ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಟಾರ್ಗೆಟ್ – ಪ್ರತಾಪ್ ನ ಡ್ರೋನ್ ರೆಕ್ಕೆ ಪುಕ್ಕ ಕತ್ತರಿಸುತ್ತಾರಾ?

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಟಾರ್ಗೆಟ್ – ಪ್ರತಾಪ್ ನ ಡ್ರೋನ್ ರೆಕ್ಕೆ ಪುಕ್ಕ ಕತ್ತರಿಸುತ್ತಾರಾ?

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಸೈಲೆಂಟ್ ಆಗಿದ್ರೂ ಅವ್ರ ಡ್ರೋನ್ ವಿಚಾರ ಬೇಜಾನ್ ಸದ್ದು ಮಾಡ್ತಿದೆ. ದೊಡ್ಮನೆಯಲ್ಲಿ ಡ್ರೋನ್ ಪ್ರತಾಪ್ ಟಾರ್ಗೆಟ್ ಆದ್ರಾ ಅನ್ನೋ ಚರ್ಚೆ ಶುರುವಾಗಿದೆ. ಹೌದು ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ವಿಚಾರವೇ ಹಾಟ್ ಟಾಪಿಕ್ ಆಗಿದೆ. ತುಕಾಲಿ ಸಂತು, ವರ್ತೂರ್ ಸಂತೋಷ್, ವಿನಯ್ ಸೇರಿದಂತೆ ಎಲ್ರೂ ಕೂಡ ಡ್ರೋನ್ ಬಗ್ಗೆಯೇ ಮಾತಾಡ್ತಾ ಜೋಕ್ ಮಾಡ್ತಿದ್ದಾರೆ. ಆದ್ರೆ ಯಾರು ಏನೇ ಹೇಳಿದ್ರೂ ಡ್ರೋನ್ ಪ್ರತಾಪ್ ತಲೆಕೆಡಿಸಿಕೊಳ್ತಿಲ್ಲ. ಹಿಂದೆ ನಾಯಿಗಳು ಸಾವಿರ ಬೊಗಳುತ್ತವೆ. ಬೊಗಳಲಿ ಅಂತ ಬಿಡ್ತೀನಿ. ಎದುರುಗಡೆ ಬಂದು ಮಾತನಾಡಿದರೆ, ನಾನು ಖಂಡಿತ ಫೈಟ್ ಮಾಡ್ತೀನಿ ಎಂದಿದ್ದಾರೆ.

ಇದನ್ನೂ ಓದಿ : ರಕ್ಷಿತ್‌ ಶೆಟ್ಟಿ ಜೊತೆ ಮದುವೆಯಾಗಲಿದ್ದಾರಾ ಶರಣ್ಯ ಶೆಟ್ಟಿ? – ಮೊದಲ ಬಾರಿಗೆ ಮೌನ ಮುರಿದ ನಟಿ!

ಇನ್ನು ಅಡುಗೆ ವಿಚಾರವಾಗಿ ಡ್ರೋನ್ ಪ್ರತಾಪ್ ಮತ್ತು ವಿನಯ್‌ ಗೌಡ ನಡುವೆ ಜೋರು ಧ್ವನಿಯಲ್ಲಿ ಗಲಾಟೆ ಕೂಡ ನಡೆದಿದೆ. ನೀವೆಷ್ಟು ಚೆನ್ನಾಗಿ ಅಡುಗೆ ಮಾಡ್ತೀರಾ ಅಂತ ನಮಗೂ ಗೊತ್ತಿದೆ ಎಂದು ವಿನಯ್ ಅಣ್ಣ ಹೇಳ್ತಿದ್ದಾರೆ ಅಂತ ಅಡುಗೆ ಮನೆಯಲ್ಲಿ ಪ್ರತಾಪ್ ಉಳಿದ ಅಸಮರ್ಥರ ಬಳಿ ಚರ್ಚೆ ಮಾಡಿದ್ದಾರೆ. ಇದು ವಿನಯ್‌ಗೆ ಗೊತ್ತಾಗಿದೆ. ಪ್ರತಾಪ್ ಇರುವ ಜಾಗಕ್ಕೆ ಬಂದ ವಿನಯ್, ‘ಕಣ್ಣಲ್ಲಿ ಕಣ್ಣಿಟ್ಟು ಮುಖದ ಮೇಲೆ ಹೇಳುತ್ತೇನೆ. ಹಿಂದೆ ಮುಂದೆ ಮಾತಾಡುವವನು ನಾನಲ್ಲ. ನೀವೆಲ್ಲ ಗಲೀಜಾಗಿ ಮಾಡ್ತಾ ಇದ್ದೀರಿ ಅಂತೇನಾದರೂ ಹೇಳಿದ್ನಾ ನಾನು? ನಿಂದು ತಪ್ಪಿದೆ. ಇವತ್ತು ನಿನ್ ಡ್ರೋನ್‌ದು ರೆಕ್ಕೆ ಪುಕ್ಕ ಎಲ್ಲ ಕಿತ್ತು ಹಾಕ್ತೀನಿ..’ ಎಂದು ವಿನಯ್ ಗರಂ ಆಗಿದ್ದಾರೆ.

ಒಟ್ಟು ಬಿಗ್ ಬಾಸ್‌ ಮನೆಯೊಳಗೆ 17 ಸ್ಪರ್ಧಿಗಳಿದ್ದಾರೆ. ಅದರಲ್ಲಿ ವರ್ತೂರ್ ಸಂತೋಷ್, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್‌, ರಕ್ಷಕ್ ಬುಲೆಟ್, ತನಿಷಾ ಕುಪ್ಪುಂದ ಮತ್ತು ಡ್ರೋನ್ ಪ್ರತಾಪ್ ಅವರು ಅಸಮರ್ಥರು ಲಿಸ್ಟ್‌ನಲ್ಲಿ ಇದ್ದಾರೆ. ಇನ್ನುಳಿದವರೆಲ್ಲರಿಗೂ ಈ ಆರು ಜನರ ಜೊತೆಗೆ ಒಂದಲ್ಲಾ ಒಂದು ವಿಚಾರಕ್ಕೆ ವಾದ-ವಾಗ್ವಾದ ನಡೆಯುತ್ತಲೇ ಇರುತ್ತದೆ.

Shantha Kumari