ನಮ್ಮ ಸುದ್ದಿಗೆ ಬರ್ತೀಯಾ? – ಕಣ್ಣಿಗೆ ಕಾಡಿಗೆ.. ತುಟಿಗೆ ಲಿಪ್ಸ್ಟಿಕ್ ಹಚ್ಚಿ ಗಿಲ್ಲಿ ಮೇಲೆ ರಿವೇಂಜ್ ತೆಗೆದುಕೊಂಡ ಮನೆಮಂದಿ!

ಬಿಗ್ಬಾಸ್ ಮನೆಯಲ್ಲಿ ಗಿಲ್ಲಿನಟ ಸಖತ್ ಹೈಲೈಟ್.. ಸಹ ಸ್ಪರ್ಧಿಗಳನ್ನ ಕಾಲೆಳೆದು ಮಜಾ ತೆಗೆದುಕೊಳ್ತಾ ಇರ್ತಾರೆ. ಆದ್ರೀಗ ದೊಡ್ಮನೆ ಮಂದಿ ಗಿಲ್ಲಿಗೆ ಕಾಟ ಕೊಟ್ಟಿದ್ದಾರೆ. ಮನೆಮಂದಿ ಚೇಷ್ಟೆಗೆ ಗಿಲ್ಲಿ ಅವತಾರವೇ ಬದಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲೇ ನಡೆಯಲಿದೆ ವಿಜಯ್ ಹಜಾರೆ ಟೂರ್ನಿ ಪಂದ್ಯ! – ಆದ್ರೂ ಕೊಹ್ಲಿನ ಫ್ಯಾನ್ಸ್ ನೋಡುವಂತಿಲ್ಲ!
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿನಟ ಚೇಷ್ಠೆ ಒಂದಾ ಎರಡಾ?.. ಸುಮ್ಮನೆ ಇರೋಕೆ ಆಗಲ್ಲ. ಯಾರನ್ನಾದ್ರೂ ಕಾಲೆಳೆದು ಮಜಾ ತೆಗೆದುಕೊಳ್ತಾರೆ. ಆದ್ರೀಗ ಮನೆ ಮಂದಿ ಗಿಲ್ಲಿ ವಿರುದ್ಧ ರಿವೇಂಜ್ ತೆಗೆದುಕೊಂಡಿದ್ದಾರೆ. ಇದೀಗ ಗಿಲ್ಲಿ ಹೆಣ್ಮಕ್ಕಳ ಕೈನಲ್ಲಿ ಸಿಕ್ಕಿಬಿದ್ದಿದ್ದು, ಗಿಲ್ಲಿ ಅವತಾರವೇ ಬದಲಾಗಿದೆ. ಗಿಲ್ಲಿಯನ್ನು ಅಶ್ವಿನಿ, ಕಾವ್ಯಾ ಸೇರಿದಂತೆ ಮಹಿಳಾ ಟೀಂ ಗೋಳುಹೊಯ್ದುಕೊಂಡಿದೆ. ಗಿಲ್ಲಿಗೆ ಮೇಕಪ್ ಮಾಡಿ ಸತಾಯಿಸಿದ್ದಾರೆ.
ಬಿಗ್ಬಾಸ್ ಇಂದಿನ ಎಪಿಸೋಡ್ನಲ್ಲಿ ಪಾಸ್ ಆಂಡ್ ಪ್ಲೇ ಗೇಮ್ ಆಡಿಸಿದ್ದಾರೆ. ಬಿಗ್ಬಾಸ್ ಯಾರದ್ದಾದರೂ ಹೆಸರು ಹೇಳಿ ಪಾಸ್ ಹೇಳಿದ್ರೆ, ಅವರು ಹೇಗಿದ್ದಾರೋ ಹಾಗೇ ನಿಲ್ಲಬೇಕು. ಇದೀಗ ಗಿಲ್ಲಿಗೆ ಬಿಗ್ಬಾಸ್ ಪಾಸ್ ಹೇಳಿದ್ದಾರೆ. ಈ ವೇಳೆ ಅಶ್ವಿನಿ ಗೌಡ, ಕಾವ್ಯ ಸೇರಿದಂತೆ ಎಲ್ಲಾ ಸ್ಪರ್ಧಿಗಳು ಗಿಲ್ಲಿ ಮುಖಕ್ಕೆ ಒಂದಿಷ್ಟು ಹಿಟ್ಟು ಬಳಿದು, ಜುಟ್ಟು ಕಟ್ಟಿ, ಲಿಪ್ಸ್ಟಿಕ್ ಹಚ್ಚಿ, ಹೂವಿನ ಎಸಳುಗಳನ್ನು ತಲೆಯ ಮೇಲೆ ಹಾಕಿ ಮಜಾ ನೋಡ್ತಿದ್ದಾರೆ ಸ್ಪರ್ಧಿಗಳು. ಮೇಕಪ್ ಮಾಡ್ತಾ, ಮುಖಕ್ಕೆ ಹಿಟ್ಟು ಬಳಿತಾ, ಇನ್ನು ಮಾಡ್ತೀಯಾ, ನನ್ನ ಸುದ್ದಿಗೆ ಬರ್ತಿಯಾ ಅಂತ ಗಿಲ್ಲಿಗೆ ಕೇಳ್ತಿದ್ದಾರೆ. ಅಷ್ಟೇ ಅಲ್ಲ ಟೀ ಶರ್ಟ್ ಮೇಲೆ ದುಪಟ್ಟಾ ಹಾಕಿ, ಮುಖಕ್ಕೆಲ್ಲ ಕಪ್ಪು ಬಳಿದು ವಿಚಿತ್ರ ಅವತಾರದಲ್ಲಿದ್ದಾರೆ ಗಿಲ್ಲಿ. ಗಿಲ್ಲಿ ಸ್ಟೈಲ್ ನೋಡಿ ಸ್ಪರ್ಧಿಗಲೂ ನಗ್ತಿದ್ದಾರೆ. ಜಿಯೋ ಹಾಟ್ ಸ್ಟಾರ್ ಇನ್ಟ್ರಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮನೆ ಮಂದಿಗೆ ಆಟ, ಗಿಲ್ಲಿಗೆ ಪ್ರಾಣ ಸಂಕಟ ಅಂತ ಶೀರ್ಷಿಕೆ ಹಾಕಲಾಗಿದೆ.
ಗಿಲ್ಲಿ ಈ ಅವತಾರ ನೋಡಿದ ಫ್ಯಾನ್ಸ್, ಪಾಪ ಗಿಲ್ಲಿ ಎನ್ನುತ್ತಿದ್ದಾರೆ. ಮತ್ತೊಂದಿಷ್ಟು ಮಂದಿಗೆ ಅಶ್ವಿನಿ ಸ್ವಭಾವ ಇಷ್ಟವಾಗಿದೆ. ಮನೆಯಲ್ಲಿ ಅಶ್ವಿನಿ ಇರ್ಲಿಲ್ಲ ಅಂದ್ರೆ ಇಷ್ಟೊಂದು ಮನರಂಜನೆ ಸಿಗ್ತಿರಲಿಲ್ಲ. ಆಟಕ್ಕೂ ಸೈ, ಜಗಳಕ್ಕೂ ಸೈ, ತಮಾಷೆಗೂ ಸೈ ಅಶ್ವಿನಿ ಅಂತ ಅಶ್ವಿನ ಪರ ಮಾತನಾಡಿದ್ದಾರೆ.

ನೋಡಿರಿ

