ಹೋಗೇ, ಬಾರೇ ಅನ್ನಬಾರದಿತ್ತು.. ತುಂಬಾ ನೋವು ಮಾಡಿದ್ದೀನಿ! – ಅಶ್ವಿನಿ ಗೌಡ ಬಳಿ ಕ್ಷಮೆ ಕೇಳಿದ ಗಿಲ್ಲಿ!

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿನಟ ಸಖತ್ ಹೈಲೈಟ್. ಸಣ್ಣ ಪುಟ್ಟ ವಿಚಾರಕ್ಕೂ ಕಿತ್ತಾಡುತ್ತಲೇ ಇದ್ರು. ಅಶ್ವಿನಿ ಗೌಡ ಕೆಟ್ಟ ಪದಗಳಿಂದ ಗಿಲ್ಲಿನಟನಿಗೆ ಬೈದ್ರೆ, ಗಿಲ್ಲಿ ಏಕವಚನದಲ್ಲಿ ಮಾತನಾಡಿ ಅಶ್ವಿನಿಯನ್ನು ಕೆಣಕುತ್ತಿದ್ದರು. ಇದೀಗ ಗಿಲ್ಲಿ ಇದೇ ಮೊದಲ ಬಾರಿಗೆ ಅಶ್ವಿನಿಗೆ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ: ರಾಜ್ಯ ರಾಜಕೀಯಕ್ಕೆ ನಾನು ಬರುತ್ತೇನೆ! – ಹೆಚ್‌ಡಿ ಕುಮಾರಸ್ವಾಮಿ ಹೊಸ ಪ್ಲ್ಯಾನ್ ಏನು?
ಬಿಗ್‌ಬಾಸ್ ಕನ್ನಡ ಸೀಸನ್ 12 ರ ಫಿನಾಲೆ ವೀಕ್ ನಡೆಯುತ್ತಿದೆ. ಈ ವಾರ ಸ್ಪರ್ಧಿಗಳಿಗೆ ಯಾವುದೇ ಟಾಸ್ಕ್ ಕೊಟ್ಟಿಲ್ಲ. ಆದ್ರೂ ಸ್ಪರ್ಧಿಗಳ ಕೆಲ ಆಸೆಗಳನ್ನ ಇಡೇರಿಸುತ್ತಿದ್ದಾರೆ. ಬಿಗ್‌ಬಾಸ್ ಜರ್ನಿಯನ್ನ ಮೆಲುಕು ಹಾಕುವಂತಹ ಸನ್ನಿವೇಶಗಳನ್ನು ಕ್ರಿಯೇಟ್ ಮಾಡುತ್ತಿದ್ದಾರೆ. ಇದೀಗ ಗಿಲ್ಲಿನಟ ಹಾಗೂ ಅಶ್ವಿನಿ ಗೌಡ ಬಿಗ್‌ಬಾಸ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಅಶ್ವಿನಿ ಗೌಡಗೆ ಕ್ಷಮೆ ಕೇಳಿದ್ದಾರೆ. ಇದ್ರ ಪ್ರೋಮೋ ರಿಲೀಸ್ ಆಗಿದೆ.
ಕಲರ್ಸ್ ಕನ್ನಡ ರಿಲೀಸ್ ಮಾಡಿದ ಪ್ರೋಮೋದಲ್ಲಿ ಮನೆಯ ಗಾರ್ಡನ್ ಏರಿಯಾದಲ್ಲಿ ಒಂದು ಫೈರ್ ಕ್ಯಾಂಪ ಹಾಕಲಾಗಿದೆ. ಅಲ್ಲಿ ಮಾತನಾಡಿರುವ ಗಿಲ್ಲಿ ನಟ, ಜಗಳ ಆಡುವ ಭರದಲ್ಲಿ ನಾನೇ ಹೋಗೆ ಬಾರೇ ಎಂದು ಕರೆದಿದ್ದೇನೆ. ಅದರ ಅವಶ್ಯಕತೆ ಇರಲಿಲ್ಲ. ನೀವು ವಯಸ್ಸಲ್ಲಿ ದೊಡ್ಡವರು. ಇದನ್ನೆಲ್ಲಾ ನೆನೆಸಿಕೊಂಡ ಸಿಕ್ಕಾಪಟ್ಟೆ ಬೇಜಾರು ಆಗುತ್ತದೆ. ನಿಮ್ಮ ಮನಸ್ಸಿಗೆ ತುಂಬಾ ನೋವು ಮಾಡಿದ್ದೇನೆ, ಅದಕ್ಕೆ ಸಾರಿ ಎಂದಿದ್ದಾರೆ ಗಿಲ್ಲಿ.
ಇನ್ನು, ಅಶ್ವಿನಿ ಗೌಡ , ಗಿಲ್ಲಿ ನಟನಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಜೀವನವನ್ನು ನಿನ್ ಥರ ತುಂಬಾ ಲೈಟಾಗಿ ತೆಗೆದುಕೊಂಡು, ಎಂಜಾಯ್ ಕೂಡ ಮಾಡಬಹುದು. ಎಲ್ಲವನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಕೆಂದೇನಿಲ್ಲ. ಈ ವೇದಿಕೆಯಲ್ಲಿ ನಾನು ನಿನಗೆ ಥ್ಯಾಂಕ್ಸ್ ಹೇಳುತ್ತೇನೆ. ನಿನ್ನಿಂದ ನಾನು ಒಂದು ಒಳ್ಳೆಯ ಪಾಠವನ್ನು ಕಲಿತಿದ್ದೇನೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ ಮತ್ತು ಗಿಲ್ಲಿಗೆ ಅಪ್ಪುಗೆ ನೀಡಿದ್ದಾರೆ.

ನೋಡಿರಿ

