ಉಸ್ತುವಾರಿ ಸರಿನೇ ಇರ್ಲಿಲ್ಲ.. ನೀವೇನು ಮಕ್ಕಳಾ? – ದೊಡ್ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ

ಬಿಗ್ಬಾಸ್ ಮನೆಯಲ್ಲಿ ಈ ವಾರ ರಾಶಿಕಾ ಕ್ಯಾಪ್ಟನ್ ಆಗಿದ್ರು. ನಾಯಕಿ ಪಟ್ಟ ಸಿಕ್ತಿದ್ದಂತೆ ರಾಶಿಕಾ ವರಸೆಯೇ ಬದಲಾಗಿತ್ತು. ತಪ್ಪು ನಿರ್ಧಾರಗಳನ್ನ ತೆಗೆದುಕೊಂಡು ಸಾಕಷ್ಟು ಎಡವಟ್ಟು ಮಾಡಿಕೊಂಡಿದ್ರು. ಅಲ್ಲದೇ ಸೂರಜ್ನ ಗೆಲ್ಲಿಸಲು ನಾನಾ ತಂತ್ರ ಮಾಡಿದ್ರು. ಆದ್ರೆ ರಾಶಿಕಾ ಪ್ಲ್ಯಾನ್ ಆಕೆಗೆ ಉಲ್ಟಾ ಹೊಡೆದಿದೆ. ಇದೀಗ ರಾಶಿಕಾಗೆ ಕಿಚ್ಚ ಸುದೀಪ್ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: 3 ಕೋಟಿ ಆಸೆಗಾಗಿ ಹಾವು ಕಚ್ಚಿಸಿ ತಂದೆಯನ್ನೇ ಕೊಂದ ಪಾಪಿ ಮಕ್ಕಳು! – ಸಿನಿಮಾವನ್ನೇ ಮೀರಿಸುತ್ತೆ ಈ ಖತರ್ನಾಕ್ ಪ್ಲ್ಯಾನ್!
ಕಿಚ್ಚನ ಪಂಚಾಯ್ತಿ ಇಂದಿನ ಎಪಿಸೋಡ್ನಲ್ಲಿ ಸುದೀಪ್ ಈ ವಾರದ ಟಾಸ್ಕ್ಗಳ ಬಗ್ಗೆ ಮಾತನಾಡಿದ್ದಾರೆ. ಕ್ಯಾಪ್ಟನ್ ಆಗಿದ್ದ ರಾಶಿಕಾ ಹಾಗೂ ಮನೆಮಂದಿ ಈ ಬಾರಿ ಟಾಸ್ಕ್ಗಳಲ್ಲಿ ಸಾಕಷ್ಟು ಗೊಂದಲ ಮಾಡಿಕೊಂಡಿದ್ದರು. ಅಲ್ಲದೇ ಬಿಗ್ಬಾಸ್ ಕೊಟ್ಟ ಟಾಸ್ಕ್ಗಳಲ್ಲಿ ಸೂರಜ್ನ ಗೆಲ್ಲಿಸಲು ರಾಶಿಕಾ ಪ್ರಯತ್ನಿಸಿದ್ರು. ಇದೀಗ ಈ ಬಗ್ಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ರಾಶಿಕಾ ಬಳಿ ಟಾಸ್ಕ್ ಅರ್ಥ ಆಯ್ತಾ ಎಂದು ಕಿಚ್ಚ ಸುದೀಪ್ ಕೇಳಿದ್ದಾರೆ. ಆಗ ರಾಶಿಕಾ ಶೆಟ್ಟಿ ಅವರು ನಾನು ಕನ್ಫ್ಯೂಸ್ ಆಗಿದ್ದೆ, ಆದರೆ ಎಲ್ಲರೂ ಮಾತನಾಡಿದರು ಎಂದು ಹೇಳಿದ್ದಾರೆ.
ಪ್ರೋಮೋದಲ್ಲಿ ಯಾರೂ ಸರಿ ಇರಲಿಲ್ಲ, ಉಸ್ತುವಾರಿ ಸರಿ ಇರಲಿಲ್ಲ, ಇದನ್ನು ಉಳಿದವರು ಬಳಸಿಕೊಂಡು ಮ್ಯಾನಿಪ್ಯುಲೇಟ್ ಮಾಡಿದರು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ರಾಶಿಕಾ ಶೆಟ್ಟಿಗೆ ಟಾಸ್ಕ್ ನಿಯಮ ಗೊತ್ತಿಲ್ಲ, ಅಂದಹಾಗೆ ಗಿಲ್ಲಿ ನಟ, ಕಾವ್ಯ ಶೈವ ಗೆಲ್ಲಬಾರದು ಎನ್ನೋದು ಕೂಡ ಇತ್ತು. ಇದನ್ನು ಸುದೀಪ್ ಪ್ರಶ್ನೆ ಮಾಡಬೇಕಿತ್ತು ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಹೇಳಿದ್ದಾರೆ.
ಈ ಆಟ ಹದಗೆಡಿಸಲು ಚೈತ್ರಾ ಕಾರಣ ಎಂದು ರಜತ್ ಹೇಳಿದ್ದರು. ಈ ಮಧ್ಯೆ ಗಿಲ್ಲೋದು, ಪರಚೋದು, ಎಂಜಲು ಉಗಿಯೋದು ಮಾಡಿದ್ದಾರೆ, ನಾವು ಹತ್ತು, ಹ್ನೆರಡು ವರ್ಷದವರಾ? ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಅಶ್ವಿನಿ ಗೌಡ, ರಜತ್ ಕೂಡ ಚೈತ್ರಾ ಕುಂದಾಪುರ ಜೊತೆ ಟಾಸ್ಕ್ ವಿಚಾರವಾಗಿ ಜಗಳ ಆಡಿದ್ದರು.

ನೋಡಿರಿ

