BBK ವಿನ್ನರ್ ಹನುಮಂತ ಅಲ್ವಾ? – ಹಳ್ಳಿ ಹೈದ TRPಗಾಗಿ ಮಾತ್ರ?
ಬಿಗ್ ಬಾಸ್ ಸೀಕ್ರೆಟ್ ರಿವೀಲ್!!
ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಕೌಂಟ್ ಡೌನ್ ಶುರುವಾಗಿದೆ. ಯಾರು ವಿನ್ ಆಗ್ತಾರೆ.. ಯಾರು ರನ್ನರ್ ಆಗ್ತಾರೆ ಅನ್ನೋ ಕುತೂಹಲ ಮೂಡಿಸಿದೆ. ಈ ಹೊತ್ತಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯೊಂದು ಶುರುವಾಗಿದೆ. ಧನರಾಜ್ ಅನ್ನ ಬಲಿಕಾ ಬಕ್ರಾ ಮಾಡಿದ್ರು.. ಈಗ ಹನುಮಂತನಿಗೂ ಮೋಸ ಆಗುತ್ತೆ. ಹನುಮಂತ ವಿನ್ನರ್ ಆಗಲ್ಲ.. ಮೊದಲೇ ಎಲ್ಲವೂ ಫಿಕ್ಸಿಂಗ್ ಆಗೋಗಿದೆ ಅಂತಾ ಚರ್ಚೆಯಾಗ್ತಿದೆ. ಹಾಗಾದ್ರೆ ಹಳ್ಳಿ ಹೈದ ಹನುಮಂತ ವಿನ್ನರ್ ಆಗಲ್ವಾ? ಹನುಮಂತನ ಬರೀ TRP ಗಾಗಿ ಮಾತ್ರ ಬಿಗ್ ಬಾಸ್ ಮನೆಗೆ ಬಂದಿರೋದಾ? ಈ ಚರ್ಚೆ ಹುಟ್ಟಿಕೊಂಡಿರೋದೇಕೆ? ಹಾಗಾದ್ರೆ ವಿನ್ನರ್ ಪಟ್ಟ ಯಾರು ಅಲಂಕರಿಸ್ತಾರೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: IND Vs ENG.. ಕೋಚ್ ಗಳ ಫೈಟ್ – 10 ವರ್ಷಗಳ ವಿಜಯಯಾತ್ರೆಗೆ ಸವಾಲು
ಈ ಬಾರಿಯ ಬಿಗ್ ಬಾಸ್ ಬರೀ ವಿವಾದಗಳಿಂದಲೇ ಸದ್ದು ಮಾಡಿದೆ. ಆರಂಭದಿಂದಲೂ ಕೂಗಾಟ.. ರಂಪಾಟ.. ಮೋಸದಾಟ.. ಇದು ವೀಕ್ಷಕರಿಗೆ ಕಿರಿಕಿರಿಯಾಗುವಂತೆ ಮಾಡಿದೆ. ಆದ್ರೀಗ ಬಿಗ್ ಬಾಸ್ ಕೂಡ ಸ್ಪರ್ಧಿಗಳಿಗೆ ಮೋಸ ಮಾಡ್ತಿದೆ ಅಂತಾ ವೀಕ್ಷಕರು ಆರೋಪ ಮಾಡ್ತಿದ್ದಾರೆ. ಧನರಾಜ್ ಆಚಾರ್ ಅನ್ನ ಬಿಗ್ ಬಾಸ್ ಕೊನೆ ಕ್ಷಣದಲ್ಲಿ ಎಲಿಮಿನೇಟ್ ಮಾಡಿತ್ತು. ಅದಾದ್ಮೇಲೆ ವೀಕ್ಷಕರು ಕೂಡ ಬಿಗ್ ಬಾಸ್ ಮೇಲೆ ಕಿಡಿಕಾರಿದ್ರು.. ಬಿಗ್ ಬಾಸ್ ಸೆಲೆಬ್ರಿಟಿಗಳಿಗೋಸ್ಕರ ಧನುವನ್ನ ಬಲಿ ಕುರಿ ಮಾಡಿದ್ರು.. ಯಾರನ್ನೋ ಉಳಿಸೋದಕ್ಕೋಸ್ಕರ ಧನರಾಜ್ ಅನ್ನ ಎಲಿಮಿನೇಟ್ ಮಾಡಿದ್ರು ಅಂತಾ.. ಇದೀಗ ಧನು ಗೆಳೆಯ ಹನುಮನಿಗೂ ಬಿಗ್ ಬಾಸ್ ಮೋಸ ಮಾಡ್ತಿದ್ಯಾ ಅಂತಾ ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹೌದು, ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ಹನುಮಂತ ಹಾಡು, ಡ್ಯಾನ್ಸ್ ಮೂಲಕ ಮನರಂಜಿಸುತ್ತಿದ್ದಾರೆ. ಇನ್ನೂ ಟಾಸ್ಕ್ನಲ್ಲೂ ಹನುಮಂತ 100% ತೊಡಗಿಸಿಕೊಂಡಿದ್ರು.. ಬಿಗ್ ಬಾಸ್ ಕೊಟ್ಟ ಎಲ್ಲಾ ಟಾಸ್ಕ್ ಗಳನ್ನ ಕಂಪ್ಲೀಟ್ ಮಾಡಿದ್ದಾರೆ. ಇದೀಗ ಬಿಗ್ ಬಾಸ್ ನಲ್ಲಿ ಹನುಮಂತ ಫಿನಾಲೆ ಟಿಕೆಟ್ ಪಡೆದಾಗಿದೆ. ಶನಿವಾರ ಹಾಗೂ ಭಾನುವಾರ ಗ್ರ್ಯಾಂಡ್ ಫಿನಾಲೆ ಕೂಡ ನಡೆಯಲಿದೆ. ಸೀಸನ್ 11 ನ ವಿನ್ನರ್ ಕುರಿಗಾಹಿ ಹನುಮಂತ ಲಮಾಣಿಯೇ ಆಗಬೇಕು ಅಂತಾ ಬಹುತೇಕ ವೀಕ್ಷಕರ ಅಭಿಪ್ರಾಯವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಗಳು ನಡೆಯುತ್ತಿವೆ. ಇದೀಗ ಹನುಮಂತನ ವಿನ್ ಮಾಡ್ಬೇಕು ಅಂತಾ ಹನು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನ ಕೂಡ ಶುರುಮಾಡ್ಕೊಂಡಿದ್ದಾರೆ.. ಆದ್ರೆ ಇದೀಗ ಹೊಸ ಚರ್ಚೆಯೊಂದು ಶುರುವಾಗಿದೆ. ಹನುಮಂತ ವಿನ್ ಆಗಲ್ಲ.. ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂಬ ಆರೋಪ ಬಿಗ್ ಬಾಸ್ ವಿರುದ್ಧ ಕೇಳಿಬಂದಿದೆ.
ಬಿಗ್ ಬಾಸ್ ಸೀಸನ್ 11 ನಲ್ಲಿ ಹನುಮಂತ ವಿನ್ ಆಗ್ಬೇಕು.. ಆದ್ರೆ ಬಿಗ್ ಬಾಸ್ ಟೀಮ್ ಹನುಮಂತನನ್ನ ಬರೀ ಟಿ ಆರ್ ಪಿಗಾಗಿ ಮಾತ್ರ ಕರೆಸಿದ್ದಾರೆ.. ಆತ ದೊಡ್ಮನೆಯಲ್ಲಿದ್ರೆ ಜನ ಶೋ ನೋಡ್ತಾರೆ ಅನ್ನೋ ಕಾರಣಕ್ಕೆ ಕರೆಸಿದ್ದಾರೆ ಅಷ್ಟೇ.. ನಿನ್ನೆಯ ಎಪಿಸೋಡ್ ನಲ್ಲೂ ಹನುಮಂತನನ್ನ ದಾರಿ ತಪ್ಪಿಸುವ ಕೆಲಸ ಆಗಿದೆ. ಹನುಮಂತನ ತಾಯಿಗೆ ಆರೋಗ್ಯದಲ್ಲಿ ಏರುಪೇರಾಗುತ್ತೆ.. ಮದುವೆ ಯಾಕೆ ಅಗ್ತಿಯಾ ಅಂತಾ ಸ್ವಾಮೀಜಿ ಕೇಳಿದ್ರು.. ಎಲ್ಲಿರಿಗೂ ಒಳ್ಳೆದಾಗುತ್ತೆ ಅಂತಾ ಹೇಳಿದ್ದ ಸ್ವಾಮೀಜಿ ಹನುಮನಿಗೆ ಕೆಟ್ಟದಾಗುತ್ತೆ ಎಂದಿದ್ಯಾಕೆ? ಹನುಮಂತನ ಬಗ್ಗೆ ಗೊಂದಲ ಮೂಡಿಸುವುದೇ ಅವರ ಉದ್ದೇಶನಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾ ಬಳಕೆದಾರರು ಬಿಗ್ ಬಾಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತ್ರಿವಿಕ್ರಮ್ನ ಫೈನಲ್ಗೆ ಬಿಗ್ ಬಾಸ್ ತರಲೇಬೇಕು ಅಂತಾ ಹುನ್ನಾರ ಹೂಡಿದೆ. ಭವ್ಯಾಗೌಡಗೆ ಬಿಗ್ ಬಾಸ್ ಸಪೋರ್ಟ್ ಮಾಡ್ತಿದೆ. ಅವ್ಳು ಏನೇ ತಪ್ಪು ಮಾಡಿದ್ರೂ, ಮೋಸ ಮಾಡಿದ್ರೂ ಅವಳನ್ನ ಹೊರಗೆ ಕಳಿಸ್ತಿಲ್ಲ. ಅವಳನ್ನ ಕ್ಯಾಪ್ಟನ್ ಸ್ಥಾನದಿಂದ ಇಳಿಸಲಿಲ್ಲ. ಧನು ನನಗೆ ಆಟ ಆಡುವಾಗ ಕಾಣಿಸ್ತು ಅಂತಾ ನಿಜ ಒಪ್ಪಿಕೊಂಡ್ರೂ ಅವನ ಆಟ ರದ್ದು ಮಾಡಿದ್ರು. ಬಿಗ್ ಬಾಸ್ ತುಂಬಾ ಮೋಸ ಮಾಡ್ತಿದೆ. ಈಗಾಗಲೇ ವಿನ್ನರ್ನ ಬಿಗ್ ಬಾಸ್ ಫಿಕ್ಸ್ ಮಾಡಿದೆ. ಅದಕ್ಕೆ ಅನಿಸುತ್ತೆ ಹನುಮಂತ ನಾವು ಗೆದ್ರು ಸೋತರು ಖುಷಿಯಾಗಿ ಹೋಗತೀನಿ ಅಂತಾ ಹೇಳಿದ್ದು. ಅವನ ಮಾತಿನಲ್ಲಿ ಅದರ ಸೂಕ್ಷ್ಮತೆ ಅಡಗಿದೆ. ಹನುಮಂತ ಗೆಲ್ಲಲಿಲ್ಲ ಅಂದರೆ ಬಿಗ್ ಬಾಸ್ ಶೋಗೇ ಬೆಲೆ ಇಲ್ಲ ಎಂದು ವೀಕ್ಷಕರು ಹೇಳ್ತಿದ್ದಾರೆ..
ಭಾರೀ ಕುತೂಹಲ ಮೂಡಿಸಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಯಾರಾಗ್ತಾರೆ? ಈ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಬಿಗ್ ಬಾಸ್ನ ಬಹುತೇಕ ವೀಕ್ಷಕರು ಕುರಿಗಾಹಿ ಹನುಮಂತನೇ ಟ್ರೋಫಿ ಎತ್ತಿಹಿಡಿಯಬೇಕು ಅಂತಾ ಆಸೆ ವ್ಯಕ್ತಪಡಿಸಿದ್ದಾರೆ. ವೀಕ್ಷಕರ ಆಸೆಯಂತೆ ಈ ಬಾರಿಯ ವಿನ್ನರ್ ಹನುಮಂತ ಆಗ್ತಾರಾ ಅಥವಾ ಬೇರೆಯವರು ಆಗ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಇದಕ್ಕೆ ಮುಂದಿನ ವಾರದಲ್ಲಿ ಉತ್ತರ ಸಿಗಲಿದೆ.