ಗಿಲ್ಲಿ ಮೇಲೆ ರಕ್ಷಿತಾ ಓವರ್ ಪೊಸೆಸಿವ್! – ಬಾಗಿಲು ಓಪನ್ ಆಗುತ್ತೆ.. ಹೋಗುತ್ತೀರಿ ಎಂದ ಕಿಚ್ಚ!

ಬಿಗ್‌ಬಾಸ್ ಕನ್ನಡ ಸೀಸನ್ 12 ರ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಇನ್ಮುಂದೆ ಸ್ಪರ್ಧಿಗಳು ಎಚ್ಚರಿಕೆಯಿಂದ ಆಟ ಆಡ್ಬೇಕಿದೆ. ಆದ್ರೆ ಕೆಲ ಸ್ಪರ್ಧಿಗಳು ಮಾತ್ರ ಇನ್ನು ಎಚ್ಚೆತ್ತುಕೊಂಡಿಲ್ಲ. ಇದೀಗ ಇದೇ ವಿಚಾರವಾಗಿ ಕಿಚ್ಚನ ಪಂಚಾಯ್ತಿಯಲ್ಲಿ ಗಿಲ್ಲಿ, ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಸುದೀಪ್.
ಇದನ್ನೂ ಓದಿ: ಕೇಂದ್ರ ಬಜೆಟ್ ಅಧಿವೇಶನಕ್ಕೆ ರಾಷ್ಟ್ರಪತಿ ಅನುಮೋದನೆ! – ಜ.28ರಿಂದ ಫೆ.13ರವರೆಗೆ ಸಂಸತ್ ಅಧಿವೇಶನ!
ದೊಡ್ಮನೆಯಲ್ಲಿ ಗಿಲ್ಲಿ, ಕಾವ್ಯ ಹಿಂದೆಯೇ ಸುತ್ತುತಾ ಇದ್ರೆ, ರಕ್ಷಿತಾ ಕೂಡ ತನ್ನ ಆಟ ಮರೆತಿದ್ದಾರೆ. ಗಿಲ್ಲಿ ಮೇಲಿನ ಪೊಸೆಸ್ಸಿವ್‌ನಿಂದ ಬೇರೆಯವರ ಮನಸ್ಸಿಗೆ ನೋವು ಮಾಡುತ್ತಿದ್ದಾರೆ. ಇದೆಲ್ಲಾ ವಿಚಾರವಾಗಿ ರಕ್ಷಿತಾ, ಗಿಲ್ಲಿ ಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದ್ರ ಪ್ರೋಮೋ ರಿಲೀಸ್ ಆಗಿದೆ.
ಪ್ರೋಮೋದಲ್ಲಿ ರಾಶಿಕಾ ಶೆಟ್ಟಿ ಅವರು ರಘು ಪಕ್ಕ ಕೂತಿದ್ದರು. ಆಗ ರಕ್ಷಿತಾ ಅವರು ನೀವು ರಘು ಅಣ್ಣನ ಪಕ್ಕ ಕೂತಿದ್ದಾರೆ, ಅವರಿಗೆ ಅನ್‌ಕಂಫರ್ಟೇಬಲ್ ಫೀಲ್ ಆಗ್ತಿದೆ ಎಂದು ಹೇಳಿದ್ದರು. ಇದು ಕೂಡ ಚರ್ಚೆ ಆಗಿತ್ತು. ರಾಶಿಕಾ, ರಕ್ಷಿತಾ ಅವರು ಇದೇ ವಿಚಾರಕ್ಕೆ ಜಗಳ ಆಡಿದ್ದಾರೆ. ಗಿಲ್ಲಿ, ರಘು ಅವರು ಬೇರೆಯವರ ಜೊತೆ ಕ್ಲೋಸ್ ಆದರೆ ನಿಮಗೆ ಆಗೋದಿಲ್ಲ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದರು. ಆಗ ರಕ್ಷಿತಾ ಸುಮ್ಮನಾಗಿದ್ದಾರೆ.
ಇನ್ನು ಗಾರ್ಡನ್ ಏರಿಯಾದಲ್ಲಿ ಗಿಲ್ಲಿ ನಟ ಅವರು ಸೋಫಾ ಮೇಲೆ ಕೂತಿದ್ದರು. ಅಲ್ಲೇ ಪಕ್ಕದಲ್ಲಿದ್ದ ಬೀನ್ ಬ್ಯಾಗ್‌ನ್ನು ರಕ್ಷಿತಾ ಅವರು ತಗೊಂಡು ಬೇರೆ ಕಡೆ ಇಟ್ಟರು. ಗಿಲ್ಲಿ ಜೊತೆ ಯಾರೂ ಕೂರಬಾರದು ಎಂದು ರಕ್ಷಿತಾ ಹೀಗೆ ಮಾಡಿದ್ದಾರೆ ಎಂಬ ಕಾರಣ ಕೊಟ್ಟು ರಾಶಿಕಾ ಅವರು ರಕ್ಷಿತಾಗೆ ಕಳಪೆ ಕೊಟ್ಟಿದ್ದರು.
ರಕ್ಷಿತಾಗೆ ರಘು, ಗಿಲ್ಲಿ ಪಕ್ಕ ಬೇರೆಯವರು ಕೂತರೆ ಆಗೋದಿಲ್ಲ. ಹೀಗಾಗಿ ಕಿಚ್ಚ ಸುದೀಪ್ ಅವರು ಇದನ್ನೇ ಪ್ರಶ್ನೆ ಮಾಡಿದ್ದಾರೆ. ರಕ್ಷಿತಾ ಮನಸ್ಸಿನಲ್ಲಿ ತಾನೇ ಟ್ರೋಫಿ ಗೆಲ್ಲಬೇಕು ಎಂದಿದೆ, ಆದರೆ ಗಿಲ್ಲಿ, ರಘು ಪಕ್ಕ ಬೇರೆಯವರು ಕೂರಬಾರದು ಎಂದಿದ್ದಾರೆ.
ಸಂಬಂಧ ಇಟ್ಟುಕೊಂಡು ಮನೆಯನ್ನು ನರಕ ಮಾಡುತ್ತಿದ್ದೇವೆ ಅಂದರೆ.. ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, “ರಘು, ಗಿಲ್ಲಿ, ಹಾಗೂ ನೀವು.. ನಿಮ್ಮ ಮೂರು ಜನರಲ್ಲಿ ಯಾರು ಗೆಲ್ಲಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ರಕ್ಷಿತಾ ನಾನು ಎಂದಿದ್ದಾರೆ.

ನೋಡಿರಿ

