ಮೊದಲ 5 ಸ್ಪರ್ಧಿಗಳ ಲಿಸ್ಟ್ ಔಟ್!! – ಸ್ವರ್ಗ V/s ನರಕ ಕಾನ್ಸೆಪ್ಟ್ ಯಾಕೆ?
ಸೀಸನ್ 11 ಹಿಂದಿ BBK ಕಾಪಿನಾ?

ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕೆಲವೇ ಕೆಲವು ದಿನ ಬಾಕಿ ಉಳಿದಿದೆ. ಈ ಬಾರಿ ಹೊಸ ಅಧ್ಯಾಯ, ಹೊಸ ಆಟ ಅಂತಾ ಹೇಳಿ ಜನರಲ್ಲಿ ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡಲಾಗಿದೆ. ದೊಡ್ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಅನ್ನೋದ್ರ ಬಗ್ಗೆ ಕೂಡ ಚರ್ಚೆ ಜೋರಾಗಿ ನಡಿತಾ ಇದೆ.. ಇದ್ರ ಬೆನ್ನಲ್ಲೇ ಕಿಚ್ಚ ಸುದೀಪ್ ಸುದ್ದಿಗೋಷ್ಠಿಯಲ್ಲೂ ಕೆಲ ವಿಚಾರಗಳ ಬಗ್ಗೆ ತಲೆಗೆ ಹುಳ ಬಿಡೋ ಕೆಲಸ ಮಾಡಿದ್ದಾರೆ. ಸ್ವರ್ಗ, ನರಕ ಕಾನ್ಸೆಪ್ಟ್ ಈ ಬಾರಿ ಇರಲಿದೆ ಅಂತಾ ಹೇಳಿದ್ದಾರೆ.. ಅಷ್ಟಕ್ಕೂ ಸ್ವರ್ಗ ನರಕದಲ್ಲಿ ಏನೆಲ್ಲಾ ಇರಲಿದೆ? ಸ್ವರ್ಗ.. ನರಕ್ಕೆ ಹೇಗೆ ಆಯ್ಕೆ ಇರುತ್ತೆ? ಇದು ಹಿಂದಿ ಬಿಗ್ ಬಾಸ್ ಕಾಪಿನಾ? ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪಾಕ್ ಟೂರ್ನಿಗೆ ಹೋಗ್ಲೇಬೇಕಾ ಭಾರತ? – ಭದ್ರತೆ ಓಕೆ ಎಂದು ICC ಸರ್ಟಿಫಿಕೇಟ್
ಒಂದು ಮನೆ.. 100 ದಿನ.. ವಿಭಿನ್ನ ಮನಸ್ಥಿತಿಯವರು.. ಇಲ್ಲೇ ಸ್ವರ್ಗ.. ಇಲ್ಲೇ ನರಕ.. ಏನಾದ್ರೂ ಫೇಸ್ ಮಾಡೋದಿಕ್ಕೆ ರೆಡಿ ಇರ್ಬೇಕು.. ಇದೇ ಬಿಗ್ ಬಾಸ್ ಆಟದ ಸ್ಪೆಷಾಲಿಟಿ.. ಬಿಗ್ ಬಾಸ್ ಸೀಸನ್ 10 ಅಂತೂ ತುಂಬಾ ಹೈಪ್ ಕ್ರಿಯೆಟ್ ಮಾಡಿತ್ತು.. ಆ ಸೀಸನ್ ನ ಸ್ಪರ್ಧಿಗಳ ಹವಾ ಇನ್ನೂ ಇದೆ.. ಇದೀಗ ಬಿಗ್ ಬಾಸ್ ಸೀಸನ್ 11 ಗೆ ಸಿದ್ದತೆ ನಡೆದಿದೆ.. ಸೆಪ್ಟೆಂಬರ್ 29 ರಂದು ಸಂಜೆ 6 ಗಂಟೆಗೆ ಪ್ರೀಮಿಯರ್ ಸಂಚಿಕೆ ಲಾಂಚ್ ಆಗಲಿದೆ. ಇದೀಗ ದೊಡ್ಮನೆಗೆ ಯಾರೆಲ್ಲಾ ಎಂಟ್ರಿ ಕೊಡ್ತಾರೆ ಅಂತಾ ವೀಕ್ಷಕರು ಚರ್ಚೆ ಮಾಡ್ತಿದ್ದಾರೆ.. ಈ ಬಾರಿಯ ಸೀಸನ್ ಕೆಲವು ವಿಶೇಷತೆಗಳಿಂದ ಕೂಡಿರಲಿದೆ ಅಂತಾ ಮೊನ್ನೆಯಷ್ಟೇ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿತ್ತು.. ಸುದೀಪ್ ಹೇಳಿದಂತೆ ಈ ಬಾರಿಯ ಸೀಸನ್ ವಿಶೇಷತೆಗಳಿದ ಕೂಡಿದೆ.
ಹೌದು. ಬಿಗ್‌ಬಾಸ್ ಸೆಪ್ಟೆಂಬರ್ 29 ರಂದು ಆರಂಭವಾಗಲಿದೆ.. ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಕೆಲ ಸ್ಪರ್ಧಿಗಳ ಹೆಸರನ್ನ ಅನೌನ್ಸ್ ಮಾಡಲಾಗುತ್ತಿದೆ.. ಸೆಪ್ಟೆಂಬರ್ 28 ರಂದು ‘ರಾಜಾ ರಾಣಿ’ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲೇ ಕೆಲ ಪ್ರಮುಖ ಸ್ಪರ್ಧಿಗಳ ಹೆಸರನ್ನ ರಿವೀಲ್ ಮಾಡಲಾಗುತ್ತದೆ. ವೋಟ್ ಮೂಲಕ ಅವರನ್ನ ಆಯ್ಕೆ ಮಾಡಿ ಸ್ವರ್ಗ, ನರಕ ಯಾವುದಕ್ಕೆ ಕಳುಹಿಸ್ಬೇಕು ಅಂತಾ ಡಿಸೈಡ್ ಮಾಡಲಾಗುತ್ತೆ.. ಅಷ್ಟೇ ಅಲ್ಲದೇ ಈ ಬಾರಿ ‘ಸ್ವರ್ಗ ಮತ್ತು ನರಕ’ ಕಾನ್ಸೆಪ್ಟ್‌ನಲ್ಲಿ ‘ಬಿಗ್ ಬಾಸ್’ ನಡೆಯಲಿದೆ ಎಂದು ಬಾದ್ ಷಾ ಹೇಳಿದ್ದಾರೆ.
ಅಂದ್ಹಾಗೆ ಈ ಸ್ವರ್ಗ ನರಕ ಕಾನ್ಸೆಪ್ಟ್ ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲಲ್ಲ.. ಹಿಂದಿ ಬಿಗ್ ಬಾಸ್ ನಲ್ಲಿ ದಶಕದ ಹಿಂದೆಯೇ ಈ ಕಾನ್ಸೆಪ್ಟ್ ಅನ್ನ ಪರಿಚಯಿಸಲಾಗಿತ್ತು. ಆದ್ರೆ ಬಿಗ್ ಬಾಸ್ ಕನ್ನಡಕ್ಕೆ ಹೆಲ್ & ಹೆವೆನ್ ಕಾನ್ಸೆಪ್ಟ್ ಹೊಸದು. ಹೌದು, 2013ರಲ್ಲಿ ಹಿಂದಿಯ ‘ಬಿಗ್ ಬಾಸ್ 7’ ಪ್ರಸಾರವಾಗಿತ್ತು. ಸ್ವರ್ಗ ನರಕ ಕಾನ್ಸೆಪ್ಟ್‌ನಲ್ಲಿ ‘ಬಿಗ್ ಬಾಸ್ 7’ ಟೆಲಿಕಾಸ್ಟ್ ಆಗಿತ್ತು. ಆರಂಭದಲ್ಲಿ ಸ್ವರ್ಗ ಮತ್ತು ನರಕ ಎಂಬ 2 ತಂಡಗಳಿಗೆ ಸ್ಪರ್ಧಿಗಳನ್ನ ಡಿವೈಡ್ ಮಾಡಲಾಗಿತ್ತು. ಸ್ವಲ್ಪ ದಿನಗಳ ನಂತರ ಈ ಕಾನ್ಸೆಪ್ಟ್ ಡಿಸಾಲ್ವ್ ಆಗಿ, ಎಲ್ಲರಿಗೂ ಸಮಾನ ಸ್ಟೇಟಸ್ ನೀಡಲಾಗಿತ್ತು. ಇದೀಗ ಕನ್ನಡದಲ್ಲೂ ಇದೇ ಕಾನ್ಸೆಪ್ಟ್ ನಲ್ಲಿ ಬಿಗ್ ಬಾಸ್ ಆಟ ನಡೆಯಲಿದೆ..
ಈಗಾಗಲೇ ರಿವೀಲ್ ಆಗಿರುವ ‘ಬಿಗ್ ಬಾಸ್’ ಲೋಗೋದಲ್ಲಿ ಬೆಂಕಿ ಹಾಗೂ ನೀರು ಇದೆ. ಬೆಂಕಿ ನರಕವನ್ನ ಪ್ರತಿನಿಧಿಸಿದರೆ, ನೀರು ಸ್ವರ್ಗವನ್ನ ಪ್ರತಿನಿಧಿಸುತ್ತದೆ. ಅದೇ ರೀತಿ.. ‘ಬಿಗ್ ಬಾಸ್’ ಮನೆಯನ್ನ ಇಬ್ಭಾಗ ಮಾಡಲಾಗಿರುತ್ತದೆ. ಅರ್ಧ ಭಾಗ ಸ್ವರ್ಗದ ಥೀಮ್‌ನಲ್ಲಿದ್ದರೆ, ಮಿಕ್ಕರ್ಧ ಭಾಗ ನರಕದ ಥೀಮ್‌ನಲ್ಲಿ ಇರಲಿದೆ.
ಸ್ವರ್ಗ ತಂಡ ಸೇರುವ ಸ್ಪರ್ಧಿಗಳಿಗೆ ಆಹಾರ, ನೀರು, ಸ್ವಿಮ್ಮಿಂಗ್ ಪೂಲ್, ಲಕ್ಷುರಿ ಸೇರಿದಂತೆ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಆದರೆ ನರಕ ತಂಡದಲ್ಲಿರುವವರಿಗೆ ಅದ್ಯಾವುದೂ ಇರುವುದಿಲ್ಲ. ಆಹಾರ, ಉಡುಗೆ, ನೀರು.. ಎಲ್ಲದಕ್ಕೂ ಒದ್ದಾಡಬೇಕು. ಈ ಎಲ್ಲದರ ಜೊತೆಗೆ ನಾಮಿನೇಷನ್ ಬಿಸಿ ಹೆಚ್ಚಿರೋದು ನರಕ ತಂಡದವರಿಗೆ.! ಸ್ವರ್ಗ ಹಾಗೂ ನರಕ ತಂಡ ಸೇರಿರೋರು ಅಲ್ಲಲ್ಲೇ ಇರಲ್ಲ. ಆಗಾಗ ಟ್ವಿಸ್ಟ್‌ಗಳನ್ನ ಕೊಟ್ಟು ಸ್ವರ್ಗದಲ್ಲಿರೋರನ್ನ ನರಕಕ್ಕೆ, ನರಕದಲ್ಲಿರೋರನ್ನ ಸ್ವರ್ಗಕ್ಕೆ ಚೇಂಜ್ ಮಾಡಲಾಗುತ್ತದೆ. ಹೀಗಾಗಿ, ಎಲ್ಲಾ ಸ್ಪರ್ಧಿಗಳಿಗೆ ಸ್ವರ್ಗದ ಸುಖ ಮತ್ತು ನರಕಯಾತನೆಯ ದರ್ಶನವಾಗಲಿದೆ.
ಕೆಲ ದಿನಗಳ ಕಾಲ ಇದೇ ಕಾನ್ಸೆಪ್ಟ್ ಮುಂದುವರೆಯಲಿದ್ದು, ಆನಂತರ ನರಕ ಮಾಯವಾಗುತ್ತದೆ. ಎಲ್ಲರಿಗೂ ಸ್ವರ್ಗಕ್ಕೆ ಹೋಗುವ ಅವಕಾಶವನ್ನ ‘ಬಿಗ್ ಬಾಸ್’ ಕರುಣಿಸುತ್ತಾರೆ. ಎಲ್ಲರಿಗೂ ಸಮಾನ ಹಕ್ಕು ಲಭಿಸಿದ ಬಳಿಕ ಮತ್ತೊಂದು ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಸುದ್ದಿಗೋಷ್ಠಿಯಲ್ಲಿಹೇಳಿದ್ದರು.. ಹೇಗಿದ್ದರೂ ಸ್ಪರ್ಧಿಗಳು ಎರಡೆರಡು ಟೀಮ್‌ಗಳನ್ನ ಮಾಡಿಕೊಂಡು ಕಿತ್ತಾಡುತ್ತಾರೆ. ಹೀಗಾಗಿ, ಈ ಬಾರಿ ಎರಡು ಟೀಮ್‌ಗಳನ್ನೇ ಮಾಡಿ ಕಳುಹಿಸಲಾಗುತ್ತೆ.. ಬರೀ ಸ್ವರ್ಗ ಇದ್ದರೆ ನೀವು ನೋಡ್ತೀರಾ? ಒಳ್ಳೆಯದ್ದು ಯಾವುದೂ ನ್ಯೂಸ್ ಆಗಲ್ಲ. ಹೀಗಾಗಿ, ಸ್ವರ್ಗ / ನರಕ ಕಾನ್ಸೆಪ್ಟ್‌ನಲ್ಲಿ ಮಾಡಲಾಗುತ್ತಿದೆ. ಇದು ಸುಲಭ ಅಲ್ಲ. ಮೊದಲ ವಾರವೇ ಸ್ಪರ್ಧಿಗಳಿಗೆ ಬಹಳ ಕಷ್ಟವಾಗಿರಲಿದೆ. ಹೋಗ್ತಾ ಹೋಗ್ತಾ ಸ್ವರ್ಗ – ನರಕ ಬೇಕಾಗುವುದಿಲ್ಲ. ಆ ಕಾಲ್ಪನಿಕ ಲೋಕದಲ್ಲೇ ಅವರುಗಳು ಇರ್ತಾರೆ. ಮನೆ ವಿನ್ಯಾಸ ಕೂಡ ಸ್ವರ್ಗ, ನರಕ ಕಾನ್ಸೆಪ್ಟ್‌ನಲ್ಲೇ ಇರುತ್ತದೆ ಅಂತಾ ಹೇಳಿದ್ದರು..
ಇದೀಗ ಎಲ್ಲರ ಚಿತ್ತ ಬಿಗ್ ಬಾಸ್ ಸೀಸನ್ 11 ನತ್ತ ಮುಖ ಮಾಡಿದೆ.. ಈ ಬಾರಿಯ ಸೀಸನ್ ಹೇಗಿರಲಿದೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ.. ಬಿಗ್‌ಬಾಸ್ ಮನೆ ಯಾರಿಗೆ ಸ್ವರ್ಗ ಆಗಲಿದೆ? ಯಾರಿಗೆ ನರಕದ ದರ್ಶನ ಕಾದಿದೆ ಅಂತಾ ಕಾದು ನೋಡ್ಬೇಕು.