ಗಿಲ್ಲಿಯನ್ನ ಹಿಂದಿಕ್ಕಿ ಫಿನಾಲೆ ಟಾಸ್ಕ್‌ಗೆ ಆಯ್ಕೆಯಾದ ಕಾವ್ಯ! – ಫಿನಾಲೆ ಹತ್ತಿರವಾದ್ರೂ ಗಿಲ್ಲಿಗೆ ಸೀರಿಯಸ್‌ನೆಸ್ ಬಂದಿಲ್ವಾ?

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿನಟ ಹಾಗೂ ಕಾವ್ಯ ಶೈವ ನಡುವೆ ಒಳ್ಳೆಯ ಬಾಂಧವ್ಯ ಇದೆ. ಆರಂಭದಿಂದಲೂ ಈ ಜೋಡಿ ಸಖತ್ ಹೈಲೈಟ್. ಕಾವ್ಯ ಗಿಲ್ಲಿಯಿಂದ ದೂರ ಇರಲು ಪ್ರಯತ್ನಿಸಿದ್ರೂ, ಗಿಲ್ಲಿ ಕಾವ್ಯಳನ್ನ ಯಾವತ್ತೂ ಬಿಟ್ಟುಕೊಟ್ಟಿಲ್ಲ. ಪ್ರತಿ ಬಾರಿಯೂ ಫಿನಾಲೆಯಲ್ಲಿ ಸುದೀಪ್ ಅವರ ಒಂದು ಕೈಯಲ್ಲಿ ನನ್ನ ಕೈ ಇರ್ಬೇಕು. ಇನ್ನೊಂದು ಕೈಯಲ್ಲಿ ಕಾವ್ಯ ಕೈ ಇರಬೇಕು ಎಂದು ಹೇಳುತ್ತಲೇ ಇದ್ದಾರೆ. ಆದ್ರೀಗ ಗಿಲ್ಲಿ ಆಟವನ್ನ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣ್ತಿಲ್ಲ. ಆದ್ರೆ ಕಾವ್ಯ ಗಿಲ್ಲಿಯನ್ನ ಹಿಂದೆ ಹಾಕಿ ಮುಂದಕ್ಕೆ ಸಾಗ್ತಿದ್ದಾರೆ.
ಇದನ್ನೂ ಓದಿ: ದಳಪತಿ ವಿಜಯ್‌ಗೆ ಕಾನೂನು ಸಂಕಷ್ಟ! – ಕರೂರು ಕಾಲ್ತುಳಿತ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ CBI ಸಮನ್ಸ್
ಬಿಗ್‌ಬಾಸ್ ಮನೆಯಲ್ಲಿ ಕಾವ್ಯಾ ಶೈವ ಅವರಿಗೆ ಫ್ರೀ ಪ್ರೊಡಕ್ಟ್ ಎಂಬ ಹಣೆಪಟ್ಟಿ ಆರಂಭದಿಂದಲೇ ಇದೆ. ಗಿಲ್ಲಿಯಿಂದಲೇ ಕಾವ್ಯಾ ಇಷ್ಟು ದಿನ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂಬ ಅಭಿಪ್ರಾಯವೂ ಇದೆ. ಆದ್ರೀಗ ಕಾವ್ಯ ಫಿನಾಲೆ ಟಾಸ್ಕ್ ನಲ್ಲಿ ಅಬ್ಬರಿಸಿ, ಗಿಲ್ಲಿಯನ್ನು ಹಿಂದಿಕ್ಕಿದ್ದಾರೆ.
ಹೌದು, ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ಗಳು ಆರಂಭವಾಗಿರೋದನ್ನು ಪ್ರೋಮೋ ಮೂಲಕ ತೋರಿಸಲಾಗಿದೆ. ಮೊದಲ ಟಾಸ್ಕ್ ಗಿಲ್ಲಿ ನಟ ಮತ್ತು ಧ್ರುವಂತ್ ನಡುವೆ ನಡೆದಿದೆ. ಈ ಆಟ ಗೆಲ್ಲುವ ಸ್ಪರ್ಧಿ, ಟಾಪ್ 6 ಫಿನಾಲೆ ಟಿಕೆಟ್ ಟಾಸ್ಕ್‌ಗೆ ಆಯ್ಕೆಯಾಗಲಿದ್ದಾರೆ. ವರದಿಗಳ ಪ್ರಕಾರ, ಈ ಆಟವನ್ನು ಧ್ರುವಂತ್ ಗೆದ್ದಿದ್ದಾರೆ. ಮುಂದಿನ ಟಾಸ್ಕ್ ಕಾವ್ಯಾ ಆಡಿದ್ದು, ಇದ್ರಲ್ಲಿ ಕಾವ್ಯ ವಿನ್ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆದ್ರೆ ಕಾವ್ಯಾ ಎದುರಾಳಿ ಯಾರು ಆಗಿದ್ರು ಮತ್ತು ಟಾಸ್ಕ್ ಏನಾಗಿತ್ತು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಕಾವ್ಯಾ ಗೆಲುವಿನ ವಿಷಯ ಕೇಳಿದ ವೀಕ್ಷಕರು, ಗಿಲ್ಲಿಯನ್ನು ಹಿಂದೆ ಬಿಟ್ರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಬಿಗ್‌ಬಾಸ್ ಮನೆಗೆ ಜಂಟಿಯಾಗಿ ಆಗಮಿಸಿದ್ದರು. ಇಷ್ಟು ದಿನವೂ ಇಬ್ಬರು ಜೊತೆಯಾಗಿಯೇ ಕಾಣಿಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಕಾವ್ಯಾ ಪೋಷಕರು, ಗಿಲ್ಲಿಯನ್ನು ಬಿಟ್ಟುಕೊಡಬೇಡ ಎಂದು ಸಲಹೆ ನೀಡಿದ್ದರು. ಕಾವ್ಯಾ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದರೂ ಗಿಲ್ಲಿ ಮಾತ್ರ ಕಾವು.. ಕಾವು.. ಎಂದು ಹೇಳಿಕೊಂಡು ಹಿಂದೆ ಹಿಂದೆಯೇ ಹೋಗುತ್ತಿದ್ದಾರೆ. ಇನ್ನಾದ್ರೂ ಗಿಲ್ಲಿ ಟಾಸ್ಕ್‌ನಲ್ಲಿ ಗಿಲ್ಲಿ ತಮ್ಮನ್ನ ತಾವು ಫ್ರೂವ್ ಮಾಡಿಕೊಳ್ತಾರಾ? ಫ್ಯಾನ್ಸ್ ಆಸೆಯನ್ನ ಗಿಲ್ಲಿ ನೆರವೇರಿಸ್ತಾರಾ ಅಂತ ಕಾದುನೋಡ್ಬೇಕು.

ನೋಡಿರಿ

