ನಾನು ಒನ್ ಮ್ಯಾನ್ ಆರ್ಮಿ! – ಧ್ರುವಂತ್ ಬಿಲ್ಡಪ್ ಭಾಷಣ.. ಇಷ್ಟೊಂದು ಹೈಪ್ ಯಾಕೆ?

ಬಿಗ್ಬಾಸ್ ಮನೆಯಲ್ಲಿ ಧ್ರುವಂತ್ ಇಷ್ಟು ದಿನ ನೆಗೆಟಿವ್ ಆಗೇ ಕಾಣಿಸಿಕೊಂಡಿದ್ರು. ಬೇರೆ ಸ್ಪರ್ಧಿಗಳಿಗೆ ಅವಮಾನ ಮಾಡೋದು. ಕೆಟ್ಟದಾಗಿ ಕಮೆಂಟ್ ಮಾಡೋದೇ ದೊಡ್ಮನೆಯಲ್ಲಿ ಹೆಚ್ಚು ಹೈಲೈಟ್ ಆಗಿತ್ತು. ಆದ್ರೀಗ ಧ್ರುವಂತ್ ಏಕಾಏಕಿ ಒಳ್ಳೆಯವರಂತೆ ಬಿಲ್ಡ್ಅಪ್ ಕೊಡ್ತಿದ್ದಾರೆ. ಬಿಗ್ಬಾಸ್ ಕೂಡ ಧ್ರುವಂತ್ಗೆ ಬೇಕಂತಲೇ ಹೈಪ್ ಕೊಡ್ತಿದ್ದಾರಾ ಅನ್ನೋ ಮಾತು ಕೇಳಿಬಂದಿದೆ.
ಇದನ್ನೂ ಓದಿ: ಮದುವೆ ದಿನ ಕೇಕ್ ಟೇಸ್ಟ್ ನೋಡಿದ ವರ! – ಅಯ್ಯಯ್ಯೋ.. ವಿವಾಹವನ್ನೇ ಕ್ಯಾನ್ಸಲ್ ಮಾಡಿದ್ಲು ವಧು!
ಬಿಗ್ಬಾಸ್ ಕನ್ನಡ ಸೀಸನ್ 12 ರ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಗಿಲ್ಲಿನೇ ಗೆಲ್ಲಬೇಕು ಎಂದು ವೀಕ್ಷಕರು ಹೇಳುತ್ತಲೇ ಬಂದಿದ್ದಾರೆ. ಆದ್ರೆ ಕಳೆದ ವಾರದಿಂದ ವೀಕ್ಷಕರ ಲೆಕ್ಕಾಚಾರ ಫುಲ್ ಉಲ್ಟಾ ಆಗ್ತಿದೆ. ದೊಡ್ಮನೆಯಲ್ಲಿ ಗಿಲ್ಲಿ ಸೈಲೆಂಟ್ ಆಗಿದ್ರೆ, ಅಶ್ವಿನಿ ಹಾಗೂ ಧ್ರುವಂತ್ ಫುಲ್ ಆಕ್ಟಿವ್ ಆಗಿದ್ದಾರೆ. ಇವರಿಬ್ಬರಿಗೆ ಬೇಕಂತಲೇ ಹೈಪ್ ಕೊಡಲಾಗ್ತಿದೆ ಎಂಬ ಮಾತು ಕೇಳಿಬಂದಿದೆ. ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ಬಿಗ್ಬಾಸ್ ಒಂದು ಪ್ರೋಮೋ ರಿಲೀಸ್ ಮಾಡಿದ್ದು, ಈ ಪ್ರೋಮೋದಲ್ಲಿ ಬರೀ ಧ್ರುವಂತ್ನ ಮಾತ್ರ ತೋರಿಸಲಾಗಿದೆ.
ಹೌದು, ಇವತ್ತು ಬಿಗ್ಬಾಸ್ ನ ಎರಡು ಪ್ರೋಮೋ ರಿಲೀಸ್ ಮಾಡಿದ್ದು, ಇದ್ರಲ್ಲಿ ಧ್ರುವಂತ್ ಭಾಷಣ ಹೈಲೈಟ್ ಮಾಡಲಾಗಿದೆ. ಜನರ ಮುಂದೆ ಬಂದ ಧ್ರುವಂತ್ ಬಿಗ್ಬಾಸ್ನಲ್ಲಿ ನಾನು ಒನ್ ಮ್ಯಾನ್ ಆರ್ಮಿ. ಟಾಸ್ಕ್ನಲ್ಲಿ ಎಲ್ಲರೂ ನನ್ನನ್ನು ಹೊರಗೆ ಇಡ್ತಾರೆ. ಆದ್ರೆ ನಾನು ಜಗಳ ಮಾಡಿ, ಕಿತ್ಕೊಂಡು ಆಟ ಆಡಿ ಗೆದ್ದೆ. 24 ಜನರಲ್ಲಿ ಈಗ 6 ಜನಕ್ಕೆ ತಂದು ನಿಲ್ಸಿದ್ದೀನಿ. ನನಗೆ ಯಾರು ಕಾಂಪಿಟೇಟರ್ ಇರಬಾರದು ಎಂದು ಧ್ರುವಂತ್ ಅಬ್ಬರ ಭಾಷಣ ಮಾಡಿದ್ದಾರೆ. ಇದೀಗ ಈ ಪ್ರೋಮೋ ನೋಡಿದ ವೀಕ್ಷಕರು ನಾನಾ ಕಮೆಂಟ್ ಮಾಡ್ತಿದ್ದಾರೆ. ಇಷ್ಟು ದಿನ ಕೆಟ್ಟದಾಗಿ ಬಯ್ಯೋದು, ಹೆಣ್ಣುಮಕ್ಕಳಿಗೆ ಅವಮಾನ ಮಾಡಿದ ವ್ಯಕ್ತಿಗೆ ಇಷ್ಟೊಂದು ಹೈಪ್ ಯಾಕೆ? ನೆಗೆಟಿವ್ ಆಗಿದ್ದ ಧ್ರುವಂತ್ ಇಷ್ಟೊಂದು ಪಾಸಿಟಿವ್ ಆಗಿ ಆಕ್ಟಿವ್ ಆಗಿದ್ದು ಹೇಗೆ? ಬೇಕಂತಲೇ ಧ್ರುವಂತ್ಗೆ ಇಷ್ಟೊಂದು ಹೈಪ್ ಕೊಡಲಾಗ್ತಿದ್ಯಾ? ಧ್ರುವಂತ್ನ ಗೆಲ್ಲಿಸೋ ಹುನ್ನಾರ ನಡಿತಾ ಇದ್ಯಾ ಅಂತ ವೀಕ್ಷಕರು ಪ್ರಶ್ನೆ ಮಾಡ್ತಿದ್ದಾರೆ.

ನೋಡಿರಿ

