ಗಿಲ್ಲಿ ಕಾಮಿಡಿಗೆ ಸಿಎಂ ಫಿದಾ! – ಬಿಗ್‌ಬಾಸ್ ವಿನ್ನರ್‌ಗೆ ಸಿಎಂ ಸಿದ್ದರಾಮಯ್ಯ ಆಶೀರ್ವಾದ!

ಬಿಗ್‌ಬಾಸ್ ಕನ್ನಡ 12ನೇ ಸೀಸನ್ ವಿನ್ನರ್ ಗಿಲ್ಲಿ ಹವಾ ಗಲ್ಲಿ ಗಲ್ಲಿಯಲ್ಲೂ ಸದ್ದು ಮಾಡ್ತಿದೆ. ಮಳವಳ್ಳಿ, ಮದ್ದೂರಲ್ಲೂ ಇವ್ರದ್ದೇ ಹಾವಳಿ, ಕರ್ನಾಟಕದಲ್ಲಿ ಯಾರನ್ನ ಕೇಳಿದ್ರು ಗಿಲ್ಲಿ ಬಗ್ಗೆಯೇ ಮಾತು. ಸಿನಿಮಾ ಸ್ಟಾರ್ಸ್, ರಾಜಕಾರಣಿಗಳ ಬಾಯಲ್ಲೂ ಗಿಲ್ಲಿಯದ್ದೇ ಹೆಸರು ಕೇಳಿಬರುತ್ತಿದೆ. ಇದೀಗ ಹಳ್ಳಿ ಹೈದನಿಗೆ ಸಿಎಂ ಸಿದ್ಧರಾಮಯ್ಯ ಸನ್ಮಾನ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣ ಓದದ ರಾಜ್ಯಪಾಲರು – ಸುಪ್ರೀಂ ಮೊರೆ ಹೋಗುತ್ತೇವೆ ಎಂದ ಸಿಎಂ
ಮಂಡ್ಯದ ಮಳವಳ್ಳಿಯ ದಡದಪುರ ಗ್ರಾಮದ ಗಿಲ್ಲಿ ತಮ್ಮ ಮಾತಿನ ಮೋಡಿಯಿಂದ ಕರ್ನಾಟಕದ ಜನರ ಮನಸ್ಸು ಗೆದ್ದಿದ್ದರು. ಅತಿ ಹೆಚ್ಚು ಮತ ಪಡೆಯುವ ಮೂಲಕ ಅರ್ಹವಾಗಿಯೇ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಬಿಗ್‌ಬಾಸ್ ವಿನ್ನರ್ ಗಿಲ್ಲಿನಟ ಇಂದು ಸಿಎಂ ಸಿದ್ಧರಾಮಯ್ಯ ಅವರನ್ನ ಭೇಟಿಯಾಗಿದ್ದಾರೆ.
ಕಾವೇರಿ ನಿವಾಸದಲ್ಲಿ ಗಿಲ್ಲಿ ನಟನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ. ಈ ವೇಳೆ ಸಚಿವ ಬೈರತಿ ಬಸವರಾಜ್, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಉಪಸ್ಥಿತರಿದ್ದರು.
ನಟರಾಜ್ ಅವರ ಸಾಧನೆಯನ್ನು ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ, ಹಳ್ಳಿಯಿಂದ ಬಂದು ತನ್ನ ಪ್ರತಿಭೆ ಮತ್ತು ಸಹಜತೆಯಿಂದ ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಗಳಿಸಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಕನ್ನಡ ಕಲೆ ಮತ್ತು ಸಂಸ್ಕೃತಿಗೆ ಹೆಸರು ತನ್ನಿ ಎಂದು ಶುಭ ಹಾರೈಸಿದರು.
ಇದೇ ವೇಳೆ ಭಾವುಕರಾಗಿ ಮಾತನಾಡಿದ ಗಿಲ್ಲಿ, ಜನಸಾಮಾನ್ಯರ ಪರವಾಗಿ ಸದಾ ನಿಲ್ಲುವ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ನನ್ನ ಜೀವನದ ಸ್ಮರಣೀಯ ಕ್ಷಣ. ಬಿಗ್‌ಬಾಸ್ ಗೆಲುವು ಕೇವಲ ನನಗಷ್ಟೇ ಅಲ್ಲ, ನನ್ನಂತೆ ಹಳ್ಳಿಯಿಂದ ಕನಸು ಹೊತ್ತು ಬಂದ ಪ್ರತಿಯೊಬ್ಬರಿಗೂ ಸಂದ ಗೆಲುವು ಎಂದು ಗಿಲ್ಲಿ ನಟರಾಜ್ ಈ ಸಂದರ್ಭದಲ್ಲಿ ತಿಳಿಸಿದರು.

ನೋಡಿರಿ

