ಹನುಮನೇ ಬಿಗ್ ಬಾಸ್.. ವಿಕ್ಕಿಗೆ ಡಿಚ್ಚಿ ಕೊಟ್ಟಿದ್ದು ಹೇಗೆ?
ರಜತ್ ಗಿಂತ ಮಂಜು ಕಳಪೆನಾ?

ಗೆದ್ದೇ ಗೆಲ್ಲುವೇ ಒಂದು ದಿನ.. ಗೆಲ್ಲಲೇಬೇಕು ಒಳ್ಳೆತನ.. ಕಡೆಗೂ ಬಡ್ನಿ ಹೈದ ಬಿಗ್ ಬಾಸ್ ವಿನ್ನರ್ ಆಗಿದ್ದಾನೆ. ಹೈ ಪ್ರೊಫೈಲ್ ಫಿನಾಲೆಯಲ್ಲಿ ಎಲ್ಲರೂ ಕಲರ್ ಕಲರ್ ಡ್ರೆಸ್ ನಲ್ಲಿ ಮಿರ ಮಿರ ಮಿಂಚುತ್ತಿದ್ರೆ ನಮ್ಮ ಉತ್ತರ ಕರ್ನಾಟಕ ದ ಹುಲಿ ಪಂಚೆ ಶರ್ಟ್ ನಲ್ಲೇ ಮಿಂಚು ಹರಿಸಿಬಿಟ್ಟಿದ್ದಾರೆ. ರಿಯಾಲಿಟಿ ಶೋದಲ್ಲಿ ಹಳ್ಳಿ ಹುಡುಗನ ವ್ಯಕ್ತಿತ್ವವೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬಿಗ್ ಬಾಸ್ ಸೀಸನ್ 11 ಗೆದ್ದಿರುವ ಹನುಮ ಬಿಗ್ ರಿಯಾಲಿಟಿ ಶೋ ಗೆಲ್ಲೋದಿಕ್ಕೆ ಕಾರಣ ಆಗಿದ್ದೇನು? ವೈಲ್ಡ್ ಕಾರ್ಡ್ ಎಂಟ್ರಿ ಗೊಲ್ಸೋದಿಕ್ಕೇನಾ? ವೀಕ್ಷಕರು ಹೇಳ್ತಿರೋದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವಧುವಾಗಿ ದುರ್ಗಾಶ್ರೀ ಕಮ್‌ಬ್ಯಾಕ್.. ವಿಲನ್ ಅಭಿಷೇಕ್ ಹೀರೋ! – ಕನ್ನಡ ಬಿಟ್ಟು ತೆಲುಗಿಗೆ ಹೋಗಿದ್ಯಾಕೆ?
ಬಿಗ್ ಬಾಸ್ ಸೀಸನ್ 11 ನಲ್ಲಿ ರಂಜಿತ್ ಲಾಯರ್ ಜಗದೀಶ್ ಕಿತ್ತಾಡ್ಕೊಂಡ್ ಔಟ್ ಆಗದೇ ಇರ್ತಿದ್ರೆ, ಈ ವಿನ್ನರ್ ಹನುಮಂತು ಎಲ್ಲಿರ್ತಿದ್ರೋ ಗೊತ್ತಿಲ್ಲ.. ಲಾಯರ್ ಜಗ್ಗಿ ಹೊಡೆಡಾಟ ಎಪಿಸೋಡ್ ನಿಂದಾಗಿ ಲಾಟರಿ ಹೊಡೆದಿದ್ದು ಮಾತ್ರ ಜ್ವಾರಿ ಹುಲಿಗೆ. ಹಾಡು ಹಾಡ್ತಾನೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹನುಮ ತನ್ನ ಕಂಠದಿಂದಲೇ ರಾತ್ರಿ ಬೆಳಗಾಗೋದ್ರೋಳಗೆ ಮನೆಮಾತಾಗಿದ್ದ. ಝೀ ಕನ್ನಡ ಸರಿಗಮಪದಲ್ಲಿ ರನ್ನರ್ ಅಪ್ ಆಗಿದ್ದ ಆ ಕಾಲದಲ್ಲೇ ಮನೆಮಾತಾಗಿದ್ದ ಹನುಮಂತು ಬಿಗ್ ಬಾಸ್ ಮನೆಯೊಳಗಿದ್ದ ಸೆಲೆಬ್ರಿಟಿ ಸ್ಪರ್ಧಿಗಳಿಗಿಂತ ಬೇಗನೇ ಜನರಿಗೆ ಹತ್ತಿರವಾದ. ಹಳ್ಳಿ ಮಾತು.. ಹಳ್ಳಿ ಉಡುಗೆ ತೊಡುಗೆ.. ಮುಗ್ದತೆ.. ಇವೆಲ್ಲವೂ ಜವಾರಿ ಹುಲಿಯ ಪ್ಲಸ್ ಪಾಯಿಂಟ್ ಆಗಿತ್ತು.. ಬಿಗ್ ಮನೆಯ ಸ್ಪರ್ಧಿಗಳೆಲ್ಲಾ ಸ್ಪಲ್ಪ ತಪ್ಪಾದ್ರೂ.. ಬಾಯ್ ಬಾಯ್ ಬಡ್ಕೊಂಡು ಕೋಪದಲ್ಲಿ ಕಿರುಚಾಡ್ತಿದ್ರೆ.. ಈ ಹನುಮಂತು ಮಾತ್ರ ನಗು ನಗುತ್ತಾನೆ ಪಂಚಿಂಗ್ ಡೈಲಾಗ್ ಹೊಡಿತಿದ್ದ. ನಿಮ್ಮ ಆಟ ನೀವು ಆಡಿ.. ನನ್ನ ಆಟ ನಾ ಆಡಕ್ ಬಂದಿದ್ದೀನಿ ಅಂತಾ ಹೇಳಿ.. ಸ್ಮಾರ್ಟ್ ಆಗೇ ಆಟ ಆಡಿದ್ದಾರೆ..
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಹನುಮಂತ ವೈಲ್ಡ್ ಆಗೇ ದೊಡ್ಮನೆಯಲ್ಲಿ ಆಟ ಆಡಿದ್ದಾರೆ.. ತನ್ನ ಗ್ರಾಮೀಣ ಭಾಷೆ, ಹಾಡು, ನಡವಳಿಕೆ ಮೂಲಕ ದೊಡ್ಮನೆಯಲ್ಲಿ ಇರಲು ಶುರು ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಏನೇ ನಡೆದ್ರೂ, ಅದಕ್ಕೆ ತಕ್ಕಂತೆ ಹಾಡು ಹಾಡುತ್ತಾ, ಟಾಸ್ಕ್‌ನಲ್ಲಿ ಗೆಲ್ಲುತ್ತಾ ಹೋದಂತೆ, ಹನುಮಂತು ಒಬ್ಬ ಹಳ್ಳಿಹೈದ ಆಗಿರಬಹುದು.. ಆಗಲೇ ಆತನಲ್ಲಿ ಬಿಗ್ ಬಾಸ್ ಗೆಲ್ಲುವ ಸಾಮಾರ್ಥ್ಯ ಇದೆ ಎನ್ನುವುದನ್ನು ವೀಕ್ಷಕರು ಅರ್ಥ ಮಾಡಿಕೊಂಡಿದ್ದರು. ಆದ್ರೆ, ಬಿಗ್ ಬಾಸ್ ಆಟದಲ್ಲಿ ಕೆಲ ಸ್ಪರ್ಧಿಗಳಿಗೆ ಹನುಮಂತನ ವರ್ತನೆ ನಾಟಕೀಯವಾಗಿ ಕಂಡಿತು. ಹನುಮಂತ ಮುಗ್ಧನ ಹಾಗೆ ಕಾಣಿಸುತ್ತಾರೆ.. ಆದ್ರೆ ಅವರು ಹಾಗೆ ಇಲ್ಲ. ಅವರಿಗೆ ಮೈಂಡ್ ಗೇಮ್ ಹೇಗೆ ಆಡೋದು ಅಂಥ ಚೆನ್ನಾಗಿ ಗೊತ್ತಿದೆ. ಅವರು ಭಾರೀ ಚಾಲಕಿ ಎಂದೆಲ್ಲಾ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳು ಆರೋಪ ಮಾಡಿದ್ರು. ಆದ್ರೆ ಯಾರ ಮಾತಿಗೂ ಹಳ್ಳಿ ಹೈದ ಬಗ್ಗಲಿಲ್ಲ.. ಗೆಲ್ತಿವೋ.. ಸೋಲ್ತಿವೋ.. ಆಟ ಆಡೋಣ ದೋಸ್ತಾ ಅಂತಾ ಅಖಾಡಕ್ಕೆ ಇಳಿತಿದ್ರು.. ಇದೀಗ ಕುರಿ ಕಾಯೋ ಹುಡುಗ ಬಿಗ್ ಬಾಸ್ ಸೀಸನ್ 11 ಗೆದ್ದು ತೋರಿಸಿಯೇ ಬಿಟ್ಟಿದ್ದಾರೆ. 50 ಲಕ್ಷ ಬಹುಮಾನದ ಹಣದ ಜೊತೆಗೆ ಭಾರೀ ಉಡುಗೊರೆಯನ್ನು ಬಾಚಿಕೊಂಡಿದ್ದಾರೆ.
ಇದರೊಂದಿಗೆ ಕರ್ನಾಟಕದ ಕೋಟಿ ಕೋಟಿ ಜನರ ಆಸೆ ಈಡೇರಿದೆ. 5.23 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ಹನುಮಂತ ಗೆದ್ದು ಬೀಗಿದ್ದಾರೆ. ಕುರಿಗಾಯಿ ಹನುಮಂತ ಗೆಲ್ಲಬೇಕು ಎನ್ನುವುದು ಕನ್ನಡಿಗರ ಮನದಾಳದ ಮಾತಾಗಿತ್ತು. ಕೊನೆಗೂ ಹನುಮಂತನಿಗೆ ಜಯ ಸಿಕ್ಕಿದೆ. ಬಿಗ್ ಬಾಸ್ ನ 11 ಸೀಸನ್ ಗಳಲ್ಲಿ ಯಾರಿಗೂ ಇಷ್ಟೊಂದು ವೋಟ್ ಬಂದಿಲ್ಲ ಎಂದು ಸುದೀಪ್ ಹೇಳಿದ್ರು. ಕಳೆದ ಸೀಸನ್ ಗೆ ಹೋಲಿಕೆ ಮಾಡಿದ್ರೆ. ಈ ಸೀಸನ್ ನಲ್ಲಿ ಗೆದ್ದ ಸ್ಪರ್ಧಿಗೆ ಸಿಕ್ಕ ವೋಟು ಮೂರು ಪಟ್ಟು ಹೆಚ್ಚಿದೆ. ಇದಕ್ಕೆ ಜನರು ಬಿಗ್ ಬಾಸ್ ಶೋ ಮೇಲೆ ಇಟ್ಟ ನಂಬಿಕೆಯೇ ಕಾರಣ ಎಂದಿದ್ದಾರೆ.
ಮತ್ತೊಂದು ವಿಚಾರ ಏನಂದ್ರೆ.. ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದ ಹನುಮಂತ ಹಾಗೂ ರಜತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.. ಈವರೆಗೆ ಕನ್ನಡ ಬಿಗ್‌ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಂದ ಯಾವೊಬ್ಬ ಸ್ಪರ್ಧಿ ಕೂಡ ಫಿನಾಲೆ ವಾರದವರೆಗೆ ಬಂದಿರುವ ಇತಿಹಾಸವೇ ಇಲ್ಲ. ಆದ್ರೆ ಸೀಸನ್ 11 ನಲ್ಲಿ ಹನುಮಂತ ಗೆದ್ದು ರಜತ್ ಮೂರನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಶೋ ಆರಂಭವಾಗುವಾಗ ಇಬ್ಬರಿಗೂ ಕಿಚ್ಚ ಸುದೀಪ್ ಇದನ್ನು ಹೇಳಿ ಅಭಿನಂದನೆ ಕೂಡ ಸಲ್ಲಿಸಿದ್ರು.
ಇನ್ನು ರಜತ್ ಗೆ ಸೆಕೆಂಡ್ ರನ್ನರಪ್ ಹಾಗೂ ಹನುಮಂತುಗೆ ವಿನ್ನರ್ ಪಟ್ಟ ಕೊಟ್ಟಿದ್ದಕ್ಕೆ ಕೆಲ ವೀಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ. ಕೆಲವರು ಮಂಜು ವಿನ್ ಆಗ್ಬೇಕಿತ್ತು ಅಂತಾ ಹೇಳಿದ್ರೆ, ಇನ್ನು ಕೆಲವರು ತ್ರಿವಿಕ್ರಮ್ ವಿನ್ ಆಗ್ಬೇಕಿತ್ತು ಅಂತಾ ಹೇಳಿದ್ದಾರೆ. ಮತ್ತೆ ಕೆಲವರು ವಿನ್ ಮಾಡ್ಸೋದಕ್ಕೆಂದೇ ವೈಲ್ಡ್ ಕಾರ್ಡ್ ಮೂಲಕ ಇವರನ್ನ ಕರ್ಸಿದ್ರು.. ಆರಂಭದಿಂದಲೂ ಆಟ ಆಡಿ ಇಲ್ಲಿ ವರೆಗೂ ಇವ್ರು ಬಂದಿದ್ದು ವೇಸ್ಟ್ ಅಲ್ವಾ? ಪ್ರತಿ ಸರಿ ಬಿಗ್ ಬಾಸ್ ಟ್ರೋಫಿ ಸಿಂಪತಿ ಕಾರ್ಡ್ ಪ್ಲೇ ಮಾಡಿದವರಿಗೆ ಕೊಡೋದು ಆದ್ರೆ.. ಈ ಶೋ ಯಾಕ್ರೀ ಮಾಡ್ತೀರಾ? ಕಷ್ಟ ಪಟ್ಟು ಕೊನೆವರೆಗೂ ಆಡಿದವರಿಗೆ ಕೊನೆಯಲ್ಲಿ ಚೊಂಬು… ರಜತ್ ಗೆ ಸೆಕೆಂಡ್ ರನ್ನರ್ ಅಪ್ ಕೊಡೋದ್ದಕ್ಕಿಂತ ಮಂಜುಗೆ ಆದ್ರೂ ಕೊದ್ಬೋದಿತ್ತು ಅಂತಾ ಕಾಮೆಂಟ್ ಮಾಡಿದ್ದಾರೆ. ರಜತ್ ಬರೋದಿಕ್ಕಿಂತ ಮುಂಚೆ ಮೊದಲ 50 ದಿನಗಳಲ್ಲಿ ಹನುಮಂತು ಬಿಟ್ರೆ ಮನರಂಜನೆ ನೀಡಿದ್ದೇ ಉಗ್ರಂ ಮಂಜು. ಆದ್ರೆ ಅದನ್ನ ಲೆಕ್ಕ ಹಾಕದೇ ರಜತ್ ಕ್ಕಿಂತ ಮೊದಲೇ ಮಂಜುವನ್ನ ಹೊರ ಕಳುಹಿಸಿದ್ದು ವೀಕ್ಷಕರಿಗೆ ಬೇಸರ ಮೂಡಿಸಿದೆ.
ಇನ್ನು ತ್ರಿವಿಕ್ರಮ್ ಸೋಲೋದಿಕ್ಕೆ ಏನ್ ಕಾರಣ ಅನ್ನೋದು ಕೂಡ ಚರ್ಚೆ ಆಗ್ತಿದೆ.. ಆದ್ರೆ ಹನುಮಂತುಗಿಂತ ತ್ರಿವಿಕ್ರಮ್ ಯಾವುದರಲ್ಲಿ ಕಡಿಮೆಯಾದ್ರು ಅಂತ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಕೆಲವರು ತ್ರಿವಿಕ್ರಮ್ ಟಾಸ್ಕ್‌ನಲ್ಲಿ ಸೂಪರ್ ಆಗಿಯೇ ಆಡುತ್ತಿದ್ದರು. ಆದರೆ ಎಂಟರ್‌ಟೈನ್ಮೆಂಟ್‌ನಲ್ಲಿ ಸ್ವಲ್ಪ ಕಡಿಮೆಯಾಯ್ತು ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ ತ್ರಿವಿಕ್ರಮ್ ಗೆ ಡಿಕ್ಕಿ ಹೊಡೆದು ಗೆದ್ದು ಬೀಗಿದ ಜವರಿ ಹುಲಿಗೆ ಎಲ್ಲೆಡೆಯಿಂದಲೂ ಮೆಚ್ಚಿಗೆಯ ಮಹಾಪೂರವೇ ಹರಿದುಬರ್ತಿದೆ.