BBKಗೆ ಹೂವಿನ ಬಾಣದ ಹುಡುಗಿ.. CONTROVERSY ಮಾಡಿದ್ರಷ್ಟೇ ಚಾನ್ಸ್?‌ – ದೊಡ್ಮನೆಗೆ ಬರಲು ಈ ತಪ್ಪು ಬೇಡ!

BBKಗೆ ಹೂವಿನ ಬಾಣದ ಹುಡುಗಿ.. CONTROVERSY ಮಾಡಿದ್ರಷ್ಟೇ ಚಾನ್ಸ್?‌ – ದೊಡ್ಮನೆಗೆ ಬರಲು ಈ ತಪ್ಪು ಬೇಡ!

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್‌ಬಾಸ್..‌ ಈ ಬಾರಿ ಕನ್ನಡಿಗ ಹಬ್ಬ ಬೇಗನೆ ಶುರುವಾಗ್ತಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ನಡಿತಾ ಇದೆ. ಇದೀಗ ಈ ಸೀಸನ್‌ನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ದೊಡ್ಮನೆಗೆ ಎಂಟ್ರಿಕೊಡಬಹುದು ಅನ್ನೋ ಚರ್ಚೆ ಶುರುವಾಗಿದೆ. ಅಷ್ಟೇ ಅಲ್ಲ ಕೆಲ ಹೆಸರುಗಳು ಸಖತ್‌ ಸದ್ದು ಮಾಡ್ತಿದೆ.

ಇದನ್ನೂ ಓದಿ: ಅಮ್ಮನ ಮಡಿಲಲ್ಲಿ ಮಲಗಿದ್ದ ಕಂದನ ಮೇಲೆ ಬಿದ್ದ ತೆಂಗಿನಕಾಯಿ – ಪುಟ್ಟ ಮಗುವಿನ ದುರಂತ ಸಾವು

ಬಿಗ್‌ಬಾಸ್‌ ಶೋ ಅಂದ್ರೇನೆ ಅದು ವ್ಯಕ್ತಿತ್ವದ ಆಟ.. ವಿಭಿನ್ನ ಮನಸ್ಥಿತಿಯ, ವಿಭಿನ್ನ ಕ್ಷೇತ್ರದ ಜನರು, ವಿಭಿನ್ನ ಟಾಸ್ಕ್‌ಗಳು.. ಈ ವ್ಯಕ್ತಿತ್ವದ ಆಟದಲ್ಲಿ ಕೊನೆವರೆಗೂ ಉಳಿಯುತ್ತಾರೋ ಅವರೇ ಬಿಗ್‌ಬಾಸ್..‌ ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಮುಗಿದು ನಾಲ್ಕು ತಿಂಗಳು ಕಳೆದಿದೆ. ಆದ್ರೆ ಮೊನ್ನೆ ಮೊನ್ನೆ ಮುಗಿದಂತೆ ಭಾಸವಾಗ್ತಿದೆ. ಸ್ಪರ್ಧಿಗಳ ಹವಾ ಕೂಡ ಕಡಿಮೆಯಾಗಿಲ್ಲ. ಅಷ್ಟರಲ್ಲೇ ಮತ್ತೊಂದು ಸೀಸನ್‌ಗೆ ಸಕಲ ಸಿದ್ಧತೆಗಳು ಆರಂಭ ಆಗಿವೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 13 ಬೇಗನೆ ಶುರುವಾಗ್ತಿದೆ. ಈಗಾಗ್ಲೇ ಲೋಗೋ ರಿವೀಲ್‌ ಮಾಡಲಾಗಿದೆ. ಅಷ್ಟೇ ಅಲ್ಲ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈಗಾಗ್ಲೇ ಕೆಲ ಸ್ಪರ್ಧಿಗಳನ್ನ ಆಯ್ಕೆ ಕೂಡ ಮಾಡಲಾಗಿದೆ ಎನ್ನಲಾಗ್ತಿದೆ.

ಬಿಗ್‌ಬಾಸ್‌ ಶೋ ಅಂದ್ಮೇಲೆ ವಿಭಿನ್ನ ಕಾರ್ಯಕ್ಷೇತ್ರಗಳಿಂದ ಬರುವ ಸ್ಪರ್ಧಿಗಳ ಹೊರತಾಗಿ, ವಿಭಿನ್ನ ಮನಸ್ಥಿತಿಯುಳ್ಳವರು ಬೇಕು. ಹಾಗಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ದೊಡ್ಡದು ಅಂತಾನೇ ಹೇಳಬಹುದು. ಕಾಂಟ್ರವರ್ಸಿ ಮಾಡಿಕೊಂಡವರು, ಜನಪ್ರಿಯ ವ್ಯಕ್ತಿಗಳು, ಸಿನಿಮಾ ಸ್ಟಾರ್ಸ್‌, ರೀಲ್ಸ್‌ ಸ್ಟಾರ್ಸ್ ಸೇರಿದಂತೆ ಸಾಮಾನ್ಯ ಜನರನ್ನ ಕೂಡ ಆಯ್ಕೆ ಮಾಡಲಾಗುತ್ತೆ. ಇದೀಗ ದೊಡ್ಮನೆಗೆ ಎಂಟ್ರಿ ಕೊಡಲಿರುವ ಕೆಲ ಸ್ಪರ್ಧಿಗಳ ಹೆಸರು ಕೇಳಿಬರ್ತಿದೆ. ಬಿಗ್‌ಬಾಸ್‌ ಸೀಸನ್‌ 13ರಲ್ಲಿ ಬ್ರಹ್ಮಗಂಟು ಧಾರಾವಾಹಿ ನಟ ಭರತ್‌ ಬೋಪಣ್ಣ ಸ್ಪರ್ಧಿಸಲಿದ್ದಾರೆ  ಎನ್ನಲಾಗ್ತಿದೆ. ಇನ್ನು ಇವ್ರ ಜೊತೆ ಕನ್ನಡದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಇವ್ರ ಜೊತೆ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಶಾಸಕ ಸಿ.ಪಿ. ಯೋಗೇಶ್ವರ್ ಅವರ ಮಗಳು ನಿಶಾ ಯೋಗೇಶ್ವರ್, ಹಾಗೆಯೇ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ತಪಸ್ವಿ ಪೂಣಚ್ಚ, ಕನ್ನಡದ ಖ್ಯಾತ ಯೂಟ್ಯೂಬರ್ ವರ್ಷಾ ಕಾವೇರಿ, ಯೂಟ್ಯೂಬರ್‌ ಸ್ಯಾಮ್‌ ಸಮೀರ್‌, ವರುಣ್‌ ಆರಾಧ್ಯ,  ಸ್ಯಾಂಡಲ್‌ವುಡ್‌ನಟಿ ಸಮೀಕ್ಷಾ, ನಟಿ ನಿಖಿತಾ ಸ್ವಾಮಿ ಅವರು ಕೂಡ ದೊಡ್ಮನೆಗೆ ಬರ್ತಾರೆ ಎನ್ನಲಾಗ್ತಿದೆ. ಇನ್ನು ಬಿಗ್ ಬಾಸ್ ಅಂದಮೇಲೆ ಕಾಮಿಡಿ ಇರಲೇಬೇಕಲ್ವಾ? ಪ್ರತೀ ಸೀಸನ್‌ಗಳಲ್ಲಿಯೂ ಕಾಮಿಡಿ ನಟರ ಎಂಟ್ರಿ ಇದ್ದೇ ಇರುತ್ತದೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಗೆ ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್, ಹುಲಿ ಕಾರ್ತಿಕ್, ಸೀರುಂಡೆ ರಘು, ಮಾನಸಾ, ಜಗಪ್ಪ ಹೆಸರು ಕೂಡ ಕೇಳಿ ಬರ್ತಿದೆ.

ಇನ್ನು ಸಾಮಾನ್ಯ ಜನರು ಕೂಡ ಈ ಸೀಸನ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಈಗಾಗಲೇ ಆಡಿಷನ್‌ ನಡೆಯುತ್ತಿದೆ. ಮೊದಲ ಸುತ್ತಿನಲ್ಲಿ 3 ನಿಮಿಷಗಳ ವಿಡಿಯೋವನ್ನು ಕಳುಹಿಸಲು ಹೇಳಲಾಗಿದೆ. ಈಗಾಗಲೇ ಸಾವಿರಾರು ಜನ ತಮ್ಮ ಅದೃಷ್ಟ ಪರೀಕ್ಷಿಸಲು ಆಡಿಷನ್ ವಿಡಿಯೋಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇದೀಗ ಹೂವಿನ ಬಾಣದಂತೆ ಹುಡುಗಿ ನಿತ್ಯಾಶ್ರೀ ಕೂಡ ಬಿಗ್‌ಬಾಸ್‌ ಮನೆಗೆ ಹೋಗಲು ಸಜ್ಜಾಗಿದ್ದಾರೆ. ಇದೀಗ ನನ್ಗೆ ಯಾಕೆ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು? ಅನ್ನೋದನ್ನ ಹೇಳಿದ್ದಾಳೆ.

ಇನ್ನು ಬಿಗ್‌ಬಾಸ್‌ಗೆ ಹೋಗಲು ನೀವೂ ಟ್ರೈ ಮಾಡ್ತಿದ್ರೆ ವಿಡಿಯೋ ಮಾಡುವಾಗ ಈ ತಪ್ಪುಗಳನ್ನ ಮಾಡ್ಬೇಡಿ. ನೀವು ಮಾಡುವ ಒಂದು ಸಣ್ಣ ತಪ್ಪು ನಿಮ್ಮ ಬಿಗ್ ಬಾಸ್ ಕನಸನ್ನು ಭಂಗಗೊಳಿಸಬಹುದು. ಹೌದು.. ಬಿಗ್‌ಬಾಸ್‌ಗೆ ಸ್ಪರ್ಧಿಸಲು ಇಂಟ್ರೆಸ್ಟ್‌ ಇದ್ದವರು 3 ವಿಡಿಯೋ ಮೂಲಕ ನಾನು ಯಾಕೆ ಸ್ಪರ್ಧಿಸಲು ಅರ್ಹ ಎಂದು ಹೇಳಬೇಕು. ನೀವು ಮಾಡುವ 3 ನಿಮಿಷದ ವಿಡಿಯೋ ಉತ್ತಮ ಗುಣಮಟ್ಟದ್ದಾಗಿರಲಿ. ನಿಮ್ಮ ವ್ಯಕ್ತಿತ್ವ ಹಾಗೂ ಅರ್ಹತೆಯನ್ನು ನೀವು ಕರೆಕ್ಟ್‌ ಆಗಿ ಪ್ರೆಸೆಂಟ್‌ ಮಾಡಿ. ಹಾಗೇ ಸರಿಯಾದ ವೆಬ್‌ಸೈಟ್‌ನಲ್ಲಿ ಮಾತ್ರ ಈ ವಿಡಿಯೋ ಅಪ್‌ಲೋಡ್ ಮಾಡಿ, ಈ ಮೂಲಕ ನಿಮ್ಮ ಬಿಗ್ ಬಾಸ್ ಮನೆಗೆ ಹೋಗುವ ಕನಸು ನನಸಾಗಿಸಿಕೊಳ್ಳಿ.

Shwetha M

Leave a Reply

Your email address will not be published. Required fields are marked *