ಬಿಗ್‌ ಬಾಸ್‌ 12 ಪ್ರೋಮೋ ಔಟ್!‌ – BBK12 ಆರಂಭಕ್ಕೆ ಮುಹೂರ್ತ ಫಿಕ್ಸ್

ಬಿಗ್‌ ಬಾಸ್‌ 12 ಪ್ರೋಮೋ ಔಟ್!‌ – BBK12 ಆರಂಭಕ್ಕೆ ಮುಹೂರ್ತ ಫಿಕ್ಸ್

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್‌ ಬಾಸ್‌.. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ ಆರಂಭಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಈ ಬಾರಿಯೂ ಕಿಚ್ಚ ಸುದೀಪ್‌ ಹೋಸ್ಟ್‌ ಮಾಡಲಿದ್ದಾರೆ. ಇದೀಗ ಸೀಸನ್‌ 12 ಆರಂಭಕ್ಕೆ ಕಾಯ್ತಿದ್ದ ವೀಕ್ಷಕರಿಗೆ ಕಡೆಗೂ ಕಲರ್ಸ್‌ ಕನ್ನಡ ವಾಹಿನಿ ಸ್ವೀಟ್‌ ನ್ಯೂಸ್‌ ಕೊಟ್ಟಿದೆ. ಇದೀಗ ಸೀಸನ್‌ 12ರ ಲೋಗೋವನ್ನ ಅನಾವಣ ಮಾಡಲಾಗಿದೆ. ಈ ಲೋಗೋದ ಮೂಲಕವೇ ಹೊಸ ಸೀಸನ್‌ ಹೇಗಿರಲಿದೆ  ಅನ್ನೋ ಗುಟ್ಟನ್ನ ಬಿಟ್ಟುಕೊಡಲಾಗಿದೆ..

ಇದನ್ನೂ ಓದಿ: ಏಷ್ಯಾಕಪ್ ನಲ್ಲಿ ಬ್ಯಾಟಿಂಗ್ & ಬೌಲಿಂಗ್ ನಲ್ಲಿ ಲಂಕನ್ನರ ಮೇಲುಗೈ – ಕೊಹ್ಲಿ & ಭುವಿ ಬರೆದ ದಾಖಲೆಗಳೇನು?

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಯಶಸ್ವಿಯಾಗಿ ಮುಗಿದಿದೆ. ಶೋ ಮುಗಿದು ಇಷ್ಟು ಟೈಮ್‌ ಆದ್ರೂ ಕೂಡ ಬಿಗ್‌ಬಾಸ್‌ ಸ್ಪರ್ಧಿಗಳು ಇನ್ನೂ ಶೈನ್‌ ಆಗ್ತಿದ್ದಾರೆ.. ಅಷ್ಟರ ಮಟ್ಟಿಗೆ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಸೌಂಡ್‌ ಮಾಡಿತ್ತು. ಇದೀಗ ಬಿಗ್‌ಬಾಸ್‌ ಸೀಸನ್‌ 12 ಶುರುವಾಗುವ ಟೈಮ್‌ ಬಂದಿದೆ. ಇದೀಗ ಹೊಸ ಸೀಸನ್‌ ನ ಲೋಗೋ ಅನಾವರಣ ಮಾಡಲಾಗಿದೆ. ಈ ಸೀಸನ್‌ನ ಲೋಗೊವನ್ನ ವಿಭಿನ್ನವಾಗಿ ಡಿಸೈನ್‌ ಮಾಡಲಾಗಿದೆ.

ಹೌದು.. ಕಲರ್ಸ್‌ ಕನ್ನಡ ವಾಹಿನಿ ಬಿಗ್‌ ಬಾಸ್‌ ಸೀಸನ್‌ 12ರ ಲೋಗೋವನ್ನ ರಿವೀಲ್‌ ಮಾಡೋ ಮೂಲಕ ವೀಕ್ಷಕರಿಗೆ ಸರ್‌ಪ್ರೈಸ್‌ ಕೊಟ್ಟಿದೆ. ಸೀಸನ್‌ 12 ಲೋಗೋ ರಿವೀಲ್‌ ಮಾಡಲಾಗಿದೆ.. ಆರಂಭದಲ್ಲಿ ಮಿಂಚು.. ಬರೋ ಮೂಲಕ ಸೀಸನ್‌ 12 ಕಾಣಿಸಿಕೊಳ್ಳುತ್ತೆ.. ಬಳಿಕ ವಿಭಿನ್ನ ಗಡಿಯಾರ.. ಜೊತೆಗೆ ಕ್ಯಾಮೆರಾ ಲೆನ್ಸ್‌ ಅನ್ನ ಬಳಸಿ ಲೋಗೋ ಡಿಸೈನ್‌ ಮಾಡಲಾಗಿದೆ.. ಅಷ್ಟೇ ಅಲ್ಲ ರಿಲೀಸ್​ ಆಗಿರೋ ಪ್ರೋಮೋಗೆ ಕಾದಿದ್ದು ಸಾಕು! ಬಿಗ್ ಬಾಸ್ ಈಸ್ ಬ್ಯಾಕ್! ಆದ್ರೆ… ಈ ಸಲ ಕಿಚ್ಚು ಮಾತ್ರ ಹೆಚ್ಚು! ಎಂದು ಟ್ಯಾಗ್‌ಲೈನ್‌ ಕೊಡಲಾಗಿದೆ. ಒಟ್ಟಾರೆ ಈ ಬಾರಿಯ ಸೀಸನ್‌ ಕೂಡ ಕಳೆದ ಸೀಸನ್‌ ನಂತೆ ವೈಲೆಂಟ್‌ ಆಗಿರಲಿದೆ ಅನ್ನೋದು ಲೋಗೋ ಮೂಲಕ ಗೊತ್ತಾಗ್ತಿದೆ.  ಬಿಗ್‌ ಬಾಸ್‌ ಶೋ ಅಂದ್ರೆ ಹಾಗೇ ಅಲ್ವಾ? ಅಲ್ಲಿ ಭಿನ್ನ ವಿಭಿನ್ನ ವ್ಯಕ್ತಿತ್ವ ಹೊಂದಿರುವವರ ಕರೆಸಲಾಗುತ್ತೆ.. ಹೀಗಾಗಿ ಅಲ್ಲಿ ಜಗಳ ಮಾಡೋರೂ ಇರ್ತಾರೆ. ಸೌಮ್ಯ ಸ್ವಭಾವದಿಂದ ನಡೆದುಕೊಳ್ಳೋರೂ ಬರ್ತಾರೆ. ಹೀಗಾಗಿ ಈ ಸೀಸನ್‌ ಕೂಡ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿದೆ.

ಇನ್ನು ಬಿಗ್​ಬಾಸ್​ ಸೀಸನ್ 12 ಆರಂಭ ಆ ಸೆಪ್ಟೆಂಬರ್ 21 ಅಥವಾ ಸೆಪ್ಟೆಂಬರ್ 28ರಿಂದ ಅಂದರೆ ಸೋಮವಾರದಿಂದ ಆರಂಭವಾಗುವ ಸಾಧ್ಯ ಇದೆ ಎನ್ನಲಾಗ್ತಿದೆ.  ಈ ಬಾರಿಯ ವಿಶೇಷ ಏನಂದ್ರೆ, ಸಾಮಾನ್ಯವಾಗಿ ಪ್ರತಿ ಭಾರಿ ಬಿಗ್‌ ಬಾಸ್‌ ಗ್ರ್ಯಾಂಡ್ ಓಪನಿಂಗ್ ಶನಿವಾರ ಮಧ್ಯರಾತ್ರಿ ಶೂಟಿಂಗ್ ಆರಂಭವಾಗಿ ಭಾನುವಾರ  ಟೆಲಿಕಾಸ್ಟ್ ಆಗುತ್ತದೆ. ಆದ್ರೆ ಈ ಬಾರಿ ಸೋಮವಾರದಿಂದ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈಗಾಗಲೇ ಬಿಗ್ ​ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳನ್ನು ಗುರುತಿಸುವ ಕಾರ್ಯ ಕೊನೆಯ ಹಂತದಲ್ಲಿದೆಯಂತೆ. ಪ್ರೋಮೋ ಕಂಟೆಂಟ್ ಅಂತಿಮಗೊಳಿಸುವುದು, ಬಿಗ್​ ಬಾಸ್ ಸೆಟ್ ನಿರ್ಮಾಣ ಇತ್ಯಾದಿ ಕಾರ್ಯಗಳು ಕೂಡ ಭರ್ಜರಿ ಆಗಿ ಸಾಗುತ್ತಿದೆ. ಕಿಚ್ಚ ಸುದೀಪ್ ಅವರ ಮೊದಲ ಪ್ರೊಮೋ ಶೂಟ್ ಕೂಡ ನಡೆದಿದೆ. ಇದು ಮುಂದಿನ ವಾರದಲ್ಲಿ ರಿಲೀಸ್‌ ಆಗ್ಬೋದು ಅಂತಾ ಹೇಳಲಾಗ್ತಿದೆ.

Shwetha M