ಹನುಮಂತನ ನಾಮಿನೇಟ್‌ ಮಾಡಿದ ಧನರಾಜ್‌ – ಹನು, ಧನು ಫ್ರೆಂಡ್‌ಶಿಪ್‌ ಕಟ್‌ ಆಯ್ತಾ?

ಹನುಮಂತನ ನಾಮಿನೇಟ್‌ ಮಾಡಿದ ಧನರಾಜ್‌ – ಹನು, ಧನು ಫ್ರೆಂಡ್‌ಶಿಪ್‌ ಕಟ್‌ ಆಯ್ತಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಕೊನೆಯ ಹಂತಕ್ಕೆ ತಲುಪಿದೆ. ಮನೆಯಲ್ಲಿ ಈಗ ನಾಮಿನೇಷನ್‌ ಬಿಸಿ ಹೆಚ್ಚಾಗಿದೆ. ಇದೀಗ ಸ್ಪರ್ಧಿಗಳಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಸಂಬಂಧಗಳನ್ನು ಮರೆತು ಆಡಬೇಕಿದೆ. ಹೀಗಾಗಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದು ಕಾಮನ್ ಆಗಿದೆ. ಇದೀಗ ದೊಡ್ಮನೆಯಲ್ಲಿ ಕುಚುಕು ಗೆಳೆಯರಾಗಿದ್ದ ಹನುಮಂತು ಹಾಗೂ ಧನರಾಜ್‌ ಮಧ್ಯೆ ಮನಸ್ತಾಪ ಉಂಟಾಗಿದ್ಯಾ ಅನ್ನೋ ಅನುಮಾನ ಮೂಡಿದೆ.

ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನ – ಶನಿವಾರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಹೌದು, ಹನುಮಂತು ಹಾಗೂ ಧನ್​ರಾಜ್ ಬಿಗ್​ಬಾಸ್​ನಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿದ್ರು. ಆಟದ ವಿಚಾರಕ್ಕೆ ಬಂದರೆ ಇದು ಎಲ್ಲವನ್ನು ಪಕ್ಕಕ್ಕೆ ಇಡಬೇಕಾಗುತ್ತದೆ. ಇದು ಬಿಗ್​ ಮನೆಯಲ್ಲಿ ಹನುಮಂತು- ಧನ್​ರಾಜ್ ನಡುವೆ ನಿಜವಾಗಿದೆ. ಇಷ್ಟು ದಿನ ಕುಚುಕು ಸ್ನೇಹಿತರಾಗಿದ್ದ ಈ ಇಬ್ಬರು ಸದ್ಯ ಬೇಸರಲ್ಲಿದ್ದಾರೆ. ಈ ಬೇಸರಕ್ಕೆ ಕಾರಣವಾಗಿದ್ದು ನಾಮಿನೇಷನ್‌ ಎಂದು ಹೇಳಬಹುದು.

ಈ ವಾರ ಹನುಮಂತು ಚೆನ್ನಾಗಿ ಆಡಲಿಲ್ಲ ಎಂದು ಧನ್​ರಾಜ್​ ಹೇಳಿ ಸ್ನೇಹಿತನಿಗೆ ಕಳಪೆ ಪಟ್ಟ ಕಟ್ಟಿದ್ದಾರೆ.  ಇದು ಇಬ್ಬರ ನಡುವಿನ ಶತ್ರುತ್ವಕ್ಕೆ ಮೊದಲ ಹೆಜ್ಜೆ ಆಗುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೇ ಪ್ರಾಣ ಸ್ನೇಹಿತರು ಬದ್ಧ ವೈರಿಗಳಾದ್ರೆ ಬಿಗ್​ಬಾಸ್​ ಮನೆಯ ವಾತಾವರಣ ಬದಲಾಣೆ ಆಗಬಹುದು ಎಂದು ವೀಕ್ಷಕರ ಸಂಶಯ ಮೂಡಿದೆ.

ಹನುಮಂತು ವಿರುದ್ಧ ಮಾತನಾಡಿರುವ ಧನ್​ರಾಜ್, ತುಂಬಾ ತಪ್ಪು ಎನ್ನುವ ರೀತಿ ಕಾಣಿಸಿದ್ದು ಹನುಮಂತು. ಹೀಗಾಗಿ ನನ್ನ ಪ್ರಕಾರ ಹನುಮಂತು ಕಳಪೆ ಎಂದು ಹೇಳಿದ್ದಾರೆ. ಇದಕ್ಕೆ ಸೋಫಾದಿಂದ ಎದ್ದೇಳುತ್ತಿದ್ದಂತೆ ಹನುಮಂತು ಥ್ಯಾಂಕ್ಸ್​, ಧನ್ಯವಾದಗಳು ಎಂದು ಹೇಳುತ್ತ.. ನೀವು ಕಳಪೆ ಕೊಟ್ಟಿದ್ದೀರಿ ಎಂದು ಕುಗ್ಗೋದು ಇಲ್ಲ, ಬಗ್ಗೋದಿಲ್ಲ ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ.

ಈ ವಾರ ಹನುಮಂತು ಚೆನ್ನಾಗಿ ಆಡಲಿಲ್ಲ ಎಂದು ಚೈತ್ರಾ, ಮೋಕ್ಷಿತಾ, ಮಂಜು,ರಜತ್, ಗೌತಮಿ ಹೇಳಿದ್ದಾರೆ. ಸ್ವಚ್ಛತೆ ಕುರಿತು ಈ ವಾರ ಟಾಸ್ಕ್ ಇತ್ತು. ಆದರೆ ಇದರಲ್ಲಿ ಹನುಮಂತು ಫೇಲ್ ಆಗಿದ್ದಾರೆ ಎಂದು ಧನ್​ರಾಜ್ ಹೇಳಿರುವುದು ಹನುಮಂತನಿಗೆ ಬರಸಿಡಿಲು ಬಡಿದಂತೆ ಆಗಿದೆ. ಇಬ್ಬರು ಪ್ರಾಣ ಸ್ನೇಹಿತರ ಮಧ್ಯೆ ಬಿರುಕು ಮೂಡಿದಂತೆ ಆಗಿದೆ. ಹನುಮಂತು ಸ್ವಚ್ಛತೆ ಕಾಪಾಡಲಿಲ್ಲ ಎಂದು ಮನೆ ಮಂದಿ ಆರೋಪಿಸಿದ್ದಾರೆ.

Shwetha M