ಬಿಗ್ಬಾಸ್ ಮನೆಗೆ ಎಂಟ್ರಿಕೊಟ್ಟ ಸಾಮಾನ್ಯ ಜನರು! – ಮಾಳು ಮಾತಿಗೆ ಶಾಕ್ ಆದ ಮನೆಮಂದಿ!

ಬಿಗ್ ಬಾಸ್ ಮನೆಯ ಆಟ ಕ್ಷಣ ಕ್ಷಣಕ್ಕೂ ರೋಚಕತೆ ಪಡೆದುಕೊಳ್ತಿದೆ. ಈ ವಾರ ಯಾವುದೇ ಟಾಸ್ಕ್ಗಳನ್ನ ಬಿಗ್ಬಾಸ್ ನೀಡಿಲ್ಲ. ಈ ವಾರ ಸ್ಪರ್ಧಿಗಳೇ ತಮ್ಮ ಆಟ ಆಡಿ, ಸೇವ್ ಮಾಡಿಕೊಳ್ಳಬೇಕು. ಇದ್ರ ನಡುವೆ ಬಿಗ್ಬಾಸ್ ಮನೆಗೆ ಸಾಮಾನ್ಯ ಜನರ ಎಂಟ್ರಿಯಾಗಿದೆ. ಆದ್ರೆ ಆಟ ಆಡಲು ಅಲ್ಲ.. ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡಲು.
ಇದನ್ನೂ ಓದಿ:ಆಶ್ರಯ ಕೊಟ್ಟ ಮನೆ ಮೇಲೆ ಕನ್ನ ಹಾಕಿದ ದಂಪತಿ! – ಚಿನ್ನಕ್ಕಾಗಿ ಮನೆ ಮಾಲಕಿಯನ್ನ ಕೊಂದ ಪಾಪಿಗಳು!
ಬಿಗ್ ಬಾಸ್ ಈ ವಾರ ಮನೆಯ ಕ್ಯಾಪ್ಟನ್ ಆಯ್ಕೆಗಾಗಿ ಯಾವುದೇ ಟಾಸ್ಕ್ ನೀಡಿಲ್ಲ. ಇದ್ರ ಬದಲು ಸಾಮಾನ್ಯ ಜನರನ್ನ ಕರೆಸಿ, ವೋಟ್ ಮಾಡಿ ಕ್ಯಾಪ್ಟನ್ ಆಯ್ಕೆ ಮಾಡುವಂತೆ ಬಿಗ್ ಬಾಸ್ ಹೇಳಿದ್ದಾರೆ. ಇದ್ರ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ನಿಮ್ಮನ್ನು ಪ್ರೀತಿಸುವ ವೀಕ್ಷಕರು ಬಂದಿದ್ದಾರೆ. ವೀಕ್ಷಕರ ಮನಸ್ಸನ್ನು ಗೆಲ್ಲುವ ಅಭ್ಯರ್ಥಿಯೊಬ್ಬರು ಮುಂದಿನ ವಾರದ ಕ್ಯಾಪ್ಟನ್ ಆಗ್ತಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಈ ಬೆನ್ನಲ್ಲೇ ಸಾಮಾನ್ಯ ಜನರು ದೊಡ್ಮನೆಯೊಳಗೆ ಬಂದಿದ್ದು, ಯಾರು ಕ್ಯಾಪ್ಟನ್ ಆಗಬೇಕು ಎಂದು ಮತ ಹಾಕಿದ್ದಾರೆ. ವೀಕ್ಷಕರ ಎದುರು ಕ್ಯಾಪ್ಟನ್ ಆಗಲು ಅರ್ಹತೆ ಇರುವ ಸ್ಪರ್ಧಿಗಳು ಮಾತನಾಡಿದ್ದಾರೆ.
ಪ್ರೋಮೋದಲ್ಲಿ ಮಾಳು ಮಾತನಾಡಿದ್ದು, ನಾನು ಇಲ್ಲಿ ಬಂದಾಗಿನಿಂದ ಸ್ಟ್ಯಾಂಡ್ ತಗೊಳಲ್ಲ ಅಂತ ಹೇಳ್ತಾರೆ. ಇಲ್ಲಿ ಯಾಕೆ ಜಗಳ ಆಡ್ತಿದೀವಿ ಅಂತ ಅವರಿಗೆ ಗೊತ್ತೇ ಇರೋದಿಲ್ಲ. ಜಗಳದಲ್ಲಿ ಸ್ಟ್ಯಾಂಡ್ ತಗೊಳೋಕೆ ಹೋದೋರು ಹುಚ್ಚರಾಗ್ತಾರೆ. ಹಳ್ಳಿ ಹುಡುಗ ಗತ್ತು ಏನು ಅಂತ ತೋರಸ್ತೀನಿ, ಕ್ಯಾಪ್ಟನ್ ಆಗ್ತೀನಿ, ಹೊಡಿ ಶಾವಿಗೆಯೊಳಗೆ ಮಜ್ಜಿಗೆ ಎಂದು ಮಾಳು ನಿಪನಾಳ ಹೇಳಿದ್ದಾರೆ. ಇದೀಗ ಈ ವಾರ ಯಾರು ಕ್ಯಾಪ್ಟನ್ ಆಗ್ತಾರೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ.

ನೋಡಿರಿ

