ಗಿಲ್ಲಿ ಚುಚ್ಚು ಮಾತಿಗೆ ಕಣ್ಣೀರಿಟ್ಟ ಕಾವ್ಯ – ವಿಲನ್‌ ಕೊಟ್ಟ ಟಾಸ್ಕ್‌ನಲ್ಲಿ ಗಿಲ್ಲಿ ಗೆದ್ರಾ?

ಗಿಲ್ಲಿ ಚುಚ್ಚು ಮಾತಿಗೆ ಕಣ್ಣೀರಿಟ್ಟ ಕಾವ್ಯ – ವಿಲನ್‌ ಕೊಟ್ಟ ಟಾಸ್ಕ್‌ನಲ್ಲಿ ಗಿಲ್ಲಿ ಗೆದ್ರಾ?

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಕಾವ್ಯ ಜೋಡಿ ಸಖತ್‌ ಹೈಲೈಟ್.‌ ಕಾವ್ಯ – ಗಿಲ್ಲಿ ಫ್ರೆಂಡ್‌ಶಿಪ್‌ ವೀಕ್ಷಕರಿಗೆ ಸಖತ್‌ ಇಷ್ಟ. ಆದ್ರೆ ಬಿಗ್‌ಬಾಸ್‌ ಮಾತ್ರ ಗಿಲ್ಲಿ ಕಾವ್ಯಳನ್ನು ದೂರ ಮಾಡ್ಬೇಕು ಅಂತ ಪ್ರಯತ್ನಿಸ್ತಿದ್ದಾರೆ ಎಂದು ವೀಕ್ಷಕರು ಹೇಳ್ತಾ ಬಂದಿದ್ರು. ಇದೀಗ ಬಿಗ್‌ಬಾಸ್‌ ಗಿಲ್ಲಿಗೆ ಬಿಗ್‌ ಟಾಸ್ಕ್‌ ನೀಡಿದ್ದಾರೆ. ಟಾಸ್ಕ್‌ಗಾಗಿ ಗಿಲ್ಲಿ ಕಾವ್ಯಗೆ ನೋಯಿಸಿದ್ದಾರೆ. ಇದೀಗ ಕಾವು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:ಇನ್ನೂ ಬಗೆಹರಿಯದ ಇಂಡಿಗೋ ಬಿಕ್ಕಟ್ಟು! – ವಿಮಾನ ಕಾರ್ಯಾಚರಣೆಯಲ್ಲಿ ಶೇ.10ರಷ್ಟು ಕಡಿತಕ್ಕೆ ಕೇಂದ್ರ ಸರ್ಕಾರ ಆದೇಶ!

ಬಿಗ್‌ಬಾಸ್‌ ಮನೆಗೆ ಈ ವಾರ ವಿಲನ್‌ ಎಂಟ್ರಿ ಕೊಟ್ಟಿದ್ದು, ಸ್ಪರ್ಧಿಗಳಿಗೆ ಶಾಕ್‌ ಮೇಲೆ ಶಾಕ್‌ ನೀಡಿಲಾಗ್ತಿದೆ. ಈ ವಾರ ಸ್ಪಂದನಾ ಕ್ಯಾಪ್ಟನ್‌ ಆಗಿದ್ರು. ಆದ್ರೆ ವಿಲನ್‌ ಚೈತ್ರಾಗೆ ಕ್ಯಾಪ್ಟನ್ಸಿ ಆಫರ್‌ ಕೊಟ್ಟಿದ್ದಾರೆ. ವಿಲನ್‌ ಆಫರ್‌ ಕೊಡ್ತಿದ್ದಂತೆ ಚೈತ್ರಾ ಕ್ಯಾಪ್ಟನ್‌ ಆಗಲು ಒಪ್ಪಿಕೊಂಡಿದ್ದಾರೆ. ಇದೀಗ ವಿಲನ್‌ ಗಿಲ್ಲಿಗೆ ಸಿಕ್ರೇಟ್‌ ಟಾಸ್ಕ್‌ ಕೊಟ್ಟಿದೆ. ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್​ನಿಂದ ಕಾವ್ಯಾಳನ್ನ ಗಿಲ್ಲಿ ಅಳಿಬೇಕಿತ್ತು. ಜೊತೆಗೆ ಅಶ್ವಿನಿ ಹಾಗೂ ಗಿಲ್ಲಿ ಅಡುಗೆ ಮಾಡಬೇಕು. ಹಾಗೆ ಮಾಡಿದರೆ ಮನೆಯವರಿಗೆ ಲಕ್ಷುರಿ ಐಟಂ ಸಿಗುತ್ತದೆ. ಹಾಗೇ ಕಾವ್ಯಾನ ಅಶ್ವಿನಿ ಹಾಗೂ ಗಿಲ್ಲಿ ಸೇರಿಕೊಂಡು ಅಳಿಸಬೇಕು. ಇಷ್ಟೇ ಅಲ್ಲ, ಕಿಚ್ಚನ ಚಪ್ಪಾಳೆ ಬೋರ್ಡ್​ನಲ್ಲಿರುವ ಮೂರು ಬೋರ್​​ಡ್​​ಗಳನ್ನು ತಂದು ಸ್ಟೋ ರೂಂನಲ್ಲಿ ಇಡಬೇಕು. ಅಂತೂ ಗಿಲ್ಲಿ ಕಾವ್ಯ ಅವರನ್ನು ಅಳಿಸಿದ್ದಾರೆ.

ಬೆನ್ನಿಗೆ ಚೂರಿ ಹಾಕ್ಬಿಟ್ರಲ್ರಿ, ರೇಗಿಸ್ಬಿಟ್ರಂತೆ, ನಾಮಿನೇಶನ್‌ ಮಾಡಿಬಿಟ್ರಂತೆ. ನೀನು ಈ ಮನೆಯಲ್ಲಿ ಏನು ಮಾಡ್ತಾ ಇಲ್ಲ. ಫಸ್ಟ್‌ ತಪ್ಪು ಮಾಡಿದ್ದೆ ನಿನ್ನ ಜೊತೆ ಜಂಟಿ ಆಗಿದ್ದು. ನಿಜವಾಗಲೂ ಸ್ಪಂದನಾ ಲಕ್ಕಿ. ನೀವು ಅನಲಕ್ಕಿ ಎಂದು ಹೇಳಿದ್ದಾರೆ. ಇಷ್ಟೆಲ್ಲ ಮನಸ್ಸಲ್ಲಿ ಇರೋದು ಇತ್ತು ಅಂದರೆ ಹೇಳಬೇಕಿತ್ತು ಎಂದಿದ್ದಾರೆ. ನಾನು ನಿನ್ನ ಥರ ಅಲ್ಲ. ಈಗಲೂ ಹೇಳ್ತೀನಿ. ನೀನು ಪ್ರೀ ಪ್ರಾಡಕ್ಟ್‌. ಫ್ರೀ ಫ್ರೀ ಅಂದಿದ್ದಾರೆ. ಗಿಲ್ಲಿ ಹೀಗೆ ಹೇಳುತ್ತಿದ್ದಂತೆ ಕಾವ್ಯ ಕಣ್ಣೀರಿಟ್ಟಿದ್ದಾರೆ. ಅಂತೂ ಗಿಲ್ಲಿ ಈ ಟಾಸ್ಕ್‌ ನಿಭಾಯಿಸಿದ್ದಾರೆ.

ಕಾವ್ಯ ಗಿಲ್ಲಿ ಮಧ್ಯೆ ಬಿರುಕು ಮೂಡಿದ್ದು ಅಂತೂ ಫಿಕ್ಸ್‌ ಆದಂತಿದೆ. ಇದಕ್ಕೂ ಮುಂಚೆ ಕಾವ್ಯ ಅವರು ಗಿಲ್ಲಿಯ ಬಗ್ಗೆ ರಘು ಬಳಿ ನೆಗೆಟಿವ್‌ ಆಗಿ ಚರ್ಚೆಯನ್ನೂ ಮಾಡಿದ್ದರು. ಅಷ್ಟೇ ಅಲ್ಲ ಹಾವು ಏಣಿ ಆಟದ ಸಮಯದಲ್ಲೂ ಗಿಲ್ಲಿ ತನಗೆ ಹಾವು ಎಂದು ಕಾವ್ಯ ಹೇಳಿದ್ದರು.

ಗಿಲ್ಲಿ ಬಗ್ಗೆ ಕಾವ್ಯ, ರೇಗಿಸೋ ವಿಚಾರಕ್ಕೆ ಸಾಕಷ್ಟು ಬಾರಿ ಅಸಮಾಧಾನ ಹೊರ ಹಾಕಿದ್ದಾರೆ. ಇತ್ತೀಚೆಗೆ ಕಾವ್ಯ ಅವರ ನಡೆಗೆ ನೆಟಿಗರು ಕೂಡ ಕಮೆಂಟ್‌ ಮಾಡ್ತಿದ್ದಾರೆ. ಈ ವಾರವಂತೂ ಟಾಸ್ಕ್‌ ನೋಡಿದರೆ, ಇವರಿಬ್ಬರ ಗೆಳೆತನ ಮತ್ತಷ್ಟು ಹಳಸುವ ಸಾಧ್ಯತೆ ಇದೆ.

ನಾಮಿನೇಶನ್‌ ವೇಳೆಯೂ ಕಾವ್ಯ ನಾಮಿನೇಷನ್‌ ನಿರ್ಧಾರ ಮನೆಯಲ್ಲಿ ಕೋಲಾಹಲ ಸೃಷ್ಟಿಸಿದೆ. ರಜತ್‌ ಬಂದಾಗಿನಿಂದ ಗಿಲ್ಲಿ ಜೊತೆಗಿದ್ದಾರೆ. ಇಬ್ಬರನ್ನೂ ಕಾವ್ಯ ನಾಮಿನೇಟ್‌ ಮಾಡಿದ್ದಾರೆ. ತಮ್ಮಿಬ್ಬರ ವಿಚಾರವಾಗಿ ಮನೆಯವರು ವರ್ತಿಸುತ್ತಿರುವ ರೀತಿಗೆ ರಜತ್‌ ಕೆಂಡಾಮಂಡಲರಾಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಧ್ರುವಂತ್‌ ಜೊತೆ ಜಗಳ ಮಾಡಿಕೊಂಡಿದ್ದಾರೆ.

ಮನೆ ಈಗ ಬಿಗ್‌ ಬಾಸ್‌ ಬದಲಿಗೆ ‘ವಿಲನ್‌’ ಹಿಡಿತದಲ್ಲಿದೆ. ವಿಲನ್‌ ಮನೆಯಲ್ಲಿನ ರೂಲ್ಸ್‌ಗಳನ್ನೇ ಬದಲಾಯಿಸಿದ್ದಾರೆ. ನಾಮಿನೇಷನ್‌ ಪ್ರಕ್ರಿಯೆ ಕೂಡ ಇಟ್ಟಿದ್ದಾರೆ. ಅದರಂತೆ ಕಾವ್ಯ ತನ್ನ ಸರದಿಯಲ್ಲಿ ಗಿಲ್ಲಿ ಮತ್ತು ರಜತ್‌ ಇಬ್ಬರನ್ನು ನಾಮಿನೇಟ್‌ ಮಾಡಿದ್ದಾರೆ.

Shwetha M