ಬಿಗ್‌ ಬಾಸ್‌ ನಲ್ಲಿ 3 ಜೋಡಿ ಹಕ್ಕಿ – ಅನು – ಧರ್ಮ ಮತ್ತಿನ್ಯಾರು?
ಲವ್‌ ಸ್ಪಾಟ್‌ ಆಯ್ತಾ ದೊಡ್ಮನೆ?

ಬಿಗ್‌ ಬಾಸ್‌ ನಲ್ಲಿ 3 ಜೋಡಿ ಹಕ್ಕಿ – ಅನು – ಧರ್ಮ ಮತ್ತಿನ್ಯಾರು?ಲವ್‌ ಸ್ಪಾಟ್‌ ಆಯ್ತಾ ದೊಡ್ಮನೆ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಭಾರಿ ಕುತೂಹಲ ಮೂಡಿಸಿದೆ. ದೊಡ್ಮನೆಯಲ್ಲಿ ಯಾರಿಗೆ.. ಯಾವಾಗಾ.. ಯಾರ್ ಮೇಲೆ ಲವ್‌ ಆಗುತ್ತೆ ಅಂತಾ ಹೇಳೋದಿಕ್ಕೆ ಸಾಧ್ಯ ಇಲ್ಲ. ಹಿಂದಿನ ಸೀಸನ್‌ ನಲ್ಲೂ ದೊಡ್ಮನೆಗೆ ಬಂದು ಸ್ಪರ್ಧಿಗಳು ಲವ್‌ ನಲ್ಲಿ ಬಿದ್ದಿದ್ದು ಇದೆ.. ಈ ಸೀಸನ್‌ನಲ್ಲೂ ಲವ್‌ ಬರ್ಡ್ಸ್‌ ಆಟ ಜೋರಾಗಿದೆ.. ಅಷ್ಟಕ್ಕೂ ಯಾರ್ಯಾರ ಮಧ್ಯೆ ಪ್ರೀತಿ ಹುಟ್ಟಿದೆ.. ಅನುಷಾ ಧರ್ಮ ಮಧ್ಯೆ ಮತ್ತೆ ಪ್ರೀತಿ ಚಿಗುರಿದ್ಯಾ? ಐಶ್ವರ್ಯ ಶಿಶಿರ್‌ ಲವ್‌ ಸ್ಟೇಟಸ್‌ ಏನು? ಭವ್ಯ, ತ್ರಿವಿಕ್ರಮ್‌ ಪ್ರೀತಿ ಕಂಟೆಂಟ್‌ಗೋಸ್ಕರನಾ? ಈ ಬಗ್ಗೆ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಮೋಕ್ಷಿತಾ ಅಸಲಿ ಮುಖ ರಿವೀಲ್!‌ – ಸೈಲೆಂಟ್‌.. ವೈಲೆಂಟ್‌.. ಗೇಮ್‌ ಪ್ಲ್ಯಾನ್‌!!

ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಈವರೆಗೆ ಸಾಕಷ್ಟು ಪ್ರೀತಿಗಳು ಹುಟ್ಟಿಕೊಂಡಿವೆ. ಈ ಪೈಕಿ ಕೆಲವು ಯಶಸ್ಸು ಕಂಡಿವೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮಧ್ಯೆ ಲವ್ ಆಗಿದ್ದೂ ಬಿಗ್ ಬಾಸ್ ಮನೆಯಲ್ಲಿ. ಅವರು ಮದುವೆ ಆಗಿ ಈಗ ವಿಚ್ಛೇದನ ಕೂಡ ಪಡೆದಿದ್ದಾರೆ. ಇನ್ನು ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಮಧ್ಯೆ ಪ್ರೀತಿ ಮೂಡಿದ್ದು ದೊಡ್ಮನೆಯಲ್ಲಿ.. ಇಬ್ಬರೂ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎಂಬ ಸುದ್ದಿಯಿದೆ. ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಪ್ರೀತಿ ಚಿಗುರಿದೆ ಅಂತಾ ವೀಕ್ಷಕರೇ ಪತ್ತೆ ಹಚ್ಚಿದ್ದಾರೆ.. ಸೋಶಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಜೋರಾಗೇ ಚರ್ಚೆಯಾಗ್ತಿದೆ.. ಇದೀಗ ಮೂರು ಜೋಡಿಗಳ ಮಧ್ಯೆ ಪ್ರೀತಿ ಚಿಗುರಿದೆ ಅಂತಾ ಹೇಳಲಾಗ್ತಿದೆ.

ಹೌದು, ಬಿಗ್‌ ಬಾಸ್‌ ಮನೆಯಲ್ಲಿ ಮೊದಲನೇ ಜೋಡಿ ಅಂದ್ರೆ ಅನುಷಾ ಹಾಗೂ ಧರ್ಮ ಜೋಡಿ.. ಬಿಗ್‌ ಬಾಸ್‌ ಸೀಸನ್‌ ಆರಂಭದಲ್ಲಿಯೇ ಕಿಚ್ಚಸುದೀಪ್‌ ಒಟ್ಟಿಗೆ ದೊಡ್ಮನೆಗೆ ಕಳುಹಿಸಿಕೊಟ್ಟಿದ್ರು.. ಆದ್ರೆ ಆರಂಭದಲ್ಲಿ ಧರ್ಮ ಜೊತೆ ಐಶ್ವರ್ಯ ಕ್ಲೋಸ್‌ ಆಗಲು ಹೋದ್ರು.. ಈ ಹೊತ್ತಲ್ಲೇ ಅನುಷಾ ಹಾಗೂ ಧರ್ಮ ಪ್ರೀತಿ ವಿಚಾರ ಗೊತ್ತಾಗಿದೆ. ಅನುಷಾ ಹಾಗೂ ಧರ್ಮ ಅವರ ಹಳೇ ಲವ್‌ ಸ್ಟೋರಿ ರಿವೀಲ್‌ ಆಗಿತ್ತು.. ಕೆಲ ಕಾಲ ಈ ಜೋಡಿ ಪ್ರೀತಿ ಮಾಡ್ತಾ ಇದ್ರು.. ಬಳಿಕ ಬ್ರೇಕ್‌ ಅಪ್‌ ಮಾಡಿಕೊಂಡ್ರು ಅಂತಾ.. ಅದಾದ್ಮೇಲೆ ಅವರಿಬ್ಬರು ಒಟ್ಟಿಗೆ ಓಡಾಡಿದ್ದ ಫೋಟೋ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದೆ. ಇನ್ನು ಕಳೆದ ವಾರ ಕ್ಯಾಪ್ಟನ್ಸಿ ಟಾಸ್ಕ್‌ ವೇಳೆ ಅನುಷಾ ಬಿದ್ದು ಗಾಯ ಮಾಡಿಕೊಂಡಾಗಲೂ ಧರ್ಮ ತುಂಬಾ ಕೇರ್‌ ತೆಗೆದುಕೊಂಡಿದ್ದರು.. ಇದರ ವಿಡಿಯೋ ಕ್ಲಿಪ್ಸ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಇದೀಗ ಧರ್ಮ ಅನುಷಾ ಮತ್ತೆ ಪ್ಯಾಚ್‌ಅಪ್‌ ಮಾಡಿಕೊಂಡ್ರಾ.. ಈ ಜೋಡಿ ಆದಷ್ಟು ಬೇಗ ಒಂದಾಗಲಿ ಅಂತಾ ಪ್ಯಾನ್ಸ್‌ ಹೇಳ್ತಾ ಇದ್ದಾರೆ..

ಇನ್ನು ಬಿಗ್‌ ಬಾಸ್‌ ನಲ್ಲಿ ಶಿಶಿರ್‌ ಹಾಗೂ ಐಶ್ವರ್ಯ ಮಧ್ಯೆ ಪ್ರೀತಿ ಚಿಗುರಿದ್ಯಾ ಅನ್ನೊ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.. ಐಶ್ವರ್ಯ ಕೆಲ ದಿನಗಳಿಂದ ಶಿಶಿರ್‌ ಜತೆ ಕ್ಲೋಸ್‌ ಆಗಿರುವಂತೆ ಕಾಣ್ತಿದೆ. ಶಿಶಿರ್‌ ಬೆಚ್ಚನೆಯ ಅಪ್ಪುಗೆಯಲ್ಲಿ ಐಶು ಬಂಧಿಯಾಗಿದ್ರು.. ಈ ವೇಳೆ ಐಶು ನಾಚಿ ನೀರಾಗಿದ್ರು.. ಅದಾದ್ಮೇಲೆ ಐಶ್ವರ್ಯ ಶಿಶಿರ್‌ ಜೊತೆ ಹೆಚ್ಚು ಕ್ಲೋಸ್‌ ಆಗ್ತಿದ್ದಾರೆ. ಅವರೊಂದಿಗೆ ಹೆಚ್ಚು ಕಾಲ ಕಳಿತಾ ಇದ್ದಾರೆ.. ಇದೀಗ ಇವರಿಬ್ಬರ ಮಧ್ಯೆ ಕೂಡ ಪ್ರೇಮಾಂಕುರ ಆಗ್ತಿದ್ಯಾ ಅನ್ನೋ ಡೌಟ್‌ ವೀಕ್ಷಕರನ್ನ ಕಾಡ್ತಿದೆ..

ಇನ್ನು ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಅವರು ಲವ್‌ ನಲ್ಲಿದ್ದಾರಾ ಅನ್ನೋ ಪ್ರಶ್ನೆ ಕೂಡ ಕಾಡ್ತಾ ಇದೆ.. ಈ ಬಗ್ಗೆ ರಂಜಿತ್  ಅನುಮಾನ ವ್ಯಕ್ತಪಡಿಸಿ  ಮಾನಸ ಜೊತೆಗೆ ಹೇಳಿಕೊಂಡಿದ್ದರು. ಈ ಬಗ್ಗೆ ತುಕಾಲಿ ಸಂತು ಕೂಡ ಮಾನಸ ಬಳಿ ಫೋನ್‌ ಮಾಡಿದ್ದಾಗ ಮಾತನಾಡಿದ್ರು..  ಅವನಲ್ಲಿ ಲವ್‌ ಮಾಡ್ತಿದ್ದಾನೆ.. ಕಣ್ಣೊಳಗೆ ಲವ್‌ ಮಾಡ್ತವ್ನ, ಮನಸೊಳಗೆ ಲವ್ ಮಾಡ್ತವ್ನ. ಲವ್‌ ಮಾಡಿದ್ರೆ ಅದನಾದ್ರೂ ಪರದೆ ಮೇಲೆ ತೋರಿಸೋಕೆ ಹೇಳು ಅಂತಾ ಸಂತು ಹೇಳಿದ್ರು.. ಅದಕ್ಕೆ ಏನು ಗೊತ್ತಿಲ್ಲಪ್ಪ ಸೀಕ್ರೆಟ್‌ ಆಗಿ ಅವರಿಬ್ಬರ ಮಧ್ಯೆ ಏನೋ ನಡಿತಿದೆ. ಗುಸು ಗುಸು ಪಿಸ ಪಿಸ ಅಂತಾರೆ ಅಂತಾ ಮಾಸನ ಹೇಳಿದ್ರು..  ಅದಕ್ಕೆ ಅವರಿಬ್ಬರ ಲವ್ ಸಕ್ಸಸ್ ಆಗ್ಲಿ. ಹೋಗಿ ತ್ರಿವಿಕ್ರಮ್‌ ಗೆ ಹೇಳು. ಅರ್ಥ ಆಯ್ತಾ ಅಂತಾ ತುಕಾಲಿ ಸಂತು ಮಾನಸಗೆ ಹೇಳಿದ್ರು.. ಈಗೀಗ ಭವ್ಯ ಗೌಡ ಕೂಡ ತ್ರಿವಿಕ್ರಮ್‌ ಗೆ ಹತ್ತಿರವಾಗುತ್ತಿದ್ದಾರೆ ಅಂತಾ ಹೇಳಲಾಗ್ತಿದೆ.. ಆದ್ರೆ ಇದು ಕಂಟೆಂಟ್‌ ಗೋಸ್ಕರ ಮಾಡ್ತಿದ್ದಾರಾ ಅನ್ನೋದು ಗೊತ್ತಿಲ್ಲ. ಒಟ್ಟಾರೆ ಇದೀಗ ಬಿಗ್‌ ಬಾಸ್‌ ಮನೆ ಲವ್‌ ಸ್ಪಾಟ್‌ ಆಗಿದ್ಯಾ ಅನ್ನೋ ಅನುಮಾನ ಮೂಡಿದೆ.

Shwetha M

Leave a Reply

Your email address will not be published. Required fields are marked *