಹಾಕಿದಾಗ ಖುಷಿ ಆಗುತ್ತದೆ, ಈ ರೀತಿ ಬೇರೆಯವರ ಜೊತೆ ಕೂಡ ಫೋಟೋ ಹಾಕಿದ್ದಾರೆ. ಏನಾದರೂ ಇದ್ದರೆ ತಿಳಿಸುತ್ತೇವೆ ಎಂದು ಹೇಳಿದ್ದರು. ಇದೀಗ ಬಿಗ್ಬಾಸ್​ ಖ್ಯಾತಿಯ ಸಂಗೀತಾ ಶೃಂಗೇರಿ ಅವರ ಹಾಡಿನ ಪ್ರಮೋಷನ್​ಗೆ ಹೋಗಿದ್ದ ಸಂದರ್ಭದಲ್ಲಿ ನಮ್ರತಾ ಗೌಡ ಅವರಿಗೆ ಇದೇ ಪ್ರಶ್ನೆ ಎದುರಾಗಿದೆ.

ನಿಮ್ಮ ಮತ್ತು ಕಾರ್ತಿಕ್​ ಮಹೇಶ್​ ನಡುವೆ ಗಾಸಿಪ್​ ಕೂಡ ಇದೆ, ಅದರ ಬಗ್ಗೆ ಏನು ಹೇಳುತ್ತೀರಾ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ನಮೃತಾ, ಇದು ನಿಜನೂ ಅನ್ನದೇ, ಸುಳ್ಳು ಎಂದೂ ಹೇಳದ ನಟಿ, ನಾನು ಮದುವೆಯಾದರೆ ಖಂಡಿತ ಎಲ್ಲರನ್ನೂ ಕರೆಯುತ್ತೇನೆ. ಎಲ್ಲರಿಗೂ ಹೇಳುತ್ತೇನೆ. ನೋಡಿ ನಾವೊಂದು ಪ್ಲ್ಯಾನ್​ ಮಾಡಿರಬಹುದು. ನಮ್ಮ ಅಪ್ಪ-ಅಮ್ಮ ಇನ್ನೊಂದು ಪ್ಲ್ಯಾನ್​ ಮಾಡಿರುತ್ತಾರೆ. ದೇವರು ಒಂದು ಪ್ಲ್ಯಾನ್​ ಮಾಡಿರುತ್ತಾನೆ ಎಂದಿದ್ದಾರೆ. ಹಣೆಯಲ್ಲಿ ಯಾರು ಬರೆದಿದ್ದಾನೋ ಅವರನ್ನೇ ಮದುವೆಯಾಗುತ್ತೇನೆ. ಮದುವೆ ಆಗಬೇಕು ಎಂದುಕೊಂಡಿದ್ದೇನೆ. ನೋಡೋಣ ಎಂದಿದ್ದಾರೆ. ಈ ಬಗ್ಗೆ ಹೆಚ್ಚಿಗೆ ಏನೂ ಹೇಳಲು ಇಷ್ಟಪಡದ ಅವರು ಸಂಗೀತನಾ ಸಪೋರ್ಟ್​ ಮಾಡಿ, ಈ ಸಾಂಗ್​ನ ಹೆಚ್ಚು ವೈರಲ್​ ಮಾಡಿ ಎಂದು ಹೇಳಿ ಮಾತು ಮುಗಿಸಿದ್ದಾರೆ.

Shwetha M