ಮಂಜ, ಗಾನವಿ ಬಾಯಿ ಬೊಂಬಾಯಿ.. BBK ವ್ಯಕ್ತಿತ್ವ ಅಲ್ಲ.. ಬೈಗುಳದಾಟ? – ಫಸ್ಟ್‌ ಟೈಮ್‌ ಬಿಗ್‌ಬಾಸ್‌ ಠುಸ್‌?

ಮಂಜ, ಗಾನವಿ ಬಾಯಿ ಬೊಂಬಾಯಿ.. BBK ವ್ಯಕ್ತಿತ್ವ ಅಲ್ಲ.. ಬೈಗುಳದಾಟ? – ಫಸ್ಟ್‌ ಟೈಮ್‌ ಬಿಗ್‌ಬಾಸ್‌ ಠುಸ್‌?

ಬಿಗ್‌ಬಾಸ್‌ ಕನ್ನಡ ಸೀಸನ್‌ 13.. ಈ ಬಾರಿ ಮನರಂಜನೆಗಿಂತ ಸ್ಪರ್ಧಿಗಳ ನಡುವಿನ ಕಿತ್ತಾಟವೇ ಹೆಚ್ಚಾಗಿದೆ. ಟಾಸ್ಕ್‌ ವಿಚಾರ ಮಾತ್ರವಲ್ಲದೇ, ಪರ್ಸನಲ್‌ ವಿಚಾರಕ್ಕೂ ಒಬ್ಬರನ್ನೊಬ್ಬರು ಟಾರ್ಗೆಟ್‌ ಮಾಡಿ ಜಗಳವಾಡೋದು, ಕೆಟ್ಟ ಪದಗಳಿಂದ ನಿಂದಿಸೋದು ಕಾಮನ್‌ ಆಗಿದೆ. ಅದ್ರಲ್ಲೂ ಗಾನವಿ ಹಾಗೂ ಮಾಡ್ರನ್‌ ಮಹಾಕವಿ ಮಂಜ ದೊಡ್ಮನೆಯಲ್ಲಿ ಜಗಳವೇ ಹೆಚ್ಚು ಹೈಲೈಟ್‌ ಆಗಿದೆ. ಸಣ್ಣ ವಿಚಾರಕ್ಕೂ ಇವರಿಬ್ಬರು ದೊಡ್ಡ ರಂಪಾಟ ಮಾಡೋದು ಕಾಮನ್‌. ಕೆಟ್ಟ ಪದಗಳಿಂದ ಸಹ ಸ್ಪರ್ಧಿಗಳನ್ನ ನಿಂದಿಸುತ್ತಲೇ ಬಂದಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್‌ ಇಬ್ಬರಿಗೂ ಹಲವು ಬಾರಿ ವಾರ್ನ್‌ ಮಾಡಿದ್ರು. ಆದ್ರೂ ಅವರಿಬ್ಬರು ಬದಲಾದಂತೆ ಕಾಣಿಸುತ್ತಿಲ್ಲ. ಇದೀಗ ಗಾನವಿ, ಮಂಜನ ವರ್ತನೆ ವೀಕ್ಷಕರಿಗೂ ಕಿರಿಕಿರಿ ಅನ್ನಿಸುತ್ತಿದೆ. ಎಷ್ಟು ಬುದ್ದಿವಾದ ಹೇಳಿದ್ರೂ ಇವರಿಬ್ಬರು ಬದಲಾಗಲ್ಲ. ಇದು ವ್ಯಕ್ತಿತ್ವದ ಆಟವಲ್ಲ.. ಬೈಗುಳದ ಆಟ.. ಫಸ್ಟ್‌ ಟೈಮ್‌ ಬಿಗ್‌ಬಾಸ್‌ ಶೋ ಠುಸ್‌ ಆಗಿದೆ ಎಂದು ಕಮೆಂಟ್‌ ಮಾಡ್ತಿದ್ದಾರೆ.

ಇದನ್ನೂ ಓದಿ: ಒಂದೇ ದಿನ ಅಪ್ಪ ಮಗನ ಸಿನಿಮಾ ರಿಲೀಸ್ – ಬಾಕ್ಸ್ಆಫೀಸ್‌ನಲ್ಲಿ ಮುಮ್ಮುಟಿ, ದುಲ್ಕರ್ ಮುಖಾಮುಖಿ

ಬಿಗ್‌ಬಾಸ್‌ ಶೋ ಅಂದ್ರೇನೆ ಅದು ವ್ಯಕ್ತಿತ್ವದ ಆಟ. ಇಲ್ಲಿ ದೈಹಿಕ ಬಲಕ್ಕಿಂತ ಹೆಚ್ಚಾಗಿ ಒಬ್ಬ ವ್ಯಕ್ತಿಯ ನಡವಳಿಕೆ, ತಾಳ್ಮೆ ಮತ್ತು ಮಾನಸಿಕ ಸ್ಥೈರ್ಯವೇ ಗೆಲುವನ್ನು ನಿರ್ಧರಿಸುತ್ತದೆ. ಇನ್ನು ವೀಕ್ಷಕರು ಕೂಡ ಮನರಂಜನೆಯನ್ನ ಎಕ್ಸ್ಪೆಕ್ಟ್‌ ಮಾಡ್ತಾರೆ. ಆದ್ರೆ ಬಿಗ್‌ಬಾಸ್‌ ಕನ್ನಡ ಸೀಸನ್‌ 13 ವೀಕ್ಷಕರ ನಿರೀಕ್ಷೆ ಹುಸಿಗೊಳಿಸಿದೆ. ಸೀಸನ್‌ 13ರಲ್ಲಿ ಬರಿ ಕೆಟ್ಟ ಪದಗಳೇ ಕೇಳಿಸುತ್ತಿದೆ. ಅದ್ರಲ್ಲೂ ಮಂಜ ಹಾಗೂ ಮಂಜಿ ಆಟಕ್ಕಿಂತ ರಂಪಾಟವೇ ಹೆಚ್ಚಾಗಿದೆ. ಸಹ ಸ್ಪರ್ಧಿಗಳನ್ನ ಅಶ್ಲೀಲ ಪದಗಳಿಂದ ನಿಂದಿಸಿ  ನಿಯಮ ಉಲ್ಲಂಘನೆ ಮಾಡಿ ಮನೆಯಿಂದ ಹೊರಗೆ ಹೋಗಿದ್ದ ಮಾಡ್ರನ್ ಮಹಾಕವಿ ಮಂಜನನ್ನು ವಾಪಸ್ ಮನೆಯೊಳಗೆ ಕರೆಸಿಕೊಳ್ಳಲಾಗಿದೆ. ಮಂಜ ಬೈದಿದ್ದೇನು ರೆಡ್ ಕಾರ್ಡ್ ತೋರಿಸುವಷ್ಟು ದೊಡ್ಡ ತಪ್ಪಲ್ಲ ಎಂದು ಕ್ಷಮಿಸಿ ಮನೆಯೊಳಗೆ ಕಳುಹಿಸಲಾಗಿತ್ತು. ಕಿಚ್ಚ ಸುದೀಪ್‌ ಕೂಡ ಸಾಕಷ್ಟು ಬುದ್ದಿವಾದ ಹೇಳಿದ್ರು. ಆದ್ರೂ ಕೂಡ ಮಂಜ ತಮ್ಮ ಹಳೇ ಚಾಳಿಯನ್ನು  ಮುಂದುವರೆಸಿದ್ದಾರೆ.

ಹೌದು. ಬಿಗ್ ಬಾಸ್  ಮನೆಯೊಳಗೆ ರೀ-ಎಂಟ್ರಿ ಕೊಡುವ ಮುನ್ನ ಈ ಬಾರಿ ಧಗ ಧಗನೇ.. ಧ್ವಂಸ ಮಾಡಿಬಿಡ್ತೀನಿ ಅಂತೆಲ್ಲಾ ಕಿಚ್ಚ ಸುದೀಪ್‌ ಮುಂದೆ ಮಂಜ ಹೇಳಿದ್ದರು. ಬಿಗ್‌ಬಾಸ್‌ ಮನೆಗೆ ರೀ ಎಂಟ್ರಿ ಕೊಟ್ಟ ಮಂಜ ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸಿಕೊಳ್ತಾರೆ. ಇನ್ಮುಂದೆ ಆದ್ರೂ ಚೆನ್ನಾಗಿ ಆಟ ಆಡ್ತಾರೆ ಅಂತ ವೀಕ್ಷಕರು ಕೂಡ ಅಂದ್ಕೊಂಡಿದ್ರು. ಇನ್ನು ಮಂಜು ಗೇಮ್ ಚೇಂಜರ್ ಆಗಬೇಕು ಅಂತ ಬಹುಶಃ ಬಿಗ್ ಬಾಸ್ ತಂಡ ಬಯಸಿತ್ತೋ ಏನೋ… ಆದ್ರೆ ಮಂಜ ಮತ್ತೆ ತಮ್ಮ ಹಳೇ ಚಾಳಿ ಮುಂದುವರಿಸಿದ್ದಾರೆ. ಯಾರ್‌ ಏನೇ ಹೇಳ್ಲಿ.. ನಾನಿರೋದೇ ಹೀಗೆ ಅನ್ನುವಂತೆ ಮಂಜ ದೊಡ್ಮನೆಯಲ್ಲಿ ಇದ್ದಾರೆ. ಈ ವಾರವಂತೂ ಮಂಜನ ಆರ್ಭಟ ಜೋರಾಗೇ ಇತ್ತು. ಮಹಾರಾಣಿ ಆಯ್ಕೆ ಮಾಡುವ ಟಾಸ್ಕ್‌ನಲ್ಲಿ ಮಂಜ ಗಾನವಿಗೆ ಸಪೋರ್ಟ್‌ ಮಾಡಿದ್ರು. ಗಾನವಿ ಜಗ್ಗಮಮ್ಮಿ ಬಳಿ ಯುವರಾಣಿಯನ್ನ ಗುಣಗಾನ ಮಾಡುವಂತೆ ಹೇಳಿದ್ದಕ್ಕೆ ಅವರು ಒಪ್ಪಿಲ್ಲ. ಇದ್ರಿಂದ ಸಿಟ್ಟಾದ ಗಾನವಿ ಮನಬಂದಂತೆ ಬೈದಿದ್ರು. ಇವರಿಬ್ಬರ ಜಗಳ ಬಿಡಿಸಲು ಬಂದ ಮಂಜನಿಗೆ ಜಗ್ಗ ಮಮ್ಮಿ ನಾವಿಬ್ಬರೂ ಮಾತನಾಡುವಾಗ ಮಧ್ಯದಲ್ಲಿ ಬರಲು ನೀನ್ಯಾರು ಎಂದು ಕೇಳಿದ್ದಕ್ಕೆ  ಸಿಟ್ಟಾದ ಮಂಜ, ನೀನೊಬ್ಬ ವೇಸ್ಟ್ ನನ್ಮಗ, ನೀನು ಮಾಡಿರೋದು ಒಂದೇ ಫಿಲಂ, ಏನು ಕಡಿದು ಕಟ್ಟೆ ಹಾಕಿದ್ದೀಯ? ಗಂಡಸಿನ ತರಹ ನಡೆದುಕೊಳ್ಳಬೇಕು ಎಂದು ಕೂಗಾಡಿದ್ರು. ಇನ್ನು ಈ ಹಿಂದೆಯೂ ಮಂಜ ಯಶಸ್, ಸೌಂದರ್ಯ ಶೆಟ್ಟಿ, ಗಗನ್, ಧನುಷ್, ಕಿರಣ್ ಹಾಗೂ ಹಲವರಿಗೆ ಬಾಯಿ ಮೇಲೆ ಹಿಡಿತವಿಲ್ಲದಂತೆ ಬೈದು ಬಿಗ್ ಬಾಸ್ ಮನೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ರು. ಇದೀಗ ಮತ್ತದೇ ಚಾಳಿಯನ್ನು ಮುಂದುವರೆಸಿದ ಮಂಜ ಸಹ ಸ್ಪರ್ಧಿಗೆ ವೈಯಕ್ತಿಕ ನಿಂದನೆ ಮಾಡಿದ್ದಾರೆ. ನಾಯಿ ಬಾಲಕ್ಕೆ ದಬ್ಬೆ ಕಟ್ಟಿದರೆ ನೆಟ್ಟಗಾಗೊಲ್ಲ ಎನ್ನುವಂತೆ ಮಂಜನಿಗೆ ಮಾತಿನ ಮೇಲೆ ಹಿಡಿತ ಬರಲು ಸಾಧ್ಯವಿಲ್ಲ ಅನ್ನೋದು ಗೊತ್ತಾಗುತ್ತೆ ಎಂದು ವೀಕ್ಷಕರ ಅಭಿಪ್ರಾಯ.

ಇನ್ನು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟ ಗಾನವಿ ಗೌಡ ಹೈಲೈಟ್‌ ಆಗಿರೋದೇ ಕುತಂತ್ರದ ಆಟ, ಬೈಗುಳಗಳಿಂದ. ಈಗಾಗಲೇ ಸಾಕಷ್ಟು ಬಾರಿ ಸಹ-ಸ್ಪರ್ಧಿಗಳ ವಿರುದ್ಧ ಬಳಸಿದ ಆಕ್ಷೇಪಾರ್ಹ ಪದ ಚರ್ಚೆಗೆ ಗ್ರಾಸವಾಗಿತ್ತು. ಇತ್ತೀಚೆಗೆ ಜಗ್ಗ ಮಮ್ಮಿಗೂ ಹೊಡೆಯುವ ಮಟ್ಟಕ್ಕೆ ಹೋಗಿದ್ರು. ಇನ್ನು ಗಗನ್, ತಾಂಡವ್ ರಾಮ್, ಸೌಂದರ್ಯ ಶೆಟ್ಟಿ ಮತ್ತು ಆಸಿಯಾ ಜೊತೆಗೂ ಗಾನವಿ ಮಾತುಗಳು ಹಾಗೂ ಅಹಂಕಾರದ ವರ್ತನೆಗೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ಸಹ ಸ್ಪರ್ಧಿಗಳು ಮಾತ್ರವಲ್ಲದೇ, ವೀಕ್ಷಕರು ಕೂಡ ಕಿಡಿಕಾರಿದ್ದಾರೆ. ಗಾನವಿ ಬಾಯಿ ಬೊಂಬಾಯಿ. ಮಂಜ, ಮಂಜಿಯನ್ನ ಕಂಟ್ರೋಲ್‌ ಮಾಡೋಕೆ ಬಿಗ್‌ಬಾಸ್‌ನಿಂದ ಯಾಕೆ ಸಾಧ್ಯವಿಲ್ಲ. ಫಸ್ಟ್‌ ಟೈಮ್‌ ಬಿಗ್‌ಬಾಸ್‌ ಶೋ ಠುಸ್‌ ಪಟಾಕಿ ಆಗಿದೆ ಎಂದೆಲ್ಲಾ ಕಮೆಂಟ್‌ ಹಾಕ್ತಿದ್ದಾರೆ.

Shwetha M

Leave a Reply

Your email address will not be published. Required fields are marked *