ಬಿಗ್ ಬಾಸ್ ಮೊದಲ ವಾರ ಒಬ್ಬರಲ್ಲ.. ಇಬ್ಬರು ಔಟ್! – ದೊಡ್ಮನೆಯಿಂದ ಆಚೆ ಹೋಗೋ ಸ್ಪರ್ಧಿ ಇವರೇ!

ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾಗಿ ಒಂದು ವಾರ ಆಯ್ತು. ಸೀಸನ್ ಥೀಮ್ – ಎಕ್ಸ್‌ಪೆಕ್ಟ್ ದಿ ಅನ್‌ಎಕ್ಸ್‌ಪೆಕ್ಟೆಡ್. ಹೀಗಾಗಿ, ಈ ಬಾರಿ ಹಿಂದಿನಂತೆ ಯಾವುದೂ ನಡೆಯೋದಿಲ್ಲ.. ಯಾವುದನ್ನ ಯಾರೂ ನಿರೀಕ್ಷೆ ಮಾಡೋದಿಕ್ಕೆ ಸಾಧ್ಯವಿಲ್ಲ. ಮೊದಲ ವಾರವೇ ಬಿಗ್ ಬಾಸ್ ಯಾರೂ ನಿರೀಕ್ಷೆ ಮಾಡದ ಟ್ವಿಸ್ಟ್‌ಗಳನ್ನ ನೀಡಿದ್ದಾರೆ. ಅದರಲ್ಲಿ ಒಂದು ಮಾಸ್ ಎಲಿಮಿನೇಷನ್! ಇದೀಗ ಈ ವಾರ ಯಾರು ಬಿಗ್ ಬಾಸ್ ಮನೆಯಿಂದ ಹೊರ ನಡೆಯಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಎಲ್ಲೋ ಲೈನ್ ಪ್ರಯಾಣಿಕರಿಗೆ ಗುಡ್‌ನ್ಯೂಸ್! – ಇನ್ಮುಂದೆ 15 ನಿಮಿಷಕ್ಕೊಂದು ರೈಲು ಸಂಚಾರ!
ಈ ಬಾರಿ ಯಾರು, ಯಾವಾಗ, ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು. ಗುಂಪು ಗುಂಪಾಗಿಯೂ ಔಟ್ ಆಗಬಹುದು ಎಂಬ ಮಾತು ಬಿಗ್ ಬಾಸ್ ಬಾಯಿಂದಲೇ ಬಂದಿದೆ. ಹೀಗಾಗಿ, ಈ ಬಾರಿ ಮಾಸ್ ಎಲಿಮಿನೇಷನ್ ನಡೆಯೋದು ಬಹುತೇಕ ಖಚಿತವಾಗಿದೆ. ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಧನುಷ್, ಮಲ್ಲಮ್ಮ, ಅಭಿಷೇಕ್ ಶ್ರೀಕಾಂತ್ – ಅಶ್ವಿನಿ, ಗಿಲ್ಲಿ ನಟ – ಕಾವ್ಯ, ಅಮಿತ್ – ಕರಿಬಸಪ್ಪ ನಾಮಿನೇಟ್ ಆಗಿದ್ದಾರೆ. ಶುಕ್ರವಾರದ ಸಂಚಿಕೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಇದೀಗ ದೊಡ್ಮನೆಯಿಂದ ಯಾರು ಹೊರ ಹೋಗ್ಬೋದು ಅನ್ನೋ ಕ್ಯೂರಿಯಾಸಿಟಿ ಮೂಡಿದೆ.
ಹಿಂದಿನ ಸೀಸನ್ ಗಳಲ್ಲಿ ಮೊದಲ ವಾರ ಎಲಿಮಿನೇಷನ್ ನಡೆಯುತ್ತಿರಲ್ಲಿಲ್ಲ. ಈ ಬಾರಿ ಎಕ್ಸ್‌ಪೆಕ್ಟ್ ದಿ ಅನ್‌ಎಕ್ಸ್‌ಪೆಕ್ಟೆಡ್ ಇರೋದ್ರಿಂದ ಯಾವುದನ್ನೂ ಹೀಗೇ ಅಂತ ಹೇಳಲಾಗುವುದಿಲ್ಲ. ಕಡೆಯ ಕ್ಷಣದಲ್ಲಿ ಬಿಗ್ ಬಾಸ್ ಹೇಗೆ ಬೇಕಾದರೂ ನಿರ್ಧಾರ ತೆಗೆದುಕೊಳ್ಳಬಹುದು. ಮೊದಲ ದಿನವೇ ರಕ್ಷಿತಾ ಶೆಟ್ಟಿಯನ್ನ ಎಲಿಮಿನೇಟ್ ಮಾಡಲಾಗಿತ್ತು. ಇದೀಗ ನಾಮಿನೇಟ್ ಆಗಿರೋರ ಪೈಕಿ ಅಮಿತ್ – ಕರಿಬಸಪ್ಪ ದೊಡ್ಮನೆಯಿಂದ ಆಚೆ ಹೋಗ್ಬೋದು ಅಂತಾ ಹೇಳಲಾಗ್ತಿದೆ.
ಇನ್ನು ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮದಲ್ಲಿ ಎರಡು ಫಿನಾಲೆ ನಡೆಯಲಿದೆ. ಈಗಾಗಲೇ ಸುಳಿವು ಸಿಕ್ಕಿರುವ ಪ್ರಕಾರ ಮೂರನೇ ವಾರ ಒಂದು ಫಿನಾಲೆ ನಡೆಯಲಿದೆ. ಮೂರನೇ ವಾರದ ಫಿನಾಲೆ ಬಳಿಕ ಮಾಸ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಹೆಚ್ಚು. ಕಮ್ಮಿ ಅಂದರೂ 4-5 ಮಂದಿ ಎಲಿಮಿನೇಟ್ ಆಗುವ ಸಾಧ್ಯತೆ ಇದೆ.
ಮಾಸ್ ಎಲಿಮಿನೇಷನ್ ಬಳಿಕ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಮೊದಲ ಬಾರಿಗೆ ಮಾಸ್ ವೈಲ್ಡ್ ಕಾರ್ಡ್ ಎಂಟ್ರಿ ಸಹ ನಡೆಯಲಿದೆ ಎನ್ನಲಾಗಿದೆ. ಕಮ್ಮಿ ಅಂದರೂ 5-6 ಮಂದಿ ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಡುವ ಚಾನ್ಸಸ್ ಇದೆ ಅಂತ ಹೇಳಲಾಗುತ್ತಿದೆ.

ನೋಡಿರಿ

