ಈ ವಾರದ ಕ್ಯಾಪ್ಟನ್‌ ಅಭಿಷೇಕ್‌ – ಅಶ್ವಿನಿ ತಾಳಕ್ಕೆ ಕುಣಿಯುತ್ತಾರಾ ಹೊಸ ಕ್ಯಾಪ್ಟನ್?‌

ಈ ವಾರದ ಕ್ಯಾಪ್ಟನ್‌ ಅಭಿಷೇಕ್‌ – ಅಶ್ವಿನಿ ತಾಳಕ್ಕೆ ಕುಣಿಯುತ್ತಾರಾ ಹೊಸ ಕ್ಯಾಪ್ಟನ್?‌

ಬಿಗ್‌ ಬಾಸ್‌ ಮನೆಯ ಆಟ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಎಲ್ಲಾ ಸ್ಪರ್ಧಿಗಳು ಆಟ ಶುರುಮಾಡಿದಂತೆ ಇದೆ. ಇದೀಗ ಸ್ಟ್ರಾಂಗ್‌ ಸ್ಪರ್ಧಿ ಅಶ್ವಿನಿ ಗೌಡರನ್ನ ಸೋಲಿಸಿ ಅಭಿಷೇಕ್‌ ಕ್ಯಾಪ್ಟನ್‌ ಆಗಿ ಆಯ್ಕೆ ಆಗಿದ್ದಾರೆ. ಅಭಿಷೇಕ್‌ ಕ್ಯಾಪ್ಟನ್‌ ಆಗ್ತಿದ್ದಂತೆ ಈಗ ಹೊಸ ಚರ್ಚೆ ಶುರುವಾಗಿದೆ. ಹೊಸ ಕ್ಯಾಪ್ಟನ್‌ ಅಶ್ವಿನಿ ತಾಳಕ್ಕೆ ಕುಣಿದಿಲ್ಲ ಅಂದ್ರೆ ಸಾಕು ಅಂತ ಹೇಳ್ತಿದ್ದಾರೆ ವೀಕ್ಷಕರು.

ಇದನ್ನೂ ಓದಿ: ಈ ಮನೆಯಲ್ಲಿ ವುಮೆನ್‌ ಕಾರ್ಡ್‌ ಬೇಡ! – ಅಶ್ವಿನಿ ಗೌಡ ಹೈಡ್ರಾಮಾಕ್ಕೆ ಕಿಚ್ಚ ಕ್ಲಾಸ್

ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಸೂರಪ್‌ ಗೆ ಉತ್ತಮ ಸಿಕ್ಕಿದೆ. ಇನ್ನು ಅಶ್ವಿನಿ ಗೌಡ ಎರಡನೇ ಬಾರಿಗೆ ಕಳಪೆ ಪಟ್ಟ ಪಡೆದುಕೊಂಡು ಜೈಲಿಗೆ ಸೇರಿದ್ದಾರೆ. ಮತ್ತೊಂದ್ಕಡೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಶ್ವಿನಿ ಹಾಗೂ ಅಭಿಷೇಕ್‌ ಮುಖಾಮುಖಿ ಆಗಿದ್ರು. ಈ ವೇಳೆ ಅಶ್ವಿನಿ ಗೌಡರನ್ನ ಸೋಲಿಸಿ ಅಭಿಷೇಕ್‌ ಕ್ಯಾಪ್ಟನ್‌ ಆಗಿದ್ದಾರೆ. ಆದ್ರೀಗ ಅಭಿಷೇಕ್‌ ಈ ವಾರ ಫೇವರಿಸಂ ಮಾಡೋ ಸಾಧ್ಯತೆ ಇದೆ. ಅಶ್ವಿನಿ ಟೀಮ್‌ ಪರವಾಗಿ ಇರೋ ಸಾಧ್ಯತೆ ಇದೆ ಎಂದು ವೀಕ್ಷಕರು ಊಹೆ ಮಾಡ್ತಿದ್ದಾರೆ.

ಅಂದ್ಹಾಗೆ ಅಭಿಷೇಕ್‌ ಆರಂಭದಲ್ಲಿ ಗಿಲ್ಲಿ ಟೀಮ್‌ ನಲ್ಲಿ ಹೆಚ್ಚು ಕಾಣಿಸಿಕೊಂಡಿದ್ರು. ಆದ್ರೆ ಬರು ಬರುತ್ತಾ ಅಭಿ ಅಶ್ವಿನಿ ಟೀಮ್‌ಗೆ ಸೇರಿಕೊಂಡಿದ್ದಾರೆ. ಅಶ್ವಿನಿ ತಪ್ಪು ಮಾಡ್ತಿದ್ದಾರೆ ಎಂದು ಗೊತ್ತಿದ್ರೂ ಕೂಡ, ಅವರ ಪರವಾಗಿಯೇ ವಾದಿಸುತ್ತಾ ಬಂದಿದ್ದಾರೆ. ಗಿಲ್ಲಿ- ಅಶ್ವಿನಿ ಫೈಟ್‌ ಮೇಳೆ, ರಘು- ಅಶ್ವಿನಿ ಜೊತೆ ಕಿತ್ತಾಡುವ ವೇಳೆಯೂ ಅಭಿ ಅಶ್ವಿನಿ ಪರವಾಗಿಯೇ ವಾದ ಮಾಡಿದ್ರು. ಇದೀಗ ಅಭಿ ಈ ವಾರದ ಕ್ಯಾಪ್ಟನ್‌ ಆಗಿದ್ದಾರೆ. ಇದೀಗ ಅಶ್ವಿನಿ ಟೀಂ ಪರವಾಗಿಯೇ ಇರೋ ಸಾಧ್ಯತೆ ದಟ್ಟವಾಗಿ ಕಾಣ್ತಿದೆ ಎಂದು ವೀಕ್ಷಕರು ಕಮೆಂಟ್‌ ಮಾಡ್ತಿದ್ದಾರೆ. ಈ ವಾರ  ಕ್ಯಾಪ್ಟನ್ ಆದ ಅಭಿಷೇಕ್ ಹೇಗೆ ಕ್ಯಾಪ್ಟನ್ ಕಾರ್ಯ ನಿರ್ವಹಿಸುತ್ತಾರೆ ಅಂತ ಕಾದು ನೋಡ್ಬೇಕು.

Shwetha M