ಸಿಂಗಲ್ ಸಿಂಹಿಣಿ ಮೋಕ್ಷಿತಾ – ಈಕೆಗೆ ವಿನ್ನಿಂಗ್ ಪಟ್ಟ ಫಿಕ್ಸ್?
ವೀಕ್ಷಕರ ಲೆಕ್ಕಾಚಾರ ಹೇಗಿದೆ?

ಅರ್ಥ ಆಯ್ತಾ.. ಅರ್ಥ ಆಯ್ತಾ.. ಈ ಡೈಲಾಗ್ ಕೇಳಿದ್ರೆ ನಿಮಗೆ ತಟ್ಟಂತ ನೆನಪಾಗೋದು ಯಾರು.. ಎಸ್ ಮೋಕ್ಷಿತಾ.. ಈ ಡೈಲಾಗ್ ಮೂಲಕವೇ ಮೋಕ್ಷಿತಾ ಮನೆ ಮಾತಾಗಿದ್ದಾರೆ.. ಆರಂಭದಿಂದಲೂ ಸಿಂಗಲ್ ಆಗಿ ಆಡ್ತಾ ಬಂದಿರೋ ಮೋಕ್ಷಿತಾ ಈಗ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ. ಇದೀಗ ಸಿಂಗಲ್ ಸಿಂಹಿಣಿ ಈ ಸೀಸನ್ ನಲ್ಲಿ ಗೆಲುವಿನ ನಗೆ ಬೀರಲಿದ್ದಾರೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ.. ಅಷ್ಟಕ್ಕೂ ಬಿಗ್ ಬಾಸ್ ಜರ್ನಿಯಲ್ಲಿ ಮೋಕ್ಷಿತಾ ಪ್ಲಸ್ ಹಾಗೂ ಮೈನಸ್ ಏನು? ಮೋಕ್ಷಿತಾಗೆ ವಿನ್ನರ್ ಅಗೋ ಅರ್ಹತೆ ಇದ್ಯಾ? ವೀಕ್ಷಕರ ಲೆಕ್ಕಾಚಾರ ಹೇಗಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಪ್ಲೇಯಿಂಗ್ 11ನಿಂದ ಯಾರು ಔಟ್? – KL ಅವಕಾಶ ಕಿತ್ತುಕೊಳ್ತಾರಾ?
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ಕೆಲವು ಗಂಟೆ ಬಾಕಿ ಇದೆ. ಎಲ್ಲರ ಕಣ್ಣು ಈಗ ಬಿಗ್ ಬಾಸ್ ಟ್ರೋಫಿ ಮೇಲಿದೆ.. ಆರು ಮಂದಿಯಲ್ಲಿ ವಿನ್ನರ್ ಯಾರು ಅನ್ನೋ ಕುತೂಹಲ ಎಲ್ಲರನ್ನ ಕಾಡ್ತಿದೆ. ಈ ಸೀಸನ್ ನಲ್ಲಿ ಮಹಿಳಾ ಸ್ಪರ್ಧಿಯೇ ವಿನ್ನರ್ ಆಗಲಿದ್ದಾರಂತೆ ವೀಕ್ಷಕರೇ ಲೆಕ್ಕಾಚಾರ ಹಾಕಿದ್ದಾರೆ. ಅದ್ರಲ್ಲಿ ಮೋಕ್ಷಿತಾನೇ ಸೀಸನ್ 11 ವಿನ್ನರ್ ಆಗ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡಿತಿದೆ.
ಹೌದು, ಮೋಕ್ಷಿತಾ ಪೈ ಆರಂಭದಿಂದಲೂ ಸ್ಟ್ರಾಂಗ್ ಸ್ಪರ್ಧಿ.. ಬಿಗ್ ಬಾಸ್ ಕೊಟ್ಟ ಟಾಸ್ಕ್‌ನಲ್ಲಿ 100% ತೊಡಗಿಸಿಕೊಂಡಿದ್ದಾರೆ.. ಆರಂಭದಲ್ಲಿ ಮಂಜು ಗೌತಮಿ ಜೊತೆ ಕ್ಲೋಸ್ ಆಗಿದ್ದ ಮೋಕ್ಷಿತಾ, ಬಳಿಕ ಅವರಿಬ್ಬರ ಜೊತೆ ಫ್ರೆಂಡ್‌ಶಿಪ್ ಕಟ್ ಮಾಡ್ಕೊಂಡಿದ್ರು.. ನಾನು ಸಿಂಗಲ್ ಆಗೇ ಬಂದಿದ್ದೀನಿ.. ಸಿಂಗಲ್ ಆಗೇ ಆಟ ಆಡ್ತೀನಿ ಅಂತಾ ಹೇಳ್ತಾನೆ ಬಂದಿದ್ರು.. ಅದರಂತೆ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟ ಆಡಿದ್ದಾರೆ. ಯಾವುದೇ ಟಾಸ್ಕ್ ನಲ್ಲಿ ಮೋಸ ಮಾಡದೇ ನ್ಯಾಯವಾಗೇ ಗೆದ್ದುಕೊಂಡು ಬಂದಿದ್ದಾರೆ. ಇದೀಗ ಮೋಕ್ಷಿತಾ ಹನುಮಂತು ಕೃಪಾಕಟಾಕ್ಷದಿಂದ ಫಿನಾಲೆ ತಲುಪಿದ್ದಾರೆ.
ಅಂದಹಾಗೆ, ಮೋಕ್ಷಿತಾ ಬಿಗ್ ಬಾಸ್ ಮನೆಯಲ್ಲಿ 116 ದಿನಗಳನ್ನು ಕಳೆದಿದ್ದಾರೆ. ಆದರೆ ಅವರ ಇಷ್ಟು ದಿನಗಳ ಜರ್ನಿಯಲ್ಲಿ ಅವರ ಪ್ಲಸ್ ಹಾಗೂ ಮೈನಸ್ ಇದೆ.. ಮೋಕ್ಷಿತಾಗೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗ್ಬೇಕು ಅಂತಾ ಕನಸು ಕಂಡಿದ್ರು.. ಆದ್ರೆ ಮೋಕ್ಷಿತಾಗೆ ಕ್ಯಾಪ್ಟನ್ ಆಗೋ ಚಾನ್ಸ್ ಸಿಗಲೇ ಇಲ್ಲ. ಒಮ್ಮೆ ಕ್ಯಾಪ್ಟನ್ ಆಗುವ ಚಾನ್ಸ್ ಸ್ವಲ್ಪದರಲ್ಲೇ ಮಿಸ್ ಆಯ್ತು. ಅದು ಕೂಡ ಮೋಕ್ಷಿತಾ ಅವರದ್ದೇ ನಿರ್ಧಾರದಿಂದ! ಒಟ್ನಲ್ಲಿ ಕ್ಯಾಪ್ಟನ್ ರೂಮ್‌ಗೆ ಬಲಗಾಲಿಟ್ಟು ಹೋಗುವ ಭಾಗ್ಯ ಮೋಕ್ಷಿತಾಗೆ ಸಿಗಲೇ ಇಲ್ಲ. ಇನ್ನು ಈ ಸೀಸನ್ ನಲ್ಲಿ ಕೆಲ ಸ್ಪರ್ಧಿಗಳು ಮೂರ್ನಾಲ್ಕು ಬಾರಿ ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಿದ್ದಾರೆ. ಚೈತ್ರಾ ಕುಂದಾಪುರ, ಉಗ್ರಂ ಮಂಜು, ಧನರಾಜ್, ತ್ರಿವಿಕ್ರಮ್, ಭವ್ಯಾ, ರಜತ್, ಹನುಮಂತು ಸೇರಿದಂತೆ ಬಹುತೇಕ ಸದಸ್ಯರು ಬಿಗ್ ಬಾಸ್ ಮನೆಯಲ್ಲಿ ಕಳಪೆ ಪಡೆದು, ಜೈಲಿನಲ್ಲಿ ವಾಸ ಮಾಡಿದ್ದಾರೆ. ಆದರೆ ಮೋಕ್ಷಿತಾಗೆ ಮಾತ್ರ ಕಳಪೆ ಪಟ್ಟ ಸಿಗಲಿಲ್ಲ ಮತ್ತು ಜೈಲುವಾಸವೂ ಸಿಕ್ಕಿಲ್ಲ. ಮತ್ತೊಂದು ವಿಚಾರ ಏನಂದ್ರೆ ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ 16 ವಾರ ಕಳೆದಿದ್ದಾರೆ. ಆ 16 ವಾರದಲ್ಲಿ ಮೋಕ್ಷಿತಾ 13 ಬಾರಿ ನಾಮಿನೇಟ್ ಆಗಿ, ಈ ಸೀಸನ್‌ನಲ್ಲಿ ಅತೀ ಹೆಚ್ಚು ನಾಮಿನೇಟ್ ಆದ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗೆ ಹೆಚ್ಚು ಬಾರಿ ನಾಮಿನೇಟ್ ಆದರೂ ಇಂದು ಬಿಗ್ ಬಾಸ್ ಫಿನಾಲೆ ತಲುಪಿರುವುದು ಮೋಕ್ಷಿತಾ ಅವರ ಸಾಧನೆಯೇ ಸರಿ. ಇವಿಷ್ಟು ಮೋಕ್ಷಿತಾ ಪೈ ಅವರ ಜರ್ನಿಯ ಮೂರು ಸ್ಪೆಷಲ್ ವಿಚಾರಗಳಾಗಿವೆ.
ಇನ್ನು, ‘ಬಿಗ್ ಬಾಸ್’ ಮನೆಗೆ ಬಂದಿದ್ದ ಮೋಕ್ಷಿತಾ ಅಭಿಮಾನಿಗಳನ್ನು ಕರೆಸಲಾಗಿತ್ತು. ಅವರ ಎದುರು ಬಿಗ್ ಬಾಸ್, “ಬಿಗ್ ಬಾಸ್ ಮನೆಯಲ್ಲಿ ಸರಳತೆಗೆ ಮತ್ತೊಂದು ಹೆಸರೇ ಮೋಕ್ಷಿತಾ ಪೈ.. ನೋಡೋದಕ್ಕೆ ಸಿಂಪಲ್ ಆಗಿದ್ದರೂ ಇವರನ್ನು ಸಿಂಪಲ್ ಆಗಿ ತಗೋಬೇಡಿ.. ಇವರು ಯಾರ ತಂಟೆಗೂ ಹೋಗಿಲ್ಲ, ಆದರೆ ಕೆಣಕಿದವರನ್ನು ಕೆಳಗೆ ಹಾಕಿ ಅಡ್ಡಡ್ಡ ಬಗೆದು ಹಾಕಿದ್ದಾರೆ.. ಸೋ ಈ ಸೀಸನ್ ವಿನ್ನರ್ ಇವರೇ ಆಗ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.