BBK 12ಕ್ಕೆ ಪ್ರಿಯಾಂಕ ಉಪೇಂದ್ರ? – ಈ ಸ್ಟಾರ್ಸ್ ದೊಡ್ಮನೆಗೆ ಬರೋದು ಫಿಕ್ಸ್?

BBK 12ಕ್ಕೆ ಪ್ರಿಯಾಂಕ ಉಪೇಂದ್ರ? – ಈ ಸ್ಟಾರ್ಸ್ ದೊಡ್ಮನೆಗೆ ಬರೋದು ಫಿಕ್ಸ್?

ಒಂದು ಮನೆ.. 100ಕ್ಕೂ ಹೆಚ್ಚು ದಿನ.. ಭಿನ್ನ.. ವಿಭಿನ್ನ.. ವ್ಯಕ್ತಿತ್ವಗಳು.. ಇದೇ ಸ್ವರ್ಗ.. ಇದೇ ನರಕ.. ಏನಾದ್ರೂ  ಫೇಸ್‌ ಮಾಡೋದಿಕ್ಕೆ ರೆಡಿ ಇರ್ಬೇಕು.. ಇದೇ ಬಿಗ್‌ ಬಾಸ್‌ ಆಟದ ಸ್ಪೆಷಾಲಿಟಿ.. ಬಿಗ್‌ ಬಾಸ್‌ ಸೀಸನ್‌ 11ಅಂತೂ ತುಂಬಾ ಹೈಪ್‌ ಕ್ರಿಯೆಟ್‌ ಮಾಡಿತ್ತು.. ಆ ಸೀಸನ್‌ ನ ಸ್ಪರ್ಧಿಗಳ ಹವಾ ಇನ್ನೂ ಇದೆ.. ಇದೀಗ ಬಿಗ್‌ ಬಾಸ್‌ ಸೀಸನ್‌ 12ಕ್ಕೆ ಕೌಂಟ್‌ಡೌನ್‌ ಶುರುವಾಗಿದೆ..  ಈ ಸೀಸನ್‌ ನಲ್ಲಿ ಯಾರೆಲ್ಲಾ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ದೊಡ್ಮನೆಗೆ ಎಂಟ್ರಿಕೊಡ್ಬೋದು ಅನ್ನೋ ಕ್ಯೂರಿಯಾಸಿಟಿ ಇದ್ದೇ ಇದೆ. ಇದೀಗ ಬಿಗ್‌ ಬಾಸ್‌ ಸೀಸನ್‌ 12 ರಲ್ಲಿ ಯಾರೆಲ್ಲಾ ಸ್ಪರ್ಧಿಸ್ಬೋದು ಅನ್ನೋದ್ರ ಬಗ್ಗೆ ಚರ್ಚೆ ನಡಿತಾ ಇದೆ.

ಇದನ್ನೂ ಓದಿ: ಎರಡನೇ ಪಂದ್ಯದಲ್ಲಿ ವರ್ಕ್ ಆಗ್ಲಿಲ್ಲ ಬಾಝ್ ಬಾಲ್ ಮಂತ್ರ – ಇಂಗ್ಲೆಂಡ್ ಗೆ ತಿರುಗು ಬಾಣವಾಯ್ತಾ?

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್‌ ಬಾಸ್‌.. ಸೀಸನ್‌ 11 ಯಶಸ್ವಿಯಾಗಿ ಮುಗಿದಿದ್ದು.. ಇದೀಗ 12 ಸೀಸನ್‌ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದ್ರ ನಡುವೆ ಈ ಸೀಸನ್‌ ನಲ್ಲಿ ಯಾವ್ಯಾವ ನಟ, ನಟಿಯರು ದೊಡ್ಮನೆ ಎಂಟ್ರಿ ಕೊಡ್ಬೋದು.. ಯಾರು ಬಂದ್ರೆ ಚೆನ್ನಾಗಿರುತ್ತೆ ಅನ್ನೋ ಚರ್ಚೆ ನಡಿತಾ ಇದೆ.. ಇದೀಗ ಕೆಲ ಸೆಲೆಬ್ರಿಟಿಗಳು ಹೆಸ್ರು ಹೆಚ್ಚು ಸದ್ದು ಮಾಡ್ತಿದೆ.

ಬಿಗ್‌ ಬಾಸ್‌ ಶೋ ಅಂದ್ರೇನೆ ಹಾಗೇ.. ಜನಪ್ರಿಯ ತಾರೆಯರಿಂದ ಹಿಡಿದು ಸೋಶಿಯಲ್ ಮೀಡಿಯಾ ಸ್ಟಾರ್‌ಗಳು, ವಿವಾದ ಮಾಡಿಕೊಂಡು ಸುದ್ದಿಯಲ್ಲಿ ಇದ್ದವರನ್ನು ಮನೆಯೊಳಗೆ ಕಳಹಿಸಲಾಗುತ್ತೆ. ಈ ಬಾರಿ ಕೂಡ ಇಂತಹ ಫೇಮಸ್ ವ್ಯಕ್ತಿಗಳ ಹುಡುಕಾಟದಲ್ಲಿ ಕಲರ್ಸ್ ಟೀಮ್ ನಿರತವಾಗಿದೆ. ಈಗಾಗಲೇ ಕೆಲವು ಹೆಸರುಗಳು ಚರ್ಚೆಯಲ್ಲಿವೆ.

ನಟ ಶ್ರೀ ಮಹದೇವ್.. ಹೊಂದಿಸಿ ಬರೆಯಿರಿ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಹದೇವ್‌ ನಟಿಸಿದ್ದಾರೆ.. ನಟ ಶ್ರೀ ಮಹದೇವ್ ಅವರನ್ನೂ ಕೂಡ ಬಿಗ್‌ ಬಾಸ್‌ ಟೀಮ್‌ ಅಪ್ರೋಚ್ ಮಾಡಿದೆ ಅಂತಾ ಹೇಳಲಾಗ್ತಿದೆ..  ಇನ್ನು ಕೆಜಿಎಫ್‌ ನಟಿ ಕೂಡ ದೊಡ್ಮನೆಗೆ ಎಂಟ್ರಿಕೊಡಲಿದ್ದಾರೆ ಎಂದು ಹೇಳಲಾಗ್ತಿದೆ. ನಟಿ ಅರ್ಚನಾ ಜೋಯಿಸ್ ಕೆಜಿಎಫ್‌ ಸಿನಿಮಾದ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.  ಕೆಜಿಎಫ್’ ಸಿನಿಮಾದಲ್ಲಿ ರಾಕಿ ಭಾಯಿಯ ತಾಯಿ ಪಾತ್ರದಲ್ಲಿ ನಟಿಸಿದ್ರು. ಇವ್ರ ನಟನೆಗೆ ಇಡೀ ಸಿನಿಮಾ ಜಗತ್ತೇ ಶಹಬಾಷ್‌ ಎಂದು ಹೇಳಿತ್ತು.. ಇದೀಗ ಈಕೆ ಕೂಡ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗ್ತಿದೆ.

ಇನ್ನು ದೊಡ್ಮನೆಗೆ ಸುದ್ದಿ ನಿರೂಪಕ ಕೂಡ ದೊಡ್ಮನೆಗೆ ಬರ್ತಾರೆ ಎಂದು ಹೇಳಲಾಗ್ತಿದೆ. ಚಂದನ್ ಶರ್ಮಾ ಕನ್ನಡದ ಕೆಲ ಸುದ್ದಿವಾಹಿನಿ ಹಲವು ವರ್ಷಗಳಿಂದ ಸುದ್ದಿ ನಿರೂಪಣೆ ಮಾಡ್ತಿದ್ದಾರೆ. ಇದೀಗ ಕಲರ್ಸ್ ಟೀಮ್ ಚಂದನ್ ಶರ್ಮಾ ಅವರನ್ನು ಅಪ್ರೋಚ್ ಮಾಡಿದೆ. ಹಲವು ಬಾರಿ ಚಾನೆಲ್‌ ವಿಸಿಟ್ ಹಾಕಿ ಹೋಗಿರುವ ಬಗ್ಗೆ ಚರ್ಚೆಯಾಗುತ್ತಿದೆ. ಸಂಭಾವನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಅಂತಾ ಹೇಳಲಾಗ್ತಿದೆ. ಈ ಬಾರಿ ʻಬಿಗ್‌ ಬಾಸ್‌ʼಗೆ ಕನ್ನಡದ ಜನಪ್ರಿಯ ಯೂಟ್ಯೂಬರ್‌ ಮತ್ತು ಟ್ರಾವೆಲ್‌ ವ್ಲಾಗರ್‌  ಡಾ ಬ್ರೋ ಭಾಗವಹಿಸಬೇಕು ಅಂತಾ ವೀಕ್ಷಕರು ಹೇಳ್ತಿದ್ದಾರೆ. ಡಾ ಬ್ರೋ ಖ್ಯಾತಿಯ ಗಗನ್‌ ಶ್ರೀನಿವಾಸ್ ಬಿಗ್‌ ಬಾಸ್‌ ನಲ್ಲಿ ಭಾಗವಹಿಸಿದರೆ ಕಾರ್ಯಕ್ರಮದ ಟಿಆರ್‌ಪಿಗೆ ಕೊರತೆ ಇರಲ್ಲ.  ಡಾ ಬ್ರೋ ತಮ್ಮ ನೇರವಾದ ಮಾತುಗಾರಿಕೆಯಿಂದ ಒಂದಿಷ್ಟು ವಿವಾದಾತ್ಮಕ ಕ್ಷಣಗಳನ್ನು ಸೃಷ್ಟಿಸಬಹುದು ಅನ್ನೋ ಲೆಕ್ಕಾಚಾರ ಇದೆ. ಆದರೆ ಈ ಹಿಂದೆ ಬಿಗ್‌ ಬಾಸ್‌ಗೆ ನಾನು ಹೋಗಲ್ಲ, 3 ತಿಂಗಳು ಒಂದೇ ಮನೆಯಲ್ಲಿ ಇರೋಕೆ ಆಗಲ್ಲ ಎಂದು ಡಾ ಬ್ರೋ ಹೇಳಿಕೊಂಡಿದ್ದರು. ಈ ಸೀಸನ್‌ ನಲ್ಲಿ ಸ್ಪರ್ಧಿಸ್ತಾರಾ ಅನ್ನೋದನ್ನ ಕಾದುನೋಡ್ಬೇಕು.

ಇನ್ನು ರಿಯಲ್‌ ಸ್ಟಾರ್‌ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ದೊಡ್ಮನೆಗೆ ಬರ್ತಿದ್ದಾರೆ ಎಂದು ಹೇಳಲಾಗ್ತಿದೆ. ಈಗಾಗಲೇ ಬಿಗ್‌ ಬಾಸ್‌ ಟೀಮ್‌  ಪ್ರಿಯಾಂಕ ಉಪೇಂದ್ರ ಅವ್ರನ್ನ ಅಪ್ರೋಚ್ ಮಾಡಿದ್ದಾರೆ ಎನ್ನಲಾಗಿದೆ. ಅತಿಥಿಯಾಗಿ ಒಂದೆರಡು ವಾರ ಮನೆಯೊಳಗೆ ಇರುವಂತೆ ಕೇಳಿಕೊಂಡಿದ್ದಾರಂತೆ.. ಆದ್ರೆ ಪ್ರಿಯಾಂಕ ಅವ್ರು ಈ ಬಗ್ಗೆ ಆಸಕ್ತಿ ತೋರಿಲ್ಲ ಎಂದು ಮೂಲಗಳು ಹೇಳುತ್ತಿವೆ.

ರಂಗನಾಯಕಿ ಸೀರಿಯಲ್ ಖ್ಯಾತಿಯ ಪ್ರೇರಣಾ ಕಂಬಂ ಈಗಾಗಲೇ ತೆಲುಗು ಬಿಗ್ ಬಾಸ್ ನಲ್ಲಿ ಸಖತ್ ಸೌಂಡ್ ಮಾಡಿದ್ದರು. ಕಳೆದ ಬಾರಿ ಶೋಭಾ ಶೆಟ್ಟಿ ಬಂದಂತೆ ಈ ಬಾರಿ ಪ್ರೇರಣಾ ಕೂಡ ಬರ್ತಾರೆ ಎಂದು ಹೇಳಲಾಗ್ತಿದೆ. ಆದ್ರೆ ಎಷ್ಟರ ಮಟ್ಟಿಗೆ ಸತ್ಯ ಅನ್ನೋದು ಗೊತ್ತಿಲ್ಲ..  ಇವ್ರ ಜೊತೆ ಪುಟ್ಟಕ್ಕನ ಮಕ್ಕಳು  ಸೀರಿಯಲ್‌ನಲ್ಲಿ ಸ್ನೇಹ ಪಾತ್ರದಲ್ಲಿ ನಟಿಸಿದ್ದ ಸಂಜನಾ ಬುರ್ಲಿ ಕೂಡ ಬಿಗ್‌ ಬಾಸ್‌ ಸೀಸನ್‌ 12 ರಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗ್ತಿದೆ.. ಧಾರಾವಾಹಿ ಇಂದ ಹೊರಬಂದಿರುವ ಸಂಜನಾ ಬುರ್ಲಿ ಈ ಬಾರಿ ‘ಬಿಗ್ ಬಾಸ್’ ಮನೆಗೆ ಬರ್ತಾರಾ? ಅಂತಾ ಕಾದು ನೋಡ್ಬೇಕು.  ಇನ್ನು ವಧು  ಸೀರಿಯಲ್‌ನಲ್ಲಿ ನಟಿಸ್ತಿರುವ ಸೋನಿ ಮುಲೇವಾ ಬಿಗ್‌ ಬಾಸ್‌ ಮನೆಗೆ ಬರ್ತಾರೆ ಎಂದು ಹೇಳಲಾಗ್ತಿದೆ. ವಧು ಸೀರಿಯಲ್‌ ಮುಕ್ತಾಯಗೊಂಡಿದೆ. ಈ ಸೀರಿಯಲ್‌ ನಲ್ಲಿ ಸೋನಿ ಮುಲೇವಾ ವಿಲನ್‌ ಆಗಿ ನಟಿಸಿದ್ರು.. ಇದೀಗ ಕ್ವಾಟ್ಲೆ ಕಿಚನ್  ಶೋನಲ್ಲಿ ಬಿಜಿಯಾಗಿರುವ ಸೋನಿ  ಬಿಗ್ ಬಾಸ್ ಮನೆಗೆ ಬಂದು ಗ್ಲಾಮರ್ ರಂಗು ತುಂಬುತ್ತಾರಾ? ಕಾದು ನೋಡ್ಬೇಕು.

ಇನ್ನು ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗಿಲ್ಲಿನಟ ಕೂಡ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗ್ತಿದೆ.. ಗಿಲ್ಲಿನಟ ಈಗಾಗಲೇ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.. ಗಿಲ್ಲಿ ನಟ ಇದ್ರೆ ಟಿಆರ್‌ಪಿ ಫಿಕ್ಸ್‌ ಅಂತಾನೇ ಹೇಳ್ಬೋದು..  ಗಿಲ್ಲಿ ನಟ ಕಲರ್ಸ್ ಕನ್ನಡ ವಾಹಿನಿಯ ಅಂಗಳಕ್ಕೆ ಕಾಲಿಟ್ಟಾಗಿದೆ. ಒನ್‌ ಲೈನ್‌ ಪಂಚ್ ಹೊಡೆಯೋದ್ರಲ್ಲಿ ಗಿಲ್ಲಿ ನಟ ಫೇಮಸ್. ಒಳ್ಳೆಯ ಕಾಮಿಡಿ ಟೈಮಿಂಗ್ ಹೊಂದಿರುವ ‘ಗಿಲ್ಲಿ ನಟ’ ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮಕ್ಕೆ ಬಂದರೆ ವೀಕ್ಷಕರಿಗೆ ಮನರಂಜನೆ ಗ್ಯಾರೆಂಟಿ. ಒಟ್ಟಾರೆ. ಬಿಗ್‌ ಬಾಸ್‌ ನಲ್ಲಿ ಯಾರೆಲ್ಲಾ ಸ್ಪರ್ಧಿಸ್ತಾರೆ ಅನ್ನೋ ಕುತೂಹಲ, ಒಂದ್ಕಡೆಯಾದ್ರೆ, ದೊಡ್ಮನೆಯಲ್ಲಿ ಇವ್ರೆಲ್ಲಾ ಹೇಗಿರ್ತಾರೆ ಅನ್ನೋ ಕ್ಯೂರಿಯಾಸಿಟಿ ಇದ್ದೇ ಇದೆ.

Shwetha M