ದೊಡ್ಮನೆಯಲ್ಲಿ ಕ್ಯಾಪ್ಟನ್ ಗಿಲ್ಲಿ ದರ್ಬಾರ್! – ಮನೆ ಕೆಲಸ ಮಾಡಲ್ಲ ಎಂದ ಅಶ್ವಿನಿಗೆ ಟಾರ್ಚರ್ ಕೊಟ್ಟ ಗಿಲ್ಲಿ!

ಬಿಗ್‌ಬಾಸ್‌ನಲಿ ಕ್ಯಾಪ್ಟನ್ ಗಿಲ್ಲಿ ದರ್ಬಾರ್ ಶುರುವಾಗಿದೆ. ದೊಡ್ಮನೆಯಲ್ಲಿ ಎಲ್ಲರಿಗೂ ಒಂದೊಂದು ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ ಗಿಲ್ಲಿನಟ. ಆದ್ರೀಗ ಗಿಲ್ಲಿ, ಅಶ್ವಿನಿಗೆ ಮನೆಕೆಲಸದ ಮಾಡಲು ಹೇಳಿದ್ದಾರೆ. ಆದ್ರೆ ಅಶ್ವಿನಿ ಮನೆ ಕೆಲಸ ಮಾಡಲ್ಲ ಅಂದಿದ್ದಾರೆ. ಈ ಬೆನ್ನಲ್ಲೇ ಗಿಲ್ಲಿ ಅಶ್ವಿನಿಗೆ ಟಾರ್ಚರ್ ನೀಡಲು ಶುರುಮಾಡಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಉಸಿರಾಡುವುದೇ ಕಷ್ಟ ಕಷ್ಟ..! – ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿತ
ಹೌದು,ಗಿಲ್ಲಿ ನಟ ಕ್ಯಾಪ್ಟನ್ ಆದ ಮೊದಲ ದಿನವೇ ಅಶ್ವಿನಿ ಗೌಡ ಅವರೊಂದಿಗೆ ಜಗಳವಾಡಿದ್ದಾರೆ. ರಾತ್ರಿ ಕೆಲಸ ಮಾಡುವಂತೆ ಗಿಲ್ಲಿ ಆದೇಶಿಸಿದ್ದಾರೆ. ಆದ್ರೆ ಅಶ್ವಿನಿ ನಾಳೆ ಮನೆ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಇದಕ್ಕೆ ಅಶ್ವಿನಿ ಜೊತೆ ಗಿಲ್ಲಿ ಏಕವಚನದಲ್ಲಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಅಶ್ವಿನಿ ನಿದ್ದೆಗೆಡಿಸಲು ಪ್ರಯತ್ನಿಸಿದ್ದಾರೆ ಗಿಲ್ಲಿನಟ.
ಶನಿವಾರ ಮತ್ತು ಭಾನುವಾರ ಬಿಗ್‌ಬಾಸ್ ಮನೆಗೆ ಸಾಲು ಸಾಲು ಅತಿಥಿಗಳು ಬಂದ ಹಿನ್ನೆಲೆ ಸ್ಪರ್ಧಿಗಳಿಗೆ ಮನೆಯ ಕೆಲಸದ ಬಗ್ಗೆ ಗಮನವಿರಲಿಲ್ಲ. ನಾಮಿನೇಷನ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಗಿಲ್ಲಿ ನಟ ಅಧಿಕಾರ ಚಲಾಯಿಸುತ್ತಿದ್ದಾರೆ. ಅಶ್ವಿನಿಗೆ ಗಿಲ್ಲಿ ರಾತ್ರಿಯೇ ಎಲ್ಲಾ ಕೆಲಸ ಮುಗಿಸಬೇಕು ಎಂದಿದ್ದಾರೆ. ಇದಕ್ಕೆ ಅಶ್ವಿನಿ ಗೌಡ ನನ್ನಿಂದ ಆಗಲ್ಲ ಎಂದು ಹೇಳುತ್ತಾರೆ. ಈ ವೇಳೆ ಅಶ್ವಿನಿ ಗೌಡ ಅವರನ್ನು ಏಕವಚನದಿಂದ ಮಾತನಾಡಲು ಗಿಲ್ಲಿ ನಟ ಶುರು ಮಾಡುತ್ತಾರೆ. ಇದರಿಂದ ಕೆರಳಿ ಕೆಂಡವಾದ ರಾಜಮಾತೆ, ಕೆಲಸ ಮಾಡಲ್ಲ ಎಂದೇಳಿ ಮಲಗಲು ತೆರಳುತ್ತಾರೆ.
ಇಷ್ಟಕ್ಕೆ ಸುಮ್ಮನಾಗದ ಗಿಲ್ಲಿ ನಟ, ನೀವು ಹೇಗೆ ಮಲಗ್ತೀರಿ ಎಂದು ನೋಡುವೆ ಎಂದು ಅಶ್ವಿನಿ ಗೌಡ ಅವರಿಗೆ ಕಿರಿಕಿರಿಯನ್ನುಂಟು ಮಾಡಲು ಮುಂದಾಗುತ್ತಾರೆ. ಮಲಗಿದ್ದ ಅಶ್ವಿನಿ ಗೌಡ ಬಳಿ ತೆರಳಿ ಚಮಚದಿಂದ ತಟ್ಟೆ ಬಾರಿಸುವ ಮೂಲಕ ನಿದ್ದೆ ಮಾಡದಂತೆ ತಡೆಯುವ ಪ್ರಯತ್ನವನ್ನು ಗಿಲ್ಲಿ ನಟ ಮಾಡಿದ್ದಾರೆ.
ಒಟ್ಟಾರೆ ಇಷ್ಟು ದಿನ ಮನೆ ಕೆಲಸದ ವಿಚಾರವಾಗಿ ಸೋಮಾರಿತನ ತೋರಿಸುತ್ತಿದ್ದ ಗಿಲ್ಲಿ, ಈಗ ಮನೆ ಮಂದಿ ಬಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಈ ವಾರ ಗಿಲ್ಲಿನಟ ಮನೆ ಜವಾಬ್ದಾರಿಯನ್ನ ಹೇಗೆ ನಿಭಾಯಿಸ್ತಾರೆ. ಗಿಲ್ಲಿ ಕ್ಯಾಪ್ಟನ್ಸಿ ಹೇಗಿರಲಿದೆ ಅನ್ನೋ ಕುತೂಹಲ ಮೂಡಿದೆ.

ನೋಡಿರಿ

