ಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಟ್ವಿಸ್ಟ್‌ – ದೊಡ್ಮನೆಗೆ ಬಂದ ಮುಸುಕುಧಾರಿಗಳು ಯಾರು?

ಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಟ್ವಿಸ್ಟ್‌ – ದೊಡ್ಮನೆಗೆ ಬಂದ ಮುಸುಕುಧಾರಿಗಳು ಯಾರು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ನಲ್ಲಿ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಮನೆಗೆ ಒಂದಷ್ಟು ಮುಸುಕುಧಾರಿಗಳು ಎಂಟ್ರಿಕೊಟ್ಟಿದ್ದಾರೆ. ಇದ್ರಿಂದಾಗಿ ಸ್ಪರ್ಧಿಗಳೆಲ್ಲಾ ಆತಂಕಗೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 11ರ ಹೊಸ ಅಧ್ಯಾಯಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ: ENGನಲ್ಲಿ ಜನ್ಮ.. PAKನಲ್ಲಿ ಸತ್ತ ಟೆಸ್ಟ್ – ಡಬಲ್, ತ್ರಿಬಲ್ ಸೆಂಚುರಿ.. 823 ರನ್ !

ಎಮರ್ಜೆನ್ಸಿ ಸೈರನ್ ಆನ್ ಆಗುತ್ತಿದ್ದಂತೆ ಬಿಗ್‍‍ಬಾಸ್ ಮನೆಗೆ ಮುಸುಕುಧಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿದ್ದ ಸ್ಪರ್ಧಿಗಳು ಕಿರುಚಾಡಿಕೊಂಡು ಫುಲ್ ಗಾಬರಿ ಯಾಗಿದ್ದಾರೆ. ಕ್ರೇನ್ ಇಂದ ಬಂದ ಮುಸುಕುಧಾರಿಗಳು ಇಡೀ ನರಕದ ಮನೆಯನ್ನು ಪೀಸ್, ಪೀಸ್ ಮಾಡಿದ್ದಾರೆ. ಇದನ್ನ ನೋಡಿದ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಏನೋ ಪನಿಶ್‌ ಮೆಂಟ್ ಕಾದಿದೆ ಗುರು ಎಂದು ಅಂದುಕೊಂಡಿದ್ದಾರೆ. ಆಗ ಬಿಗ್ ಬಾಸ್ 11ನೇ ಸೀಸನ್‌ನಲ್ಲಿ ನೀವೆಲ್ಲರೂ 2 ವಾರ ಜೀವಿಸಿದ್ದೀರಿ. ಇಲ್ಲಿನ ಪ್ರತಿ ಕ್ಷಣವನ್ನು ಅನುಭವಿಸಿದ್ದೀರಿ ಎಂದು ಹೊಸ ಅಧ್ಯಾಯಕ್ಕೆ ಹೊಸ ಕಿಚ್ಚು ಹಚ್ಚಿದ್ದಾರೆ.

ನರಕದ ಮನೆಯನ್ನೇ ಒಡೆದು ಹಾಕಿರುವುದರಿಂದ ಬಿಗ್ ಬಾಸ್ ಮನೆಯ ಆಟದ ಶೈಲಿ ಈಗ ಬದಲಾಗಿದೆ. ಇದಕ್ಕೆ 2 ಕಾರಣಗಳಿದೆ. ಒಂದು 2ನೇ ವಾರದ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಬ್ಲೈಂಡ್ ವಿಂಡೋ ಹಾಕಿದ್ರು ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿ ಒಳಗೆ ಹೋಗಿ ಬಂದಿದ್ದಾರೆ.

ಮತ್ತೊಂದು ನರಕದಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆ ಆಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಬಂದಿತ್ತು. ಈ ಬಗ್ಗೆ ರಾಮನಗರ ಎಸ್​ಪಿಗೆ ಮಹಿಳಾ ಪತ್ರ ಬರೆದಿದ್ದು ಬಿಗ್​​ಬಾಸ್​​ ಮನೆಯನ್ನ ಪರಿಶೀಲನೆ‌ ಮಾಡಿ ವರದಿ ಕೊಡುವಂತೆ ಸೂಚನೆ ನೀಡಿತ್ತು. ಇದಕ್ಕಾಗಿ 5 ದಿನದ ಡೆಡ್‌ಲೈನ್ ಕೊಡಲಾಗಿತ್ತು. ಮಹಿಳಾ‌‌ ಆಯೋಗ ಎಂಟ್ರಿಯಾದ ಬೆನ್ನಲ್ಲೇ ಬಿಗ್ ಬಾಸ್ ಮನೆಯಲ್ಲಿದ್ದ ನರಕವನ್ನು ಡೆಮಾಲಿಷ್ ಮಾಡಲಾಗಿದೆ. ಇಂದು ರಾತ್ರಿ ಪ್ರಸಾರ ಆಗಲಿರುವ ಎಪಿಸೋಡ್​​ನಲ್ಲಿ ನರಕದ ಬೇಲಿ ತೆರವಾಗಿದ್ದು ವೀಕೆಂಡ್‌ನಲ್ಲಿ ಎಲ್ಲರೂ ಬಿಗ್ ಶಾಕ್ ಕಾದಿದೆ.

Shwetha M

Leave a Reply

Your email address will not be published. Required fields are marked *