ಹಳೇ ಚಾಳಿ ಮುಂದುವರಿಸಿದ ಅಶ್ವಿನಿ ಗೌಡ – ರಕ್ಷಿತಾ ಶೆಟ್ಟಿ ಮತ್ತೆ ಟಾರ್ಗೆಟ್!‌

ಹಳೇ ಚಾಳಿ ಮುಂದುವರಿಸಿದ ಅಶ್ವಿನಿ ಗೌಡ – ರಕ್ಷಿತಾ ಶೆಟ್ಟಿ ಮತ್ತೆ ಟಾರ್ಗೆಟ್!‌

ಯಾರ್‌ ಏನೇ ಹೇಳ್ಲಿ.. ನಾನಿರೋದೇ ಹೀಗೆ ಅನ್ನುವಂತಿದೆ ಹೋರಾಟಗಾರ್ತಿ ಅಶ್ವಿನಿ ಗೌಡ ನಡೆ. ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ ಆರಂಭದಿಂದಲೂ ರಕ್ಷಿತಾ ಶೆಟ್ಟಿಯನ್ನ ಟಾರ್ಗೆಟ್‌ ಮಾಡ್ತಾ ಬಂದಿದ್ರು. ಆಕೆಗೆ ಅವಮಾನ ಕೂಡ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು. ಕಿಚ್ಚ ಸುದೀಪ್‌ ಕೂಡ ಈ ಬಗ್ಗೆ ಕ್ಲಾಸ್‌ ತೆಗೆದುಕೊಂಡಿದ್ರು. ಆದ್ರೂ ಆಕೆ ಬದಲಾದಂತೆ ಕಾಣ್ತಿಲ್ಲ. ಇದೀಗ ಮತ್ತೆ ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಮುಗಿಬಿದ್ದಿದ್ದಾರೆ. ಸಿಕ್ಕಿದ್ದೇ ಚಾನ್ಸ್‌ ಅಂತಾ ಸರಿಯಾಗೇ ಬೈದಿದ್ದಾರೆ.

ಇದನ್ನೂ ಓದಿ:  ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಶಾಕ್‌ ಕೊಟ್ಟ ಕೋರ್ಟ್!‌ – ನ್ಯಾಯಾಲಯದ ಆದೇಶದಲ್ಲಿ ಏನಿದೆ?

ದೊಡ್ಮನೆಯಲ್ಲಿ ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಎಷ್ಟೇ ವಾರ್ನ್ ಮಾಡಿದ್ರೂ ಬದಲಾಗುವಂತೆ ಕಾಣುತ್ತಿಲ್ಲ. ಪದೇಪದೇ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತಲೇ ಇದ್ದಾರೆ. ಇದೀಗ ಅಶ್ವಿನಿ  ಮತ್ತೊಮ್ಮೆ ರಕ್ಷಿತಾಗೆ ಬೈದಿದ್ದಾರೆ. ಇದರಲ್ಲಿ ರಾಶಿಕಾ ಕೂಡ ಇನ್ವಾಲ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎಂಬುದನ್ನು ಕಲರ್ಸ್ ಕನ್ನಡ ಚಿಕ್ಕ ಪ್ರೋಮೋ ಮೂಲಕ ತೋರಿಸಿದೆ.

ರಕ್ಷಿತಾ ಅವರು ಒಬ್ಬರೇ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು ಮಾಡುತ್ತಾ ಇರುತ್ತಾರೆ.. ಅತ್ತ ಕ್ಯಾಪ್ಟನ್ ರಘು ಅವರು, ರಕ್ಷಿತಾ ಮೇಲೆ ಒಂದೇ ಒಂದು ಕಂಪ್ಲೆಂಟ್ ಇಲ್ಲ, ಯಾರಿಲ್ಲ ಅಂದ್ರು ಅಡುಗೆ ಮಾಡ್ತಾಳೆ.. ಮನೆ ಕೆಲಸದವಳು ಅಂತ ಅಂದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಬಳಿಕ ರಕ್ಷಿತಾ ಅವರು ಗಾರ್ಡನ್ ಏರಿಯಾಗೆ ಬಂದು, ರಾಶಿಕಾ ಅಡುಗೆ ಮಾಡಬೇಕು ಎಂದು ಹೇಳಿದ್ದಾರೆ. ಇಲ್ಲಿ ರಾಶಿಕಾ ಹಾಗೂ ಅಶ್ವಿನಿ ಗೌಡ ಮಾತನಾಡುತ್ತ ಇರುತ್ತಾರೆ.

ರಾಶಿಕಾ ಅಡುಗೆ ಮಾಡಬೇಕು ಎಂದು ರಕ್ಷಿತಾ ಹೇಳಿದಾಗ ರಾಶಿಕಾ ಅವರು, ನಾನು ಮಾಡಲ್ಲ ಅಂತ ಹೇಳ್ತೀನಿ.. ನನ್ನ ಕೈಗೆ ಪೆಟ್ಟಾಗಿದೆ ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ. ರಕ್ಷಿತಾ ಈ ವಿಚಾರವನ್ನು ಕ್ಯಾಪ್ಟನ್ ರಘು ಬಳಿ ಬಂದು ಹೇಳಿದ್ದಾರೆ. ಅವರು ಈಗ ಹೇಳ್ತಾ ಇದ್ದಾರೆ ನನ್ಗೆ ಅಡುಗೆ ಮಾಡೋಕೆ ಆಗಲ್ಲ ಅಂತ.. ನಾನು ಕೂಡ ಮಾಡಲ್ಲ ಎಂದು ಹೇಳಿದ್ದಾರೆ. ಈ ಸಂದರ್ಭ ಅಶ್ವಿನಿ ಗೌಡ ಮಧ್ಯ ಪ್ರವೇಶಿಸಿದ್ದಾರೆ. ನಾನು ನೋಡ್ತಾ ಇದ್ದೇನೆ ಎಲ್ಲದಕ್ಕೂ ಮಾತಾಡ್ತಾ ಇದ್ದಾಳೆ.. ತುಂಬಾ ಅತಿ ಆಡಬೇಡ ನೀನು ಎಷ್ಟರಲ್ಲಿ ಇರಬೇಕು.. ಅಷ್ಟರಲ್ಲಿ ಇರಬೇಕು ನೀನು.. ಎಲ್ಲದಕ್ಕೂ ಮಧ್ಯದಲ್ಲಿ ಬಂದ್ರೆ ಎಂದು ಬೆರಳು ತೋರಿಸಿ ಮಾತನಾಡಿದ್ದಾರೆ. ಆಗ ರಘು ಅವರು, ಯಾಕೆ ಎಲ್ಲರ ಸೇರಿ ಅವಳಿಗೆ ಬೈತಾ ಇದ್ದೀರಾ ಎಂದು ಕೇಳಿದ್ದಾರೆ. ಒಟ್ಟಾರೆ ರಕ್ಷಿತಾ ಮೇಲೆ ಕೆಲವರಿಗೆ ಸಿಟ್ಟು ಇರುವುದು ನಿಜ. ಅದನ್ನು ಸಂದರ್ಭ ಸಿಕ್ಕಾಗಿ ಉಪಯೋಗಿಸಿಕೊಂಡಂತೆ ಕಾಣುತ್ತಿದೆ.

Shwetha M