ರಜತ್ ಬಾಯಿಗೆ ಕಡಿವಾಣ ಇಲ್ವಾ?.. ಚೈತ್ರಗೆ ಈ ಟಾಸ್ಕ್ ಕೊಟ್ರಾ? – ರಜತ್ ದೌಲತ್ತು.. ಬಿಗ್ ಬಾಸ್ ಸೈಲೆಂಟ್!
ಬಿಗ್ಬಾಸ್ನಲ್ಲಿ ಜಗಳ ಕಮ್ಮಿ ಆಗಿದ್ದಕ್ಕೋ.. ಲಾಯರ್ ಜಗದೀಶ್ ಹೊರಬಿದ್ದಿದ್ದಕ್ಕೋ ಏನೋ.. ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ರಜತ್ ನಿಜಕ್ಕೂ ವೈಲ್ಡ್ ಆಗಿಯೇ ಆಡ್ತಿದ್ದಾರೆ.. ಯಾಕೆ ವೈಲ್ಡ್ ಅಂದ್ರೆ ಈ ಮನುಷ್ಯ ಕೆಲವೊಮ್ಮೆ ಮಕ್ಕಳ ಥರ ಕೀಟಲೆ ಮಾಡಿದ್ರೂ ಸಡನ್ನಾಗಿ ಹೈಟೆಂಪರ್ಗೆ ಹೋಗಿ ಆಡಬಾರದ್ದನ್ನು ಆಡಿಬಿಡ್ತಾರೆ.. ಫ್ಯಾಮಿಲಿ ಆಡಿಯನ್ಸ್ ಮನೆಯಲ್ಲಿ ಜೊತೆಯಾಗಿ ಕುಳಿತು ಕಾರ್ಯಕ್ರಮ ನೋಡುವಾಗ ಮುಜುಗರ ಪಟ್ಟುಕೊಳ್ಳುವ ರೀತಿಯ ಪದಗಳು ಈ ರಜತ್ ಬಾಯಿಂದ ಹೊರಬೀಳ್ತವೆ.. ಫಸ್ಟ್ ವೀಕಲ್ಲಿ ಮಾತ್ರ ಪ್ರತಿಭೆ.. ಅಂತ ಕಿಚ್ಚ ಸುದೀಪ್ ಕಾಲೆಳೆದಿದ್ದು ಬಿಟ್ರೆ ರಜತ್ ಮಾತಿಗೆ ಅದ್ಯಾಕೋ ಬಿಗ್ ಬಾಸ್ ಕಡಿವಾಣ ಹಾಕ್ತಿಲ್ಲ ಎಂಬ ಕಂಪ್ಲೇಂಟ್ ವೀಕ್ಷಕರಿಂದ ಕೇಳಿ ಬರುತ್ತಿದೆ.. ಹಾಗಿದ್ದರೆ ರಜತ್ ಈ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಲ್ಲಿಂದ ಆಗಿದ್ದೇನು? ನಿಜಕ್ಕೂ ಈ ವ್ಯಕ್ತಿಯಿಂದ ಬಿಗ್ಬಾಸ್ ಜನ್ರಿಗೆ ಇಷ್ಟ ಆಗ್ತಿದೆಯಾ? ಅಥವಾ ಸಿಕ್ಕಾಪಟ್ಟೆ ಇರಿಟೇಟ್ ಆಗುವಂತೆ ಮಾಡ್ತಿದ್ದಾರಾ? ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರಾಬಿನ್ ಉತ್ತಪ್ಪ ಬಂಧನಕ್ಕೆ ವಾರೆಂಟ್ ಜಾರಿ – ಉದ್ಯೋಗಿಗಳಿಗೆ 23 ಲಕ್ಷ ವಂಚನೆ ಮಾಡಿದ್ರಾ?
ಬಿಗ್ ಬಾಸ್ ಸೀಸನ್ ಕನ್ನಡ ಸೀಸನ್ 11ರಲ್ಲಿ ಮೂರನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ 50ನೇ ದಿನಕ್ಕೆ ಕಾಲಿಟ್ಟ ವ್ಯಕ್ತಿ ರಜತ್ ಕಿಶನ್. ಮನೆಗೆ ಕಾಲಿಡುತ್ತಿದ್ದಂತೆ ಧೂಳ್ ಎಬ್ಬಿಸಿದ್ದ ಕಿಶನ್ ನಿಜಕ್ಕೂ ಟಫ್ ಸ್ಪರ್ಧಿ ಎಂದು ಮನೆ ಮಂದಿ ಮಾತ್ರವಲ್ಲ ವೀಕ್ಷಕರೂ ಕೂಡ ಅಂದುಕೊಂಡಿದ್ದರು . ಉಗ್ರಂ ಮಂಜು ಗ್ರೇ ಏರಿಯಾ ಹುಡುಕಿಕೊಳ್ಳುತ್ತಾರೆ. ಜಗಳ ಮಾಡುತ್ತಾರೆ ಎಂದು ಬೇಸರ ಇತ್ತು. ಆದರೆ ರಜತ್ ಬಂದ ಮೇಲೆ ಗ್ರೇ ಏರಿಯಾವೂ ಇಲ್ಲ.. ಯಾವ ಏರಿಯಾನೂ ಬೇಕಿಲ್ಲ.. ಸಿಕ್ಕಸಿಕ್ಕಲ್ಲಿ ಬಾಯಿಗೆ ಬಂದಂಗೆ ಬಯ್ಯೋದೇ ಕೆಲಸ ಎಂಬಂತಾಗಿದ್ದು, ಶೋ ನೋಡೋದಕ್ಕೇ ಬೇಜಾರಾಗ್ತಿದೆ ಅಂತಿದ್ದಾರೆ ಪ್ರೇಕ್ಷಕರು..
11ನೇ ವಾರದ ನಾಮಿನೇಷನ್ ಮಾಡಲು ಬಿಗ್ ಬಾಸ್ ಸೀಸನ್ 10ರ ಕೆಲ ಸ್ಪರ್ಧಿಗಳು ಬಂದಿದ್ದರು.. ಅವರ ಪೈಕಿ ತುಕಾಲಿ ಸಂತೋಷ್ ಆಗಮಿಸಿದ್ದಾಗ ಧನರಾಜ್ ನಾಮಿನೇಷನ್ ಮಾಡುವ ಅವಕಾಶ ಪಡೆದುಕೊಂಡಿದ್ದರು.. ಆಗ ‘ನನ್ನ ಅಭಿಪ್ರಾಯ ಹೇಳೋಕೆ ಬಂದರೆ ರಜತ್ ಸರಿಯಾಗಿ ಮಾತನಾಡುವುದಿಲ್ಲ. ನನ್ನನ್ನು ಪದೇ ಪದೇ ಹುಚ್ಚ ಎಂದು ಅಡ್ಡಗಾಲು ಹಾಕುತ್ತಾರೆ ನನಗೆ ಇಷ್ಟ ಆಗುವುದಿಲ್ಲ’ ಎಂಬ ಕಾರಣವನ್ನು ಧನು ಕೊಟ್ಟರು. ಸಾಮಾನ್ಯವಾಗಿ ರಜತ್ ಯಾವುದೇ ಅಭಿಪ್ರಾಯ ಅಥವಾ ಕಾರಣ ಕೊಟ್ಟರೂ ಮನೆ ಮಂದಿ ಸುಮ್ಮನೆ ಇರಬೇಕು.. ಆದರೆ ತಮ್ಮ ಬಗ್ಗೆ ಯಾರು ಏನೇ ಹೇಳಿದ್ದರೂ ಜಗಳಕ್ಕೆ ಬೀಳುವುದು ಕಾಮನ್ ಎಂಬಂತಾಗಿದೆ.. ಧನು ಹಾಗೆ ಹೇಳಿದ್ಮೇಲೆ ಬಾಯಿಗೆ ಬಂದಂಗೆ ಧನರಾಜ್ ವಿರುದ್ಧ ಕಿಡಿಕಾರಿದ್ದರು.. ಅದಾದ್ಮೇಲೆಯೇ ಧನು ಮತ್ತು ರಜತ್ ನಡುವೆ ಫೈಟಿಂಗ್ವರೆಗೂ ಹೋಗಿತ್ತು.. ಶೋ ನೋಡುವಾಗ ದಿನದ ಎಲ್ಲಾ ಭಾಗಗಳನ್ನು ತೋರಿಸಲ್ಲ ನಿಜ.. ಕೇವಲ ಹೈಲೈಟ್ ಮಾತ್ರ ತೋರಿಸುತ್ತಿರುತ್ತಾರೆ.. ಆದ್ರೆ ಬಿಗ್ಬಾಸ್ ಶೋದಲ್ಲಿ ನೋಡಿದ ಪ್ರಕಾರ ಧನರಾಜ್ ತಮಾಷೆಗಾಗಿ ರಜತ್ ಕೆನ್ನೆ ಮುಟ್ಟಿ ಅಂಕಲ್ ಅಂಕಲ್ ಅಂದಂತೆ ಇತ್ತೇ ಹೊರತು.. ನೋವಾಗುವ ರೀತಿಯಲ್ಲಿ ಏನೂ ಇರಲಿಲ್ಲ.. ತನ್ನ ಕೆನ್ನೆಯೇ ಬೆಣ್ಣೆ ಅನ್ನೋ ರೀತಿಯಲ್ಲಿ ರಜತ್ ಆಡಿದ್ದು ಮಾತ್ರವಲ್ಲ.. ವೀಕೆಂಡ್ ಎಪಿಸೋಡ್ನಲ್ಲೂ ಧನ್ರಾಜ್ ಹಾಗೆ ಮುಟ್ಟಿದ್ದು ಕೂಡ ತಪ್ಪು ಎಂಬ ರೀತಿಯಲ್ಲಿ ತೀರ್ಪು ಕೊಟ್ಟಿದ್ದು ಅದ್ಯಾಕೋ ವೀಕ್ಷಕರಿಗೆ ಸರಿ ಹೋಗಿಲ್ಲ.
ಇನ್ನು ಯಾರ ಜೊತೆಗಾದ್ರೂ ಕಾಲು ಕೆರೆದು ಜಗಳಕ್ಕೆ ಹೋಗುವಾಗ ರಜತ್ದು ಒಂದು ಸ್ಟೈಲಿದೆ.. ನಾನು.. ಅಂಥವನಲ್ಲ.. ನನ್ನನ್ನು ಕೆಣಕೋಕೆ ಬರ್ಬೇಡ.. ನಾನು ತಲೆ ಕೆಟ್ನನ್ಮಗ.. ನಾನು ಅಂತ ಮಗ.. ಇಂತ ಮಗ ಅಂತೆಲ್ಲಾ ಹೇಳ್ಕೊಳ್ತಾರೆ.. ಇದೊಂದು ರೀತಿಯಲ್ಲಿ ಪ್ರೊಫೆಸರ್ ಕೃಷ್ಣೇಗೌಡರ ಕಾಮಿಡಿ ಶೋನಲ್ಲಿ ಅವರು ಬೈಗಳಗಳನ್ನು ವಿವರಿಸೋದಿಕ್ಕೆ ಕೊಡುವ ಉದಾಹರಣೆಯಂತೆಯೇ ಕಾಣ್ತದೆ.. ಆ ರೀತಿಯಲ್ಲಿ ಈ ರಜತ್ ತನಗೇ ಬೈಕೊಳ್ತಾರೋ.. ಅಥವಾ ಎದುರಿಗೆ ಇದ್ದವರಿಗೆ ಬೈತಾರೋ ಅರ್ಥವಾಗೋದೇ ಇಲ್ಲ.. ಒಟ್ನಲ್ಲಿ ಗಲಾಟೆ ಎಬ್ಬಿಸೋದ್ರಲ್ಲಿ ಮಾತ್ರ ಈ ವ್ಯಕ್ತಿ ಪಂಟರ್ ಅನ್ನೋದು ಖಾತ್ರಿಯಾಗಿದೆ..
ತಮಾಷೇ ಅಂದ್ರೆ ಈ ವೀಕಲ್ಲಿ ಇದೇ ಬಾಯಿಬಡುಕ ರಜತ್ನ ಬಾಯಿಗೇ ಚೈತ್ರ ಕುಂದಾಪುರ, ಬಾಯಿ ಮುಚ್ಚಿಸಿದ ರೀತಿ.. ಸೇರಿಗೆ ಸವ್ವಾಸೇರು ಎಂಬಂತಿತ್ತು.. ಈ ಇಬ್ಬರ ನಡುವಿನ ಕಾಳಗ.. ಮೊದಲೇ ಚೈತ್ರ ಬಾಯಿಬಡುಕಿ.. ಯಾರಿಗೆ ಏನ್ ಹೇಳ್ತಾರೆ.. ಯಾರ ಜೊತೆ ಏನ್ ಮಾತಾಡ್ತಾರೆ ಎಂಬುದು ಎಷ್ಟೋ ಸಲ ಚೈತ್ರಂಗೇ ಗೊತ್ತಿರಲ್ಲ.. ಅದ್ರೆ ಚೈತ್ರ ಉಸ್ತುವಾರಿ ಆಗಿದ್ದಾಗ ರಜತ್ ಸರಿಯಾಗೆ ತಗ್ಲೆಕ್ಕೊಂಡು, ಕಡೆಗೆ ಸಾರಿ ಕೇಳುವಂತಾಗಿಬಿಟ್ಟಿದೆ.. ಹೇಗೆ ರಜತ್ ನಾನೇ ಬೇರೆ ನನ್ ಸ್ಟೈಲೇ ಬೇರೆ ಎಂಬಂತೆ ಇರ್ತಾರೋ ಹಾಗೆಯೇ ಇರುವ ಮತ್ತೊಬ್ಬ ಸ್ಪರ್ಧಿ ಅಂದ್ರೆ ಅದು ಚೈತ್ರ.. ಅಂತ ಚೈತ್ರ ಜೊತೆಗೆ ಜಗಳವಾಡಿ ಹೊಡೆಯೋಕೆ ಹೋದ ರಜತ್ ಗೆ ಚೈತ್ರ ಸರಿಯಾಗೇ ಪಾಠ ಕಲಿಸಿದ್ರು ಅಂತ ವೀಕ್ಷಕರು ಖುಷಿಯಾಗಿದ್ದಾರೆ.. ಆದ್ರೆ ಈ ರಜತ್, ಚೈತ್ರ ಜೊತೆಗಿನ ಜಗಳದ ನಂತ್ರ ಸ್ವಲ್ಪ ಸುಧಾರಿಸಿದಂತೆ ಕಂಡ್ರೂ ಯಾವಾಗ ಮತ್ತೆ ಬಾಯಿ ಬೊಂಬಾಯಿ ಮಾಡ್ತಾರೋ ಗೊತ್ತಿಲ್ಲ.. ಹೀಗಾಗಿ ಬಿಗ್ ಬಾಸ್ ಅಥವಾ ಕಿಚ್ಚ ಸುದೀಪ್ ಅವರು ಒಮ್ಮೆ ಆದರೂ ರಜತ್ ಗೆ ಸೀರಿಯಸ್ ಅಗಿ ವಾರ್ನಿಂಗ್ ಕೊಡಬೇಕು. ಮನೋರಂಜನೆ ನೆಪದಲ್ಲಿ ಇಲ್ಲದಸಲ್ಲದ ರೀತಿ ಮಾತನಾಡುತ್ತಾ ತೀರಾ ಅನಾಗರಿಕ ರೀತಿಯಲ್ಲಿ ವರ್ತಿಸುವ ರಜತ್ ನಿಜಕ್ಕೂ ಬಿಗ್ ಬಾಸ್ ನಂತಹ ಫ್ಯಾಮಿಲಿ ಆಡಿಯೆನ್ಸ್ ನೋಡುವ ಶೋದಲ್ಲಿ ಇರಬೇಕಾ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡೋದಿಕ್ಕೆ ಶುರು ವಾಗಿದೆ.