ಬಿಗ್ ಬಾಸ್ ಗೆ ಹೊಸ್ ಆಂಕರ್? – ರಮೇಶ್ ಅರವಿಂದ್ ಮಾತಿನ ಅರ್ಥವೇನು?
ದೊಡ್ಮನೆಯಲ್ಲಿ ಇಷ್ಟೊಂದು ಟ್ವಿಸ್ಟ್?

ಬಿಗ್ ಬಾಸ್ ಸೀಸನ್ 11 ಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ತಿಂಗಳ ಕೊನೆಯಲ್ಲಿ ಶೋ ಆರಂಭವಾಗಲಿದೆ. ಇದೀಗ ಕಲರ್ಸ್ ಕನ್ನಡ ಬಿಗ್ ಬಾಸ್ ಪ್ರೋಮೋ ರಿಲೀಸ್ ಮಾಡಿದೆ.. ಈ ಪ್ರೋಮೋದಲ್ಲೂ ವೀಕ್ಷಕರ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.. ವೀಕ್ಷಕರನ್ನ ಗೊಂದಲಕ್ಕೆ ಒಳಗಾಗುವಂತೆ ಮಾಡಿ.. ಹೊಸ ಅಧ್ಯಾಯ, ಹೊಸ ದಶಕ ಎಂದು ಪ್ರೋಮೋದಲ್ಲಿ ಹೇಳಲಾಗಿದ್ದು, ಹೊಸ ನಿರೂಪಕರು ಬರಲಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನ ಕಾಡ ತೊಡಗಿದೆ. ಈ ಬೆನ್ನಲ್ಲೇ ರಮೇಶ್ ಅರವಿಂದ್ ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ.. ಹಾಗಾದರೆ ದೊಡ್ಮನೆಗೆ ಹೊಸ ನಿರೂಪಕರು ಬರುತ್ತಾರಾ? ಯಾವಾಗ ‘ಬಿಗ್ ಬಾಸ್’ ಶುರು ಆಗತ್ತೆ? ರಮೇಶ್ ಅರವಿಂದ್ ಹೇಳಿದ್ದೇನು? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸಚಿನ್ರನ್ನೇ ಸೈಡ್ ಹೊಡೆದ ಕಿಂಗ್ – ಟ್ರೋಫಿ, ಸೆಂಚುರಿ, ಸರಣಿಶ್ರೇಷ್ಠ ರೆಕಾರ್ಡ್ಸ್
ಅದೊಂದು ಪ್ರಶ್ನೆ ಬಿಗ್ ಬಾಸ್ ವೀಕ್ಷಕರನ್ನ ಕಳೆದ ಕೆಲ ದಿನಗಳಿಂದ ಕಾಡ್ತಾ ಇದೆ.. ಕಿಚ್ಚ ಸುದೀಪ್ ಬಿಗ್ ಬಾಸ್ ಹೋಸ್ಟ್ ಮಾಡ್ತಾ? ಇಲ್ವಾ? ಅನ್ನೋದು.. ಈ ಪ್ರಶ್ನೆಗೆ ಉತ್ತರ ಇನ್ನಾದ್ರೂ ಸಿಗುತ್ತಾ ಅಂತಾ ಕಾದು ಕುಳಿತಿದ್ದ ವೀಕ್ಷಕರಿಗೆ ಮತ್ತೆ ನಿರಾಸೆಯಾಗಿದೆ. ಮತ್ತೆ ಕಲರ್ಸ್ ಕನ್ನಡ ವಾಹಿನಿ ಸುದೀಪ್ ಅಭಿಮಾನಿಗಳ ತಲೆಗೆ ಹುಳಬಿಟ್ಟಿದೆ.
ಹೌದು ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳ 28 ರಿಂದ 11 ನೇ ಬಿಗ್ ಬಾಸ್ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ 23 ಕ್ಕೆ ಬಿಗ್ ಬಾಸ್ ತಂಡ ಪ್ರೆಸ್ ಮೀಟ್ ಹಮ್ಮಿಕೊಂಡಿದೆ. ಸುದೀಪ್ ನೇತೃತ್ವದಲ್ಲೇ ಬಿಗ್ ಬಾಸ್ ಪ್ರೆಸ್ ಮೀಟ್ ನಡೆಯುತ್ತಿದೆ. ಈಗಾಗಲೇ ಸೀಸನ್ 11 ರ ಲೋಗೋ ರಿವೀಲ್ ಆಗಿದೆ. ಇದೀಗ ಕಲರ್ಸ್ ಕನ್ನಡ ಪ್ರೋಮೋ ಹೊರತಂದಿದೆ. ಈ ಪ್ರೋಮೋ ಮೂಲಕ ನೋಡುಗರನ್ನು ಅಚ್ಚರಿಗೆ ದೂಡಿದೆ.
ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಬಿಗ್‌ಬಾಸ್ ಲೋಗೋ ಅನಾವರಣ ಮಾಡಿತ್ತು. ನೀರು ಮತ್ತು ಬೆಂಕಿಯ ಕಾಂಬಿನೇಷನ್‌ನ ಬಿಗ್ ಬಾಸ್ ಕಣ್ಣು ಎಲ್ಲರ ಗಮನ ಸೆಳೆದಿತ್ತು. ಈ ನಡುವೆಯೇ ಹಾಗೆ ಶೇರ್ ಮಾಡಿದ ಪೋಸ್ಟ್‌ನಲ್ಲಿ #KichchaSudeep ಎಂಬ ಹ್ಯಾಶ್‌ಟ್ಯಾಗ್ ಅನ್ನ ಏಕಾಏಕಿ ರಿಮೂವ್ ಮಾಡಲಾಗಿತ್ತು. ಇದನ್ನು ಗಮನಿಸಿದ ಕೆಲವರು, ಈ ಸಲದ ಶೋನಲ್ಲಿ ಸುದೀಪ್ ನಿರೂಪಣೆ ಮಾಡಲ್ವಾ? ಎಂದೇ ಕಾಮೆಂಟ್ ಹಾಕಿದ್ದರು. ಅದಾದ್ಮೇಲೆ ಕಿಚ್ಚ ಸುದೀಪ್ ಬದಲು ರಿಷಭ್ ಶೆಟ್ಟಿ, ರಮೇಶ್ ಅರವಿಂದ್, ಗೋಲ್ಡನ್ ಸ್ಟಾರ್ ಗಣೇಶ್ ಈ ಮೂವರಲ್ಲಿ ಒಬ್ರು ಕಾರ್ಯಕ್ರಮ ನಡೆಸಿಕೊಡುತ್ತಾರೆ ಅನ್ನೋ ಮಾತು ಕೇಳಿಬಂದಿತ್ತು. ಇದೀಗ ಹೊಸ ಪ್ರೋಮೋದಲ್ಲಿ ಈ ಗಾಸಿಪ್ ಗೆ ಮತ್ತಷ್ಟು ಒಗ್ಗರಣೆ ಹಾಕಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಒಂದಷ್ಟು ವಿಶೇಷತೆಗಳಿವೆ. ಜನತೆ ಮನೆಗಳಲ್ಲಿ, ಮೊಬೈಲ್‌ಗಳಲ್ಲಿ, ಎಲ್ಲೆಂದರಲ್ಲಿ ಬಿಗ್‌ಬಾಸ್ ನೋಡುವ ದೃಶ್ಯವನ್ನು ಚಿತ್ರಿಸಲಾಗಿದೆ. ಟಿವಿ ಪರದೆ ಮೇಲೆ “ಇದು ಬಿಗ್ ಬಾಸ್.. ನಮಸ್ಕಾರ ಕರ್ನಾಟಕ. ಹೇಗಿದ್ದೀರಾ? 10 ವರ್ಷಗಳಿಂದ ನೋಡ್ತಾನೇ ಇದ್ದೀರಾ. ಇದು ದೊಡ್ಡದಾಗ್ತಾನೇ ಇದೆ. ಈ ಬಾರಿ ಇನ್ನೂ ದೊಡ್ಡದು ಕಾದಿದೆ. ಯಾಕಂದ್ರೆ ಇದು ಹೊಸ ದಶಕ.. ಹೊಸ ಆಟ… ಹೊಸ ಅಧ್ಯಾಯ.. ಎಂದು ಬಿಗ್ ಬಾಸ್ ಹೇಳಿದೆ. ಈ ವೇಳೆ ಬಾಲಕನೊಬ್ಬ ಹಾಗಾದ್ರೆ ಆಂಕರ್ ಹೊಸಬ್ರಾ? ಎಂದು ಪ್ರಶ್ನೆ ಮಾಡಿದ್ದಾನೆ. ಆಗ ಬಿಗ್ ಬಾಸ್ ಗಹಗಹಿಸಿ ನಕ್ಕಿದ್ದಾರೆ. ಅಷ್ಟೇ ಅಲ್ಲದೇ ಈ ಪ್ರೋಮೋದಲ್ಲೂ ಕಿಚ್ಚ ಸುದೀಪ್ ವಾಯ್ಸ್ ಕೇಳಿಸಿಲ್ಲ.. ಈ ಮೂಲಕ ನಿರೂಪಕರು ಯಾರು ಎಂಬುದನ್ನು ವಾಹಿನಿ ರಿವೀಲ್ ಮಾಡದೆ, ಮತ್ತಷ್ಟು ಕುತೂಹಲವನ್ನು ಉಳಿಸಿಕೊಂಡಿದೆ.
ಇನ್ನು ನಟ ರಮೇಶ್ ಅರವಿಂದ್ ಹರಿದಾಡ್ತಿರೋ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೌದು, ಬಿಗ್ ಬಾಸ್ ಹೋಸ್ಟ್ ಬಗ್ಗೆ ರಮೇಶ್ ಅರವಿಂದ್ ಹೆಸರು ಕೇಳಿ ಬರುತ್ತಿದೆ. ಆದರೆ, ಈ ಒಂದು ವೈರಲ್ ನ್ಯೂಸ್ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಟ್ ಮಾಡಿದ್ದಾರೆ. ಬಿಗ್ ಬಾಸ್ ಚೆನ್ನಾಗಿಯೇ ಹೋಗುತ್ತಿದೆ. ಸುದೀಪ್ ಚೆನ್ನಾಗಿಯೇ ಹೋಸ್ಟ್ ಮಾಡುತ್ತಿದ್ದಾರೆ. ಅಲ್ಲಿ ಏನೂ ತೊಂದರೆ ಇಲ್ಲ. ಎಲ್ಲವೂ ಚೆನ್ನಾಗಿಯೇ ಇದೆ. ಹಾಗಾಗಿದ್ದಾಗ ನಾನು ಯಾಕೆ..? ಅನ್ನೋ ಅರ್ಥದಲ್ಲಿಯೇ ರಮೇಶ್ ಅರವಿಂದ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದನ್ನ ಕೇಳಿದ್ರೆ ರಮೇಶ್ ಅರವಿಂದ್ ಬಿಗ್ ಬಾಸ್ ಹೋಸ್ಟ್ ಮಾಡೋದಿಲ್ಲ ಅನ್ನೋದು ಕನ್ಫರ್ಮ್ ಆದಂತೆ. ಹೀಗಾಗಿ ಕಿಚ್ಚನ ಜಾಗ ಸೇಫ್ ಅಂತಾ ಹೇಳಲಾಗ್ತಿದೆ.
ಇನ್ನು ಕಳೆದ ಸೀಸನ್ 10 ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಕಾರ್ತಿಕ್ ಮಹೇಶ್ ವಿಜೇತರಾಗಿ ಹೊರಹೊಮ್ಮಿದರೆ, ಡ್ರೋಣ್ ಪ್ರತಾಪ್ ರನ್ನರ್‌ಅಪ್ ಆಗಿದ್ದರು. ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ಅವರ ನಡುವಿನ ಕಿತ್ತಾಟ, ರಂಪಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೆಲ್ಲದರ ಫಲವಾಗಿ ಒಟ್ಟಾರೆ ಈ ಹಿಂದಿನ ಎಲ್ಲ ಸೀಸನ್‌ಗಳಿಗೆ ಹೋಲಿಕೆ ಮಾಡಿದರೆ, ಅತಿ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡಿತ್ತು ಹತ್ತನೇ ಸೀಸನ್. ಇದೀಗ ಅದೇ ಉತ್ಸಾಹದಲ್ಲಿ ಸೀಸನ್ 11 ಶುರುವಾಗಲಿದೆ. ಈ ಸಲ ಏನೆಲ್ಲ ವಿಶೇಷಗಳಿರಲಿವೆ ಎಂಬುದು ಇನ್ನಷ್ಟೇ ಗೊತ್ತಾಗಲಿದೆ.
ಇನ್ನು ಈ ಬಾರಿ ದೊಡ್ಮನೆಗೆ ಬರುವ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ ಸ್ಟಾರ್‌ಗಳ ಜತೆಗೆ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ದಂಡೇ ಇರಲಿದೆ. ಜತೆಗೆ ಈಗಾಗಲೇ ಎರಡನೇ ಪ್ರೋಮೋ ಶೂಟಿಂಗ್ ಸಹ ಕೊನೇ ಹಂತದಲ್ಲಿದ್ದು, ಇನ್ನೊಂದು ವಾರದಲ್ಲಿ ಆ ಪ್ರೋಮೋ ಹೊರಬರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಬಿಗ್ ಬಾಸ್ ಸೀಸನ್ 11 ಬಾರಿ ಕುತೂಹಲ ಕೆರಳಿಸಿದೆ.. ಕಲರ್ಸ್ ಕನ್ನಡ ಕೂಡ ಯಾವುದೇ ಗುಟ್ಟು ಬಿಟ್ಟುಕೊಡದೇ ವೀಕ್ಷಕರ ಮನಸ್ಸಿನಲ್ಲಿ ಕುತೂಹಲದ ಬೀಜವನ್ನು ಬಿತ್ತುತ್ತಾ ಬಂದಿದೆ.