ಕಿಚ್ಚನ ವಿರುದ್ಧ ಒಳಗೊಳಗೇ ಸಂಚು – ಸುದೀಪ್ ಸಿಟ್ಟಿಗೆ ಇದೇ ಕಾರಣ
ಪೈಲ್ವಾನ್ ಮುಂದೆ ಸರೆಂಡರ್

ಕಿಚ್ಚನ ವಿರುದ್ಧ ಒಳಗೊಳಗೇ ಸಂಚು – ಸುದೀಪ್ ಸಿಟ್ಟಿಗೆ ಇದೇ ಕಾರಣಪೈಲ್ವಾನ್ ಮುಂದೆ ಸರೆಂಡರ್

ಬಿಗ್ ಬಾಸ್ ನಿಂದ ಕಿಚ್ಚ ಸುದೀಪ್ ಹೊರ ನಡೆಯೋದಾಗಿ ಅನೌನ್ಸ್ ಮಾಡಿದ್ರು.. ಈ ಬೆನ್ನಲ್ಲೇ ಮಾಜಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ರು.. ಇದು ಹತ್ತು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು.. ಇದ್ರಿಂದಾಗಿ ಫ್ಯಾನ್ಸ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ರು. ಇದೀಗ ಸುದೀಪ್ ಬಿಗ್ ಬಾಸ್ ಹೋಸ್ಟ್ ನಿಂದ ಹೊರ ಬರಲು ಕಾರಣ ಏನು ಅನ್ನೋದು ರಿವೀಲ್ ಆಗಿದೆ. ಅಷ್ಟಕ್ಕೂ ಆಗಿದ್ದೇನು? ಚಾನೆಲ್ ಹಾಗೂ ಸುದೀಪ್ ನಡುವೆ ನಡೆದಿರೋ ಮಾತುಕತೆ ಏನು? ಬಿಗ್ ಬಾಸ್ ಶೋ ಅಲ್ಲದೇ ಕಲರ್ಸ್ ಕನ್ನಡಕ್ಕೂ ಗುಡ್ಬೈ ಹೇಳಿದ್ರಾ ಸುದೀಪ್? ಇವೆಲ್ಲದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನಟ ಸಲ್ಮಾನ್‌ ಖಾನ್‌ ಟಾರ್ಗೆಟ್‌ – ಜಸ್ಟ್ ಮಿಸ್‌.. ಸಲ್ಮಾನ್‌ಗೆ ಹೈ ಸೆಕ್ಯೂರಿಟಿ  

ಬಿಗ್ ಬಾಸ್ ಕನ್ನಡ ಅಂತಾ ಹೇಳಿದಾಗ ಥಟ್ ಅಂತಾ ನೆನಪಾಗೋದೇ ಕಿಚ್ಚ ಸುದೀಪ್..  ಸುದೀಪ್ ಗೆ ಅವರದ್ದೇ ಆದ ಒಂದು ಸ್ಟೈಲ್ ಇದೆ. ಆ ಗತ್ತು, ಗಾಂಭೀರ್ಯ ಅವರಿಗೆ ಮಾತ್ರ ಬರೋದು. ಪಂಚಾಯ್ತಿ ಕಟ್ಟೆಯಲ್ಲಿ ಅಷ್ಟು ಜನರ ತಪ್ಪನ್ನು ಅರ್ಥ ಮಾಡಿಸೋದು, ನೋವಾಗದಂತೆ ನೋಡಿಕೊಳ್ಳೋದು.  ಕಾಲೆಳೆಯುವುದು ಅಷ್ಟು ಸುಲಭವಾಗಿ, ಇಷ್ಟು ಪರ್ಫೆಕ್ಟ್ ಆಗಿ ಯಾರಿಗೂ ಬರಲು ಸಾಧ್ಯವಿಲ್ಲ. ಬಾದ್ ಶಾ ಸಮಾಜದ ನಡುವೆ ಇರುವುದು ಹಾಗೇ. ಆದರೆ ಇನ್ನು ಮುಂದಿನ ಸೀಸನ್ ನಿಂದ ಕಿಚ್ಚನಿಲ್ಲದೇ ಬಿಗ್ ಬಾಸ್ ಶೋ ನಡೆಯಲಿದೆ. ಇದೇ ಕೊನೆಯ ಸೀಸನ್ ಅಂತಾ ಸುದೀಪ್ ಹೇಳೇ ಬಿಟ್ಟಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗೋ ಮುನ್ನವೇ ಈ ಬಾರಿ ಕಿಚ್ಚ ಸುದೀಪ್ ಹೋಸ್ಟ್ ಮಾಡಲ್ಲ.. ಹೊಸ ಆಂಕರ್ ಬರ್ತಾರೆ ಅನ್ನೋ ಗಾಸಿಪ್ ಹರಿದಾಡಿತ್ತು. ಆದ್ರೆ ಈ ಬಾರಿಯೂ ನಾನೇ ಶೋ ನಡೆಸಿಕೊಡುತ್ತೇನೆ.. ಚಾನೆಲ್ ಬೇರೆ ಅಂಕರ್ ಹುಡುಕೋವರೆಗೂ ನಾನೇ ಹೋಸ್ಟ್ ಮಾಡ್ತೇನೆ ಅಂತಾ ಹೇಳಿದ್ರು.. ಆದ್ರೆ ಮೊನ್ನೆ ಇದ್ದಕ್ಕಿದ್ದಂತೆ ಸುದೀಪ್ ಇದೇ ತನ್ನ ಕೊನೆಯ ಶೋ ಅಂತಾ ಅಧಿಕೃತವಾಗಿ ಅನೌನ್ಸ್ ಮಾಡಿದ್ರು. ಇದ್ರ ಬೆನ್ನಲ್ಲೇ ರೂಪೇಶ್ ರಾಜಣ್ಣ ಶಾಕಿಂಗ್ ಪೋಸ್ಟ್ ಅನ್ನ ಹಾಕಿದ್ರು.. ಅವರ ಎಕ್ಸ್ ಖಾತೆಯಲ್ಲಿ ಒಬ್ಬರನ್ನ ಟ್ಯಾಗ್ ಮಾಡಿ ಕೆಲವರ ವಿರುದ್ಧ ಕಿಡಿಕಾರಿದ್ರು.. ಇದ್ರ ಬೆನ್ನಲ್ಲೇ ಕಿಚ್ಚ ಸುದೀಪ್ ಬಿಗ್ಬಾಸ್ ನಿಂದ ಹೊರಬರಲು ಕಾರಣ ಏನು ಅನ್ನೋದು ರಿವೀಲ್ ಆಗಿದೆ. ಬಾದ್ ಷಾ ಮನೆಯಿಂದ ಹೊರ ಬರಲು ಕಲರ್ಸ್ ಕನ್ನಡ ವಾಹಿನಿಯೇ ಕಾರಣ ಅಂತಾ ಹೇಳಲಾಗ್ತಿದೆ.

ಹೌದು, ಬಾದ್ ಷಾ ಹಾಗೂ ಕಲರ್ಸ್ ಕನ್ನಡದ ಮಧ್ಯೆ ಒಂದು ದೊಡ್ಡ ಒಪ್ಪಂದ ಆಗಿತ್ತಂತೆ.. ಮ್ಯಾಕ್ಸ್ ಸಿನಿಮಾ ರೈಟ್ಸ್ ಅನ್ನ ಚಾನೆಲ್ ಗೆ ಸೇಲ್ ಮಾಡ್ಬೇಕು ಅನ್ನೋದು ಕಿಚ್ಚನ ಆಸೆ ಆಗಿತ್ತಂತೆ. ಇದಕ್ಕಾಗಿ ದೊಡ್ಡ ಮೊತ್ತವನ್ನ ಕೂಡ ಸುದೀಪ್ ಕೇಳಿದ್ರಂತೆ. ಆದ್ರೆ ಕಲರ್ಸ್ ಸಿನಿಮಾ ರೈಟ್ಸ್ ಅನ್ನ ಪಡೆದುಕೊಳ್ಳಲು ಕನ್ನಡ ಪರ್ಚೇಸ್ ಮಾಡೋಕೆ ಒಪ್ಪಿಲ್ಲ,. ಹೀಗಾಗಿ ಸುದೀಪ್ ಶೋ ನಡೆಸೋದಿಲ್ಲ ಅಂತಾ ಹೇಳಿದ್ರಂತೆ. ಹೀಗಾಗಿ ಸುದೀಪ್ ಬದಲಿಗೆ ಬೇರೆ ಹೋಸ್ಟ್ ಅನ್ನ ಹುಡಕಾಡಲು  ಕಲರ್ಸ್ ಶುರು ಮಾಡಿತ್ತು. ರಿಷಭ್ ಶೆಟ್ಟಿನ ಟೀಮ್  ಕಾಂಟ್ಯಾಕ್ಟ್ ಮಾಡಿತ್ತಂತೆ.. ಆದ್ರೆ ಕಾಂತಾರ ಸಿನಿಮಾದಲ್ಲಿ ಬ್ಯೂಸಿಯಾಗಿದ್ರು.. ಹೀಗಾಗಿ ಶೋ ನಡೆಸಲು ಕಾಂತಾರ ಕಿಂಗ್ ಒಪ್ಪಿಲ್ಲ ಅಂತೆ. ಹೀಗಾಗಿ ಬೇರೆ ದಾರಿ ಇಲ್ಲ ಅಂತಾ ಸುದೀಪ್ ಡಿಮ್ಯಾಂಡ್ಸ್ ಅನ್ನ ವಾಹಿನಿ ಒಪ್ಪಿಕೊಂಡಿತ್ತಂತೆ.. ಸುದೀಪ್ ಸಿನಿಮಾನ  ನಾವೇ ಪರ್ಚೇಸ್ ಮಾಡ್ತೀವಿ ಅಂತಾ ಹೇಳಲಾಗಿತ್ತಂತೆ. ಆಮೇಲೆ ಓಕೆ ಅಂದ ಸುದೀಪ್ ವಿರುದ್ಧ  ಮತ್ತೆ ವಾಹಿನಿ ಉಲ್ಟಾ ಹೊಡೆದಿದ್ಯಂತೆ.. ತುಂಬಾನೇ ಕಡಿಮೆ‌ ದುಡ್ಡಿಗೆ ಸಿನಿಮಾ ರೈಟ್ಸ್ ಪರ್ಚೇಸ್ ಮಾಡೋದು ಅಂತಾ ವಾಹಿನಿ ಹೇಳಿತ್ತಂತೆ. ಇದ್ರಿಂದಾಗಿ ಬಾದ್ ಷಾ ಸಿಟ್ಟಾಗಿದ್ದಾರೆ. ಶೋ ಬಿಡಲು ಇದೂ ಕಾರಣ ಅಂತಾ ಹೇಳಲಾಗ್ತಿದೆ.

ಇನ್ನು ಮತ್ತೊಂದು ವಿಚಾರ ಕೂಡ ಸುದೀಪ್ ಕೆಂಗಣ್ಣಿಗೆ ಗುರಿಯಾಗಿತ್ತು. ಅದೂ ರೇಟಿಂಗ್ ವಿಚಾರ. ಹೌದು, ಬಿಗ್ ಬಾಸ್ ಗೆ ಅದರದ್ದೇ ಆದ ವೀಕ್ಷಕರ ಬಳಗ ಇದೆ. ಹೀಗಾಗಿ ಸಾಕಷ್ಟು ನಿರೀಕ್ಷೆ ಕೂಡ ಇರುತ್ತೆ. ಆದ್ರೆ ಬಿಗ್ ಬಾಸ್ ಲಾಂಚ್ ದಿನ ರೇಟಿಂಗ್ ಕೂಡ ಕಡಿಮೆ ಇತ್ತಂತೆ. ಜೀ ಕನ್ನಡದ ಡಿಕೆಡಿ ಕಾರ್ಯಕ್ರಮದ ರೇಟಿಂಗ್ ಜಾಸ್ತಿ ಇತ್ತು. ವೀಕೆಂಡ್ ಶೋನಲ್ಲೂ ಬಿಗ್ ಬಾಸ್ ಶೋ ನ ಬೀಟ್ ಮಾಡಕ್ಕಾಗಿಲ್ಲ. ಹೀಗಾಗಿ ರೇಟಿಂಗ್ ಡೌನ್ ಆಗಿರೋದನ್ನ ಸುದೀಪ್ ತಲೆಗೆ ಕಟ್ಟುವಂತಾ ಕೆಲಸ ಮಾಡಲಾಗಿತ್ತಂತೆ. ಇದು ಕಿಚ್ಚನ ಕಿವಿಗೆ ಬಿದ್ದಿದೆ. ಹೀಗಾಗಿ ಕಿಚ್ಚ ಶೊ ನಿಂದ ಹೊರ ಬರಲು ಇದೂ ಕಾರಣ ಅಂತಾ ಹೇಳಲಾಗ್ತಿದೆ.

ಇನ್ನು ಈ ಬಾರಿ ಬಿಗ್ ಬಾಸ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಕಳೆದ ಸಂಚಿಕೆಗಳಲ್ಲಿ ಒಂದು ದಿನ ಏನೆಲ್ಲಾ ಆಯ್ತು ಅಂತಾ ಒಂದೇ ಸಂಚಿಕೆಯಲ್ಲಿ ತೋರಿಸಲಾಗ್ತಿತ್ತು.. ಆದ್ರೆ ಈ ಬಾರಿ ಒಂದು ಸಂಚಿಕೆಯಲ್ಲಿ ಒಂದು ದಿನದ ಅರ್ಧ ಆಕ್ಟಿವಿಟಿಸ್ ತೋರಿಸಲಾಗ್ತಿತ್ತು. ಇನ್ನರ್ಧವನ್ನ ಮತ್ತೊಂದು ಸಂಚಿಕೆಯಲ್ಲಿ ಒಂದರ್ಧ ಗಂಟೆ ತೋರಿಸಲಾಗ್ತಿದೆ. ಇನ್ನು ವೀಕೆಂಡ್ ಸಂಚಿಕೆಯಲ್ಲೂ ಸಾಕಷ್ಟು ಬದಲಾವಣೆ ಮಾಡಲಾಗಿತ್ತು. ಹೌದು, ವೀಕೆಂಡ್ ಸಂಚಿಕೆಯ ಆರಂಭದಲ್ಲಿ ಅರ್ಧಗಂಟೆ ಬರೀ ಬಿಗ್ ಬಾಸ್ ಮನೆಯೊಳಗೆ ಏನ್ ನಡಿತಾ ಇದೆ, ಸ್ವರ್ಧಿಗಳು ಏನ್ ಮಾಡ್ತಾ ಇದ್ದಾರೆ ಅಂತಾ ಮಾತ್ರ ತೋರಿಸಲಾಗುತ್ತಿದೆ. ಅದಾದ್ಮೇಲೆ ಕಿಚ್ಚನ ಪಂಚಾಯ್ತಿ, ಸೂಪರ್ ಸಂಡೇ ವಿಥ್ ಬಾದ್ ಷಾ ಸುದೀಪ್ ಅನ್ನ ತೋರಿಸಲಾಗ್ತಿತ್ತು. ಈ ಮೂಲಕ ಕಿಚ್ಚ ಬರೋದ್ರಿಂದ ಏನೂ ಆಗಲ್ಲ.. ಟಿ ಆರ್ ಪಿ ಕೂಡ ಜಾಸ್ತಿ ಆಗಲ್ಲ ಅಂತ ವಾಹಿನಿ ಪರೋಕ್ಷವಾಗಿ ತೋರಿಸಿಕೊಟ್ಟಿದೆ ಅಂತಾ ಹೇಳಲಾಗ್ತಿದೆ.

ಇನ್ನು ಈ ಎಲ್ಲಾ ವಿಚಾರ ಗೊತ್ತಾಗುತ್ತಿದ್ದಂತೆ ಸುದೀಪ್ ಚಾನೆಲ್ ವಿರುದ್ಧ ಸಿಟ್ಟಾಗಿದ್ದಾರೆ ಅಂತಾ ಹೇಳಲಾಗ್ತಿದೆ. ತಾನು ಬಿಗ್ ಸ್ಕ್ರೀನ್ ನಿಂದಲೇ ಸೆಲೆಬ್ರಿಟಿಯಾಗಿದ್ದು, ಸ್ಮಾಲ್ ಸ್ಕ್ರೀನ್ ನಿಂದ ಅಲ್ಲ.. ನಿಮ್ಮಿಂದ  ಸಿನಿಮಾಕ್ಕೆ ಲಾಭ ಆಗದೇ ಇದ್ದ ಮೇಲೆ ನಾನ್ಯಾಕೆ ಶೋ ನಡೆಸಿಕೊಡಬೇಕು ಅಂತಾ ಸಿಟ್ಟು ಹೊರಹಾಕಿದ್ದಾರೆ ಎಂದು ಹೇಳಲಾಗ್ತಿದೆ.

ಇನ್ನು ರೂಪೇಶ್ ರಾಜಣ್ಣ ಮತ್ತೊಂದು ಪೋಸ್ಟ್ ಅನ್ನ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಒಪ್ಪಿದ ಬಿಗ್ ಬಾಸ್ ಆಯೋಜಕರು.. ಧನ್ಯವಾದಗಳು ತಮಗೂ ಹಾಗೂ ಕನ್ನಡದ ಪರವಾಗಿ ನಿಂತ ಕಿಚ್ಚ ಸುದೀಪ್ ಅವರಿಗೆ.  ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. ನಾನು ಸಹ ನಾಡಿನ ಪರವಾದ ವಿಚಾರವಾಗಿ ಧ್ವನಿ ಎತ್ತಿದ್ದೇನೆ.  ಬದಲಾವಣೆ ನೀವೇ ನೋಡುವಿರಿ ಅಂತಾ ರೂಪೇಶ್ ರಾಜಣ್ಣ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಭಾರಿ ಕುತೂಹಲ ಮೂಡಿಸಿದೆ. ಮುಂದೇನಾಗುತ್ತೆ ಅಂತಾ ಫ್ಯಾನ್ಸ್ ಕೂಡ ಕಾಯ್ತಾ ಇದ್ದಾರೆ.

ಇವೆಲ್ಲದರ ನಡುವೆ ರೂಪೇಶ್‌ ರಾಜಣ್ಣ ಫೇಸ್‌ ಬುಕ್‌ ನಲ್ಲಿ ಲೈವ್‌ ಬಂದು, ಏನೆಲ್ಲಾ ನಡೆದಿದೆ ಅನ್ನೋದನ್ನ ವಿವರಿಸಿದ್ದಾರೆ. ಈ ಮೊದಲು ‘ಬಿಗ್ ಬಾಸ್​’ನಲ್ಲಿ ಯಾರಾದರೂ ಇಂಗ್ಲಿಷ್ ಮಾತನಾಡಿದರೆ ಅದನ್ನು ಬಿಗ್ ಬಾಸ್ ಸಹಿಸುತ್ತಿರಲಿಲ್ಲ. ಆಗ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಹಾಕುತ್ತಿದ್ದರು. ಆದರೆ, ಈಗ ಈ ಪದ್ಧತಿ ಅಳಿದು ಹೋಗಿದೆ. ಇದಕ್ಕೆ ಬಿಗ್ ಬಾಸ್ ಆಯೋಜಕರೇ ಕಾರಣ ಎಂದು ಹೇಳಿದ್ದಾರೆ. ಹೀಗಾಗಿ ಇದನ್ನು ಸುದೀಪ್ ಖಂಡಿಸಿದ್ದಾರೆ. ‘ಹೆಚ್ಚು ಇಂಗ್ಲಿಷ್ ಬಳಕೆ ಮಾಡಿದಾಗ ಅದನ್ನು ಪ್ರಶ್ನೆ ಮಾಡಿ’ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಒಪ್ಪಿಲ್ಲ.

ಈ ಮೊದಲು ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್ ಇತ್ತು. ಸ್ವರ್ಗದ ಮಂದಿ ಹಾಯಾಗಿ ಕುಳಿತಿದ್ದರೆ ನರಕದವರು ನಿಂತೇ ಇದ್ದರು. ಹೀಗಾಗಿ, ಅವರಿಗೆ ಕೂರೂಕೆ ಅವಕಾಶ ಕೊಡಿ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅಲ್ಲದೆ, ನರಕವಾಸಿಗಳಿಗೆ ಟಾಯ್ಲೆಟ್ ಬಳಕೆಗೆ ಯಾವುದೇ ಷರತ್ತುಗಳನ್ನು ಹಾಕದಂತೆಯೂ ಕೋರಿದ್ದರು. ಇದಿಷ್ಟೇ ಅಲ್ಲದೇ ಎ23 ರಮ್ಮಿ  ಆ್ಯಪ್​ ಕೂಡ ‘ಬಿಗ್ ಬಾಸ್​’ನ ಸ್ಪಾನ್ಸರ್​ಗಳಲ್ಲಿ ಒಂದಾಗಿದೆ. ಈ ಹೆಸರನ್ನು ತೆಗೆದುಕೊಳ್ಳೋಕೆ ಇರಿಸುಮುರುಸಾಗುತ್ತಿದೆ ಎಂದು ಸುದೀಪ್ ಹೇಳಿದ್ದರು. ಇದನ್ನು ಸ್ವಲ್ಪ ಅವಾಯ್ಡ್ ಮಾಡಿ ಎಂದು ಸುದೀಪ್ ಕೋರಿದ್ದರು. ಆದರೆ, ಆಯೋಜಕರು ಒಪ್ಪಿಲ್ಲ. ಇದು ಕೂಡ ಸುದೀಪ್ ಬಿಗ್ ಬಾಸ್ ತೊರೆಯಲು ನಿರ್ಧರಿಸೋದಿಕ್ಕೆ ಕಾರಣ ಅಂತಾ ರೂಪೇಶ್‌ ರಾಜಣ್ಣ ಹೇಳಿದ್ದಾರೆ.

ಒಟ್ಟಾರೆ ಸುದೀಪ್‌ ಬಿಗ್‌ ಬಾಸ್‌ ತೊರೆಯುತ್ತಿರೋದು ಅಭಿಮಾನಿಗಳಿಗೆ ತುಂಬಾ ಬೇಸರ ಮೂಡಿಸಿದೆ. ಸುದೀಪ್‌ ಇಲ್ಲದ ಬಿಗ್‌ ಬಾಸ್‌ ನಾವು ನೋಡೋದಿಲ್ಲ ಅಂತಾ ಅನೇಕ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಸುದೀಪ್‌ ಬಿಗ್‌ ಬಾಸ್‌ ತೊರೆಯುತ್ತಿರುವುದು ಒಳ್ಳೆಯದೇ ಆಯ್ತು. ಕನ್ನಡಕ್ಕೆ, ಕನ್ನಡ ನಟರಿಗೆ ಪ್ರಾಮುಖ್ಯತೆ ಕೊಡದೇ ಇರೋ ಜಾಗದಲ್ಲಿ ಸುದೀಪ್‌ ಇರೋದುಬೇಡ ಅಂತಾ ಅಭಿಪ್ರಾಯ ಪಟ್ಟಿದ್ದಾರೆ.

Shwetha M

Leave a Reply

Your email address will not be published. Required fields are marked *