ಬಿಗ್‌ಬಾಸ್ ಕನ್ನಡದಿಂದ ಕಿಚ್ಚ ಔಟ್? – ಸುದೀಪ್ ಸ್ಥಾನಕ್ಕೆ ಇಬ್ಬರಿಗೆ ಮಣೆ?
ದೊಡ್ಮನೆಯಲ್ಲಿ ಇದೆಂತಾ ನಿರ್ಧಾರ?

100 ದಿನ.. ಪ್ರತಿ ದಿನ ಜಗಳ.. ಕಿತ್ತಾಟ.. ಇದು ಬಿಗ್‌ಬಾಸ್ ಮನೆಯಲ್ಲಿ ಕಂಡು ಬರೋ ದೃಶ್ಯ.. ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆ ವಿಶೇಷವಾಗಿ ಏನೂ ಹೇಳ್ಬೇಕಿಲ್ಲ.. ಯಾವುದೇ ಭಾಷೆ ಇರಲಿ, ಬಿಗ್ ಬಾಸ್ ರಿಯಾಲಿಟಿ ಶೋ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಪ್ರತಿ ಬಾರಿಯ ಸೀಸನ್‌ಗೂ ಏನಾದರೂ ವಿವಾದವಾಗಿ ದೇಶಾದ್ಯಂತ ಭಾರೀ ಸುದ್ದಿಯಲ್ಲಿರುವುದು ಈ ರಿಯಾಲಿಟಿ ಶೋ ವಿಶೇಷ. ಬಿಗ್‌ಬಾಸ್ ಕನ್ನಡ ಸೀಸನ್ 10 ಭಾರಿ ವಿವಾದಗಳಿಂದಲೇ ಸುದ್ದಿಯಾಗಿದ್ದು.. ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 11 ಶ್ರೀಘ್ರದಲ್ಲೇ ಆರಂಭವಾಗಲಿದೆ.. ಇದಕ್ಕಾಗಿ ಸಿದ್ದತೆ ಕೂಡ ನಡೆಯುತ್ತಿದೆ.. ಇವೆಲ್ಲದ್ರ ಮಧ್ಯೆ ಶಾಕಿಂಗ್ ಸುದ್ದಿಯೊಂದು ಭಾರಿ ಸದ್ದು ಮಾಡ್ತಾ ಇದೆ.. ಇನ್ಮುಂದೆ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ಹೋಸ್ಟ್ ಮಾಡಲ್ಲ.. ದೊಡ್ಮನೆಯಿಂದ ಔಟ್ ಆಗಿದ್ದಾರೆ ಅಂತಾ.. ಇದೀಗ ಕಿಚ್ಚನ ಸ್ಥಾನಕ್ಕೆ ಇಬ್ಬರು ಸ್ಟಾರ್ ನಟರಿಗೆ ಮಣೆ ಹಾಕಲಾಗಿದೆ ಎಂದು ಹೇಳಲಾಗುತ್ತೆ.. ಅಷ್ಟಕ್ಕೂ ಕಿಚ್ಚ ಬಿಗ್‌ಬಾಸ್ ನಿಂದ ಹೊರ ಬಂದಿದ್ದೇಕೆ? ಬಿಗ್ ಬಾಸ್ ಅನ್ನ ಇನ್ನು ಯಾರು ಹೋಸ್ಟ್ ಮಾಡ್ತಾರೆ? ಆ ಇಬ್ಬರು ನಟರು ಯಾರು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ನಾಗ ಚೈತನ್ಯ 2ನೇ ಮದುವೆ – ಶೋಭಿತಾ ಜೊತೆ ದಿಢೀರ್ ನಿಶ್ಚಿತಾರ್ಥ
ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು.. ಬರೀ ವಿವಾದಗಳಿಂದಲೇ ಈ ಶೋ ಸುದ್ದಿಯಾಗುತ್ತಿರುತ್ತೆ. ಬಿಗ್‌ಬಾಸ್ ಕನ್ನಡ ಸೀಸನ್ 10 ಈ ಬಾರಿ ಭಾರಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು.. ವರ್ತೂರ್ ಸಂತೋಷ್ ಜೈಲಿಗೆ ಹೋಗಿ ಬಂದಿದ್ರು.. ತನಿಷಾ ಕೂಡ ಕಾನೂನು ಸಂಕಷ್ಟ ಎದುರಿಸಿದ್ರು.. ಸಂಗೀತಾ ಡ್ರೋನ್ ಆಸ್ಪತ್ರೆ ಸೇರುವಂತೆ ಆಗಿತ್ತು.. ಎಲ್ಲರ ಕಣ್ಣಿಗೆ ಕೆಟ್ಟವನಾಗಿದ್ದ ಪ್ರತಾಪ್ ಒಳ್ಳೆ ಹೆಸ್ರು ಗಳಿಸಿದ್ರು.. ಹೀಗೆ ಬಿಗ್‌ಬಾಸ್ ದೊಡ್ಡ ಮಟ್ಟದಲ್ಲೇ ಸೌಂಡ್ ಮಾಡಿತ್ತು.. ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 11 ಗೆ ಕೌಂಟ್ ಡೌನ್ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಅಕ್ಟೋಬರ್ ತಿಂಗಳಿನಿಂದ ಆರಂಭವಾಗಲಿದೆ ಎಂದು ಹೇಳಲಾಗ್ತಿದೆ. ಹೀಗಾಗಿ ತೆರೆಮರೆಯಲ್ಲಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ನಡೀತಿದೆ ಎನ್ನಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಂಭಾವಿತರ ಪಟ್ಟಿ ಕೂಡ ವೈರಲ್ ಆಗುತ್ತಿದೆ. ಹೀಗಾಗಿ ಸೀಸನ್ 11ರ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಶುರುವಾಗಿದೆ. ಈ ನಡುವೆ, ಈ ಸಲದ ಬಿಗ್‌ಬಾಸ್‌ನಿಂದ ಕಿಚ್ಚ ಸುದೀಪ್ ಹೊರನಡೆಯಲಿದ್ದಾರೆ. ಅವರ ಜಾಗಕ್ಕೆ ಬೇರೆ ನಿರೂಪಕರ ಆಗಮನವೂ ಆಗಲಿದೆ ಎಂಬ ಮಾತೊಂದು ಕಿರುತೆರೆ ವಲಯದಲ್ಲಿ ಕೇಳಿಬರುತ್ತಿದೆ.
ಹೌದು, ಅಕ್ಟೋಬರ್‌ನಲ್ಲಿ ಬಿಗ್‌ಬಾಸ್ ಸೀಸನ್ 11 ಶುರುವಾಗುವ ಸಾಧ್ಯತೆ ಇದೆ. ತೆರೆಹಿಂದಿನ ಕೆಲಸಗಳಿಗೆ ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಚಾಲನೆ ನೀಡಿದ್ದು, ಮನೆ ಅಂದಗಾಣಿಸುವ ಕೆಲಸವನ್ನು ಆರಂಭಿಸಿದೆ. ಹೀಗಿರುವಾಗಲೇ ಸುದೀಪ್ ಈ ಸಲದ ಹೋಸ್ಟ್‌ನಿಂದ ಹಿಂದೆ ಸರಿಯಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ವಾಹಿನಿ ಕಡೆಯಿಂದಲೇ ಇಂಥದ್ದೊಂದು ಪ್ಲಾನ್ ನಡೆಯುತ್ತಿದೆಯಂತೆ. ಬೇರೆ ಬೇರೆ ಭಾಷೆಗಳ ಬಿಗ್‌ಬಾಸ್‌ಗಳಲ್ಲಿ ನಿರೂಪಕರ ಬದಲಾವಣೆ ಆಗಿದೆ. ಕನ್ನಡದಲ್ಲಿಯೂ ಏಕೆ ಆ ಬದಲಾವಣೆ ತರಬಾರದು ಎನ್ನಲಾಗುತ್ತಿದೆ.
ಬಿಗ್‌ಬಾಸ್ ಆರಂಭದಿಂದ ಇಲ್ಲಿಯವರೆಗೂ ಅಂದರೆ 10 ಸೀಸನ್‌ಗಳನ್ನು ಕಿಚ್ಚ ಸುದೀಪ್ ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ. ತಮ್ಮ ಸ್ಟೈಲಿಷ್ ಮಾತುಗಾರಿಕೆಯಿಂದಲೇ ಆ ವೇದಿಕೆಯ ಘನತೆ ಹೆಚ್ಚಿಸಿದ್ದರು. ಆದರೆ ಈ ಬಾರಿ ಸುದೀಪ್ ಬಾಸ್ ಕನ್ನಡ ಸೀಸನ್ 11ರ ನಿರೂಪಣೆಯಿಂದ ಹಿಂದೆ ಸರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಗಾಸಿಪ್ ಬಗ್ಗೆ ನೋಡುವುದಾದರೆ, ನಿರೂಪಕರ ಬದಲಾವಣೆಯೊಂದೇ ಮೇಲ್ನೋಟಕ್ಕೆ ಕಾಣಿಸದು. ಜತೆಗೆ ನಿರೂಪಣೆಗೆ ಸುದೀಪ್ ಪಡೆಯುವ ದೊಡ್ಡ ಮೊತ್ತದ ಸಂಭಾವನೆ ಸೇರಿ ಇನ್ನೂ ಹಲವು ಕಾರಣಗಳಿವೆ ಎನ್ನಲಾಗುತ್ತಿದೆ. ಇನ್ನು ಸುದೀಪ್ ಅವರು ಕೇವಲ 10 ಸೀಸನ್ ಗೆ ಮಾತ್ರ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದ ಮುಗಿದಿದೆ. ಹೀಗಾಗಿ ಈ ಶೋ ನಲ್ಲಿ ಮುಂದುವರಿಯಲ್ಲ ಅನ್ನೋ ಮಾತು ಕೇಳಿಬಂದಿದೆ. ಆದರೆ, ಸದ್ಯಕ್ಕೆ ಈ ಬಗ್ಗೆ ವಾಹಿನಿಯಾಗಲಿ, ಸ್ವತಃ ಸುದೀಪ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಹಾಗಾಗಿ ಸೀಸನ್ 11ರ ಸಾರಥ್ಯವನ್ನು ಸುದೀಪ್ ವಹಿಸಿಕೊಳ್ಳುವುದಿಲ್ಲ ಎಂಬದನ್ನೂ ಹೇಳಲು ಸಾಧ್ಯವಿಲ್ಲ. ಈ ನಡುವೆ ಈ ಬದಲಾವಣೆ ಚರ್ಚೆಯೂ ನಡೆದಿಲ್ಲ ಎಂಬುದನ್ನೂ ಅಲ್ಲಗೆಳೆಯುವಂತಿಲ್ಲ. ಹಾಗಾದರೆ, ಸುದೀಪ್ ಬಿಟ್ಟರೆ, ಮತ್ಯಾರು ಆ ಸ್ಥಾನಕ್ಕೆ ಬರಬಹುದು ಎನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ. ಇದೀಗ ಸುದೀಪ್ ಸ್ಥಾನ ತುಂಬಲು ಇಬ್ಬರು ಸ್ಟಾರ್ ನಟರಿಗೆ ಮಣೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಸುದೀಪ್ ಒಂದು ವೇಳೆ ಈ ಶೋನಿಂದ ಹಿಂದೆ ಸರಿದರೆ, ಅವರ ಸ್ಥಾನವನ್ನು ತುಂಬಲು ಕನ್ನಡದ ಇಬ್ಬರು ನಟರ ಹೆಸರುಗಳು ಕೇಳಿಬರುತ್ತಿವೆ. ಆ ಪೈಕಿ ಈಗಾಗಲೇ ಹಲವು ಶೋಗಳನ್ನು ನಡೆಸಿಕೊಟ್ಟ ನಟ, ನಿರೂಪಕ ರಮೇಶ್ ಅರವಿಂದ್ ಬಿಗ್ ಬಾಸ್ ಶೋ ನಿರೂಪಣೆ ಮಾಡಿದರೂ ಅಚ್ಚರಿಯಿಲ್ಲ. ಇನ್ನೊಂದೆಡೆ ರಿಷಬ್ ಶೆಟ್ಟಿ ಹೆಸರು ಕೇಳಿಬಂದಿದೆಯಾದರೂ, ಈ ವರೆಗೂ ಅವರ ನಿರೂಪಣೆ ಹೇಗಿರಲಿದೆ ಎಂಬುದಕ್ಕೆ ಉತ್ತರವಿಲ್ಲ. ಒಟ್ಟಾರೆ, ಸೀಸನ್ 11 ಒಂದಷ್ಟು ಹೊಸತನದ ಜತೆಗೆ ಆಗಮಿಸುವುದಂತೂ ಪಕ್ಕಾ.