ರಜತ್‌ ಅತಿರೇಕ ಬಿಗ್‌ ಬಾಸ್‌ ಸೈಲೆಂಟ್‌ – ಚೈತ್ರಾಗೆ ಕಳಪೆ ಟಾರ್ಗೆಟ್‌
ಇಬ್ಬರು ದೊಡ್ಮನೆಯಿಂದ ಔಟ್?

ರಜತ್‌ ಅತಿರೇಕ ಬಿಗ್‌ ಬಾಸ್‌ ಸೈಲೆಂಟ್‌ – ಚೈತ್ರಾಗೆ ಕಳಪೆ ಟಾರ್ಗೆಟ್‌ಇಬ್ಬರು ದೊಡ್ಮನೆಯಿಂದ ಔಟ್?

ಬಿಗ್‌ ಬಾಸ್‌ ಸೀಸನ್‌ 11 ಕೊನೆ ಹಂತಕ್ಕೆ ಬಂದು ತಲುಪಿದೆ. ಆದ್ರೆ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ಅಸಮಾಧಾನ ಭುಗಿಲೆದ್ದಿದೆ. ಸ್ನೇಹಿತರಾಗಿದ್ದವರೆಲ್ಲಾ ಸಹ ಸ್ಪರ್ಧಿಗಳಿಗೆ ಶತ್ರುಗಳಂತೆ ಕಂಡ್ರೆ,  ಸೈಲೆಂಟ್ ಆಗಿದ್ದವರು ವೈಲೆಂಟ್ ಆಗುತ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ರಜತ್ ಆರ್ಭಟ ಜೋರಾಗಿದೆ. ನಿನ್ನೆಯ ಎಪಿಸೋಡ್‌ ನಲ್ಲಿ ರಜತ್‌ ಧನರಾಜ್‌ ಆಚಾರ್‌ ಮೇಲೆ ಕೈ ಮಾಡಲು ಹೊರಟಿದ್ರು.. ಇನ್ನು ರಜತ್‌ ಮಾತು.. ಅದು ಬರೀ ಕೆಟ್ಟ ಪದಗಳೇ.. ರಜತ್‌ ವರ್ತನೆಯಿಂದಾಗಿ ಈ ವಾರ ಆತನಿಗೆ ಕಳಪೆ  ಕೊಡ್ತಾರೆ ಅಂತಾ  ಅಂದ್ಕೊಂಡ್ರಿದ್ರು.. ಆದ್ರೆ ಕಳಪೆ ಪಟ್ಟ ಸಿಕ್ಕಿದ್ದು ತ್ರಿವಿಕ್ರಮ್‌ ಹಾಗೂ ಚೈತ್ರಾ ಕುಂದಾಪುರಗೆ.. ಅಷ್ಟಕ್ಕೂ ಬಿಗ್‌ ಬಾಸ್‌ ಮನೆಯಲ್ಲಿ ಏನೆಲ್ಲಾ ನಡಿತು.. ರಜತ್‌ ಗೆ ಬಿಗ್‌ ಬಾಸ್‌ ಯಾಕೆ ಕ್ಲಾಸ್‌ ತೆಗೆದುಕೊಂಡಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಪುಟದಿಂದ ಒಪ್ಪಿಗೆ – ಪ್ರಸಕ್ತ ಅಧಿವೇಶನದಲ್ಲೇ ಮಂಡನೆ?

ಬಿಗ್​ಬಾಸ್​ ಸೀಸನ್ 11 80ನೇ ದಿನದತ್ತ ಕಾಲಿಡುತ್ತಿದೆ. ಆದ್ರೆ ಈ ಸೀಸನ್‌ ನಲ್ಲಿ ಸರಿಯಾಗಿ ಟಾಸ್ಕ್‌ಗಳೇ ನಡೆದಿಲ್ಲ.. ಯಾಕಂದ್ರೆ ಟಾಸ್ಕ್‌ ವೇಳೆ ಸ್ಪರ್ಧಿಗಳ ಕಿತ್ತಾಟ ತಾರಕ್ಕೇರಿತ್ತೆ.. ಹೀಗಾಗಿ ಟಾಸ್ಕ್‌ ಅರ್ದಕ್ಕೆ ನಿಲ್ಲಿಸಿದ್ದು ಇದೆ.. ಈ ಸೀಸನ್‌ನಲ್ಲಿ ರಜತ್‌ ಕಿಶನ್‌ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಿದ್ರು.. ರಜತ್‌ ಅಬ್ಬರ ನೋಡಿ.. ಈ ಬಾರಿ ಟಫ್‌ ಫೈಟ್‌ ಇದೆ. ರಜತ್‌ ಒಳ್ಳೆ ಆಟ ಆಡ್ತಾರೆ ಅಂತಾ ವೀಕ್ಷಕರು ಅಂದ್ಕೊಂಡ್ರು.. ಆದ್ರೆ ರಜತ್‌ ತನ್ನ ಮಾತಿನಿಂದ ವೀಕ್ಷರು, ಹಾಗೇ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗ್ತಿದ್ದಾರೆ. ನಿನ್ನೆಯ ಎಪಿಸೋಡ್‌ ನಲ್ಲಿ ರಜತ್‌ ಧನರಾಜ್‌ ಆಚಾರ್‌ ನ ಹೊಡೆಯಲು ಹೋಗಿ ತಳ್ಳಿದ್ರು.. ಆದ್ರೆ ಸಹ ಸ್ಪರ್ಧಿಗಳು ರಜತ್‌ ಅನ್ನ ಸಮಾಧಾನ ಪಡಿಸಿದ್ರು.

ದೊಡ್ಮನೆಯಲ್ಲಿ ರಜತ್‌ ವರ್ತನೆ ನೋಡಿ ಈ ವಾರ ಈತನಿಗೆ ಕಳಪೆ ಫಿಕ್ಸ್‌ ಅಂತಾ ಅಂದ್ಕೊಂಡಿದ್ರು.. ಆದ್ರೆ ಕಳಪೆ ಸಿಕ್ಕಿದ್ದು, ತ್ರಿವಿಕ್ರಮ್‌ ಹಾಗೂ ಚೈತ್ರಾ ಕುಂದಾಪುರ ಗೆ. ಹೌದು,ಈ ವಾರ ಬಿಗ್​ಬಾಸ್​ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ರಚನೆ ಮಾಡಿದ್ದರು. ಒಂದು ತಂಡಕ್ಕೆ ಜವಾರಿ ಮಂದಿ, ಮತ್ತೊಂದು ತಂಡಕ್ಕೆ 11ರ ಅಬ್ಬರ ಅಂತ ಇಡಲಾಗಿತ್ತು. ಆದರೆ ಈ ಎರಡು ತಂಡಗಳ ಪೈಕಿ ಜವಾರಿ ಮಂದಿ ಅಂದರೆ ಹನುಮಂತ ಟೀಮ್​ ಬಿಗ್​ಬಾಸ್​ ಮೂರು ಟಾಸ್ಕ್​ನಲ್ಲಿ ಗೆದ್ದುಕೊಂಡು ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿದ್ದರು.

ಆದರೆ ಬಿಗ್​ಬಾಸ್ ಕೊಟ್ಟ ಟಾಸ್ಕ್​ನಲ್ಲಿ ಗೌತಮಿ ತಂಡ ಹೀನಾಯವಾಗಿ ಸೋಲನ್ನು ಕಂಡಿದೆ. ಹೀಗಾಗಿ ಇದೇ ತಂಡ ಇಬ್ಬರು ಸ್ಪರ್ಧಿಗಳನ್ನು ಮನೆ ಮಂದಿ ಕಳಪೆ ಪಟ್ಟಕ್ಕೆ ಕಳುಹಿಸಿದ್ದಾರೆ. ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್​ ಇಬ್ಬರಿಗೂ ಸಮವಾಗಿ ಕಳಪೆ ಸಿಕ್ಕಿದ್ದು, ಹೀಗಾಗಿ ಈ ಇಬ್ಬರು ಜೈಲಿಗೆ ಹೋಗಿದ್ದಾರೆ. ಅಲ್ಲದೇ ಜೈಲಿನಲ್ಲೇ ಇದ್ದುಕೊಂಡೆ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್​ ಉಳಿದ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ನಾವು ಬಿಗ್​ಬಾಸ್​ ರೂಲ್ಸ್​ ಬ್ರೇಕ್ ಮಾಡ್ತೀವಿ ನೋಡಿ ಅಂತ ಹೆದರಿಸಿದ್ದಾರೆ.

ಇದೀಗ ಬಿಗ್‌ ಬಾಸ್‌ ಮನೆಯಲ್ಲಾಗುತ್ತಿರುವ ಬೆಳವಣಿಗೆ ನೋಡಿ ವೀಕ್ಷಕರಲ್ಲಿ ಹಲವು ಪ್ರಶ್ನೆ ಮೂಡ್ತಾ ಇದೆ.. ಚೈತ್ರಾ ಕುಂದಾಪುರ ಪದೇ ಪದೇ ಟಾರ್ಗೆಟ್‌ ಯಾಕೆ.. ಆಕೆ ವಾಯ್ಸ್‌ ಇರೋದೇ ಹಾಗೇ.. ಜೋರು ಮಾತಾಡಿದ್ರು ಅಂತಾ ಆಕೆಗೆ ಕಳಪೆ ಕೊಡೋದಾ ಅಂತಾ ಕೆಲವರು ಕೇಳಿದ್ದಾರೆ. ಇನ್ನು ಕೆಲವರು ರಜತ್‌ ವರ್ತನೆಗೆ ಬೇಸತ್ತು ಹೋಗಿದ್ದಾರೆ. ಬಿಗ್‌ ಬಾಸ್‌ ರಿಯಾಲಿಟಿ ಶೋ ವನ್ನ ಎಲ್ಲಾ ವಯಸ್ಸಿನವರು ನೋಡ್ತಾರೆ. ರಜತ್‌ ಬಾಯ್‌ ಬಿಟ್ರೆ ಗುಗ್ಗು, ಹುಚ್ಚಿ, ಕೈ ಮುರಿತೀನಿ, ಕಾಲ್‌ ಮುರಿತೀನಿ ಅಂತಾ ಬೈತಾರೆ. ಸಹ ಸ್ಪರ್ಧಿಗಳಿಗೆ ಹೊಡೆಯೋಕು ಹೋಗ್ತಾರೆ.. ಇಷ್ಟೆಲ್ಲಾ ಆದ್ರೂ ಬಿಗ್‌ ಬಾಸ್‌ ಯಾಕೆ ಸುಮ್ಮನಿದೆ.. ವಾರ್ನ್‌ ಮಾಡಲ್ಲ ಯಾಕೆ? ಎಂದು ಪ್ರಶ್ನೆ ಮಾಡ್ತಾ ಇದ್ದಾರೆ. ಇವತ್ತು ಕಿಚ್ಚನ ಪಂಚಾಯಿತಿಲಿ ರಜತ್‌ ಗೆ ಕ್ಲಾಸ್‌ ತೆಗೆದುಕೊಳ್ಳಬಹುದು ಎಂದು ಹೇಳಲಾಗ್ತಿದೆ.

ಇನ್ನು ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. 8 ಮಂದಿಯಲ್ಲಿ ಈ ವಾರ ಇಬ್ಬರು ಸ್ಪರ್ಧಿಗಳು ಬಿಗ್​ಬಾಸ್ ಮನೆಯಿಂದ ಆಚೆ ಹೋಗಲಿದ್ದಾರೆ ಅಂತಾ ಹೇಳಲಾಗ್ತಿದೆ.

Shwetha M