50 ಲಕ್ಷ ಗೆದ್ರೂ ಕೈಗೆ ಬರೋದು ಇಷ್ಟೇನಾ? – ಹನುಮಂತನಿಗೆ ಸಿಕ್ಕ ಹಣ ಎಷ್ಟು?
ಹಳ್ಳಿಹೈದನ ಲೈಫ್ ಸೆಟಲ್ ಆಯ್ತಾ?

ಕನ್ನಡದ ಬಿಗ್ಗೆಸ್ಟ್ ಶೋ.. ಬಿಗ್ ಬಾಸ್ ಸೀಸನ್ 11 ಗೆ ಕೊನೆಗೂ ತೆರೆಬಿದ್ದಿದೆ. ಹನುಮಂತು, ತ್ರಿವಿಕ್ರಮ್ ಇವರಿಬ್ಬರಲ್ಲಿ ವಿನ್ ಆಗೋರು ಯಾರು ಅಂತಾ ಕೇಳ್ತಿದ್ದ ವೀಕ್ಷಕರಿಗೆ ಇದೀಗ ಉತ್ತರ ಸಿಕ್ಕಿದೆ. ಜವಾರಿ ಹುಲಿ ಗೆದ್ದು ಬೀಗಿದ್ದಾರೆ. ಹನುಮಂತ 50 ಲಕ್ಷ ರೂಪಾಯಿ ಗೆಲ್ಲುವಲ್ಲಿ ಯಶ್ವಸಿ ಹಳ್ಳಿ ಹೈದ ಯಶಸ್ವಿಯಾಗಿದ್ದಾರೆ.. ಇದೀಗ ಹನುಮಂತು 50 ಲಕ್ಷ ಗೆಲ್ತಿದ್ದಂತೆ ಒಂದು ಚರ್ಚೆ ಶುರುವಾಗಿದೆ.. ಹನುಮಂತ 50 ಗೆದ್ರೂ ಕೈಗೆ ಪೂರ್ತಿ ಹಣ ಸಿಗಲ್ಲ ಅಂತಾ. ಹಾಗಾದ್ರೆ, ಹನುಮನಿಗೆ ಸಿಗೋ ಹಣ ಎಷ್ಟು? ಸಿಕ್ಕ ದುಡ್ಡಲ್ಲಿ ಹನುಮಂತ ಏನ್ ಮಾಡ್ತಾರೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಟ್ರಂಪ್ ಟಾರ್ಗೆಟ್ ಆದ ಯೂನಸ್ – ಬಾಂಗ್ಲಾ ಅಧಿಕಾರ ಬದಲಾಗುತ್ತಾ?
ಬಿಗ್ ಬಾಸ್.. ಇದು ವ್ಯಕ್ತಿತ್ವದ ಆಟ.. ಈ ಆಟದಲ್ಲಿ ಹಳ್ಳಿ ಹೈದ ಗೆದ್ದು ಬೀಗಿದ್ದಾರೆ.. ಬಿಗ್ ಬಾಸ್ ಸೀಸನ್ 11 ಆರಂಭದಿಂದಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆರಂಭದಲ್ಲಿ ಲಾಯರ್ ಜಗದೀಶ್ ಅಬ್ಬರ ಜೋರಾಗಿತ್ತು.. ಆದ್ರೆ ರಂಜಿತ್ ಜೊತೆ ಕಿರಿಕ್ ಮಾಡಿಕೊಂಡು ಜಗ್ಗಿ ಆಚೆ ಹೋಗಿದ್ರು.. ಅದಾದ ಬಳಿಕ ಜವಾರಿ ಹುಲಿ ದೊಡ್ಮನೆ ಎಂಟ್ರಿ ಕೊಟ್ಟು ಬಹುಬೇಗ ಜನರ ಮನ ಗೆದ್ದಿದ್ರು.. ಎಲ್ಲಾ ಸ್ಪರ್ಧಿಗಳು ಹೋಗಿ ಸೆಟಲ್ ಆದ ಬಳಿಕ ಎಂಟ್ರಿ ಕೊಟ್ಟು ತಮ್ಮ ಅಸ್ತಿತ್ವ ಸಾಧಿಸುವುದು ಇದೆಯಲ್ಲ ಅದು ನಿಜಕ್ಕೂ ದೊಡ್ಡ ಚಾಲೆಂಜ್. ಈ ಚಾಲೆಂಜ್ನ ಯಶಸ್ವಿಯಾಗಿ ನಿರ್ವಹಿಸಿದರು ಹಳ್ಳಿಹೈದ..
ಹುನುಮಂತ ಬಿಗ್ ಬಾಸ್ ಮನೆಗೆ ಬರೋದಕ್ಕಿಂತ ಮುಂಚೆ ದೊಡ್ಮನೆಯಲ್ಲಿ ಬರೀ ಜಗಳಗಳೇ ತುಂಬಿ ಹೋಗಿದ್ದವು. ಆದರೆ, ಹನುಮಂತ ಬಂದ ಬಳಿಕ ಕೊಂಚ ನಗುವಿನ ಅಲೆ ಶುರವಾಯಿತು. ಧನರಾಜ್ ಜೊತೆ ಸೇರಿ ಅವರು ನಗಿಸುವ ಕೆಲಸ ಮಾಡಿದರು. ತಮಗನ್ನಿಸಿದ್ದ ಹೇಳಿಕೊಂಡು.. ಹಾಡಿಕೊಂಡು ಇದ್ದ ಹನುಮಂತ ವ್ಯಕ್ತಿತ್ವದ ಆಟದಲ್ಲಿ ಗೆದ್ದಿದ್ದಾರೆ.. ಹನುಮಂತುಗೆ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಆದರೆ 50 ಲಕ್ಷಕ್ಕೆ 50 ಲಕ್ಷ ವಿನ್ನರ್ ಕೈ ಸೇರೋದಿಲ್ಲ. ಸರ್ಕಾರ ದೊಡ್ಡ ಮೊತ್ತದ ತೆರಿಗೆಯನ್ನು ವಿಧಿಸುತ್ತದೆ. 50 ಲಕ್ಷದಲ್ಲಿ ತೆರಿಗೆ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.
ಹನುಮಂತು ಎಷ್ಟು ತೆರಿಗೆ ಸರ್ಕಾರಕ್ಕೆ ಕೊಡ್ಬೇಕು? ಬಹುಮಾನದಲ್ಲಿ ಹನುಮನ ಕೈಗೆ ಸಿಗೋ ಹಣ ಎಷ್ಟು ಅಂತಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಅಂದ್ಹಾಗೆ ಬಹುಮಾನ ಮೊತ್ತಗಳಿಗೆ ಸರ್ಕಾರ ಟ್ಯಾಕ್ಸ್ ವಿಧಿಸುತ್ತೆ. ಬಹುಮಾನ ಮೊತ್ತಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ. ಬರುವ ಒಟ್ಟೂ ಹಣದಲ್ಲಿ ಶೇ. 30 ಹಣ ಸರ್ಕಾರಕ್ಕೆ ಕೊಡಲೇಬೇಕಿದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಹನುಮಂತಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಟಿವಿ ರಿಯಾಲಿಟಿ ಶೋ, ಲಾಟರಿ, ಸ್ಪರ್ಧೆ, ಕಾರ್ಡ್ ಗೇಮ್ ನಲ್ಲಿ ಆಡಿ ಗೆದ್ರೆ ಸರ್ಕಾರಕ್ಕೆ ಶೇ. 30 ತೆರಿಗೆ ಪಾವತಿಸಬೇಕು.
1961ರ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ, ಗೇಮ್ ಶೋಗಳು, ಲಾಟರಿಗಳು ಮತ್ತು ಅಂತಹುದೇ ಚಟುವಟಿಕೆಗಳಿಂದ ಗೆದ್ದ ಹಣವನ್ನು ಇತರ ಮೂಲಗಳಿಂದ ಬಂದ ಆದಾಯ ಎಂದು ವರ್ಗೀಕರಿಸಲಾಗಿದೆ. ಕಾಯ್ದೆಯ ಸೆಕ್ಷನ್ 194B ಪ್ರಕಾರ ಈ ಗೆಲುವಿನ ಮೇಲೆ 30% ರಷ್ಟು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ಕೇವಲ ಹನುಮಂತ ಮಾತ್ರವಲ್ಲದೆ ರನ್ನರ್ ಅಪ್ ಆದ ತ್ರಿವಿಕ್ರಂ ಅವರೂ ತೆರಿಗೆ ಹಣ ಪಾವತಿಸಬೇಕು. ಅವರಿಗೆ ಒಟ್ಟೂ 15 ಲಕ್ಷ ರೂಪಾಯಿ ಸಿಕ್ಕಿದ್ದು, ಇದರಲ್ಲಿ ಅವರಿಗೆ 10 ಲಕ್ಷದ ,50 ಸಾವಿರ ರೂಪಾಯಿ ಮಾತ್ರ ಸಿಗಲಿದೆ. ಉಳಿದ ಮೊತ್ತ ತೆರಿಗೆ ರೂಪದಲ್ಲಿ ಸರ್ಕಾರದ ಕೈ ಸೇರಲಿದೆ. ಇನ್ನು, ರಜತ್ ಅವರಿಗೆ 10 ಲಕ್ಷ ರೂಪಾಯಿ ಸಿಕ್ಕಿದ್ದು, ಅವರ ಕೈ ಸೇರೋದು 7 ಲಕ್ಷ ರೂಪಾಯಿ ಮಾತ್ರ..
ಇನ್ನು ಹನುಮಂತ ಬಿಗ್ ಬಾಸ್ ನಿಂದ ಬಂದ ಹಣದಲ್ಲಿ ಏನ್ ಮಾಡ್ತಾರೆ.. ಯಾವುದಕ್ಕೆ ಹಣವನ್ನ ಬಳಸ್ತಾರೆ ಅನ್ನೋ ಕುತೂಹಲ ಮೂಡಿದೆ. ಹನುಮಂತ ಬಂದ ಹಣವನ್ನ ಏನ್ ಮಾಡ್ತಾರೆ ಅಂತಾ ಎಲ್ಲೂ ಹೇಳಿಕೊಂಡಿಲ್ಲ.. ಆದ್ರೆ ಹನುಮಂತ ಮದುವೆ ಆಗೋದಾಗಿ ಹೇಳಿದ್ದು.. ಈ ಹಣವನ್ನ ಮದುವೆಗೆ ಬಳಸಿಕೊಳ್ಬೋದು.. ಅದ್ರ ಜೊತೆ ಮನೆನೂ ಕಟ್ಬೋದು ಅಂತಾ ಹೇಳಲಾಗ್ತಿದೆ..